HOME » NEWS » Lifestyle » KARNATAKA STATE EMPLOYEES HOLIDAY LIST FOR THE YEAR 2021 SNVS

ಸರ್ಕಾರಿ ನೌಕರರಿಗೆ 2021ರ ವರ್ಷದ ರಜೆಗಳ ಪಟ್ಟಿ; ಈಗಲೇ ಹಾಲಿಡೇ ಪ್ಲಾನ್ ರೂಪಿಸಿ

ಮುಂದಿನ ಕ್ಯಾಲೆಂಡರ್ ವರ್ಷದ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಒಟ್ಟು 20 ರಜೆಗಳ ಪೈಕಿ 9 ರಜೆಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲೇ ಇವೆ. ಪ್ರವಾಸ ಹೋಗುವವರಾದರೆ ಈಗಲೇ ಟ್ರಿಪ್ ಪ್ಲಾನ್ ಮಾಡಬಹುದಾಗಿದೆ.

news18
Updated:November 23, 2020, 9:54 AM IST
ಸರ್ಕಾರಿ ನೌಕರರಿಗೆ 2021ರ ವರ್ಷದ ರಜೆಗಳ ಪಟ್ಟಿ; ಈಗಲೇ ಹಾಲಿಡೇ ಪ್ಲಾನ್ ರೂಪಿಸಿ
ಸಾಂದರ್ಭಿಕ ಚಿತ್ರ
  • News18
  • Last Updated: November 23, 2020, 9:54 AM IST
  • Share this:
ಬೆಂಗಳೂರು(ನ. 23): ತನ್ನ ಸರ್ಕಾರಿ ನೌಕರರಿಗೆ ಮುಂದಿನ ವರ್ಷದ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಒಟ್ಟು 20 ರಜಾ ದಿನಗಳು ಈ ಪಟ್ಟಿಯಲ್ಲಿವೆ. ವಾರಾಂತ್ಯವಾದ ಭಾನುವಾರದಂದು ಬಂದಿರುವ ಸ್ವಾತಂತ್ರ್ಯ ದಿನಾಚರಣೆ ಮೊದಲಾದ ಪ್ರಮುಖ ದಿನಗಳಿಗೆ ಭಾನುವಾರದ ರಜೆ ಇರುವ ಹಿನ್ನೆಲೆಯಲ್ಲಿ ರಜೆಯ ಪಟ್ಟಿಯಲ್ಲಿ ಇವುಗಳ ಸೇರ್ಪಡೆ ಮಾಡಲಾಗಿಲ್ಲ. ಮುಸಲ್ಮಾನ ಬಾಂಧವರ ರಂಜಾನ್, ಬಕ್ರೀದ್, ಮೊಹರಂ, ಈದ್ ಮಿಲಾದ್ ಹಬ್ಬಗಳಿಗೆ ರಜೆ ನೀಡಲಾಗಿದೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ರಜೆಗಳಿವೆ. ಅಕ್ಟೋಬರ್​ನಲ್ಲಿ 5 ರಜೆ ಇದ್ದರೆ, ನವೆಂಬರ್​​ನಲ್ಲಿ 4 ರಜೆಗಳಿವೆ. ಒಟ್ಟು 20 ರಜೆಗಳ ಪೈಕಿ ಈ ಎರಡು ತಿಂಗಳಲ್ಲೇ 9 ರಜೆಗಳು ಸರ್ಕಾರಿ ನೌಕರರಿಗೆ ಸಿಕ್ಕಿವೆ. ಅಕ್ಟೋಬರ್ 14 ಮತ್ತು 15ರಂದು ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ರಜೆ ನೀಡಲಾಗಿದೆ. ಇದು ಗುರುವಾರ ಮತ್ತು ಶುಕ್ರವಾರ ಬೀಳುತ್ತದೆ. ಶನಿವಾರ ಒಂದು ದಿನ ರಜೆ ಹಾಕಿದಲ್ಲಿ ಒಟ್ಟು 4 ದಿನಗಳ ಕಾಲ ರಜಾ ಭಾಗ್ಯ ಪಡೆಯುವ ಅವಕಾಶ ಇದೆ. ಅದೇ ರೀತಿ ಏಪ್ರಿಲ್ 13 ಮತ್ತು 14ರಂದು ಯುಗಾದಿ, ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇದೆ. ಇದು ಮಂಗಳವಾರ ಮತ್ತು ಬುಧವಾರ ಇದೆ. ಇಲ್ಲಿಯೂ ಕೂಡ ಸೋಮವಾರ ಒಂದು ದಿನ ರಜೆ ಹಾಕಿದರೆ ಒಟ್ಟು ನಾಲ್ಕು ದಿನಗಳ ಕಾಲ ರಜೆಯಲ್ಲಿರುವ ಅವಕಾಶ ಇದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್​ನಲ್ಲಿ ಉದ್ಯೋಗವಕಾಶ; 220 ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೇ 1 ಮತ್ತು ಅಕ್ಟೋಬರ್ 2 ಶನಿವಾರ ಬಂದಿವೆ. ನವೆಂಬರ್ 1 ಮತ್ತು ನವೆಂಬರ್ 22 ಸೋಮವಾರ ಇವೆ. ಇಲ್ಲಿ ಅಕ್ಕಪಕ್ಕದಲ್ಲಿ ಭಾನುವಾರ ಇರುವುದರಿಂದ ನಾಲ್ಕು ಬಾರಿ ಸತತ ಎರಡು ದಿನ ರಜೆ ಸಿಗಲಿದೆ. ಒಟ್ಟಾರೆ, ಜನರು ಈ ರಜೆಗಳ ಪಟ್ಟಿಯನ್ನಿಟ್ಟುಕೊಂಡು ಪ್ರವಾಸ, ಊರು ಇತ್ಯಾದಿಗಳಿಗೆ ಭೇಟಿ ಕೊಡಲು ಪ್ರಾನ್ ರೂಪಿಸಲು ಅನುಕೂಲವಾಗುತ್ತದೆ.

2021ರ ವರ್ಷದಲ್ಲಿ ಕರ್ನಾಟಕ ಸರ್ಕಾರಿ ನೌಕರರ ರಜಾ ದಿನಗಳ ಪಟ್ಟಿ:
ಜನವರಿ 14, ಗುರುವಾರ – ಮಕರ ಸಂಕ್ರಾಂತಿ
ಜನವರಿ 26, ಮಂಗಳವಾರ – ಗಣರಾಜ್ಯೋತ್ಸವಮಾರ್ಚ್ 11, ಗುರುವಾರ – ಮಹಾ ಶಿವರಾತ್ರಿ
ಏಪ್ರಿಲ್ 2, ಶುಕ್ರವಾರ – ಗುಡ್ ಫ್ರೈಡೇ
ಏಪ್ರಿಲ್ 13, ಮಂಗಳವಾರ – ಯುಗಾದಿ
ಏಪ್ರಿಲ್ 14, ಬುಧವಾರ – ಅಂಬೇಡ್ಕರ್ ಜಯಂತಿ
ಮೇ 1, ಶನಿವಾರ – ಕಾರ್ಮಿಕ ದಿನಾಚರಣೆ
ಮೇ 14, ಶುಕ್ರವಾರ – ರಂಜಾನ್ / ಅಕ್ಷಯ ತೃತೀಯ / ಬಸವ ಜಯಂತಿ
ಜುಲೈ 21, ಬುಧವಾರ – ಬಕ್ರೀದ್
ಆಗಸ್ಟ್ 20, ಶುಕ್ರವಾರ – ಮೊಹರಂ ಕೊನೆ ದಿನ
ಸೆಪ್ಟೆಂಬರ್ 10, ಶುಕ್ರವಾರ – ವಿನಾಯಕ ವ್ರತ
ಅಕ್ಟೋಬರ್ 2, ಶನಿವಾರ – ಗಾಂಧಿ ಜಯಂತಿ
ಅಕ್ಟೋಬರ್ 6, ಬುಧವಾರ – ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 14, ಗುರುವಾರ – ಮಹಾನವಮಿ, ಆಯುಧ ಪೂಜೆ
ಅಕ್ಟೋಬರ್ 15, ಶುಕ್ರವಾರ – ವಿಜಯದಶಮಿ
ಅಕ್ಟೋಬರ್ 20, ಬುಧವಾರ – ವಾಲ್ಮೀಕಿ ಜಯಂತಿ, ಈದ್ ಮಿಲಾದ್
ನವೆಂಬರ್ 1, ಸೋಮವಾರ – ಕನ್ನಡ ರಾಜ್ಯೋತ್ಸವ
ನವೆಂಬರ್ 3, ಬುಧವಾರ – ನರಕ ಚತುರ್ದಶಿ
ನವೆಂಬರ್ 5, ಶುಕ್ರವಾರ – ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 22, ಸೋಮವಾರ – ಕನಕದಾಸ ಜಯಂತಿ
Published by: Vijayasarthy SN
First published: November 23, 2020, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading