Kashmiri Chicken Goshtaba: ಕಾಶ್ಮೀರಿ ಚಿಕನ್​ ಗೋಷ್ಟಬಾ ಸವಿದಿದ್ದೀರಾ? ಇಲ್ಲಿದೆ ಪಾಕ ವಿಧಾನ

ಒಂದು ಬಾರಿ ಕಾಶ್ಮೀರಿ ಗೋಷ್ಟಬಾ (Kashmiri Chicken Goshtaba) ಸವಿಯಿರಿ. ಏಕೆಂದರೆ ಬಹುತೇಕರು ಈ ಅಡುಗೆಯನ್ನು ಸವಿಯಲು (Taste) ಸಾಧ್ಯವಿಲ್ಲ. ಆದರೆ ಅಂತವರು ಒಂದು ಬಾರಿ ಈ ವಿಧಾನದ ಮೂಲಕ ಟ್ರೈ (Try) ಮಾಡಬಹುದಾಗಿದೆ.

ಕಾಶ್ಮೀರಿ ಚಿಕನ್​ ಗೋಷ್ಟಬಾ

ಕಾಶ್ಮೀರಿ ಚಿಕನ್​ ಗೋಷ್ಟಬಾ

  • Share this:
    ಕಾಶ್ಮೀರಿ ಗೋಷ್ಟಬಾ ಸವಿದಿದ್ದೀರಾ?  ಆದಿತ್ಯವಾರದಂದು ಫ್ಯಾಮಿಲಿ ಜೊತೆಗೆ ಮನೆಯಲ್ಲಿ ಕುಳಿತುಕೊಂಡು ಎಂಜಾಯ್​ ಮಾಡುವವರು ಒಂದು ಬಾರಿ ಕಾಶ್ಮೀರಿ ಗೋಷ್ಟಬಾ (Kashmiri Chicken Goshtaba) ಸವಿಯಿರಿ. ಏಕೆಂದರೆ ಬಹುತೇಕರು ಈ ಅಡುಗೆಯನ್ನು ಸವಿಯಲು (Taste) ಸಾಧ್ಯವಿಲ್ಲ. ಆದರೆ ಅಂತವರು ಒಂದು ಬಾರಿ ಈ ವಿಧಾನದ ಮೂಲಕ ಟ್ರೈ (Try) ಮಾಡಬಹುದಾಗಿದೆ. ಮಾತ್ರವಲ್ಲದೆ, ವಿಡಿಯೋ ಕ್ಲಿಪ್ (Video Clip)​ ಅನ್ನು ಕೂಡ ಇಲ್ಲಿ ಹಂಚಿಕೊಳ್ಳಲಾಗಿದೆ. ಅದರ ಮೂಲಕ ಕಾಶ್ಮೀರಿ ಗೋಷ್ಟಬಾ ಮನೆಯಲ್ಲಿಯೇ ಮಾಡಬಹುದಾಗಿದೆ. 

    ಕಾಶ್ಮೀರಿ ಚಿಕನ್​ ಗೋಷ್ಟಬಾ ಮಾಡುವ ವಿಧಾನ:

    ಬೇಕಾಗುವ ಸಾಮಗ್ರಿಗಳು

    ಬೋನ್ ಲೆಸ್ ಚಿಕನ್ 800 ಗ್ರಾಂ, ಬೆಣ್ಣೆ 100 ಗ್ರಾಂ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಶುಂಠಿ ಪುಡಿ, ಏಲಕ್ಕಿ ಪುಡಿ , ಮೊಸರು, ಸೋಂಪು ಕಾಳಿನ ಪುಡಿ, ಶುದ್ದ ದನದ ತುಪ್ಪ, 1 ಮೊಟ್ಟೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿ, ದಾಲ್ಚಿನ್ನಿ, ಪುದೀನ ಎಲೆ ಪುಡಿ, ಲವಂಗ

    ಮಾಡುವ ವಿಧಾನ

    ಒಂದು ಮಿಕ್ಸಿ ಗೆ ಬೋನ್ ಲೆಸ್ ಚಿಕನ್ ಹಾಕಿ. ಬಳಿಕ ಶುಂಠಿ ಪುಡಿ, ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು , ಏಲಕ್ಕಿ ಪುಡಿ , 50 ಗ್ರಾಂ ಬೆಣ್ಣೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

    ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಳ್ಳಿ ಹಾಗೂ ಒಂದು ಮೊಟ್ಟೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ.
    ನಂತರ ದಾಲ್ಚಿನ್ನಿ,ಲವಂಗ, ಏಲಕ್ಕಿ ,ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ ಪುಡಿ,ಸೋಂಪು ಕಾಳಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ.

    ಕುದಿ ಬಂದ ನಂತರ ಶುದ್ದ ದನದ ತುಪ್ಪ ಸೇರಿಸಿ. ಮಿಶ್ರಣ ದಪ್ಪ ಆದ ನಂತರ ನೀರು ಸೇರಿಸಿ. ಚೆನ್ನಾಗಿ ಕುದಿಯಲು ಇಡಿ. ನಂತರ ಪುದೀನ ಎಲೆ ಪುಡಿಯನ್ನು ಹಾಕಿ.

    ನಂತರ ಮಿಕ್ಸಿ ಮಾಡಿ ಇಟ್ಟಿದ್ದ ಚಿಕನ್ ಅನ್ನು, ಸಣ್ಣ ಉಂಡೆ ಮಾಡಿ. ನಂತರ ಪಾತ್ರೆಯಲ್ಲಿ ಕುದಿಯುತ್ತಿರುವ ಮಿಶ್ರಣಕ್ಕೆ ಉಂಡೆ ಹಾಕಿ. ಚೆನ್ನಾಗಿ ಕುದಿಸಿ.

    ಇದನ್ನೂ ಓದಿ: Photos: ಫ್ರೆಂಚ್ ಫ್ರೈಸ್ ಈ ದೇಶದ ರಾಷ್ಟ್ರೀಯ ಖಾದ್ಯ! ಹಾಗಿದ್ರೆ ಬಿರಿಯಾನಿ ಯಾವ ದೇಶದ್ದು ಗೊತ್ತಾ?



    ಇದನ್ನೂ ಓದಿ: DIY Hacks: ನಿಮ್ಮ ಒಣ ಚರ್ಮಕ್ಕೆ ಪರಿಹಾರ ಈ ಸ್ಕ್ರಬ್​ಗಳು, ಮನೆಯಲ್ಲಿ ಮಾಡಿ ನೋಡಿ

    ಒಂದು ಪ್ಯಾನ್ ಗೆ 1/2 ಕಪ್ ಎಣ್ಣೆ ಹಾಕಿ, ಬಿಸಿ ಆದ ನಂತರ ಒಂದು ದೊಡ್ಡ ಗಾತ್ರದ ತುಂಡರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಫ್ರೈ ಮಾಡಿದ ಎಣ್ಣೆಯನ್ನು ಕುದಿಯುತಿರೋ ಉಂಡೆ ಜೊತೆಗೆ ಸೇರಿಸಿ. ಫ್ರೈ ಮಾಡಿದ ಈರುಳ್ಳಿಯನ್ನು ಚೆನ್ನಾಗಿ ಮಿಕ್ಸಿ ಮಾಡಿ , ಗೋಷ್ಟಬಾ ಜೊತೆ ಸೇರಿಸಿ ಚೆನ್ನಾಗಿ ಕುದಿಸಿ. ಕಾಶ್ಮೀರಿ ಚಿಕನ್ ಗೋಷ್ಟಬಾ ಸವಿಯಲು ಸಿದ್ಧ.
    Published by:Harshith AS
    First published: