• Home
  • »
  • News
  • »
  • lifestyle
  • »
  • Kemmangundi: ಬಿಡುವಿಲ್ಲದ ಕೆಲಸಕ್ಕೆ ಪುಟ್ಟ ಬ್ರೇಕ್​ ಹಾಕಿ, ಕೆಮ್ಮಣ್ಣುಗುಂಡಿ ಎಂಬ ಏಕಾಂತ ಬೆಟ್ಟಕ್ಕೆ ಭೇಟಿ ಕೊಡಿ!

Kemmangundi: ಬಿಡುವಿಲ್ಲದ ಕೆಲಸಕ್ಕೆ ಪುಟ್ಟ ಬ್ರೇಕ್​ ಹಾಕಿ, ಕೆಮ್ಮಣ್ಣುಗುಂಡಿ ಎಂಬ ಏಕಾಂತ ಬೆಟ್ಟಕ್ಕೆ ಭೇಟಿ ಕೊಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kemmannugundi: ಕೆಮ್ಮಣ್ಣುಗುಂಡಿ ವಾಸ್ತವವಾಗಿ ಒಂದು ಏಕಾಂತ ಪ್ರದೇಶವಾಗಿದ್ದು, 1932 ರಲ್ಲಿ ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್ ಅವರು ಇದನ್ನು ತಮ್ಮ ಬೇಸಿಗೆಯಲ್ಲಿ ಭೇಟಿ ನೀಡುವ ಒಂದು  ಸ್ಥಳವನ್ನಾಗಿ ಮಾಡಿಕೊಂಡಿದ್ದರು.

  • Share this:

ಬಿಡುವಿಲ್ಲದ ಕೆಲಸದ ಮಧ್ಯೆ, ಈ ನಗರಗಳಲ್ಲಿರುವ ಟ್ರಾಫಿಕ್​ನಿಂದ (Traffic) ಮತ್ತು ವಾಯುಮಾಲಿನ್ಯದಿಂದ ಸ್ವಲ್ಪ ದಿನಗಳ ಕಾಲ ನಿಮಗೆ ವಿರಾಮ (Break) ಬೇಕೆ ಬೇಕು ಅಂತ ಯಾವುದಾದರೂ ಹತ್ತಿರದ ಪ್ರವಾಸಿ ಸ್ಥಳ  (Travel Places) ಅಥವಾ ಪ್ರಶಾಂತವಾದ ಬೆಟ್ಟವನ್ನು ಹುಡುಕುತ್ತಿದ್ದರೆ, ಕೆಮ್ಮಣ್ಣುಗುಂಡಿಗೆ (Kemmangundi) ಹೋಗುವುದು ಒಳ್ಳೆಯ ಆಯ್ಕೆಯಾಗಿರಬಹುದು ನೋಡಿ. ಕೆಮ್ಮಣ್ಣುಗುಂಡಿಗೆ ಹೋಗುವ ಮಾರ್ಗವು ಪ್ರವಾಸಿಗರನ್ನು ಬೇರೆ ಯಾವುದೋ ಒಂದು ಪ್ರಪಂಚಕ್ಕೆ ಕರೆದೊಯ್ದ ಅನುಭವವನ್ನು ಕಟ್ಟಿಕೊಡುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬೆಂಗಳೂರಿನಿಂದ ನೀವು ಹೊರಟರೆ ಮಾರ್ಗ ಮಧ್ಯದಲ್ಲಿ ಹಳೇಬೀಡು ಮತ್ತು ಬೇಲೂರು, ಚಿಕ್ಕಮಗಳೂರಿನ ಕಾಫಿ ತೋಟಗಳು ಮತ್ತು ಕುದುರೆಮುಖಕ್ಕೆ ಹೋಗುವ ದಾರಿಯನ್ನು ನೋಡುತ್ತಾ ಹಾಗೆ ಒಂದು ಕಾಲದಲ್ಲಿ ರಾಜರಿಗೆ ಇಷ್ಟವಾಗುತ್ತಿದ್ದ ಈ ಕೆಮ್ಮಣ್ಣುಗುಂಡಿ ಬೆಟ್ಟವನ್ನು ತಲುಪುತ್ತೀರಿ.


ಕೆಮ್ಮಣ್ಣುಗುಂಡಿ ಒಂದು ಏಕಾಂತ ಬೆಟ್ಟ


ಕೆಮ್ಮಣ್ಣುಗುಂಡಿ ವಾಸ್ತವವಾಗಿ ಒಂದು ಏಕಾಂತ ಪ್ರದೇಶವಾಗಿದ್ದು, 1932 ರಲ್ಲಿ ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್ ಅವರು ಇದನ್ನು ತಮ್ಮ ಬೇಸಿಗೆಯಲ್ಲಿ ಭೇಟಿ ನೀಡುವ ಒಂದು  ಸ್ಥಳವನ್ನಾಗಿ ಮಾಡಿಕೊಂಡಾಗಿನಿಂದ ಈ ಬೆಟ್ಟವು ತುಂಬಾನೇ ಜನಪ್ರಿಯತೆ ಪಡೆದುಕೊಂಡಿದೆ ಅಂತ ಹೇಳಲಾಗುತ್ತದೆ.


ಇಲ್ಲಿ ಹತ್ತಿರದಲ್ಲಿ ಜಲಪಾತಗಳು, ಉದ್ಯಾನಗಳು ಸಹ ಇದ್ದು, ಬೆಂಗಳೂರಿನಿಂದ ಬರುವವರಿಗೆ ಅತ್ಯಂತ ಮೋಜಿನಿಂದ ಕೂಡಿದ ಒಂದು ಚಿಕ್ಕ ಮತ್ತು ಪ್ರಶಾಂತವಾದ ರಜಾದಿನದ ಆಯ್ಕೆ ಅಂತ ಹೇಳಬಹುದು. ಪ್ರತಿ ಶನಿವಾರ, ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಬೆಟ್ಟವನ್ನು ನೋಡಲು ಬರುತ್ತಾರೆ. ಇಲ್ಲಿಗೆ ಒಂದು ಸಣ್ಣ ಪ್ರವಾಸ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.


ಚಿಕ್ಕಮಗಳೂರಿನಿಂದ ಕೆಮ್ಮಣ್ಣುಗುಂಡಿ ಸುಮಾರು 61 ಕಿಲೋ ಮೀಟರ್ ದೂರದ ಪ್ರಯಾಣ ಇದಾಗಿದ್ದು ಒಳ್ಳೆ ಟಿವಿ ಪರದೆಯ ಮೇಲೆ ಪ್ರಕೃತಿ ಕಾರ್ಯಕ್ರಮವನ್ನು ವೀಕ್ಷಿಸಿದಂತೆ ಭಾಸವಾಗುತ್ತದೆ. ಸಿಲ್ವರ್ ಓಕ್ ಮರಗಳಿಂದ ಆವೃತವಾದ ವಿಶಾಲವಾದ ಕಾಫಿ ಎಸ್ಟೇಟ್ ಗಳು ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ, ಅವುಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಅದೃಷ್ಟ ಎನ್ನಬಹುದು.


ಕೆಮ್ಮಣ್ಣುಗುಂಡಿ ಸುತ್ತಮುತ್ತಲೂ ಇರುವ ಈ ಜಾಗಗಳನ್ನು ಮಿಸ್ ಮಾಡಲೇಬೇಡಿ..


ತೋಟಗಾರಿಕಾ ಇಲಾಖೆ ನಿರ್ವಹಿಸುತ್ತಿರುವ ಗೆಸ್ಟ್ ಹೌಸ್ ಆವರಣದಲ್ಲಿ ರಾಕ್ ಗಾರ್ಡನ್ ಸಹ ಇದೆ. ಹಾಗೆಯೇ, ಒಂದು ಪ್ರಸಿದ್ಧ ಕಲ್ಲತ್ತಗಿರಿ ಜಲಪಾತ ಅಲ್ಲಿಯೇ 10 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲಿ 122 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳುವ ನೀರು ನೋಡಲು ಸುಂದರವಾಗಿ ಕಾಣುತ್ತದೆ. ನೀವು 8 ಕಿಲೋ ಮೀಟರ್ ದೂರದಲ್ಲಿರುವ ಹಬ್ಬೆ ಜಲಪಾತಕ್ಕೂ ಹೋಗಬಹುದು, . ಇದರ ನಂತರ ಝಡ್ ಪಾಯಿಂಟ್ ಇದೆ, ಇದು ಸೂರ್ಯಾಸ್ತವನ್ನು ವೀಕ್ಷಿಸಲು ಪರಿಪೂರ್ಣ ಸ್ಥಳ ಎನ್ನಲಾಗುತ್ತದೆ.


ಇದನ್ನೂ ಓದಿ: ಈ ಕಲರ್ ಕಲರ್ ತರಕಾರಿಗಳು ನಿಮ್ಮ ತೂಕ ಕಡಿಮೆ ಮಾಡುತ್ತವೆ


ಕೆಮ್ಮಣ್ಣುಗುಂಡಿಯಲ್ಲಿ ಉಳಿದುಕೊಳ್ಳಲು ಬೆಟ್ಟದ ತುದಿಯಲ್ಲಿ ತೋಟಗಾರಿಕೆ ಇಲಾಖೆಯ ಅತಿಥಿಗೃಹವೊಂದೇ ಆಯ್ಕೆಯಾಗಿದ್ದು, ಇಲ್ಲಿರುವ ಹೆಚ್ಚಿನ ಕೊಠಡಿಗಳು ಅತ್ಯಂತ ಕಡಿಮೆ ಸೌಲಭ್ಯಗಳನ್ನು ಹೊಂದಿರುವ ಸಾಮಾನ್ಯ ಕೊಠಡಿಗಳಾಗಿವೆ.
ಈ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಓಝೋನ್ ಕಣಿವೆಯು ದಟ್ಟವಾದ ಕಾಫಿ ತೋಟಗಳ ನಡುವೆ ಸ್ಥಾಪಿಸಲಾದ ಒಂದು ಸುಂದರವಾದ ಗಿರಿಧಾಮವಾಗಿದೆ. ಕೆಮ್ಮಣ್ಣುಗುಂಡಿಯಲ್ಲಿರುವ ತೋಟಗಾರಿಕಾ ಇಲಾಖೆಯ ಅತಿಥಿಗೃಹದಲ್ಲಿ ನೀಡಲಾಗುವ ಆಹಾರದ ಬಗ್ಗೆ ಜನರಿಗೆ ಅಸಮಾಧಾನವಿದ್ದು, ಇದರ ಬಗ್ಗೆ ಮಾಹಿತಿ ಪಡೆದು ಹೋಗುವುದು ಸೂಕ್ತ.


ನೀವು ನಿಮ್ಮ ಮಕ್ಕಳ ಜೊತೆಗೆ ಹೋಗಿದ್ದರೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತವಾಗಿರುತ್ತದೆ. ಆದರೆ ರಸ್ತೆ ಬದಿಗಳಲ್ಲಿರುವ ಸ್ಟಾಲ್ ಗಳಲ್ಲಿ ಸಿಗುವ ತುಂಬಾನೇ ರುಚಿಯಾದ ದಿಲ್ ಪಸಂದ್ ಅನ್ನು ತಿನ್ನಲು ಮರೆಯಬೇಡಿ.


ಇನ್ನೂ ಏನೆನೆಲ್ಲಾ ನೋಡಬಹುದು ಕೆಮ್ಮಣ್ಣುಗುಂಡಿ ಹತ್ತಿರ


35 ಕಿಲೋ ಮೀಟರ್ ದೂರದಲ್ಲಿರುವ ಶಿವಗಿರಿ ಟ್ರೈಯಲ್ಸ್ 100 ವರ್ಷಗಳಷ್ಟು ಹಳೆಯದಾದ ಎಸ್ಟೇಟ್. ಚಿಕ್ಕಮಗಳೂರು ಜಿಲ್ಲೆಯ ಹೊಗ್ಗರೇಕನಗಿರಿ ಗಿರಿಶ್ರೇಣಿಗಳಲ್ಲಿ ಹುಲಿ ಮೀಸಲು ಪ್ರದೇಶದ ಮಧ್ಯದಲ್ಲಿರುವ ದೂರದ ಬೆಟ್ಟದ ಮೇಲೆ ಇದು ನೆಲೆಗೊಂಡಿದೆ. ಈ ಸ್ಥಳವು ಎಷ್ಟು ಪ್ರತ್ಯೇಕವಾಗಿದೆಯೆಂದರೆ ಎಸ್ಟೇಟ್ ಗೆ ಸಂಬಂಧಿಸಿದವರನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲಿ ಸಂಚರಿಸುವುದಿಲ್ಲ.


ನೀವು ಸ್ಥಳೀಯ ಗೈಡ್​ ಜೊತೆಗೆ ಕರೆದುಕೊಂಡು ಹೋಗದಿದ್ದರೆ, ಬಹುಶಃ ನೀವು ಎಂದಿಗೂ ಹಿಂತಿರುಗುವುದಿಲ್ಲ ಏಕೆಂದರೆ, ಅಷ್ಟೊಂದು ನೀವು ನಿಮ್ಮಲ್ಲೆ ಕಳೆದುಹೋಗುತ್ತೀರಿ. ಯೆಮ್ಮೆದೊಡ್ಡಿ ಕಾಡುಗಳು ಒಂದು ಕಾಲದಲ್ಲಿ ಬ್ರಿಟಿಷರ ನೆಚ್ಚಿನ ಬೇಟೆಯಾಡುವ ಸ್ಥಳಗಳಾಗಿದ್ದವು.


ಇದನ್ನೂ ಓದಿ: ಎಮ್ಮೆ, ದನ ಮಾತ್ರ ಅಲ್ಲ ಆಡಿನ ಹಾಲಿನಿಂದ ಕೂಡ ಅದ್ಭುತ ಲಾಭಗಳಿವೆ


ಇಲ್ಲಿಂದ 45 ಕಿಲೋ ಮೀಟರ್ ದೂರದಲ್ಲಿರುವ ಮುತ್ತೋಡಿ ಶ್ರೇಣಿಯಲ್ಲಿರುವ ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ ಹೋಗಬಹುದು. ಶಿವಗಿರಿಯಲ್ಲಿ ಇಂದಿಗೂ ಹುಲಿಗಳಿವೆ, ಚಿರತೆಗಳು ಸಹ ಆಗಾಗ ಕಾಣಿಸಿಕೊಳ್ಳುತ್ತವೆ. ನೀವು ಇಲ್ಲಿ ಜಿಂಕೆ, ಕರಡಿಗಳು ಮತ್ತು ಕಾಡುಹಂದಿಗಳನ್ನು ಸಹ ನೋಡಬಹುದು. ಒಟ್ಟಿನಲ್ಲಿ ಕೆಮ್ಮಣ್ಣುಗುಂಡಿಯು ರಜಾದಿನಗಳನ್ನು ಕಳೆಯಲು ಬೆಸ್ಟ್ ಚಾಯ್ಸ್ ಅಂತಾನೆ ಹೇಳಬಹುದು.

Published by:Sandhya M
First published: