Health Care: ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಊಟದ ಕಾಳಜಿ ಹೀಗಿರಲಿ, ತಜ್ಞರು ಶಿಫಾರಸು ಮಾಡಿದ ಸಲಹೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಏನು ತಿನ್ನುತ್ತೀರಿ, ಹೇಗೆ ತಿನ್ನುತ್ತೀರಿ, ಎಷ್ಟು ತಿನ್ನುತ್ತೀರಿ ಎಂಬುದು ನಿಮ್ಮ ಆರೋಗ್ಯದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮ ಬೀರುತ್ತವೆ. ಆಹಾರ ಸೇವಿಸುವಾಗ ಕೆಲವು ವಿಶೇಷ ವಿಷಯಗಳತ್ತ ಗಮನ ಹರಿಸಬೇಕಾಗುತ್ತದೆ. ಇದು ಆಹಾರಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ.

  • Share this:

     ನಾವು ಆರೋಗ್ಯವಾಗಿ (Healthy) ಇರಬೇಕಾದರೆ ನಾವು ಆಹಾರ (Food) ಸೇವನೆಯ (Eating) ಬಗ್ಗೆ ಹೆಚ್ಚು ಗಮನ ಕೊಡಬೇಕು. ನಮ್ಮ ಆಹಾರ ಉತ್ತಮವಾಗಿ (Good) ಮತ್ತು ಆರೋಗ್ಯಕರವಾಗಿ ಇದ್ದರೆ ನಾವು ಸಹ ಹೆಲ್ದೀ ಆಗಿರುತ್ತೇವೆ. ನಮ್ಮ ಜೀವನಶೈಲಿಯಲ್ಲಿ (Lifestyle) ಸದಾ ಒಳ್ಳೆಯ ಆಹಾರ ಸೇವನೆಗೆ ತಜ್ಞರು ಸಹ ಸಲಹೆ ನೀಡುತ್ತಾರೆ. ನೀವು ಏನು ತಿನ್ನುತ್ತೀರಿ, ಹೇಗೆ ತಿನ್ನುತ್ತೀರಿ, ಎಷ್ಟು ತಿನ್ನುತ್ತೀರಿ ಎಂಬುದು ನಿಮ್ಮ ಆರೋಗ್ಯದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮ ಬೀರುತ್ತವೆ. ಆಹಾರ ಸೇವಿಸುವಾಗ ಕೆಲವು ವಿಶೇಷ ವಿಷಯಗಳತ್ತ ಗಮನ ಹರಿಸಬೇಕಾಗುತ್ತದೆ. ಇದು ಆಹಾರಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ.


     ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಮಾಡುವುದು


    ಜೊತೆಗೆ ರೋಗಗಳಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವನೆ ಮಾಡುವ ಆಹಾರವು ನಿಮ್ಮನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿರುವಂತೆ ನೋಡಿಕೊಳ್ಳುತ್ತದೆ.


    ಆಯುರ್ವೇದದ ಪ್ರಕಾರ, ಋತು, ದೈಹಿಕ ನೋಟ ಮತ್ತು ಸಮಯಕ್ಕೆ ಅನುಗುಣವಾಗಿ ಆಹಾರ ಸೇವನೆ ಮಾಡಬೇಕು ಎಂಬ ಅಂಶಗಳನ್ನು ನೀವು ಆಹಾರ ಸೇವಿಸುವಾಗ ಯಾವಾಗಲೂ ನೆನಪಿಡಬೇಕು ಎಂದು ಹೇಳಲಾಗಿದೆ.


    ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ


    ತರಕಾರಿಗಳನ್ನು ಹೆಚ್ಚು ಬೇಯಿಸಬಾರದು


    ಆಯುರ್ವೇದದ ಪ್ರಕಾರ, ತರಕಾರಿಗಳನ್ನು ಹೆಚ್ಚು ಬೇಯಿಸಬಾರದು. ಯಾಕೆಂದರೆ ಅತಿಯಾಗಿ ಬೇಯಿಸುವುದು ತರಕಾರಿ ಒಳಗಿರುವ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ತರಕಾರಿಯನ್ನು ಯಾವಾಗಲೂ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಜೊತೆಗೆ ದೀರ್ಘ ಕಾಲದವರೆಗೆ ಬೇಯಿಸುವುದನ್ನು ತಪ್ಪಿಸಿ.


    ಜಂಕ್ ಫೂಡ್ ಸೇವನೆ ಮಾಡದಿರುವುದು


    ಜಂಕ್ ಫುಡ್ ನಿಂದ ದೂರವಿದ್ದಷ್ಟು ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಜಂಕ್ ಫುಡ್‌ನಲ್ಲಿ ಸೋಡಿಯಂ, ಟ್ರಾನ್ಸ್ ಕೊಬ್ಬು ಮತ್ತು ಸಕ್ಕರೆ ಹೇರಳವಾಗಿರುತ್ತದೆ. ಅದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.


    ಯಾವಾಗಲೂ ತಾಜಾ ಆಹಾರ ಸೇವನೆ ಮಾಡಿ


    ರೋಗಗಳನ್ನು ತಡೆಗಟ್ಟಲು ಯಾವಾಗಲೂ ತಾಜಾ ಆಹಾರ ಸೇವಿಸಿ. ತಾಜಾ ಆಹಾರವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ತಪ್ಪಿಸುತ್ತದೆ.


    ಆಹಾರ ಸೇವನೆ ವೇಳೆ ನೀರು ಕುಡಿಯಬೇಡಿ


    ಆಹಾರ ಸೇವನೆ ವೇಳೆ ಎಂದಿಗೂ ನೀರು ಕುಡಿಯಬೇಡಿ. ಅಗತ್ಯವಿದ್ದಾಗ ಒಂದು ಅಥವಾ ಎರಡು ಗುಟುಕು ನೀರು ಕುಡಿಯಬಹುದು. ಆದರೆ ಯಾವಾಗಲೂ ಆಹಾರದೊಂದಿಗೆ ನೀರನ್ನು ಕುಡಿಯಬೇಡಿ. ಆಯುರ್ವೇದದ ಪ್ರಕಾರ, ಆಹಾರ ಸೇವಿಸುವ ಅರ್ಧ ಗಂಟೆ ಮೊದಲು ಅಥವಾ ಅರ್ಧ ಘಂಟೆಯ ನಂತರ ಸೇವಿಸಬೇಕು.


    ವೇಗವಾಗಿ ಆಹಾರ ಸೇವನೆ ಮಾಡಬೇಡಿ


    ತ್ವರಿತ ಆಹಾರ ಸೇವನೆಯಿಂದ ನೀವು ಹಸಿವಾಗಿದ್ದಕ್ಕಿಂತ ಹೆಚ್ಚು ಆಹಾರ ಸೇವಿಸುವ ಅಪಾಯ ಇದೆ. ಇದು ತೂಕ ಹೆಚ್ಚಾಗಲು ಕಾರಣ ಆಗಬಹುದು. ಫಾಸ್ಟ್ ಫುಡ್ ತಿನ್ನುವವರಿಗೆ ಗ್ಯಾಸ್, ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ.


    ಬೆಳಗಿನ ಸೇವನೆ ಉಪಹಾರ ಅತ್ಯಗತ್ಯ


    ಬೆಳಗಿನ ಉಪಹಾರ ಬಹಳ ಮುಖ್ಯ. ಇದು ದೇಹವು ದಿನವಿಡೀ ಶಕ್ತಿಯುತ ಹಾಗೂ ಕಡಿಮೆ ಹಸಿವು ಉಂಟಾಗುತ್ತದೆ. ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚಿನ ಪ್ರೋಟೀನ್, ಫೈಬರ್ ಇರುವ ಉಪಹಾರವನ್ನು ಸೇವಿಸಿ. ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಗಳಿಂದ ಕೂಡಿರುವ ಆಹಾರ ಸೇವನೆ ಮಾಡಿ.


    ಆಹಾರ ಸೇವನೆಯ ಸರಿಯಾದ ಮಾರ್ಗ ಯಾವುದು?


    ಒಟ್ಟಿಗೆ ಆಹಾರ ಸೇವಿಸುವ ಬದಲು ಸಣ್ಣ ಭಾಗ ಮಾಡಿ, ಹೊತ್ತು ಹೊತ್ತಿಗೆ ತಿನ್ನಿರಿ. ಆಹಾರ ಪದಾರ್ಥವು ಬಾಯಿಯಲ್ಲಿ ಸಂಪೂರ್ಣವಾಗಿ ಕರಗುವ ತನಕ ಅದನ್ನು ಅಗಿಯಿರಿ. ಆಹಾರವನ್ನು ಬೇಗನೆ ನುಂಗಲು ಪ್ರಯತ್ನಿಸಬೇಡಿ.


    ಬ್ಯಾಕ್ಟೀರಿಯಾ ವಿರುದ್ಧ ರಕ್ಷಣೆ


    ಆಹಾರವನ್ನು ಸರಿಯಾಗಿ ಅಗಿಯುವುದು ಬಾಯಿಯ ಬ್ಯಾಕ್ಟೀರಿಯಾಗಳನ್ನು ನಿವಾರಣೆ ಮಾಡುತ್ತದೆ. ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸವು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ದೇಹವನ್ನು ಬ್ಯಾಕ್ಟೀರಿಯಾದ ಸೋಂಕಿನಿಂದ ದೂರವಿರಿಸುತ್ತದೆ. ಆಹಾರದ ಕಣಗಳು ಹಲ್ಲುಗಳ ನಡುವೆ ಸಿಲುಕದೇ ದುರ್ವಾಸನೆ ಮತ್ತು ಕುಳಿ ತಡೆಯುತ್ತದೆ.


    ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ?


    ಉತ್ತಮ ಜೀರ್ಣಕ್ರಿಯೆಗೆ


    ದೀರ್ಘಕಾಲದವರೆಗೆ ಆಹಾರ ಅಗಿಯುವ ಪ್ರಕ್ರಿಯೆ, ಬಾಯಿಯಲ್ಲಿ ಲಾಲಾರಸ ಹೆಚ್ಚುವಂತರೆ ಮಾಡುತ್ತದೆ. ಇದು ಆಹಾರವನ್ನು ಮೃದುಗೊಳಿಸುತ್ತದೆ. ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.

    Published by:renukadariyannavar
    First published: