Fitness Tips: ಕರೀನಾ ಕಪೂರ್ ಫಿಟ್ನೆಸ್ ಮಂತ್ರ ಇದು! ಈ ನಟಿಯಂತೇ ಸ್ಲಿಮ್ ಆಗಲು ಹೀಗೆ ಮಾಡಿ

ಲಾಲ್ ಸಿಂಗ್ ಚಡ್ಡಾ ನಟಿ, ಸೈಡ್‌ ಪ್ಲಾಂಕ್‌ ಟ್ರೀ ಅಥವಾ ವಸಿಷ್ಠಾಸನ ಎಂದು ಕರೆಯಲಾಗುವ ಯೋಗ ಭಂಗಿಯನ್ನು ಮಾಡುತ್ತಿರುವ ವಿಡಿಯೋವನ್ನು ಅಂಕುಶಾ ಪರ್ವಾನಿ ತಮ್ಮ ಇನ್‌ ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. "ಸಮತೋಲನ, ಉಸಿರು, ಏಕಾಗ್ರತೆ ಮತ್ತು ಗಮನ - ಈ ಪದಗಳನ್ನು ನೆನಪಿನಲ್ಲಿಡಿ ಮತ್ತು ನಿಮ್ಮ ಯೋಗ ಆಸನಗಳಿಂದ ಇದು ಸಾಧ್ಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಕರೀನಾ ಕಪೂರ್‌

ಕರೀನಾ ಕಪೂರ್‌

  • Share this:
ಪ್ರತಿದಿನದ ಯೋಗ, ವ್ಯಾಯಾಮ (Exercise) ನಮ್ಮ ದೇಹವನ್ನು ಫಿಟ್‌ ಆಗಿಡಲು ಸಹಕರಿಸುತ್ತದೆ. ಈ ಯೋಗ (Yoga), ವ್ಯಾಯಾಮಗಳು ದೇಹದಾರೋಗ್ಯದ ಜೊತೆಗೆ ಮಾನಸಿಕವಾಗಿ ಶಕ್ತರಾಗಿರಲು ಸಹಾಯ ಮಾಡುತ್ತದೆ. ಕೆಲವು ಆಸನಗಳಂತು ಇನ್ನಿಲ್ಲದ ರೀತಿಯಲ್ಲಿ ನಮ್ಮ ದೇಹಕ್ಕೆ ಉಪಯುಕ್ತವಾಗಿವೆ. ಫಿಟ್‌ ನೆಸ್‌ (Fitness) ಬಯಸುವವರು ಖಂಡಿತ ಯೋಗ, ವ್ಯಾಯಾಮದ ಮೊರೆ ಹೋಗುತ್ತಾರೆ. ಇದಕ್ಕೆ ನಮ್ಮ ಸಿನಿಮಾ ಕಲಾವಿದರು ಹೊರತಾಗಿಲ್ಲ. ಬಾಲಿವುಡ್‌ ನಟ ನಟಿಯರ ಫಿಟ್‌ ನೆಸ್‌ ತರಬೇತುದಾರರಾದ ಅಂಶುಕಾ ಪರ್ವಾನಿ (Anshuka Parwani) ಇತ್ತೀಚೆಗೆ ಕರೀನಾ ಕಪೂರ್‌ (Kareena Kapoor) ಅವರ ಒಂದು ಯೋಗದ ಭಂಗಿಯನ್ನು ಹಂಚಿಕೊಂಡಿದ್ದು, ಅದರ ಉಪಯೋಗಗಳ ಬಗ್ಗೆ ಹೇಳಿದ್ದಾರೆ.

ಬಾಲಿವುಡ್‌ ನಟಿ ಕರೀನಾ ಕಪೂರ್‌ ಸದ್ಯ ಹಿಂದಿ ಚಿತ್ರರಂಗದ ಟಾಪ್‌ ಮೋಸ್ಟ್‌ ನಟಿ. ಎರಡು ಮಕ್ಕಳ ತಾಯಿಯಾಗಿದ್ದರೂ ಕರೀನಾ ಸಖತ್‌ ಫಿಟ್‌ ಆಗಿದ್ದು, ಫಿಟ್‌ ನೆಸ್‌ ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಇವರ ಈ ಫಿಟ್‌ ನೆಸ್‌ ಗೆ ಯೋಗ, ವ್ಯಾಯಾಮಗಳೇ ಮುಖ್ಯ ಕಾರಣ.

ಕರೀನಾ ಕಪೂರ್ ಅವರು ಮಾಡಿರುವ ಆ ಯೋಗಾಸನ ಯಾವುದು?
ಲಾಲ್ ಸಿಂಗ್ ಚಡ್ಡಾ ನಟಿ, ಸೈಡ್‌ ಪ್ಲಾಂಕ್‌ ಟ್ರೀ ಅಥವಾ ವಸಿಷ್ಠಾಸನ ಎಂದು ಕರೆಯಲಾಗುವ ಯೋಗ ಭಂಗಿಯನ್ನು ಮಾಡುತ್ತಿರುವ ವಿಡಿಯೋವನ್ನು ಅಂಕುಶಾ ಪರ್ವಾನಿ ತಮ್ಮ ಇನ್‌ ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. "ಸಮತೋಲನ, ಉಸಿರು, ಏಕಾಗ್ರತೆ ಮತ್ತು ಗಮನ - ಈ ಪದಗಳನ್ನು ನೆನಪಿನಲ್ಲಿಡಿ ಮತ್ತು ನಿಮ್ಮ ಯೋಗ ಆಸನಗಳಿಂದ ಇದು ಸಾಧ್ಯವಾಗುತ್ತದೆ. ಕರೀನಾ ಕಪೂರ್‌ ಸೈಡ್ ಪ್ಲ್ಯಾಂಕ್‌ ಅನ್ನು ಹೇಗೆ ಮಾಡಿದ್ದಾರೆ ನೋಡಿ ಎಂದು ಶೀರ್ಷಿಕೆ ಬರೆದು ಪೋಸ್ಟ್‌ ಮಾಡಿದ್ದಾರೆ. ಸೈಡ್‌ ಪ್ಲಾಂಕ್‌ ನಿಜಕ್ಕೂ ಸವಾಲಿನ ಆಸನ, ಆದರೆ ಸರಿಯಾದ ನಿರ್ದೇಶನ ಮತ್ತು ಅಭ್ಯಾಸದೊಂದಿಗೆ ಸಾಧಿಸುವುದು ಅಸಾಧ್ಯವಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sonnalli Seygall: ವರ್ಕೌಟ್ ಮಾಡೋಕ್ಕೆ ಟೈಮ್ ಇಲ್ವಾ? ಹಾಗಿದ್ರೆ ಸೋನಾಲಿಯವರ ಈ ಸಲಹೆಗಳನ್ನು ಪಾಲಿಸಿ

ಇದು ನಿಮ್ಮ ಕೋರ್, ತೋಳುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸಮತೋಲನ ಮತ್ತು ಸಮನ್ವಯದ ಪ್ರಜ್ಞೆಯನ್ನು ಸುಧಾರಿಸುತ್ತದೆ" ಎಂದು ಪೋಸ್ಟ್‌ ಮಾಡಿದ್ದಾರೆ.

ಸೈಟ್‌ ಫ್ಲಾಂಕ್‌ ಟ್ರೀ ಮಾಡುವ ವಿಧಾನ
ಮೊದಲು ಮಲಗಬೇಕು. ಬಲ ಮೊಣಕೈಯನ್ನು ನೆಲಕ್ಕೆ ಒತ್ತಿರಬೇಕು. ಬಲರಟ್ಟೆಯ ಭಾಗ ನೇರವಾಗುತ್ತದೆ. ಎರಡು ಪಾದಗಳು ಒಂದರ ಮೇಲೆ ಒಂದಿರಬೇಕು. ಬಲಪಾದದ ಮೇಲೆ ಎಡಪಾದ ಇರಬೇಕು. ಈಗ ಸೊಂಟವನ್ನು ಮೇಲಕ್ಕೆ ಎತ್ತಿ ಎಡಗೈಯನ್ನು ಮೇಲೆ ಚಾಚಬೇಕು. ದೃಷ್ಟಿ ಮೇಲಕ್ಕೆ ಬಲ ಪಾದ ಬಲ ಮೊಣಕೈ ಮಾತ್ರ ನೆಲಕ್ಕೆ ತಾಗಿರಬೇಕು. ಬಲ ಪಾದದ ಹೊರ ಅಂಚು ನೆಲಕ್ಕೆ ತಾಗಿರಬೇಕು. ಪೂರ್ಣ ಪಾದ ತಾಕಿರಬಾರದು. ಬಲ ಪಾದದ ಒಳಂಚಿನ ಮೇಲೆ ಎಡ ಪಾದವಿರಬೇಕು. ದೃಷ್ಟಿ ಮೇಲೆ ಇರುವ ಎಡ ಹಸ್ತವನ್ನು ನೋಡಬೇಕು. ಎಡ ಹಸ್ತ ಎದೆಯ ನೇರದಲ್ಲಿ ಮುಂದೆ ಇರಬೇಕು.










View this post on Instagram






A post shared by ANSHUKA YOGA (@anshukayoga)




ಸೈಡ್ ಪ್ಲಾಂಕ್ ಟ್ರೀ ಭಂಗಿ ಹೇಗೆ ಸಹಾಯ ಮಾಡುತ್ತದೆ?

  •  ಈ ಆಸನ ಮಣಿಕಟ್ಟು ಮತ್ತು ಹೊಟ್ಟೆಯ ಸ್ನಾಯುಗಳನ್ನೂ ಬಲಪಡಿಸುತ್ತದೆ.

  • ಇಡಿಯ ದೇಹವನ್ನು ಪೂರ್ಣವಾಗಿ ಸೆಳೆಯಲು ನೆರವಾಗುತ್ತದೆ.

  • ಕಂಕುಳ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.

  • ದೇಹದ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ.


ಇದನ್ನೂ ಓದಿ:  Yoga For Fertility: ಈ ಆಸನಗಳನ್ನು ಪ್ರತಿದಿನ ಮಾಡಿದ್ರೆ ಬೇಗ ಗರ್ಭಿಣಿಯಾಗಬಹುದು

ಅಂಕುಶಾ ಪರ್ವಾನಿ ಬಾಲಿವುಡ್‌ ನಲ್ಲಿ ಹಲವಾರು ನಟ, ನಟಿಯರಿಗೆ ತರಬೇತುದಾರರಾಗಿ ಫಿಟ್‌ ನೆಸ್‌ ಸಲಹೆ ನೀಡುತ್ತಿದ್ದಾರೆ. ಈ ಹಿಂದೆಯೂ ಸಹ, ಕರೀನಾ ಕಷ್ಟದ ಯೋಗ ಆಸನಗಳನ್ನು ಮಾಡಿ ಪೋಸ್ಟ್‌ ಮಾಡಿದ್ದರು. ನಟರಾಜಾಸನ ಅಥವಾ ಲಾರ್ಡ್ ಆಫ್ ಡ್ಯಾನ್ಸ್ ಭಂಗಿಯನ್ನು ಮತ್ತು ವೀರಭದ್ರಾಸನ ಅಥವಾ ಯೋಧ ಭಂಗಿಗಳನ್ನು ಸುಲಭವಾಗಿ ಮಾಡುವುದನ್ನು ಸಹ ನಾವು ಹಿಂದಿನ ವಿಡಿಯೋದಲ್ಲಿ ನೋಡಬಹುದಾಗಿದೆ.
Published by:Ashwini Prabhu
First published: