Fridge Organizing Tips: ಫ್ರಿಡ್ಜ್​ನಲ್ಲಿ ಹಣ್ಣು ತರಕಾರಿಗಳನ್ನು ಈ ರೀತಿಯಾಗಿ ಜೋಡಿಸಿ ಇಡಲು ಈ ಟಿಪ್ಸ್ ಫಾಲೋ ಮಾಡಿ

ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್ ಒಳಗೆ ಹಾಗೆಯೇ ತುಂಬಿಸಿಟ್ಟಿರುತ್ತಾರೆ. ಅವುಗಳನ್ನು ಹಾಗೆ ಬಿಸಾಡದೆ ಅವುಗಳನ್ನು ಜೋಡಿಸಿಟ್ಟುಕೊಳ್ಳಲು ವಿಭಿನ್ನ ಮಾರ್ಗಗಳಿವೆ. ಇದು ನಿಮ್ಮ ಆಹಾರವು ಹೆಚ್ಚು ಸಮಯದವರೆಗೆ ತಾಜಾವಾಗಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ. ಆದ್ದರಿಂದ, ಫ್ರಿಡ್ಜ್ ನಲ್ಲಿ ಪದಾರ್ಥಗಳನ್ನು ಸರಿಯಾಗಿ ಜೋಡಿಸಿಟ್ಟುಕೊಳ್ಳುವುದು ಹೇಗೆಂದು ನೀವು ಸಹ ತಿಳಿದುಕೊಳ್ಳಲು ಬಯಸಿದರೆ, ಇಲ್ಲಿವೆ ನೋಡಿ ಕೆಲವು ಸಲಹೆಗಳು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವರ ಮನೆಯಲ್ಲಿರುವ ರೆಫ್ರಿಜರೇಟರ್ ಗಳನ್ನು (Refrigerator) ಎಂದರೆ ಫ್ರಿಡ್ಜ್ ಗಳನ್ನು ತೆರೆದು ನೋಡಿದರೆ ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನು (Fruits) ಮತ್ತು ಇತರೆ ಪ್ಯಾಕೇಟ್ ಗಳನ್ನು (Packets) ಹಾಗೆಯೇ ತುಂಬಿರುವುದನ್ನು ನೋಡುತ್ತೇವೆ. ಆ ಫ್ರಿಡ್ಜ್ ತೆಗೆದ ತಕ್ಷಣವೇ ಒಂದು ರೀತಿಯಲ್ಲಿ ಅದು ತುಂಬಾನೇ ಗೊಂದಲಮಯವಾಗಿ ಕಾಣುತ್ತಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಲ್ಲದೆ ವಿವಿಧ ಋತುಗಳು ನಮ್ಮ ಆಹಾರದ (Food) ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತವೆ. ಬೇಸಿಗೆಯಲ್ಲಿ, ಎರಡು ದಿನಗಳಿಗಿಂತ ಹೆಚ್ಚು ಕಾಲ ಇರಿಸಿದ ತರಕಾರಿಗಳು (Vegetables) ಮತ್ತು ಹಣ್ಣುಗಳು ಬೇಗನೆ ಕೆಟ್ಟು ಹೋಗುತ್ತವೆ. ಅದೇ ಮಳೆಗಾಲದಲ್ಲಿ (Monsoon) ತೇವಾಂಶವು ಹೆಚ್ಚಾಗುತ್ತದೆ ಮತ್ತು ಚಳಿಗಾಲದಲ್ಲಿ (Winter), ತಾಪಮಾನವನ್ನು ಕಾಪಾಡಿಕೊಳ್ಳುವುದು ಸವಾಲಾಗಿರುತ್ತದೆ.

ಆದರೆ ನಿಮ್ಮ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ಅಥವಾ ಫ್ರೀಜರ್ ನಲ್ಲಿ ಸರಿಯಾಗಿ ಸಂಗ್ರಹಿಸುವುದು ಹೇಗೆಂದು ನಿಮಗೆ ತಿಳಿದಿದ್ದರೆ, ನಿಮ್ಮ ಕೆಲಸವು ಸ್ವಲ್ಪ ಮಟ್ಟಿಗೆ ಸುಲಭವಾಗುತ್ತದೆ. ನಮ್ಮಲ್ಲಿ ಕೆಲವರು ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್ ಒಳಗೆ ಹಾಗೆಯೇ ತುಂಬಿಸಿಟ್ಟಿರುತ್ತಾರೆ. ಅವುಗಳನ್ನು ಹಾಗೆ ಬಿಸಾಡದೆ ಅವುಗಳನ್ನು ಜೋಡಿಸಿಟ್ಟುಕೊಳ್ಳಲು ವಿಭಿನ್ನ ಮಾರ್ಗಗಳಿವೆ. ಇದು ನಿಮ್ಮ ಆಹಾರವು ಹೆಚ್ಚು ಸಮಯದವರೆಗೆ ತಾಜಾವಾಗಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ. ಆದ್ದರಿಂದ, ಫ್ರಿಡ್ಜ್ ನಲ್ಲಿ ಪದಾರ್ಥಗಳನ್ನು ಸರಿಯಾಗಿ ಜೋಡಿಸಿಟ್ಟುಕೊಳ್ಳುವುದು ಹೇಗೆಂದು ನೀವು ಸಹ ತಿಳಿದುಕೊಳ್ಳಲು ಬಯಸಿದರೆ, ಇಲ್ಲಿವೆ ನೋಡಿ ಕೆಲವು ಸಲಹೆಗಳು.

1. ಮೇಲಿನ ಶೆಲ್ಫ್
ಫ್ರಿಡ್ಜ್ ನ ಮೇಲಿನ ಶೆಲ್ಫ್ ನಲ್ಲಿ ಯಾವಾಗಲೂ ನೀವು ಒಂದು ಅಥವಾ ಎರಡು ದಿನಗಳಲ್ಲಿ ಸೇವಿಸುವ ವಸ್ತುಗಳನ್ನು ಇರಿಸಿಕೊಳ್ಳಬೇಕು. ಅವುಗಳನ್ನು ನಿಮ್ಮ ಕಣ್ಣುಗಳ ಮುಂದೆ ಇಡುವುದು ಉತ್ತಮ, ಇದರಿಂದ ನೀವು ಅವುಗಳನ್ನು ಮರೆಯುವುದಿಲ್ಲ. ಹೀಗಾಗಿ ಉಳಿದಂತಹ ಮತ್ತು ಬೇಗನೆ ಹಾಳಾಗುವ ಪದಾರ್ಥಗಳನ್ನು ಎಂದರೆ ಮೊಸರು ಮತ್ತು ಕತ್ತರಿಸಿಟ್ಟ ಹಣ್ಣುಗಳು ಮತ್ತು ತರಕಾರಿಗಳನ್ನು ನೀವು ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Hairfall: ಮಳೆಗಾಲದಲ್ಲಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಈ ತೈಲಗಳಿಂದ ನೆತ್ತಿಯನ್ನು ಮಸಾಜ್ ಮಾಡಿ

2. ಎರಡನೆಯ ಶೆಲ್ಫ್
ಇಲ್ಲಿ ಕೇವಲ ಒಂದು ದಿನದಲ್ಲಿ ಕೆಟ್ಟು ಹೋಗದ ಪದಾರ್ಥಗಳನ್ನು ಸಂಗ್ರಹಿಸುಡುವುದು ಉತ್ತಮ. ಆದ್ದರಿಂದ, ನೀವು ಹಾಲು, ಚೀಸ್, ಮಸಾಲಾಗಳ ಜಾಡಿಗಳು, ಜಾಮ್ ಗಳು ಮತ್ತು ಹೆಚ್ಚಿನದನ್ನು ಇಲ್ಲಿ ಇಡಬಹುದು. ನೀವು ಅದನ್ನು ಎಲ್ಲಿ ಇಟ್ಟಿದ್ದೀರಿ ಎಂಬುದನ್ನು ನೀವು ಸುಲಭವಾಗಿ ನೆನಪಿಸಿಕೊಳ್ಳಬಹುದು ಮತ್ತು ಅಗತ್ಯವಿರುವ ಪದಾರ್ಥಗಳನ್ನು ಅಗತ್ಯವಿರುವಾಗಲೆಲ್ಲಾ ಬಳಸಿಕೊಳ್ಳಬಹುದು.

3. ತರಕಾರಿ ಮತ್ತು ಮಾಂಸದ ಪದಾರ್ಥಗಳನ್ನು ಒಂದೇ ಕಡೆ ಇಡಬೇಡಿ
ನಿಮ್ಮ ಫ್ರಿಡ್ಜ್ ನಲ್ಲಿ ತರಕಾರಿ ಮತ್ತು ಮಾಂಸದ ಪದಾರ್ಥಗಳನ್ನು ಒಟ್ಟಿಗೆ ಇರಿಸಬೇಡಿ. ಏಕೆಂದರೆ ಹೀಗೆ ಒಟ್ಟಿಗೆ ಇರಿಸುವುದರಿಂದ ಎರಡರ ವಾಸನೆಯು ಸಂಯೋಜಿಸಬಹುದು ಮತ್ತು ಅಂತಿಮವಾಗಿ ನೀವು ಅವುಗಳನ್ನು ಹೊರ ಹಾಕಬೇಕಾಗುತ್ತದೆ. ಆದ್ದರಿಂದ ಬೇರೆ ಬೇರೆ ಶೆಲ್ಫ್ ನಲ್ಲಿ ಈ ಎರಡನ್ನೂ ಇರಿಸಿರಿ.

4. ಒಂದೇ ರೀತಿಯ ಆಹಾರಗಳನ್ನು ಒಂದೇ ಕಡೆ ಇರಿಸಿ
ನಿಮ್ಮ ಫ್ರಿಡ್ಜ್ ನಲ್ಲಿ, ಒಂದೇ ರೀತಿಯ ಆಹಾರಗಳನ್ನು ಒಟ್ಟಿಗೆ ಇರಿಸಿರಿ. ಕಿರಾಣಿ ಪಟ್ಟಿಯನ್ನು ತಯಾರಿಸುವ ಸಮಯ ಬಂದಾಗ, ನಿಮ್ಮ ಬಳಿ ಏನಿದೆ ಎಂದು ನೀವು ನಿಖರವಾಗಿ ನೋಡಲು ಸಾಧ್ಯವಾಗುತ್ತದೆ. ನಿರ್ದಿಷ್ಟ ಮಸಾಲೆಯನ್ನು ಎಲ್ಲಿ ಹುಡುಕಬೇಕೆಂದು ನಿಮಗೆ ತಿಳಿದಿರುತ್ತದೆ ಎಂದು ಸಹ ಇದರರ್ಥ.

5. ತೊಟ್ಟಿಕ್ಕುವ ಆಹಾರಗಳನ್ನು ತೆಗೆದುಹಾಕಿ
ಹೆಚ್ಚಿನ ತೇವಾಂಶವಿರುವ ಆಹಾರಗಳು ಆಗಾಗ್ಗೆ ಸೋರುತ್ತವೆ. ಈ ಸೋರುವಿಕೆಯನ್ನು ತಡೆಯಲು ಹಣ್ಣು ಮತ್ತು ತರಕಾರಿಗಳನ್ನು ಪೇಪರ್ ಟವೆಲ್ ಗಳಿಂದ ಸುತ್ತಿ ಇರಿಸುವುದು ಒಳ್ಳೆಯದು. ಪರಿಣಾಮವಾಗಿ ಯಾವುದೇ ಸೋರುವಿಕೆಯು ಇದಕ್ಕೆ ಅಂಟಿಕೊಳ್ಳುವುದಿಲ್ಲ. ಮಾಂಸ ಮತ್ತು ಪೌಲ್ಟ್ರಿಯಂತಹ ಡ್ರಿಪ್ಪಿಂಗ್ ಗೆ ಒಳಗಾಗುವ ಸರಕುಗಳನ್ನು ಕೆಳಗಿನ ಕಪಾಟಿನಲ್ಲಿ ಇರಿಸಬೇಕು, ಅಲ್ಲಿ ಅವುಗಳನ್ನು ಇರಿಸುವುದರಿಂದ ಅವು ಬೇರೆ ಆಹಾರಗಳಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.

ಇದನ್ನೂ ಓದಿ: Healthy Food: ಆರೋಗ್ಯಕರ ಜೀವನಕ್ಕೆ ಅವಲಕ್ಕಿ, ಉಪ್ಮಾ, ಮುರ್ಮುರಾದಂತಹ ಲಘು ಆಹಾರವನ್ನು ಸೇವಿಸಿ

6. ದೀರ್ಘಕಾಲದವರೆಗೆ ಅಗತ್ಯವಿರುವ ವಸ್ತುಗಳನ್ನು ಫ್ರೀಜರ್ ನಲ್ಲಿ ಇಡಿ
ದೀರ್ಘಕಾಲದವರೆಗೆ ಅಗತ್ಯವಿರುವಂತಹ ವಸ್ತುಗಳನ್ನು ನೀವು ಫ್ರೀಜರ್ ನಲ್ಲಿ ಇರಿಸಿರಿ. ನೀವು ಬಟಾಣಿ ಮತ್ತು ಹೆಚ್ಚಿನವುಗಳಂತಹ ಋತುಮಾನದ ವಸ್ತುಗಳನ್ನು ಸಂರಕ್ಷಿಸಲು ಬಯಸಿದರೆ, ನೀವು ಯಾವಾಗಲೂ ಅವುಗಳನ್ನು ಸಿಪ್ಪೆ ಸುಲಿದು, ತೊಳೆದು ಫ್ರೀಜರ್ ನಲ್ಲಿ ಒಂದು ಪಾತ್ರೆಯಲ್ಲಿ ಹಾಕಿ ಇಡಬಹುದು. ನಂತರ ಅಗತ್ಯವಿದ್ದಾಗಲೆಲ್ಲಾ ಅದನ್ನು ಬಳಸಬಹುದು.
Published by:Ashwini Prabhu
First published: