ವೀಕೆಂಡ್(weekend) ಬಂದ್ರೆ ಸಾಕು ನಾನ್ ವೆಜ್(Non veg) ಪ್ರಿಯರಿಗೆ ಹಬ್ಬವೋ ಹಬ್ಬ.. ವಾರಪೂರ್ತಿ ಕೆಲಸದ(Work) ಒತ್ತಡದಲ್ಲಿ ಹೈರಾಣಾಗಿ ಹೋಗಿದ್ದ ನಾನ್ ವೆಜ್ ಪ್ರಿಯರು ರಿಲ್ಯಾಕ್ಸ್(Relax) ಮೂಡ್ ನಲ್ಲಿ ಜಾಲಿಯಾಗಿ ಯಾವುದಾದ್ರೂ ಹೋಟೆಲ್ ಗೆ(Hotel) ಸಖತ್ ಟೆಸ್ಟಿಯಾಗಿರೋ ಊಟ ತಿನ್ಬೇಕು ಅಂತ ಬಯಸ್ತಾ ಇರ್ತಾರೆ.. ಹೀಗಾಗಿ ವೀಕೆಂಡ್ ನಲ್ಲಿ ನಾನ್ ವೆಜ್ ಹೋಟೆಲ್ ಗಳಲ್ಲೂ ಫುಲ್ ರಷ್ ಇರುತ್ತೆ.. ಇದರಬದಲೂ ಮನೆಯಲ್ಲಿಯೇ ರುಚಿ ರುಚಿಯಾದ ಬಿರಿಯಾನಿ ಮಾಡಿ ತಿನ್ನೋದ್ರಿಂದ್ದ ವೀಕೆಂಡ್ ಕಂಪ್ಲಿಟ್ ಆಗಲಿದೆ.. ಹೀಗಾಗಿ ನೀವು ಈ ವಾರಂತ್ಯದಲ್ಲಿ ಮನೆಯಲ್ಲಿಯೇ ಕೇರಳ ಸೈಲ್ ನ ಮಲಬಾರ್ ಬಿರಿಯಾನಿ ಮಾಡಿ ತಿನ್ನಬಹುದು.. ಮಲಬಾರ್ ಬಿರಿಯಾನಿಯನ್ನ ಹೇಗೆ ಮನೆಯಲ್ಲಿಯೇ ಮಾಡೋದು ಅಂತ ನಾವು ನಿಮಗೆ ತಿಳಿಸಿಕೊಡ್ತಿವಿ
ಮನೆಯಲ್ಲಿಯೇ ಮಾಡಿ ಮಲಬಾರ್ ಬಿರಿಯಾನಿ
ಬಿರಿಯಾನಿ ಹೆಸರು ಕೇಳ್ತಾ ಇದ್ದಂತೆ ಎಲ್ಲರ ಬಾಯಲ್ಲೂ ನೀರುರುತ್ತೆ.. ಅದ್ರಲ್ಲೂ ಬಿರಿಯಾನಿ ಪ್ರಿಯರಿಗೆ ದೇಶದ ಮೂಲೆ ಮೂಲೆಯಲ್ಲಿ ಸಿಗೋ ಹೈದ್ರಾಬಾದ್ ಬಿರಿಯಾನಿ, ಕೊಲ್ಕಾತ್ತಾ ಬಿರಿಯಾನಿ , ದಮ್ ಬಿರಿಯಾನಿ ಹೀಗೆ ನಾನಾ ಬಿರಿಯಾನಿಗಳು ಜನರ ನಾಲಿಗೆ ರುಚಿಯನ್ನ ಹೆಚ್ಚಿಸುತ್ತವೆ.. ಇವುಗಳ ಜೊತೆಗೆ ಬರೋ ಕೇರಳ ಸ್ಟೈಲ್ ಮಲಬಾರ್ ಬಿರಿಯಾನಿ ಜನರ ನಾಲಿಗೆ ರುಚಿ ಹೆಚ್ಚಿಸೋದ್ರ ಜೊತೆಗೆ ವೀಕೆಂಡ್ ಗೆ ಫರ್ಪೆಕ್ಟ್ ಆಗಿರಲಿದೆ..
ಇದನ್ನೂ ಓದಿ: ನಾಟಿ ಸ್ಟೈಲ್ನಲ್ಲಿ ಸ್ವಾದಿಷ್ಟ ಚಿಕನ್ 65 ರೆಸಿಪಿ - ನೀವೂ ಟ್ರೈ ಮಾಡಿ
ಮಲಬಾರ್ ಬಿರಿಯಾನಿಗೆ ಬೇಕಾಗುವ ಪದಾರ್ಥಗಳು
ಬಾಸುಮತಿ ಅಕ್ಕಿ – 1 ಕೆ.ಜಿ.
ಚಿಕನ್ – 1
ಬಿರಿಯಾನಿ ಮಸಾಲೆ ಪೇಸ್ಟ್ (ಹಸಿ ಮೆಣಸು, ಚಕ್ಕೆ, ಲವಂಗಗಳು, ಬಡೇಸೋಂಪು, ಏಲಕ್ಕಿ, ಕಾಳು ಮೆಣಸು) – 4 ಟೇಬಲ್ ಚಮಚ
ಹಸಿ ಮೆಣಸು - 10
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು – 50 ಗ್ರಾಮ್
ಪುದಿನಾ ಸೊಪ್ಪು – 25 ಗ್ರಾಮ್
ಮೊಸರು – 150 ಮಿ.ಲೀ.
ಟೊಮ್ಯಾಟೊ – 150 ಗ್ರಾಮ್
ಈರುಳ್ಳಿ – 1 ಕೆ.ಜಿ
ಕರಿ ಜೀರಿಗೆ ಬೀಜಗಳು – 1 ಟೇಬಲ್ ಚಮಚ
ಚಕ್ಕೆ ಕಡ್ಡಿ – 2 ತುಂಡುಗಳು
ದಾಲ್ಚಿನ್ನಿ ಎಲೆಗಳು – 2
ಗೋಡಂಬಿ ಮತ್ತು ದ್ರಾಕ್ಷಿ – 50 ಗ್ರಾಮ್
ಏಲಕ್ಕಿ – 5
ತುಪ್ಪ – 200 ಗ್ರಾಮ್
ಧನಿಯ ಪುಡಿ – 2 ಟೇಬಲ್ ಚಮಚ
ಹಾಲು – 500 ಮಿ.ಲೀ.
ಕೇಸರಿ – 1 ಚಿಟಿಕೆ
ನೀರು (ಅನ್ನಕ್ಕೆ) – 1 ಲೀಟರ್
ಮಲಬಾರ್ ಬಿರಿಯಾನಿ ಮಾಡುವುದು ಹೇಗೆ..?
ಮೊದಲಿಗೆ ಪ್ಯಾನ್ನಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಕಾಯಿಸಿಕೊಳ್ಳಿ, ಬಳಿಕ ಅದಕ್ಕೆ ಈರುಳ್ಳಿಯನ್ನು ಸೇರಿಸಿ ಮತ್ತು ಅದು ಕಂದು ಬಣ್ಣ ಬರುವವರೆಗೆ ಹುರಿದುಕೊಂಡು ಹೆಚ್ಚಿದ ಟೊಮ್ಯಾಟೋವನ್ನು ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ. ಪ್ಯಾನ್ನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಮತ್ತು ಬಿರಿಯಾನಿ ಮಸಾಲ ಮತ್ತು ಅರಸಿನ ಪುಡಿ ಮತ್ತು ಧನಿಯಾ ಪುಡಿಯನ್ನು ಮಿಶ್ರಣ ಮಾಡಿ. ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಬೇಯಿಸಿರಿ.
ಇದನ್ನೂ ಓದಿ: ಉಪ್ಪು,ಹುಳಿ,ಖಾರ ಸೇರಿಸುವುದರ ಜೊತೆಗೆ ಕೋಳಿಸಾರು ಮಾಡುವಾಗ ಇರಲಿ ಈ ಎಚ್ಚರ
ಬಳಿಕ ಅಕ್ಕಿಯನ್ನು 10 ನಿಮಿಷಗಳ ವರೆಗೆ ನೆನೆಸಿಡಿ ಮತ್ತು ಚೆನ್ನಾಗಿ ಸೋಸಿರಿ. ಸಾಸ್ ಪ್ಯಾನ್ನಲ್ಲಿ ತುಪ್ಪವನ್ನು ಕಾಯಿಸಿರಿ ಮತ್ತು ಮಸಾಲೆಗಳನ್ನು, ಹೆಚ್ಚಿದ ಈರುಳ್ಳಿಯನ್ನು, ಪುದಿನಾ, ಕೊತ್ತಂಬರಿ ಸೊಪ್ಪುಗಳನ್ನು, ದಾಲ್ಚಿನ್ನಿ ಎಲೆ ಗೋಡಂಬಿ, ದ್ರಾಕ್ಷಿ,ಗಳನ್ನು ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಮಿಶ್ರಣದ ಕುದಿ ಬರುವವರೆಗೆ ಕಾಯಿರಿ ಮತ್ತು ಆನಂತರ ಅಕ್ಕಿಯನ್ನು ಸೇರಿಸಿರಿ. ಉರಿಯನ್ನು ಕಡಿಮೆ ಇಡಿ, ಪ್ಯಾನ್ ಅನ್ನು ಲಿಡ್ನಿಂದ ಮುಚ್ಚಿರಿ ಮತ್ತು 15 ನಿಮಿಷಗಳವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿರಿ..
ಇನ್ನೊಂದು ಪ್ಯಾನ್ ತೆಗೆದುಕೊಂಡು ಮತ್ತು ಅದರಲ್ಲಿ ಅರ್ಧ ಭಾಗ ಅನ್ನವನ್ನು ಹಾಕಿರಿ. ಈಗ ಬೇಯಿಸಿದ ಚಿಕನ್ ಅನ್ನು ಅನ್ನದ ಮೇಲೆ ಹಾಕಿರಿ. ಉಳಿದ ಅನ್ನವನ್ನು ಆ ಚಿಕನ್ ಮೇಲೆ ಸೇರಿಸಿರಿ. ಸಮಾನವಾದ ಪದರವನ್ನು ಮಾಡಲು ಪ್ಯಾನ್ನಲ್ಲಿ ಇರುವ ಮಿಶ್ರಣವನ್ನು ಸಮಾನವಾಗಿ ಹರಡಿ. ಅನ್ನದ ಒಳಗೆ ಚಮಚದಿಂದ ನಿಮ್ಮ ಮನಸ್ಸಿಗೆ ತೋಚಿದಂತೆ ತೂತು ಮಾಡಿರಿ ಮತ್ತು ಪ್ರತಿಯೊಂದರಲ್ಲಿಯೂ ಸ್ವಲ್ಪ ಸ್ವಲ್ಪ ಕೇಸರಿಯುಕ್ತ ಹಾಲನ್ನು ಹಾಕಿರಿ. ಅದರಲ್ಲಿ ಕೆಲವು ಚಮಚ ತುಪ್ಪ, ಹುರಿದ ಈರುಳ್ಳಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಮೇಲ್ಮೈಯಲ್ಲಿ ಹಾಕಿರಿ ಮತ್ತು ಬಿಗಿಯಾಗಿ ಮುಚ್ಚಿರಿ. ಈಗ ರುಚಿಕರವಾದ ಮಲಬಾರ್ ಬಿರಿಯಾನಿ ನಿಮ್ಮ ವೀಕೆಂಡ್ ಗೆ ಸವಿಯಲು ಸಿದ್ಧವಾಗಿರುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ