Seema.RSeema.R
|
news18-kannada Updated:November 11, 2020, 6:14 PM IST
ಸಾಂದರ್ಭಿಕ ಚಿತ್ರ
ಕೊರೋನಾ ಸಂಕಷ್ಟದಲ್ಲಿ ಸಂತೋಷದ ನೀಡುವ ದೀಪಾವಳಿ ಆಚರಣೆಗೆ ಇಡೀ ದೇಶ ಸಜ್ಜಾಗಿದೆ. ಸೋಂಕಿತರ ಆರೋಗ್ಯದ ದೃಷ್ಟಿಕೋನದಿಂದಾಗಿ ಈ ಬಾರಿ ಹಸಿರು ಪಟಾಕಿಗೆ ಮಾತ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಬೆಳಕಿನ ಹಬ್ಬದ ಈ ಸಂದರ್ಭದಲ್ಲಿ ಮನೆಯ ತುಂಬೆಲ್ಲಾ ದೀಪ ಹಚ್ಚಿಡಲು ನಾರಿಯರು ಸಜ್ಜಾಗಿದ್ದಾರೆ. ಕೊರೋನಾ ಹಿನ್ನಲೆ ಪದೇ ಪದೇ ಕೈ ಸ್ಯಾನಿಟೈಸ್ ಮಾಡುವ ರೂಢಿಗೆ ಒಗ್ಗಿರುವ ಈ ಸಮಯದಲ್ಲಿ ದೀಪ ಹಚ್ಚುವ ಮುನ್ನ ಎಚ್ಚರದಿಂದಿರುವುದು ಅವಶ್ಯ. ಸ್ಯಾನಿಟೈಸ್ ಬಳಸಿ ದೀಪ ಹಚ್ಚಲು ಮುಂದಾದರೇ ಅಪಾಯ ತಪ್ಪಿದ್ದಲ್ಲ. ಈ ಹಿನ್ನಲೆ ಸೋಪಿನಿಂದ ಮಾತ್ರ ಕೈತೊಳೆದು ದೀಪ ಹಚ್ಚಿ. ಸ್ಯಾನಿಟೈಸರ್ ಬಳಸಿದರೆ ಅಪ್ಪಿತಪ್ಪಿ ದೀಪದ ಬೆಂಕಿ ಮುಂದೆ ಕೈ ಇಡಬೇಡಿ. ಇದರಿಂದ ನಿಮ್ಮ ಕೈ ಸುಡುವುದು ಖಚಿತ. ಕಾರಣ ಸ್ಯಾನಿಟೈಸರ್ನಲ್ಲಿರುವ ಆಲ್ಕೋಹಾಲ್ ಅಂಶ.
ಸಾಮಾನ್ಯ ಸಂದರ್ಭದಲ್ಲಿಯೂ ಪಟಾಕಿ, ದೀಪ ಹಚ್ಚುವಾಗ ಜಾಗುರಾಗತೆ ಅವಶ್ಯ ಅದರಲ್ಲಿಯೂ ಕೊರೋನಾ ಕಾಲದಲ್ಲಿ ಇನ್ನಷ್ಟು ಎಚ್ಚರವಹಿಸಬಏಕು. ಸ್ಯಾನಿಟೈಸರ್ನಲ್ಲಿ ಆಲ್ಕೋಹಾಲ್ ಪ್ರಮಾಣ ಇರುವುದರಿಂದ ಇದು ದಹನಶಿಲ ಗುಣ ಹೊಂದಿರುತ್ತದೆ. ಕೈಗಳಿಗೆ ಸ್ಯಾನಿಟೈಸರ್ ಮಾಡಿದಕ್ಷಣ ನೀವು ದೀಪ ಹಚ್ಚಲು ಹೋದಾಗ, ಆ ಬೆಳಕಿನ ಕಿಡಿಗಳು ಕೈಯನ್ನು ಬೇಗ ಸುಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನಲೆ ಕೈ ತೊಳೆಯಲು ಸಾಬೂನು ಬಳಸುವುದು ಉತ್ತಮ.
ಇದನ್ನು ಓದಿ: Green crackers: ಹಸಿರು ಪಟಾಕಿ ಎಂದರೇನು? ಹೇಗೆ ಪತ್ತೆ ಮಾಡುವುದು; ಇಲ್ಲಿದೆ ಮಾಹಿತಿ
ಕೊರೋನಾ ಹಿನ್ನಲೆ ಈಗ ಪ್ರತಿಯೊಂದು ಮನೆಯಲ್ಲಿಯೂ ಸ್ಯಾನಿಟೈಸರ್ ಬಾಟಲಿಗಳ ಸಂಗ್ರಹಗಳೇ ಇರುತ್ತವೆ. ದೀಪಗಳು ಹಚ್ಚಿದಾಗ ಆ ಸ್ಯಾನಿಟೈಸರ್ ಅದರಲ್ಲಿಯೂ ಆಲ್ಕೋಹಾಲ್ ಹೆಚ್ಚಿನ ಪ್ರಮಾಣದ ಬಾಟಲ್ಗಳನ್ನು ಆದಷ್ಟು ದೂರವಿಡುವುದು ಉತ್ತಮ
ಸದಾ ಸ್ಯಾನಿಟೈಸರ್ ಬಳಸುವ ಬದಲು ಎಲ್ಲಿಯೇ ಆಗಲಿ ಚಿಕ್ಕ ಸಬೂನು ಕೊಂಡೊಯ್ಯುವುದು ಉತ್ತಮ. ಸಾಬೂನಿನೊಂದಿಗೆ ಕೈತೊಳೆದರೆ ಶುಚಿತ್ವದ ಜೊತೆಗೆ ಅಪಾಯವೂ ದೂರವಾಗಬಲ್ಲದು. ಪಟಾಕಿ ಹೊಡೆಯುವ ಸಂದರ್ಭದಲ್ಲಿಯೂ ಕೂಡ ಈ ಜಾಗುರಕತೆ ವಹಿಸುವುದು ಅಗತ್ಯ. ಈ ಬಾರಿ ಸರ್ಕಾರ ಹಸಿರು ಪಟಾಕಿಗೆ ಅನುಮತಿ ನೀಡಿದೆ. ಹಸಿರು ಪಟಾಕಿಗಳು ಸಿಡಿಸುವಾಗ ಕೂಡ ಈ ಮುನ್ನೆಚ್ಚರಿಕೆ ವಹಿಸುವುದರಿಂದ ಸಂಭ್ರಮದ ಹಬ್ಬ ಆಚರಿಸಬಹುದಾಗಿದೆ.
Published by:
Seema R
First published:
November 11, 2020, 6:08 PM IST