ಮಗನ ಪ್ಲೇಸ್ಕೂಲ್​ಗೆ ಕರೀನಾ- ಸೈಫ್​ ಫೋಟೋಶೂಟ್​

news18
Updated:June 24, 2018, 4:53 PM IST
ಮಗನ ಪ್ಲೇಸ್ಕೂಲ್​ಗೆ ಕರೀನಾ- ಸೈಫ್​ ಫೋಟೋಶೂಟ್​
news18
Updated: June 24, 2018, 4:53 PM IST
ನ್ಯೂಸ್​ 18 ಕನ್ನಡ
ಸೈಫ್​ ಅಲಿ ಖಾನ್​- ಕರೀನಾ ಕಪೂರ್​ ಜೋಡಿಯ ಮಗ ತೈಮೂರ್​ ಅಲಿ ಖಾನ್​ ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿ ಕಿಡ್​ ಎಂಬುದರಲ್ಲಿ ಅನುಮಾನವೇ ಇಲ್ಲ. ತೈಮೂರ್​ಗೆ ಈಗಾಗಲೇ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಆತ ಹೋದಲ್ಲೆಲ್ಲ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುವವರು ಇದ್ದೇ ಇರುತ್ತಾರೆ. ಆತನ ಮುದ್ದುಮುಖಕ್ಕೆ ಮರುಳಾಗದವರೇ ಇಲ್ಲ ಎನ್ನಬಹುದು.
My fav trio 🤩💥


A post shared by Kareena Kapoor Khan FC ۵ (@kareenakapoorteam) on


Loading...
ಸೆಲೆಬ್ರಿಟಿ ಅಂದಮೇಲೆ ಫೋಟೋಶೂಟ್ ಎಲ್ಲ ವಿಶೇಷವೇನಲ್ಲ. ಆದರೆ, ಕರೀನಾ- ಸೈಫ್​ ತಮ್ಮ ಮಗನ ಜೊತೆಗೆ ವಿಶೇಷವಾದ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ತೈಮೂರ್​ನ ಪ್ಲೇಸ್ಕೂಲ್​ಗಾಗಿ ಅಪ್ಪ-ಅಮ್ಮನೊಂದಿಗೆ ತೆಗೆಸಿರುವ ಈ ಫೋಟೋಶೂಟ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.


ಕರೀನಾ ತನ್ನ ಮಗ ತೈಮೂರ್​ನನ್ನು ಎತ್ತಿಕೊಂಡಿದ್ದರೆ ಪಕ್ಕದಲ್ಲಿ ಸೈಫ್​ ನಿಂತುಕೊಂಡು ಫೋಟೋಗೆ ಫೋಸ್​ ನೀಡಿದ್ದಾರೆ. ಬೇರೆ ಮಕ್ಕಳು ಕೂಡ ತಮ್ಮ ಅಪ್ಪ-ಅಮ್ಮನ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಗ್ರೂಫ್​ ಫೋಟೋವನ್ನು ಕರೀನಾ ಕಪೂರ್​ ತನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, 'ನನ್ನ ಮಗ ತೈಮೂರ್​ನ ಹೊಸ ಫ್ಯಾಮಿಲಿ' ಎಂದು ಬರೆದುಕೊಂಡಿದ್ದಾರೆ.
First published:June 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...