Blood Pressure: ಅಧಿಕ ರಕ್ತದೊತ್ತಡ ಸಮಸ್ಯೆಯೇ? ಹಾಗಿದ್ರೆ ಊಟ ಮಾಡುವಾಗ ಇದನ್ನು ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಆಹಾರಗಳು ನಿಮ್ಮ ಸ್ಥಿತಿಯನ್ನು ಇನ್ನಷ್ಟೂ ಹದಗೆಡಿಸಬಹುದು ಮತ್ತು ಕೆಲವು ಅದನ್ನು ಸುಧಾರಿಸಲು ಸಹಾಯ ಮಾಡಬಹುದು. ಬನ್ನಿ ಹಾಗಾದರೆ ಯಾವ ಯಾವ ಆಹಾರ ಪದಾರ್ಥಗಳನ್ನು ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. |

  • Share this:

ಈಗಂತೂ ಜನರು (people) ತುಂಬಾನೇ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ತಮ್ಮ ಕೆಲಸವನ್ನು ಉಳಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಗಂಟೆಗಟ್ಟಲೆ ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡುವುದು, ಬಿಟ್ಟು ಬಿಡದೆ ಕಂಪ್ಯೂಟರ್ (Computer) ಪರದೆಯನ್ನು ನೋಡುವುದು, ಕೂತಲ್ಲಿಯೇ ಕೂತಿರುವುದರಿಂದ ಆಗುವ ಬೆನ್ನುನೋವು (Back Pain) ಹೀಗೆ ಒಂದೇ ಎರಡೇ ಅನೇಕ ರೀತಿಯ ಒತ್ತಡಗಳು (Stress) ನಮ್ಮ ಮೇಲೆ ಏಕಕಾಲಕ್ಕೆ ದಾಳಿಮಾಡುತ್ತಿವೆ ಎನ್ನಬಹುದು. ಹೀಗೆ ಆಗುವ ಒತ್ತಡವು ನಮ್ಮ ರಕ್ತದೊತ್ತಡವನ್ನು (Blood pressure) ಹೆಚ್ಚು ಮಾಡುತ್ತದೆ, ಈ ರಕ್ತದೊತ್ತಡವು ತುಂಬಾನೇ ಜಾಸ್ತಿಯಾದಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು (Health Problem) ನಾವು ಎದುರಿಸಬೇಕಾಗಿ ಬರಬಹುದು. ಎದೆ ನೋವು, ತಲೆ ತಿರುಗುವಿಕೆ, ತಲೆನೋವು ಮತ್ತು ಕುರುಡುತನ ಮತ್ತು ಕೆಟ್ಟ ಸನ್ನಿವೇಶದಲ್ಲಿ ಅಧಿಕ ರಕ್ತದೊತ್ತಡವು ಹೃದಯಾಘಾತಕ್ಕೂ ಕಾರಣವಾಗಬಹುದು.


ದುರದೃಷ್ಟವಶಾತ್, ಅಧಿಕ ರಕ್ತದೊತ್ತಡವು ಭಾರತದ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಅಧ್ಯಯನಗಳ ಪ್ರಕಾರ, ಪ್ರತಿ ಮೂವರಲ್ಲಿ ಒಬ್ಬರು ಈ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವುದೇ ನೇರ ಮಾರ್ಗವಿಲ್ಲದಿದ್ದರೂ, ಔಷಧಿಗಳು ಮತ್ತು ಆಹಾರದ ಮೂಲಕ ಯಾವಾಗಲೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. ಆಹಾರವು ಅದನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕೆಲವು ಆಹಾರಗಳು ನಿಮ್ಮ ಸ್ಥಿತಿಯನ್ನು ಇನ್ನಷ್ಟೂ ಹದಗೆಡಿಸಬಹುದು ಮತ್ತು ಕೆಲವು ಅದನ್ನು ಸುಧಾರಿಸಲು ಸಹಾಯ ಮಾಡಬಹುದು. ಬನ್ನಿ ಹಾಗಾದರೆ ಯಾವ ಯಾವ ಆಹಾರ ಪದಾರ್ಥಗಳನ್ನು ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


ಇದನ್ನೂ ಓದಿ:  Mint Benefits: ಬೇಸಿಗೆಯಲ್ಲಿ ಹೊಟ್ಟೆ ಸಮಸ್ಯೆಯಿಂದ ನಿಮ್ಮನ್ನು ದೂರವಿಡುತ್ತೆ ಪುದೀನಾ ಪಾನೀಯ !


ಇತ್ತೀಚೆಗೆ, ಪೌಷ್ಟಿಕತಜ್ಞ ಮತ್ತು ಆರೋಗ್ಯ ತಜ್ಞ ನಮಾಮಿ ಅಗರ್ವಾಲ್ ಈ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುವ ನಾಲ್ಕು ಆಹಾರಗಳ ಬಗ್ಗೆ ಪೋಸ್ಟ್ ಅನ್ನು ಹಂಚಿ ಕೊಂಡಿದ್ದಾರೆ ನೋಡಿ.


1. ಹಸಿರು ಎಲೆ ತರಕಾರಿಗಳು
ಪಾಲಕ್, ಕೇಲ್ ಮತ್ತು ಲೆಟ್ಯೂಸ್ ನಂತಹ ಹಸಿರು ತರಕಾರಿಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುತ್ತವೆ ಎಂದು ನಮಾಮಿ ಅವರು ಹೇಳುತ್ತಾರೆ. ಹೆಚ್ಚುವರಿ ಸೋಡಿಯಂ ಅನ್ನು ತೊಡೆದುಹಾಕಲು ಪೊಟ್ಯಾಸಿಯಮ್ ಮೂತ್ರಪಿಂಡಗಳಿಗೆ ಸಹಾಯ ಮಾಡುತ್ತದೆ.


2. ಬಾಳೆಹಣ್ಣು
ಹಸಿರು ಎಲೆ ತರಕಾರಿಗಳ ನಂತರ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ಸೇವಿಸಿದರೆ ಒಳ್ಳೆಯದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಮಾಮಿ ಅವರು ಹೇಳುತ್ತಾರೆ. ಆದ್ದರಿಂದ, ನೀವು ದಿನಕ್ಕೆ ಒಂದು ಬಾಳೆಹಣ್ಣನ್ನು ಸೇವಿಸಬಹುದು ಅಥವಾ ಅದರಿಂದ ಕೆಲವು ರುಚಿಕರವಾದ ಪಾಕವಿಧಾನಗಳನ್ನು ಸಹ ತಯಾರಿಸಿಕೊಂಡು ಸೇವಿಸಬಹುದು.


3. ಬೀಟ್ರೂಟ್
ಮುಂದೆ ನಮಾಮಿ ಅವರು ಬೀಟ್ರೂಟ್ ಗಳ ಬಗ್ಗೆ ಉಲ್ಲೇಖಿಸುತ್ತಾರೆ. ಬೀಟ್ರೂಟ್ ನಲ್ಲಿ ನೈಟ್ರಿಕ್ ಆಕ್ಸೈಡ್ ಅಧಿಕವಾಗಿದೆ, ಇದು ರಕ್ತನಾಳಗಳನ್ನು ತೆರೆಯಲು ಮತ್ತು ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ನೀವು ನಿಮ್ಮ ಆಹಾರದಲ್ಲಿ ಬೀಟ್ರೂಟ್ ಅನ್ನು ಸೇರಿಸಿಕೊಂಡು ತಿನ್ನಬಹುದು.


4. ಬೆಳ್ಳುಳ್ಳಿ
ಕೊನೆಯದಾಗಿ, ನಮಾಮಿ ಅವರು ಬೆಳ್ಳುಳ್ಳಿಯನ್ನು ಉಲ್ಲೇಖಿಸುತ್ತಾರೆ. ಬೆಳ್ಳುಳ್ಳಿ ಆಂಟಿ-ಬಯೋಟಿಕ್ ಮತ್ತು ಆಂಟಿ-ಫಂಗಸ್ ಮತ್ತು ನೈಟ್ರಿಕ್ ಆಕ್ಸೈಡ್ ಅನ್ನು ಹೆಚ್ಚಿಸುತ್ತದೆ ಎಂದು ಅವರು ತನ್ನ ಫಾಲೋವರ್ಸ್ ಗಳಿಗೆ ತಿಳಿಸುತ್ತಾರೆ. ಇದಲ್ಲದೆ, ಇದು ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ರಕ್ತನಾಳಗಳನ್ನು ಹಿಗ್ಗಿಸುತ್ತದೆ.


ಇದನ್ನೂ ಓದಿ:  Benefits of Carrot: ವಾರಕ್ಕೆ ಮೂರು ಸಲವಾದ್ರೂ ಕ್ಯಾರೆಟ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ


ಹೀಗೆ ಉತ್ತಮ ಆಹಾರ ಪದಾರ್ಥಗಳಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ. ಅದನ್ನು ಸಾಧಿಸಲು ನಿಮಗೆ ಸಹಾಯ ಮಾಡುವ ಪದಾರ್ಥಗಳನ್ನು ನಿಮ್ಮ ಆಹಾರಗಳನ್ನು ಸೇರಿಸಿಕೊಳ್ಳಿರಿ. ಆದಾಗ್ಯೂ, ನೀವು ಆಹಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಒಮ್ಮೆ ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆಯುವುದು ಉತ್ತಮ.

First published: