• Home
  • »
  • News
  • »
  • lifestyle
  • »
  • Winter Food: 200 ವರ್ಷ ಹಳೆಯ ಹೋಟೆಲ್​ನ ಈ ತಿನಿಸಿಗಾಗಿ ಕೆಲಸ, ಕಾರ್ಯ ಬಿಟ್ಟು ಕ್ಯೂ ನಿಲ್ತಾರೆ ಜನ

Winter Food: 200 ವರ್ಷ ಹಳೆಯ ಹೋಟೆಲ್​ನ ಈ ತಿನಿಸಿಗಾಗಿ ಕೆಲಸ, ಕಾರ್ಯ ಬಿಟ್ಟು ಕ್ಯೂ ನಿಲ್ತಾರೆ ಜನ

ಭಾರತೀಯ ತಿನಿಸು

ಭಾರತೀಯ ತಿನಿಸು

ಕಾಶ್ಮೀರದ ಚುಮು ಚುಮು ಚಳಿಗಾದಲ್ಲಿ ಈ ಹರಿಸ್ಸಾವನ್ನು ಟೇಸ್ಟ್ ಮಾಡಲು ಜನ ಹೋಟೆಲ್ ಗೆ ಮುಗಿ ಬೀಳುತ್ತಾರೆ. ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿ 200 ವರ್ಷಗಳಷ್ಟು ಹಳೆಯದಾದ ಹೋಟೆಲ್ ನಲ್ಲಿ ತಯಾರಾಗುವ ಹರಿಸ್ಸಾಗೆ ಅಲ್ಲಿನ ಸ್ಥಳೀಯರು ಪ್ರವಾಸಿಗರು ಮನಸೋಗಿದ್ದಾರೆ.

  • Share this:

ಭೂಮಿಯ ಮೇಲಿರುವ ಸ್ವರ್ಗ ಎಂದರೆ ಅದು ಜಮ್ಮು ಕಾಶ್ಮೀರ (Jammu and Kashmir). ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಇಲ್ಲಿ ಭೌಗೋಳಿಕವಾಗಿ ಹಲವು ವಿಶೇಷಗಳ ಜೊತೆಗೆ ಇಲ್ಲಿನ ಊಟ (Food), ಉಪಹಾರವೂ ಅಷ್ಟೇ ವಿಶೇಷ. ಅದರಲ್ಲೂ ಹರಿಸ್ಸಾ ಹೆಸರಿನ ಚಳಿಗಾಲದ ಖಾದ್ಯವು (Winter Food) ಕಾಶ್ಮೀರದಲ್ಲಿ ಹೆಚ್ಚು ಪ್ರಸಿದ್ಧ. ನಟ ದಿಲೀಪ್ ಕುಮಾರ್ (Dileep Kumar) ಸಹ ಈ ಖಾದ್ಯ ಸವಿಯಲು ಇಲ್ಲಿಗೆ ಬಂದು ಹೋಗಿದ್ದಾರೆ. ಶ್ರೀನಗರದ (Srinagar) ಡೌನ್‌ಟೌನ್ ಪ್ರದೇಶದಲ್ಲಿರುವ ಒಂದು ಭೋಜನಾಲಯದಲ್ಲಿ ಹರಿಸ್ಸಾ ಎಂಬ ಅದ್ಭುತ ರುಚಿ ತಯಾರಾಗುತ್ತದೆ. ಈ ಹೋಟೆಲ್ ಶತಮಾನಗಳಷ್ಟು ಹಳೆಯ ಪರಂಪರೆಯನ್ನು ಹೊಂದಿದ್ದು, ಇದನ್ನು 80 ವರ್ಷದ ಗುಲಾಮ್ ಮೊಹಮ್ಮದ್ ಮತ್ತು ಅವರ ಮಗ ಜಹೂರ್ ಅಹ್ಮದ್ ಭಟ್ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ, ರಾಜಕೀಯ ವ್ಯಕ್ತಿಗಳಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ ಹರಿಸ್ಸಾಗೆ ಫಿಧಾ ಆಗಿದ್ದಾರೆ.


ಹರಿಸ್ಸಾ ತಯಾರಿಯಲ್ಲಿ 60 ವರ್ಷ ಅನುಭವ


ಹರಿಸ್ಸಾ ಖಾದ್ಯದ ತಯಾರಿಕೆಯಲ್ಲಿ 60 ವರ್ಷಗಳ ಅನುಭವ ಹೊಂದಿರುವ ಗುಲಾಮ್ ಮೊಹಮ್ಮದ್ ಹಾಗು ಅವರ ಮಗ ಜಹೂರ್ ಅಹ್ಮದ್ ಭಟ್ ಇವರಿಗೆ ಗ್ರಾಹಕರಿಗೆ ರುಚಿಕರವಾದ ಹರಿಸ್ಸಾ ನೀಡುವುದೇ ಮೂಲ ಉದ್ದೇಶ.


ಹೊಟೇಲ್ ಮುಂದೆ ಸರತಿ ಸಾಲು


ಶ್ರೀನಗರದ ಡೌನ್‌ಟೌನ್ ಪ್ರದೇಶದಲ್ಲಿ ಹರಿಸ್ಸಾ ಉಪಾಹಾರ ಗೃಹವು ಶತಮಾನಗಳ-ಹಳೆಯ ಪರಂಪರೆಯನ್ನು ಹೊಂದಿದ್ದು, ಅಲ್ಲಿ ಗ್ರಾಹಕರು ತಮ್ಮ ಆರ್ಡರ್ ಪಡೆಯಲು ಮುಂಚಿತವಾಗಿ ಕಾಯ್ದಿರಿಸುತ್ತಾರೆ ಅಥವಾ ಬೆಳಗಿನ ಜಾವ ಹೋಟೆಲ್ ಹೊರಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ನಗರ ಮತ್ತು ಕಣಿವೆಯ ಇತರ ಭಾಗಗಳಿಂದ ಹರಿಸ್ಸಾ ಪ್ರೇಮಿಗಳು (Harissa Lovers) ಹೋಟೆಲ್ ಮುಂದೆ ಜಮಾಯಿಸುತ್ತಾರೆ.


ಕೆಲಸವೆಲ್ಲ ಬಿಟ್ಟು ಕ್ಯೂ ನಿಲ್ತಾರೆ ಜನ


ಹರಿಸ್ಸಾವನ್ನು ಸವಿಯಲು ಬೆಳಗ್ಗೆ 7 ಗಂಟೆಗೆ ಉಪಾಹಾರ ಗೃಹದ ಮುಂದೆ ನಿಂತಿದ್ದೇವೆ ಎನ್ನುತ್ತಾರೆ ಮುನಾವರ್ ಹುಸೇನ್. ಹರಿಸ್ಸಾವನ್ನು ವಿಭಿನ್ನವಾದ ರುಚಿಯನ್ನು ಹೊಂದಿದ್ದು, ಈ ರುಚಿ ನಮಗೆ ಬೇರೆ ಎಲ್ಲೂ ಸಿಗುವುದಿಲ್ಲ ಎಂದಿದ್ದಾರೆ.


18ನೇ ವಯಸ್ಸಿನಲ್ಲಿ ಆರಂಭಿಸಿದ ಕಾಯಕ


18 ನೇ ವಯಸ್ಸಿನಲ್ಲಿ ತನ್ನ ತಂದೆಯೊಂದಿಗೆ ಹರಿಸ್ಸಾವನ್ನು ತಯಾರಿಸಲು ಪ್ರಾರಂಭಿಸಿದ ಗುಲಾಮ್ ಮೊಹಮ್ಮದ್, ನಮ್ಮ ಪೂರ್ವಜರ ಅಂಗಡಿಯು ಅನೇಕ ಪ್ರಮುಖ ವ್ಯಕ್ತಿಗಳಿಗೆ ಚಳಿಗಾಲದ ಖಾದ್ಯವನ್ನು ಬಡಿಸುವ ಪರಂಪರೆಯನ್ನು ಹೊಂದಿದೆ ಎಂದು ಹೇಳುತ್ತಾರೆ. ರಾಜಕೀಯ ವ್ಯಕ್ತಿಗಳಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ (Bollywood Celebrities) ಅನೇಕ ಜನರು ಈ ಚಳಿಗಾಲದ ಈ ರುಚಿಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಭಟ್ ಹೇಳುತ್ತಾರೆ. ಅಲ್ಲದೇ ಬಾಲಿವುಡ್ ನಟ ದಿಲೀಪ್ ಕುಮಾರ್ ಕೂಡ ಹರಿಸ್ಸಾದ ಸವಿಯಾದ ರುಚಿಯನ್ನು ಸವಿಯಲು ಉಪಾಹಾರ ಗೃಹಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದ್ದಾರೆ.


ಇದನ್ನೂ ಓದಿ: Food: ಈ 5 ಆಹಾರವನ್ನು ಪ್ರತಿನಿತ್ಯ ಸೇವಿಸಿ...ಯಾವ ರೋಗವೂ ನಿಮ್ಮ ಹತ್ರ ಸುಳಿಯುವುದಿಲ್ಲ


ಹರಿಸ್ಸಾ ಖಾದ್ಯವಾಗಿದ್ದು ಮೂಳೆಗಳಿಲ್ಲದ ಮಾಂಸ (ಬೋನ್​​ಲೆಸ್), ಗೋಧಿ, ಮುಂಗ್ ಬೀನ್, ಅಕ್ಕಿ ಮತ್ತು ವಿವಿಧ ಮಸಾಲೆಗಳಿಂದ ತಯಾರಿಸಲಾಗುತ್ತದೆ. ನಂತರ ಕೇಸರಿ ಕಬಾಬ್, ಮೇಥಿ ಮತ್ತು ಎಣ್ಣೆಯನ್ನು ಚಿಮುಕಿಸಿ ಪ್ಲೇಟ್‌ಗಳಲ್ಲಿ ಬಿಸಿ ಬಿಸಿಯಾಗಿ ಬಡಿಸಲಾಗುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಕಂದರ್ ಕ್ಚೌಟ್ ಅಥವಾ ಲಾವಾಸ್ಸಾ (ಬ್ರೆಡ್) ಜೊತೆಗೆ ತಿನ್ನಲಾಗುತ್ತದೆ. ಈ ಭಕ್ಷ್ಯವು ಚಳಿಗಾಲದಲ್ಲಿ ಅತ್ಯುತ್ತಮವಾದ ಭಕ್ಷ್ಯಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಪಟ್ಟಣ ಮತ್ತು ನಗರಕ್ಕೆ ಸೀಮಿತವಾಗಿದ್ದ ಹರಿಸ್ಸಾ ಈಗ ಎಲ್ಲೆಡೆ ಜನಪ್ರಿಯವಾಗಿತ್ತಿದೆ.


ಇದನ್ನೂ ಓದಿ: Food Waste: ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಮನೆಯಲ್ಲಿ ಮಾಡಿರೋ ಅಡುಗೆ ವೇಸ್ಟ್​ ಆಗೋದೇ ಇಲ್ಲ..!


"ರುಚಿಯ ಹಿಂದಿನ ರಹಸ್ಯ ಕಠಿಣ ಪರಿಶ್ರಮ"


ಹರಿಸ್ಸಾವನ್ನು ಬೇಯಿಸಲು ನಾವು ಹೆಚ್ಚು ಶ್ರಮ ಪಡುತ್ತೇವೆ, ಅದಕ್ಕೆ ಅಂತಾನೇ ಹೆಚ್ಚು ಸಮಯ ನೀಡುತ್ತೇವೆ ಎಂದಿದ್ದಾರೆ. ಉಪಹಾರ ಗೃಹದಲ್ಲಿ ನಮ್ಮ ಕೆಲಸವು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 5 ಗಂಟೆಗೆ ಕೊನೆಗೊಳ್ಳುತ್ತದೆ ಎಂದು ಅಷ್ಟಮಠಾಧೀಶ ಭಟ್ ಹೇಳುತ್ತಾರೆ. ಅತ್ಯಂತ ನಾಜೂಕಿನಿಂದ ಈ ಖಾದ್ಯ ತಯಾರು ಮಾಡುತ್ತೇವೆ, ಸ್ವಲ್ಪ ವ್ಯತ್ಯಾಸವಾದರೂ ರುಚಿ ಹಾಳಾಗುತ್ತದೆ ಎನ್ನುತ್ತಾರೆ ಹರಿಸ್ಸಾ ತಯಾರಿಸುವ ಗುಲಾಮ್ ಮೊಹಮ್ಮದ್, ಮತ್ತು ಅವರ ಮಗ ಜಹೂರ್ ಅಹ್ಮದ್ ಭಟ್.

Published by:Divya D
First published: