• Home
  • »
  • News
  • »
  • lifestyle
  • »
  • Pet Food: ಈ ಆಹಾರಗಳಿಂದ ನಿಮ್ಮ ಸಾಕುಪ್ರಾಣಿಗಳನ್ನು ದೂರವಿರಿಸಿ!

Pet Food: ಈ ಆಹಾರಗಳಿಂದ ನಿಮ್ಮ ಸಾಕುಪ್ರಾಣಿಗಳನ್ನು ದೂರವಿರಿಸಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಕುಪ್ರಾಣಿಗಳಿಗೂ ಕೂಡ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ನೀಡುವುದು ಅತ್ಯಂತ ಮಹತ್ವದ ಕೆಲಸವಾಗಿದೆ. ನಿಮ್ಮ ಪ್ರೀತಿಯ ಸಾಕು ಪ್ರಾಣಿಗೆ ನೀವು ಮಾನವ ಆಹಾರ ಕೊಡುತ್ತಿದ್ದರೆ, ಕೆಲವು ʼಹಾನಿಕಾರಕ ಮಾನವ ಆಹಾರʼ ವನ್ನು ತಪ್ಪಿಸಬೇಕಾಗುತ್ತದೆ ಆ ಆಹಾರಗಳು ಯಾವುವು ಎಂಬ ಪಟ್ಟಿ ಇಲ್ಲಿದೆ

ಮುಂದೆ ಓದಿ ...
  • Share this:

ಸಾಕುಪ್ರಾಣಿಗಳೆಂದರೆ (Pet Animals) ಎಲ್ಲರಿಗೂ ಒಂದು ರೀತಿಯ ಅಚ್ಚು ಮೆಚ್ಚು. ಅವು ಮಾಡುವ ತುಂಟಾಟಗಳನ್ನು ನೋಡುತ್ತಿದ್ದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಕೆಲವು ವಿಷಯಗಳು ಸಾಕುಪ್ರಾಣಿಗಳ ಪೋಷಕರಿಗೆ ಹಲವು ರೀತಿಯ ಸಂತೋಷಗಳನ್ನು ತರುತ್ತವೆ. ಅವುಗಳ ಮುದ್ದಾದ ದೇಹ, ತಮ್ಮ ಪ್ರೀತಿ ಪಾತ್ರರನ್ನು ನೋಡಿದರೆ ಬಾಲ ಅಲ್ಲಾಡಿಸುತ್ತಾ ಪ್ರೀತಿಯಿಂದ (Love) ಹತ್ತಿರಕ್ಕೆ ಬರುವುದು ನೋಡಿದರೆ ಸಂತೋಷಕ್ಕೆ ಪಾರವೇ ಇಲ್ಲ ಎಂದೆನಿಸುತ್ತದೆ. ಈ ಸಾಕು ಪ್ರಾಣಿಗಳ ಆಹಾರ ವಿಷಯಕ್ಕೆ ಬಂದರೆ ಪೋಷಕರು (parents) ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅದು ತಪ್ಪು. ಸಾಕು ಪ್ರಾಣಿಗಳು ಮನುಷ್ಯ ಸೇವಿಸುವ ಕೆಲವು ಆಹಾರವನ್ನು (Food) ಸೇವಿಸಿದರೂ ಕೂಡ, ಕೆಲವು ಆಹಾರಗಳನ್ನು ಈ ಸಾಕು ಪ್ರಾಣಿಗಳಿಗೆ ಕಡ್ಡಾಯವಾಗಿ ಕೊಡಲೇಬಾರದು.


ಸಾಕುಪ್ರಾಣಿಗಳಿಗೂ ಕೂಡ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ನೀಡುವುದು ಅತ್ಯಂತ ಮಹತ್ವದ ಕೆಲಸವಾಗಿದೆ. ನಿಮ್ಮ ಪ್ರೀತಿಯ ಸಾಕು ಪ್ರಾಣಿಗೆ ನೀವು ಮಾನವ ಆಹಾರ ಕೊಡುತ್ತಿದ್ದರೆ, ಕೆಲವು ʼಹಾನಿಕಾರಕ ಮಾನವ ಆಹಾರʼ ವನ್ನು ತಪ್ಪಿಸಬೇಕಾಗುತ್ತದೆ ಆ ಆಹಾರಗಳು ಯಾವುವು ಎಂಬ ಪಟ್ಟಿ ಇಲ್ಲಿದೆ:


ಪ್ರಾಣಿಗಳಿಗೆ ವಿಭಿನ್ನ ಪೌಷ್ಟಿಕಾಂಶದ ಅವಶ್ಯಕತೆ
"ಪಶುವೈದ್ಯರು ಹೇಳಿರುವ ಸತ್ಯವೆಂದರೆ ಸರಿಯಾದ ಪೋಷಣೆಯು ಸಾಕುಪ್ರಾಣಿಗಳ ಯೋಗಕ್ಷೇಮಕ್ಕೆ ಪ್ರಮುಖ ಅಂಶವಾಗಿದೆ. ಶ್ವಾನಗಳು ತಮ್ಮ ಜೀವನ ಹಂತ, ಗಾತ್ರ, ಲಿಂಗ ಮತ್ತು ಜೈವಿಕ ಅಂಶದ ಆಧಾರದ ಮೇಲೆ ವಿಭಿನ್ನ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಹೊಂದಿವೆ. ಆದ್ದರಿಂದ ಸರಿಯಾದ ಪೋಷಣೆ ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿ ಇರುತ್ತದೆ” ಎಂದು ವಿಗಲ್ಸ್ ನ ಪಶುವೈದ್ಯಾಧಿಕಾರಿ ಡಾ. ದಿಲೀಪ್ ಸೋನುನೆ ಹೇಳುತ್ತಾರೆ.


ಆರೋಗ್ಯವು ಉತ್ತಮವಾಗಿರಲು ಅವುಗಳ ಆಹಾರದ ಅಗತ್ಯತೆಗಳ ಬಗ್ಗೆ ತಿಳಿದಿರಬೇಕು 
ನಿಮ್ಮ ಸಾಕುಪ್ರಾಣಿಗಳ ರುಚಿ ಮತ್ತು ಆದ್ಯತೆಯ ಆಧಾರದ ಮೇಲೆ, ನೀವು ಒಣ ಅಥವಾ ಬೆಂದಿರುವ ಆಹಾರ ಅಥವಾ ಎರಡರ ಸಂಯೋಜನೆಯನ್ನು ಹೊಂದಿರುವ ಆಹಾರ ನೀಡಲು ನೀವು ಕೆಲವು ಆಹಾರಗಳನ್ನು ಆರಿಸಿಕೊಳ್ಳಬಹುದು. ಸಾಕು ಪ್ರಾಣಿಗಳ ಆರೋಗ್ಯವು ಉತ್ತಮವಾಗಿರಲು ಅವುಗಳ ಆಹಾರದ ಅಗತ್ಯತೆಗಳ ಬಗ್ಗೆ ಯಾವಾಗಲೂ ನಿಮ್ಮ ಪಶುವೈದ್ಯರನ್ನು ಸಂಪರ್ಕಿಸಿ ನಂತರ ಅವುಗಳಿಗೆ ಉತ್ತಮವಾದುದನ್ನೆ ನೀಡಿ.


ಇದನ್ನೂ ಓದಿ: Viral Video: ಆಮೆಯೊಂದಿಗೆ ಆ್ಯಪಲ್ ಹಂಚಿಕೊಂಡ ಚಿಂಪಾಂಜಿ! ಈ ಪ್ರಾಣಿಗಳ ಪ್ರೀತಿ ಈಗ ನೆಟ್ಟಿಗರ ಫೇವರೇಟ್


ನಾಯಿಮರಿಗಳಿಗೆ ಒಮೆಗಾ 3 ಮತ್ತು 6 ಇರುವ ಆಹಾರಗಳು, ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಮಿದುಳು, ಮೂಳೆ ಮತ್ತು ಕೋಟ್ ಬೆಳವಣಿಗೆಗೆ ಮೀನಿನ ಎಣ್ಣೆಯ ಅಗತ್ಯವಿರುತ್ತದೆ.


ಸಾಕುಪ್ರಾಣಿಗಳಿಗೆ ಬೇಕಾದ ಆಹಾರ ಕ್ರಮಗಳಿವು 
ವಯಸ್ಕ ಸಾಕು ಪ್ರಾಣಿಗಳಿಗೆ ಹೋಲಿಸಿದರೆ, ಬೆಳೆಯುತ್ತಿರುವ ಶ್ವಾನದ ಮರಿಗೆ ಅದರ ದೈನಂದಿನ ಆಹಾರ ಸೇವನೆಯ 22% ಮತ್ತು 32% ರ ನಡುವೆ ಪ್ರೋಟೀನ್ ಅಗತ್ಯವಿದೆ. ಅವುಗಳಿಗೆ ಸುಮಾರು 18% ಪ್ರೋಟಿನ್‌ ಅಗತ್ಯ ಇದ್ದೇ ಇರುತ್ತದೆ.


ಸ್ವಲ್ಪ ವಯಸ್ಸಾದ ಶ್ವಾನದ ಪೋಷಣೆಯು ವಯಸ್ಕ ಶ್ವಾನಗಳಿಗಿಂತ ಬಹಳ ಭಿನ್ನವಾಗಿ ಇರುತ್ತದೆ. ಬಹುಪಾಲು ಭಾರತೀಯರು ತಮ್ಮ ಸಾಕುಪ್ರಾಣಿಗಳಿಗೆ ಮನೆಯ ಊಟವನ್ನು ನೀಡುತ್ತಾರೆ. ಇದು ನಾಯಿಗೆ ಸಂಪೂರ್ಣ ಮತ್ತು ಸಮತೋಲಿತ ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಆದ್ದರಿಂದ ಸಾಕುಪ್ರಾಣಿಗಳಿಂದ ದೂರವಿಡಬೇಕಾದ ಕೆಲವು ಸಾಮಾನ್ಯ ಆಹಾರಗಳಿವೆ.


ಶ್ವಾನ ಮರಿಗಳು ಇತರ ಪ್ರಾಣಿಗಳ ಹಾಲಿನ ಉತ್ಪನ್ನಗಳನ್ನು ಜೀರ್ಣಿಸಿಕೊಳ್ಳಬಹುದಾದರೂ, ವಯಸ್ಕ ಶ್ವಾನಗಳಿಗೆ ಇದು ಸಾಧ್ಯವಾಗುವುದಿಲ್ಲ. ಇವು ಕೆಲವು ಸಾಕು ಪ್ರಾಣಿಗಳಿಗೆ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.


ಈ ಆಹಾರಗಳನ್ನು ಸಾಕು ಪ್ರಾಣಿಗಳಿಂದ ದೂರವಿಡಿ 
ಸೂಪರ್‌ಟೇಲ್ಸ್‌ನ ಮುಖ್ಯ ಪಶುವೈದ್ಯ ಡಾ.ಶಾಂತನು ಕಾಳಂಬಿ ಅವರು “ದ್ರಾಕ್ಷಿ, ಈರುಳ್ಳಿ, ಒಣ ಹಣ್ಣುಗಳು, ಚಹಾ, ಕಾಫಿ ಮತ್ತು ಸಿಹಿತಿಂಡಿಗಳು ವಿಷಕಾರಿಯಾಗಿರುವುದರಿಂದ ಇಂತಹ ಆಹಾರ ಪದಾರ್ಥಗಳನ್ನು ತಪ್ಪಿಸಿ. ಇದಕ್ಕೆ ಬದಲಾಗಿ, ಅನುಮೋದಿತ ವೆಟ್ ಪೆಟ್ ಟ್ರೀಟ್‌ಗಳು ಮತ್ತು ಆಹಾರವನ್ನು ಆರಿಸಿಕೊಳ್ಳಿ. ಕೃತಕ ಸಿಹಿಕಾರಕಗಳನ್ನು ಬಳಸಿ ಮಾಡಿರುವ ಮಾನವ ಬಿಸ್ಕತ್ತುಗಳನ್ನು ಸಾಕು ಪ್ರಾಣಿಗಳು ತಿನ್ನುವುದು ತುಂಬಾ ಹಾನಿಕಾರಕ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ” ಎಂದು ಹೇಳಿದರು.


“ಗೋಧಿ-ಆಧಾರಿತ ಚಪಾತಿಗಳನ್ನು ನಿಮ್ಮ ಸಾಕುಪ್ರಾಣಿಗಳಿಂದ ದೂರವಿಡಿ, ಏಕೆಂದರೆ ಇದು ಗ್ಲುಟೇನ್ ಅನ್ನು ಹೊಂದಿದ್ದು ಅದು ನಿರಂತರ ಅತಿಸಾರಕ್ಕೆ ನೇರ ಕಾರಣವಾಗಬಹುದು” ಎಂದು ಡಾ. ಶಾಂತನು ಹೇಳುತ್ತಾರೆ.


ಇದನ್ನೂ ಓದಿ:  Photo: ಈ ಪ್ರಾಣಿಗಳ ಬಾಲ ತುಂಡಾದರೂ, ಕಾಲು ಕತ್ತರಿಸಿದರು ಮತ್ತೆ ಬೆಳೆಯುತ್ತದೆ! ಎಂಥಾ ವಿಚಿತ್ರ ಅಲ್ವಾ


ಸಾಕುಪ್ರಾಣಿಗಳು ಮಾನವರಿಗಿಂತ ಜೈವಿಕವಾಗಿ ಭಿನ್ನವಾಗಿವೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ, ನಾವು ತಿನ್ನುವ ಎಲ್ಲ ತರಹದ ಆಹಾರವನ್ನು ಅವು ಸೇವಿಸಲು ಸಾಧ್ಯವಿಲ್ಲ. ಆದ್ದರಿಂದ ಸ್ವಲ್ಪ ಜಾಗರೂಕತೆಯಿಂದ ನಿಮ್ಮ ಪ್ರೀತಿಯ ಸಾಕು ಪ್ರಾಣಿಗಳಿಗೆ ಆಹಾರ ಸೇವಿಸಲು ಉತ್ತಮ ಆಹಾರ ಕೊಡಿ.

Published by:Ashwini Prabhu
First published: