World Asthma Day 2020: ಇಂದು ವಿಶ್ವ ಅಸ್ತಮಾ ದಿನ; ಗರ್ಭಿಣಿ ಮಹಿಳೆಯರ ಮೇಲೆ ಅಸ್ತಮಾ ಹೇಗೆ ಪ್ರಭಾವ ಬೀರುತ್ತದೆ?

Asthma Day 2020: 1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತೀ ವರ್ಷ ನಡೆಸಲಾಗುತ್ತದೆ. ಬಾರ್ಸಿಲೋನಾದಲ್ಲಿ ನಡೆದ ಮೊದಲ ವಿಶ್ವ ಅಸ್ತಮಾ ಸಮಾವೇಶದ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಅಸ್ತಮಾ ದಿನ

ವಿಶ್ವ ಅಸ್ತಮಾ ದಿನ

  • Share this:
    ಪ್ರತೀ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವಾದ್ಯಂತ ಅಸ್ತಮಾರೋಗದ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸೈರ್ಯವನ್ನು ನೀಡುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. 1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತೀ ವರ್ಷ ನಡೆಸಲಾಗುತ್ತದೆ. ಬಾರ್ಸಿಲೋನಾದಲ್ಲಿ ನಡೆದ ಮೊದಲ ವಿಶ್ವ ಅಸ್ತಮಾ ಸಮಾವೇಶದ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

    ಮನುಷ್ಯನಿಗೂ ರೋಗಕ್ಕೂ ಮುಗಿಯದ ನಂಟು ಎಂದೇ ಹೇಳಬಹುದು. ಅದರಲ್ಲೂ ಅಸ್ತಮಾ ಸಮಸ್ಯೆ ಮನುಷ್ಯರನ್ನು ನಾನಾ ರೀತಿಯಲ್ಲಿ ಆವರಿಸುತ್ತದೆ. ಅಲ್ಲದೆ ಮಹಿಳೆಯರಿಗೆ ಅಸ್ತಮಾ ರೋಗ ಕಾಡುವುದು ಹೆಚ್ಚೆಂದು ಹೇಳಲಾಗುತ್ತಿದೆ. ಮಹಿಳೆಯರು ಗರ್ಭಿಣಿಯಾಗಿದ್ದು ಆ ಸಂದರ್ಭ ಅಸ್ತಮಾ ತೊಂದರೆ ಇದ್ದರೆ ಇದು ತುಂಬಾ ಅಪಾಯಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ.

    Coronavirus Tips: ಕೊರೋನಾ ಬಾರದಂತೆ ತಡೆಯಲು ಇಲ್ಲಿದೆ ಸುಲಭ ಉಪಾಯ!

    ಕೆಲವು ಅಸ್ತಮಾ ಔಷಧಿಗಳು, ಅದರಲ್ಲೂ ತ್ವರಿತ ನಿವಾರಣಾ ಔಷಧಿಗಳನ್ನು ಸೇವಿಸಿದರೆ ಮಹಿಳೆಯರ ಗರ್ಭಧಾರಣೆಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಗರ್ಭಧರಿಸುವ ಸಂದರ್ಭ ಈ ತೊಂದರೆ ಇದ್ದಲ್ಲಿ ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುವುದಿಲ್ಲ. ಇದರಿಂದ ಮಕ್ಕಳ ಬೆಳವಣಿಗೆಯಲ್ಲಿ ಏರುಪೇರು ಆಗುವ ಸಾಧ್ಯತೆ ಹೆಚ್ಚಿವೆ. ಅಲ್ಲದೆ ಹುಟ್ಟುವ ಮಗುವಿನ ತೂಕದಲ್ಲಿ ಬದಲಾವಣೆಯಾಗುತ್ತದೆ. ಇನ್ನು ಈ ಸಂದರ್ಭ ರಕ್ತದೊತ್ತಡ ಅಧಿಕವಾಗಿರುತ್ತದೆ, ಹಾಗಾಗಿ ಇದರಿಂದ ಇತರ ಅಂಗಗಳಿಗೂ ಹಾನಿ ಉಂಟಾಗಿ ರಕ್ತಸ್ರಾವ ಆಗುವ ಸಾಧ್ಯತೆಯಿರುತ್ತದೆ.

    ಅಧ್ಯಯನದ ಪ್ರಕಾರ 5,600 ಕ್ಕೂ ಹೆಚ್ಚಿನ ಮಹಿಳೆಯರು ಅಸ್ತಮಾಕ್ಕೆ ತ್ವರಿತ ನಿವಾರಣ ಔಷಧಿಯ ಮೊರೆಹೋಗುತ್ತಾರೆ. ಇದರಿಂದ ಅವರು ಗರ್ಭಧರಿಸಲು ಸಾಮಾನ್ಯ ಮಹಿಳೆಯರಿಗಿಂತ ಅಧಿಕ ಸಮಯ ತೆಗೆದುಕೊಳ್ಳುತ್ತಾರೆ ಎಂದು ಯುರೋಪಿನ ರೆಸ್ಪಿರೇಟರಿ ಜನರೆಲ್ ಹೇಳಿದೆ.

    ಚಹಾ ಮತ್ತು ಚಾಕೊಲೇಟ್​ನಲ್ಲಿದೆ ನಿಮ್ಮ ಯೌವ್ವನದ ಗುಟ್ಟು

    ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಅಸ್ತಮಾ ತೊಂದರೆಯಿಂದ ದೂರ ಉಳಿಯಬೇಕಾದರೆ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಗಳನ್ನು ಸೇವಿಸಬಾರದು. ಮನೆಯಲ್ಲಿ ಧೂಳು ಹಿಡಿಯುವ ಸಾಮಗ್ರಿಗಳನ್ನು ಇಡಬೇಡಿ. ಜತೆಗೆ ಹಾಸಿಗೆ ಹೊದಿಕೆಯನ್ನು ಎರಡು ದಿನಕ್ಕೊಮ್ಮೆ ಬದಲಾಯಿಸುತ್ತಿರಿ. ಗರಿಗಳಿರುವ ಪ್ರಾಣಿಗಳಿಂದ ದೂರವಿರುವುದು ಒಳ್ಳೆಯದು. ಇದರಿಂದ ಕೆಮ್ಮು, ಶೀತ, ನೆಗಡಿ ಮುಂತಾದ ಅಸ್ತಮಾ ರೋಗದ ಲಕ್ಷಣವನ್ನು ತಡೆಗಟ್ಟಬಹುದು.

    ಇನ್ನೂ ಕೇವಲ ಧೂಮಪಾನದ ಹೊಗೆಯಷ್ಟೆ ಅಲ್ಲ, ಅಡಿಗೆ ಮನೆಯ ಹೊಗೆ, ಸಿಡಿಮದ್ದುಗಳ ಹೊಗೆ, ಅಗರಬತ್ತಿಯ ಹೊಗೆ ಕೂಡ ಅಸ್ತಮಾಗೆ ಕಾರಣವಾಗುತ್ತದೆ. ಆದಷ್ಟೂ ಹೊಗೆ ಇರುವ ಜಾಗದಿಂದ ದೂರವಿರಿ.  ಈ ರೀತಿಯ ಸೂತ್ರಗಳನ್ನು ಪಾಲಿಸಿದರೆ ಮಹಿಳೆಯರು ಗರ್ಭಿಣಿಯಾದ ಸಂದರ್ಭ ಆರೋಗ್ಯಕರ ಮಕ್ಕಳನ್ನು ಪಡೆಯಬಹುದು.
    First published: