HOME » NEWS » Lifestyle » KEEP THESE TIPS IN MIND THE NEXT TIME YOU WANT TO TRY AT HOME WAXING STG AE

ಮನೆಯಲ್ಲಿಯೇ ವ್ಯಾಕ್ಸಿಂಗ್ ಮಾಡುವ ಮುನ್ನಈ ವಿಷಯಗಳನ್ನು ತಿಳಿದುಕೊಳ್ಳಿ..!

ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಕಾಟದಿಂದಾಗಿ ಮನೆಯಿಂದ ಹೊರ ಹೋಗುವ ಮನಸ್ಸು ಯಾರೂ ಮಾಡುವುದಿಲ್ಲ. ಅದರಲ್ಲೂ ಬ್ಯೂಟಿ ಪಾರ್ಲರ್​ಗಳಿಗೆ ಹೋಗುವ ಆಲೋಚನೆಯನ್ನೂ ಮನಸ್ಸಿಗೆ ತಂದು ಕೊಳ್ಳದವರು ತುಂಬಾ ಜನರಿದ್ದಾರೆ. ಇಂತಹವರಿಗಾಗಿಯೇ ಮನೆಯಲ್ಲೇ ವ್ಯಾಕ್ಸ್​ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಲಾಗಿದೆ.

news18-kannada
Updated:June 24, 2021, 8:00 PM IST
ಮನೆಯಲ್ಲಿಯೇ ವ್ಯಾಕ್ಸಿಂಗ್ ಮಾಡುವ ಮುನ್ನಈ ವಿಷಯಗಳನ್ನು ತಿಳಿದುಕೊಳ್ಳಿ..!
ಸಾಂದರ್ಭಿಕ ಚಿತ್ರ
  • Share this:
ಇತ್ತೀಚಿನ ದಿನಗಳಲ್ಲಿ ಬ್ಯೂಟಿಪಾರ್ಲರ್‌ಗಳಿಗೆ ಭೇಟಿ ನೀಡುವುದು ಎಂದರೆ ಒಂದು ರೀತಿಯ ಹೆದರಿಕೆಯನ್ನುಂಟು ಮಾಡುತ್ತದೆ. ಕೊರೋನಾ ಭೀತಿ ಒಂದೆಡೆಯಾದರೆ ಇನ್ನೊಂದೆಡೆ ಲಾಕ್​ಡೌನ್​  ಆತಂಕ. ಬ್ಯೂಟಿಪಾರ್ಲರ್‌ಗಳಲ್ಲಿ ಸರಿಯಾದ ಸ್ವಚ್ಛತೆಯನ್ನು ಕಾಪಾಡುತ್ತಾರೋ ಇಲ್ಲವೋ ಹೈಜಿನಿಕ್ ಆಗಿ ಇರುತ್ತದೆಯೋ ಇಲ್ಲವೋ ಎಂಬ ಅನುಮಾನ ಹೆಚ್ಚಿನ ಮಹಿಳೆಯರನ್ನು ಕಾಡುತ್ತಿರುತ್ತದೆ. ಈ ಸಮಯದಲ್ಲಿ ಮನೆಯಲ್ಲಿಯೇ ಸೌಂದರ್ಯವನ್ನು ಕಾಪಾಡಿಕೊಳ್ಳುವ ಆಲೋಚನೆ ಮನದಲ್ಲಿ ಮೂಡುತ್ತದೆ. ಇಂದಿನ ಲೇಖನದಲ್ಲಿ ಮನೆಯಲ್ಲಿಯೇ ವ್ಯಾಕ್ಸಿಂಗ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ.

ನೀವು ವ್ಯಾಕ್ಸಿಂಗ್ ಮಾಡಿಸುವ ಮುನ್ನ ನಿಮ್ಮ ಕೈ ಇಲ್ಲವೇ ಕಾಲಿನ ಕೂದಲು ¼ ಇಂಚು ಉದ್ದ ಹಾಗೂ ½ ಇಂಚಿಗಿಂತ ಉದ್ದವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ತ್ವಚೆಗೆ ಅನುಗುಣವಾದ ವ್ಯಾಕ್ಸಿಂಗ್ ಆಯ್ಕೆ ಮಾಡಿಕೊಳ್ಳಿ. ವ್ಯಾಕ್ಸ್ ಸ್ಟ್ರಿಪ್‌ಗಳು ಈಗ ಮಾರುಕಟ್ಟೆಯಲ್ಲಿ ದೊರೆಯುವುದರಿಂದ ನೀವು ಇವುಗಳನ್ನು ಬಳಸಿ ಕೂದಲನ್ನು ತೆಗೆಯಬಹುದು.

Hair Remove, waxing, Beauty, Remedy, Wax, ವ್ಯಾಕ್ಸ್, ಸೌಂದರ್ಯ, ಡಿಐವೈ
ಸಾಂದರ್ಭಿಕ ಚಿತ್ರ


ವ್ಯಾಕ್ಸ್ ಸ್ಟ್ರಿಪ್ ಬಳಸುವಾಗ ಸ್ಟ್ರಿಪ್ ಇರುವ ಭಾಗವನ್ನು ಕೂದಲಿನ ಮೇಲಿರಿಸಿ. ವಿರುದ್ಧ ದಿಕ್ಕಿನಲ್ಲಿ ಈ ಸ್ಟ್ರಿಪ್ ಅನ್ನು ಎಳೆಯಿರಿ. ಇದರಿಂದ ನೋವು ಉಂಟಾಗುವುದಿಲ್ಲ ಮತ್ತು ತ್ವಚೆಯಲ್ಲಿ ಕೂದಲು ಅವಶೇಷ ಉಳಿಯುವುದಿಲ್ಲ.

ಇದನ್ನೂ ಓದಿ: Nikhil Kumaraswamy: ಅಪ್ಪನಾಗುತ್ತಿರುವ ಸುದ್ದಿ ಕೊಟ್ಟ ಬೆನ್ನಲ್ಲೇ ಮತ್ತೆರೆಡು ಗುಡ್​ ನ್ಯೂಸ್​ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ..!

ಟ್ಯಾನ್ ಇದ್ದಾಗ ವ್ಯಾಕ್ಸ್ ಮಾಡಲು ಹೋಗದಿರಿ. ಇದು ತ್ವಚೆಯ ಹೊರಭಾಗವನ್ನು ಎಳೆದಿಡುವ ಸಾಧ್ಯತೆ ಇದೆ. ಬಿಸಿ ಬಿಸಿ ವ್ಯಾಕ್ಸ್ ಅನ್ನು ಹಚ್ಚುವ ಮುನ್ನ ಮೊದಲಿಗೆ ಅದನ್ನು ತಣ್ಣಗೆ ಮಾಡಿ ನಂತರ ಅಪ್ಲೈ ಮಾಡಿಕೊಳ್ಳಿ. ವ್ಯಾಕ್ಸ್ ಮಾಡಿದ ಕೂಡಲೇ ಬಿಸಿ ಟಬ್ ಇಲ್ಲವೇ ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಡದಿರಿ. ಇದು ಸೋಂಕನ್ನು ತಂದೊಡ್ಡಬಹುದು.

ಮನೆಯಲ್ಲಿಯೇ ವ್ಯಾಕ್ಸ್ ಮಾಡುವ ಮುನ್ನ ದುಬಾರಿ ಬೆಲೆಯ ವ್ಯಾಕ್ಸಿಂಗ್ ಕಿಟ್ ಅನ್ನು ಖರೀದಿಸಿ. ನೀವು ಮನೆಯಲ್ಲಿಯೇ ವ್ಯಾಕ್ಸ್ ಮಾಡಿಕೊಳ್ಳುವುದರಿಂದ ಕಡಿಮೆ ಬೆಲೆಗೆ ಕಿಟ್ ಅನ್ನು ಖರೀದಿಸದಿರಿ. ಪ್ರತಿ ವ್ಯಾಕ್ಸಿಂಗ್ ಆದ ನಂತರ ಎಕ್ಸ್‌ಫೋಲಿಯೇಟ್ ಮಾಡಿ. ಇದರಿಂದ ಡೆಡ್‌ ಸೆಲ್ಸ್‌ನ ಪದರವನ್ನು ನಿವಾರಿಸಲು ಸಾಧ್ಯ ಮತ್ತು ಕೂದಲು ಒಳಗಿನಿಂದ ಬೆಳೆಯುವುದಿಲ್ಲ.ನೀವು ವ್ಯಾಕ್ಸ್ ಮಾಡುವ ಸ್ಥಳವನ್ನು ಚೆನ್ನಾಗಿ ತೊಳೆದುಕೊಳ್ಳಿ. ಯಾವುದೇ ಕ್ರೀಮ್ ಇಲ್ಲವೇ ಡಿಯೋವನ್ನು ನೀವು ಬಳಸಬಾರದು. ಒಂದು ವೇಳೆ ಬಳಸಿದರೂ ಚೆನ್ನಾಗಿ ತೊಳೆದು ಆ ಭಾಗವನ್ನು ಒರೆಸಿ ಡ್ರೈ ಮಾಡಿ. ನೀವು ಬೆವರುತ್ತಿದ್ದರೆ ಆ ಭಾಗವನ್ನು ತೊಳೆದುಕೊಳ್ಳಿ ನಂತರ ಡ್ರೈ ಮಾಡಿ. ದೇಹ ಬೆವರದಂತೆ ನೋಡಿಕೊಳ್ಳಿ.

ಇದನ್ನೂಓದಿ: Urvashi Rautela: 58 ಲಕ್ಷ ಮೌಲ್ಯದ ಕಾಸ್ಟ್ಯೂಮ್​ ಧರಿಸಿ ರಾಜಕಾರಣಿಯೊಬ್ಬರ ಮರಿಮೊಮ್ಮಗಳ ಮದುವೆಗೆ ಹೋದ ಊರ್ವಶಿ ರೌಟೇಲಾ

ವ್ಯಾಕ್ಸಿಂಗ್ ಮಾಡುವ ಮುನ್ನ ಆ ಜಾಗ ಡ್ರೈ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಗುವಿನ ಪೌಡರ್ ಅನ್ನು ಬಳಸಿ ಇದು ಆ ಜಾಗದ ಎಲ್ಲಾ ಮಾಯಿಶ್ಚರೈಸರ್ ಅನ್ನು ಹಿಡಿದಿಡುತ್ತದೆ. ಇದರಿಂದ ವ್ಯಾಕ್ಸ್ ಸ್ಟ್ರಿಪ್ ಅನುಕೂಲಕರವಾಗಿ ಅಲ್ಲಿ ಕೂರುತ್ತದೆ.
ವ್ಯಾಕ್ಸ್ ಹಚ್ಚುವ ಮುನ್ನ ತಾಪಮಾನವನ್ನು ಪರಿಶೀಲಿಸಿಕೊಳ್ಳಿ. ನೀವು ಹಾರ್ಡ್ ವ್ಯಾಕ್ಸ್ ಬಳಸುತ್ತಿದ್ದರೆ ಹೆಚ್ಚು ಬಿಸಿ ಇರಬಾರದು. ಇಲ್ಲದಿದ್ದರೆ ನಿಮ್ಮ ತ್ವಚೆ ಉರಿಯಲು ಆರಂಭವಾಗಬಹುದು. ಇನ್ನು ತೀರಾ ತಣ್ಣಗಿದ್ದರೆ ಕೂದಲು ಸರಿಯಾಗಿ ಬಾರದೆ ಸ್ಟ್ರಿಪ್ ಇಲ್ಲವೇ ವ್ಯಾಕ್ಸ್ ಅಲ್ಲಿಯೇ ಅಂಟಿಕೊಳ್ಳಬಹುದು.

ಒಂದಕ್ಕಿಂತ ಹೆಚ್ಚು ಬಾರಿ ಅದೇ ಸ್ಥಳದಲ್ಲಿ ವ್ಯಾಕ್ಸ್ ಮಾಡಬೇಡಿ. ಇದರಿಂದ ತ್ವಚೆ ಕಿರಿಕಿರಿಯನ್ನುಂಟು ಮಾಡುತ್ತದೆ. ಆ ಜಾಗದಲ್ಲಿ ಇನ್ನೂ ಕೂದಲಿದ್ದರೆ ಆ ಕೂದಲನ್ನು ಟ್ವೀಜರ್ ಬಳಸಿ ತೆಗೆಯಿರಿ.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Anitha E
First published: June 24, 2021, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories