Weight Loss: ತೂಕ ಇಳಿಸಲು ಬಯಸುವವರು ಅನುಸರಿಸಲೇಬೇಕಾದ ಕ್ರಮಗಳು

ತೂಕ ಕಡಿಮೆ ಮಾಡಲು ಒಂದು ದಿನ ಅತಿಯಾಗಿ ತಿನ್ನುವುದು ಮತ್ತು ಮರುದಿನ ಕಡಿಮೆ ತಿನ್ನೋದು ಹೀಗೆ ಮಾಡೋದು ಒಳ್ಳೆಯದಲ್ಲ, ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ನಿಯಮಿತ ವ್ಯಾಯಾಮ ಮತ್ತು ಡಯೆಟ್​ ದಿನಚರಿಯನ್ನು ಅನುಸರಿಸಲೇಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಹಲವರಿಗೆ ದೇಹದ ತೂಕ (Body Weight) ಬೇಗನೆ ಹೆಚ್ಚಾಗುತ್ತದೆ, ಆದರೆ ಆ ಹೆಚ್ಚಾದ ತೂಕವನ್ನು ಇಳಿಸಿಕೊಳ್ಳುವುದು ಅಷ್ಟೊಂದು ಸುಲಭದ ಪ್ರಕ್ರಿಯೆಯಲ್ಲ ಬಿಡಿ. ದೇಹದ ತೂಕವನ್ನು ಕಡಿಮೆ (Weight loss) ಮಾಡಿಕೊಳ್ಳಲು ಮೊದಲು ನಾವು ದೃಢ ನಿಶ್ಚಯವನ್ನು ಮಾಡಬೇಕಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಉತ್ತಮ ಫಲಿತಾಂಶಗಳನ್ನು (Good Result) ಪಡೆಯಲು ಇದರ ಬಗ್ಗೆ ಸರಿಯಾದ ಜ್ಞಾನದ ಅಗತ್ಯವಿದೆ. ತಮ್ಮ ದೇಹದಲ್ಲಿರುವ ಅಧಿಕವಾದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅನೇಕ ಜನರು ಜಿಮ್‌ಗಳಿಗೆ (Gym) ಹೋಗಿ ಕಠಿಣವಾದ ತಾಲೀಮು ಮಾಡಿ ಮತ್ತು ಡಯಟ್ ಮಾಡುತ್ತಾರೆ. ಒಟ್ಟಿನಲ್ಲಿ ತೂಕ ಇಳಿಸುವ ಆ ಪ್ರಯಾಣವು ಸುಸ್ಥಿರ ಜೀವನ (Life) ಮತ್ತು ಪ್ರಕ್ರಿಯೆಯ ಬಗ್ಗೆ ಜ್ಞಾನದೊಂದಿಗೆ ಪ್ರಾರಂಭವಾಗುತ್ತದೆ. ಆದ್ದರಿಂದ, ನೀವು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಇದ್ದರೆ, ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕವಾಗಿದೆ.

1. ಕೊಬ್ಬು ಮತ್ತು ತೂಕದ ನಡುವಿನ ವ್ಯತ್ಯಾಸವನ್ನು ತಿಳಿಯಿರಿ

ಜನರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಅದರ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಆದರೂ, ತೂಕವು ಮುಖ್ಯವಾಗಿ ಸ್ನಾಯು ತೂಕವನ್ನು ಸೂಚಿಸುತ್ತದೆ ಮತ್ತು ಕೊಬ್ಬಿನ ಪ್ರಮಾಣವನ್ನು ಅಲ್ಲ.

ವ್ಯಾಯಾಮ ಮಾಡುವಾಗ, ಆರೋಗ್ಯಕರ ತೂಕವನ್ನು ಪಡೆಯಲು ನೀವು ಸ್ನಾಯುಗಳನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಕೊಬ್ಬನ್ನು ಕರಗಿಸಬೇಕು. ಸ್ನಾಯುವಿನ ತೂಕವನ್ನು ಹೆಚ್ಚಿಸಿಕೊಳ್ಳುವುದು ನಿಮ್ಮ ದೇಹವನ್ನು ಬಲಪಡಿಸುವುದು ಮಾತ್ರವಲ್ಲದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

2. ತೂಕ ಕಡಿಮೆಯಾಗಿರುವುದನ್ನು ಅಳತೆ ಮಾಪಕದಿಂದ ಅಳೆಯಬೇಡಿ

ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಗತಿಯನ್ನು ನಿರ್ಧರಿಸಲು ನೀವು ಅಳತೆ ಮಾಪಕದ ಮೇಲೆ ಅವಲಂಬಿತರಾಗಿದ್ದರೆ, ಆಗ ನೀವು ತಪ್ಪಾಗುವ ಅವಕಾಶಗಳು ತುಂಬಾನೇ ಇರುತ್ತವೆ. ದೇಹದ ತೂಕವು ನೀರು, ಸ್ನಾಯುಗಳು, ಮೂಳೆಯ ಸಾಂದ್ರತೆ ಮತ್ತು ಇತರ ಅನೇಕ ವಸ್ತುಗಳಿಂದ ಮಾಡಲ್ಪಟ್ಟಿದೆ.

ನೀವು ಜಿಮ್‌ನಲ್ಲಿ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಿದ್ದರೂ ಸಹ ನಿಮ್ಮ ತೂಕ ಕಡಿಮೆ ಆದಂತೆ ಕಾಣಿಸುವುದಿಲ್ಲ. ದ್ರವ್ಯರಾಶಿಯ ಬದಲು ಬಿಎಂಐ ಮತ್ತು ದೇಹದ ಅಳತೆಗಳ ಮೇಲೆ ನಿಗಾ ಇಡಬೇಕು.

3. ಹೆಚ್ಚು ಸಮಯದ ವ್ಯಾಯಾಮ ಉತ್ತಮ ಫಲಿತಾಂಶ ನೀಡುವುದಿಲ್ಲ

ಜಿಮ್‌ನಲ್ಲಿ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡುವುದರಿಂದ ನೀವು ವೇಗವಾಗಿ ತೂಕ ಕಳೆದುಕೊಳ್ಳುತ್ತೀರಿ ಎಂದು ನೀವು ಭಾವಿಸಿದರೆ, ತಕ್ಷಣವೇ ಇದನ್ನು ನಿಲ್ಲಿಸಿ. ಎಲ್ಲಕ್ಕಿಂತ ಮುಖ್ಯವಾದ ಒಂದು ವಿಷಯವೆಂದರೆ ವ್ಯಾಯಾಮದ ತೀವ್ರತೆ ಆಗಿದೆ.

ಇದನ್ನೂ ಓದಿ: Women Health Care: ಮಹಿಳೆಯರು ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರಕ

ಸಂಪೂರ್ಣ ಶಕ್ತಿಯೊಂದಿಗೆ ಕೇವಲ 30 ನಿಮಿಷಗಳ ವ್ಯಾಯಾಮವನ್ನು ಸೋಮಾರಿತನದಿಂದ ಮಾಡಿದ ದೀರ್ಘ ಸೆಷನ್‌ಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

4. ನಿದ್ರೆಯು ಪ್ರಮುಖವಾಗಿರುತ್ತದೆ

ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ನೀವಿದ್ದರೆ, ನಿಮ್ಮ ತೂಕ ಇಳಿಸಿಕೊಳ್ಳುವ ಪ್ರಯಾಣವು ಎಷ್ಟು ಪರಿಣಾಮಕಾರಿಯಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ನಿದ್ರೆಯು ದೊಡ್ಡ ಪಾತ್ರವನ್ನು ವಹಿಸುತ್ತದೆ.

ದೇಹಕ್ಕೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯವನ್ನು ನೀಡಬೇಕು. ನೀವು ಚೆನ್ನಾಗಿ ವಿಶ್ರಾಂತಿ ಪಡೆದಿದ್ದರೆ, ಮರುದಿನ ಬೆಳಗ್ಗೆ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ನೀವು ಸಕ್ಕರೆ ಮತ್ತು ಕೆಫೀನ್ ಅನ್ನು ಅವಲಂಬಿಸುವುದಿಲ್ಲ.

5. ನೀವು ಮಾಡುವ ವ್ಯಾಯಾಮವನ್ನು ನಿಲ್ಲಿಸಬೇಡಿ

ನೀವು ಒಂದು ವಾರ ವರ್ಕೌಟ್ ಮಾಡಿ, ನಂತರ ಒಂದು ವಾರ ಏನು ಮಾಡಲಿಲ್ಲ ಎಂದರೆ ನೀವು ಕಡಿಮೆ ಮಾಡಿಕೊಂಡ ಆ ತೂಕ ಮರಳಿ ಪಡೆಯುತ್ತಿರಿ.

ಇದನ್ನೂ ಓದಿ: Weight Loss Tips: ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರದ ವೇಳೆ ಈ ಮುನ್ನೆಚ್ಚರಿಕೆಗಳನ್ನು ನೆನಪಿನಲ್ಲಿಡಿ

ಅಲ್ಲದೆ, ಒಂದು ದಿನ ಅತಿಯಾಗಿ ತಿನ್ನುವುದು ಮತ್ತು ಮರುದಿನ ಸ್ವಲ್ಪ ಹೆಚ್ಚು ಕೆಲಸ ಮಾಡುವುದು ದೇಹಕ್ಕೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ನಿಯಮಿತ ವ್ಯಾಯಾಮ ಮತ್ತು ಡಯಟ್ ದಿನಚರಿಯನ್ನು ಅನುಸರಿಸಲೇಬೇಕು.
Published by:Pavana HS
First published: