• Home
  • »
  • News
  • »
  • lifestyle
  • »
  • Kerala Food Near Me: ಬೆಂಗಳೂರಲ್ಲೇ ಕುಳಿತು ಕೇರಳ ಫುಡ್ ತಿನ್ಬೇಕಾ? ಹಾಗಿದ್ರೆ ಈ ರೆಸ್ಟೊರೆಂಟ್​ಗಳಿಗೆ ಹೋಗಿ

Kerala Food Near Me: ಬೆಂಗಳೂರಲ್ಲೇ ಕುಳಿತು ಕೇರಳ ಫುಡ್ ತಿನ್ಬೇಕಾ? ಹಾಗಿದ್ರೆ ಈ ರೆಸ್ಟೊರೆಂಟ್​ಗಳಿಗೆ ಹೋಗಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kerala Restaurants Near Me: ಮನೆಯಲ್ಲಿ ಮಾಡಿದ ಪದಾರ್ಥಗಳನ್ನು ತಿಂದು  ಬೋರ್ ಬಂದು ವಿಭಿನ್ನ ರುಚಿ ಹುಡುಕಿ ಹೊರಟವರಿಗೆ ಹಾಗೂ ಕೇರಳ ಆಹಾರ ಪ್ರಿಯರಿಗೆ ಬೆಂಗಳೂರಿನಲ್ಲಿ ಸೂಪರ್ ಟೇಸ್ಟೀ ಕೇರಳ ಆಹಾರ ಸಿಗುವ ರೆಸ್ಟೊರೆಂಟ್​ಗಳ ಲಿಸ್ಟ್​ ಇಲ್ಲಿದೆ.  

  • Share this:

ಕೇರಳವು (Kerala) ತನ್ನ ಹಿನ್ನೀರು ಮತ್ತು ಕಡಲತೀರಗಳಿಗೆ (Sea)  ಹೆಸರುವಾಸಿಯಾಗಿರಬಹುದು ಆದರೆ, ನಮಗೆ, ಅದರ ಹೆಸರು ಕೇಳುತ್ತಿದ್ದಂತೆ ಮೊದಲು ನೆನಪಿಗೆ ಬರುವುದು ರುಚಿಕರ ಆಹಾರ (Tasty Food) ಎಂದರೆ ತಪ್ಪಲ್ಲ. ಬಾಳೆ ಎಲೆಯ ಮೇಲೆ ಬಡಿಸಿದ ಆಹಾರವನ್ನು ಸವಿಯುವುದು ಒಂದು ಅದ್ಭುತ ಅನುಭ ಎನ್ನಬಹುದು. ಮೀನಿನ ರುಚಿಕರ ಆಹಾರಗಳು,  ಹುಣಸೆಹಣ್ಣಿನ ರುಚಿಯಾದ ಸಾರು ಅವುಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಬೆಂಗಳೂರಿನಲ್ಲಿ ಕೇರಳಿಗರಿಗೆ ಹಾಗೂ ಕೇರಳ (Kerala) ಆಹಾರವನ್ನು ಇಷ್ಟಪಡುವವರಿಗೆ ಯಾವುದೇ ಕೊರತೆ ಇಲ್ಲ. ಮನೆಯಲ್ಲಿ ಮಾಡಿದ ಪದಾರ್ಥಗಳನ್ನು ತಿಂದು  ಬೋರ್ ಬಂದು ವಿಭಿನ್ನ ರುಚಿ ಹುಡುಕಿ ಹೊರಟವರಿಗೆ ಹಾಗೂ ಕೇರಳ ಆಹಾರ ಪ್ರಿಯರಿಗೆ ಬೆಂಗಳೂರಿನಲ್ಲಿ (bengaluru) ಸೂಪರ್ ಟೇಸ್ಟೀ ಕೇರಳ ಆಹಾರ ಸಿಗುವ ರೆಸ್ಟೊರೆಂಟ್​ಗಳ (Restaurants) ಲಿಸ್ಟ್​ ಇಲ್ಲಿದೆ.  


ವೆರುದೆ ಒರು ತಟ್ಟುಕಡ, ಬೇಗೂರು, ಬೆಂಗಳೂರು


ಕೇರಳದ ಹಳೆಯ-ಸ್ಕೂಲ್ ಟೀ ಅಂಗಡಿಗಳನ್ನು ನಿಮಗೆ ನೆನಪಿಸುವ ಅಲಂಕಾರದೊಂದಿಗೆ ಹಳ್ಳಿಗಾಡಿನಂತಿರುವ ಗೋಡೆಗಳ ಮೇಲೆ ಹಳೆಯ ಚಲನಚಿತ್ರಗಳ ಪೋಸ್ಟರ್‌ಗಳನ್ನು ಅಟ್ಟಿಸಿಕೊಂಡಿರುವ ಈ ವೆರುದೆ ಒರು ತಟ್ಟುಕಡ ಕೇರಳ ಆಹಾರವನ್ನು ಸವಿಯಲು ಸೂಕ್ತವಾದ ಸ್ಥಳ ಎನ್ನಬಹುದು. ಈ ಸ್ಥಳ ನಿಮ್ಮನ್ನ ಕೇರಳಕ್ಕೆ ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲೆಕೋಸು ಥೋರನ್, ಸಾಂಬಾರ್, ಅವಿಯಲ್, ಕಪ್ಪ ಬಿರಿಯಾನಿಯನ್ನು ನೀವು ಮಿಸ್​ ಮಾಡದೇ ಸವಿಯಲೇಬೇಕು.


ಇದನ್ನೂ ಓದಿ: ಸೂಪರ್ ಟೇಸ್ಟಿ ಚಾಟ್​ ಮಸಾಲಾವನ್ನು ಅಂಗಡಿಯಿಂದ ತರ್ಬೇಡಿ, ನೀವೇ ಮನೆಯಲ್ಲಿ ಮಾಡಿ


ವಿಳಾಸ: DLF ನ್ಯೂ ಟೌನ್, 1 ನೇ ಪಿಲ್ಲೂರು, ಹುಳಿಮಾವು ಬೇಕರ್ ರಸ್ತೆ, ಬೇಕರ್, ಬೆಂಗಳೂರು


ಸಮಯ: ಬೆಳಗ್ಗೆ 11 ರಿಂದ ರಾತ್ರಿ 10.30


ಮೊಬೈಲ್ ನಂಬರ್: +919986664242


ಜೋಸ್ ಮೆಸ್, ಬಿಟಿಎಂ ಲೇಔಟ್, ಬೆಂಗಳೂರು


ಇದು ಪಾಕೆಟ್ ಸ್ನೇಹಿ ಸ್ಥಳವಾಗಿದ್ದು, ಇದು ಅಧಿಕೃತ ಕೇರಳ ಆಹಾರವನ್ನು ನೀಡುತ್ತದೆ, ಜೋಸ್ ಮೆಸ್​ ಹಲವಾರು ಜನರ ಫೇವರೇಟ್​ ಸ್ಥಳವಾಗಿದೆ. ರುಚಿಕರವಾದ ಫಿಶ್ ಕರಿ ಅಥವಾ ಚಿಕನ್ ರೋಸ್ಟ್ ಮತ್ತು ತಯಾರಿಸಿದ ಮೊಟ್ಟೆಯ ಆಮ್ಲೆಟ್ ಜೊತೆಗೆ ಅವರ ಊಟವನ್ನು ಆಯ್ಕೆ ಮಾಡಿ ಸವಿಯಿರಿ. ಇಲ್ಲಿ ಬೆಳಗಿನ ತಿಂಡಿಯನ್ನು ಸಹ ಸವಿಯಬಹುದು. ಇಡಿಯಪ್ಪಮ್‌ ಅಥವಾ ಪುಟ್ಟು ಪ್ರಯತ್ನಿಸಿ.


ವಿಳಾಸ: ಮಾರುತಿ ನಗರ ಮುಖ್ಯ ರಸ್ತೆ, BTM, ಬೆಂಗಳೂರು


ಸಮಯ: ಬೆಳಗ್ಗೆ 7ರಿಂದ ರಾತ್ರಿ 10ರ ವರೆಗೆ


ಮೊಬೈಲ್ ನಂಬರ್: +918026840905


ಅಚ್ಚಯ್ಯ, ಇಂದಿರಾ ನಗರ, ಬೆಂಗಳೂರು


ಒಮ್ಮೆ ಇಲ್ಲಿ ನೀವು ಊಟ ಮಾಡಿದ್ರೆ ಮತ್ತೆ ಮತ್ತೆ ಹೋಗುತ್ತಾರೆ. ಮ್ಯಾಕೆರೆಲ್ ಫ್ರೈ ಜೊತೆಗೆ ಅವರ ಊಟವನ್ನು ಪ್ರಯತ್ನಿಸಿ ಅಥವಾ ಮಸಾಲೆಯುಕ್ತ ಬೀಫ್ ರೋಸ್ಟ್‌ನೊಂದಿಗೆ ಕೇರಳ ಪರೋಟ ಸವಿಯಿರಿ.



ವಿಳಾಸ: 2209, BSNL ಕಚೇರಿ ಹತ್ತಿರ, 80 ಅಡಿ ರಸ್ತೆ, 2 ನೇ ಹಂತ, ಇಂದಿರಾನಗರ, ಬೆಂಗಳೂರು


ಸಮಯ: ಬೆಳಗ್ಗೆ 6.30 ರಿಂದ ರಾತ್ರಿ 9.30ರ ವರೆಗೆ


ಮೊಬೈಲ್ ನಂಬರ್: +919620284809


ಇದನ್ನೂ ಓದಿ: 48 ಆದರೂ ಪಡ್ಡೆ ಹುಡುಗರ ಕನಸಲ್ಲಿ ಬರ್ತಾಳೆ ಚೈಯಾ ಚೈಯಾ ಬೆಡಗಿ! ಮಲೈಕಾ ಅರೋರಾ ತರ ಯಂಗ್ ಕಾಣೋಕೆ ಇಲ್ಲಿದೆ ಟಿಪ್ಸ್


ಬೇಕಲ್, ಜೀವನ್ ಭೀಮಾ ನಗರ್, ಬೆಂಗಳೂರು


ಅವರ ಮಸಾಲೆಯುಕ್ತ ಸಿರಿಯನ್ ಮೀಟ್ ಫ್ರೈ ಮತ್ತು ಕಲ್ಲುಮಕೈ ಫ್ರೈ ಬಗ್ಗೆ ನಾವು ನಿಮಗೆ ಹೆಚ್ಚು ಹೆಳುವ ಅವಶ್ಯಕತೆ ಇಲ್ಲ. ಕೇರಳದ ಆಹಾರಕವನ್ನು ನೀವು ಇಲ್ಲಿ ಎಂಜಾಯ್ ಮಾಡಬಹುದು. ಅರಿಪೊಡಿ ಚೆಮ್ಮೀನ್ ವರುತ್​ದ್​ ಅನ್ನು ಇಲ್ಲಿ ಮಿಸ್​ ಮಾಡಲೇಬಾರದು. ಈ ಸ್ಥಳವು ಉತ್ತಮವಾದ ಮನೆಯ ಸೆಟಪ್ ಅನ್ನು ಹೊಂದಿದ್ದು, ಒಮ್ಮೆ ಮಿಸ್​ ಮಾಡದೇ ವಿಸಿಟ್​ ಮಾಡಿ.


ವಿಳಾಸ: 38, 1 ನೇ ಮಹಡಿ, 10 ನೇ ಮುಖ್ಯ ರಸ್ತೆ, ಸೆಕ್ಟರ್ 11, ಜೀವನ್ ಭೀಮಾ ನಗರ, ಬೆಂಗಳೂರು


ಸಮಯ: ಬೆಳಗ್ಗೆ 8 ರಿಂದ ರಾತ್ರಿ 12ರವರೆಗೆ


ಮೊಬೈಲ್ ನಂಬರ್: +919845315891

Published by:Sandhya M
First published: