ಕರೀನಾ ಕಪೂರ್ ಖಾನ್ ಬಾಲಿವುಡ್ನ ಹೆಸರಂತ ನಟಿ. ಅವರು ತಮ್ಮ ನಟನೆಯಿಂದ ಎಲ್ಲಾರ ಮೆಚ್ಚುಗೆ ಗಳಿಸಿದ್ದಾರೆ ಹಾಗೂ ಅವರು ಅತ್ಯಂತ ಸುಂದರ ತ್ವಚೆ ಮತ್ತು ಕಾಂತಿಯುತ ಚರ್ಮವನ್ನು ಹೊಂದಿದ್ದಾರೆ. ಮೇಕಪ್ ಇಲ್ಲದೆ ಕೂಡ ಅವರು ತುಂಬ ಸುಂದರವಾಗಿ ಕಣ್ಣಿಸುತ್ತಾರೆ. ನಟಿ ನಟನೆಯೊಂದಿಗೆ ತನ್ನ ತ್ವಚೆಯನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರು ಇತ್ತೀಚಿಕೆ ಇನ್ಸ್ಟಾಗ್ರಾಮ್ ಲೈವ್ನಲ್ಲಿ ನಿರ್ಮಾಪಕ ಕರಣ್ ಜೋಹರ್ ಜೊತೆ ತಮ್ಮ "ಪ್ರೆಗ್ನೆನ್ಸಿ ಬೈಬಲ್" ಪುಸ್ತಕವನ್ನು ಬಿಡುಗಡೆ ಮಾಡಿದರು. ಆ ಸಮಯದಲ್ಲಿ ಅವರು ತಾವು ಪ್ರೆಗ್ನೆನ್ಸಿಯಲ್ಲಿ ಎದುರಿಸಿದ ಸವಾಲುಗಳ ಕುರಿತು ಮಾತನಾಡಿದರು ಹಾಗೂ ಎರಡನೇಯ ಪ್ರೆಗ್ನೆನ್ಸಿಯಲ್ಲಿ ಧನಾತ್ಮಕ ಮತ್ತು ಶಕ್ತಿಯುತವಾಗಿ ಇರಲು ಅವರ ಅನುಸರಿಸಿದ ಸಲಹೆಗಳನ್ನು ಕೂಡ ಹಂಚಿಕೊಂಡರು ಬನ್ನಿ ಈ ಕುರಿತು ಇನ್ನಷ್ಟು ತಿಳಿಯೋಣ.
ನೀವು ಕರೀನಾ ಕಪೂರ್ ಖಾನ್ನಂತೆ(ಬೇಬೊ) ತ್ವಚೆಯನ್ನು ಹೊಂದಲು ಅವರ ಈ ದಿನಚರಿಯ ಸಲಹೆಗಳನ್ನು ಅನುಸರಿಸಿ
ಬಾದಾಮಿ ಎಣ್ಣೆ: ಕರೀನಾ ಕಪೂರ್ ಖಾನ್ ಪ್ರತಿದಿನ ತಮ್ಮ ತ್ವಚೆಯನ್ನು ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದಾಗಿ ತಿಳಿಸಿದ್ದಾರೆ. ಬಾದಾಮಿ ಎಣ್ಣೆ ವಿಟಮಿನ್ ಇ ಯಿಂದ ಕೂಡಿದ್ದು, ಇದು ತ್ವಚೆಯನ್ನು ತೇವಾಂಶದಿಂದ ಇರಿಸಲು ಸಹಾಯ ಮಾಡುತ್ತದೆ ಹಾಗೂ ಮೃದುವಾಗಿರಿಸುತ್ತದೆ ಎಂದು ಹೇಳಿದರು.ಬಾದಾಮಿ ಎಣ್ಣೆಯು ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಹೊಡೆದ ತುಟಿಗಳನ್ನು ತೇವಾಂಶದಿಂದ ಇರಿಸಲು ಸಹಾಯ ಮಾಡುತ್ತದೆ ಎಂದು ಅವರು ಲೈವ್ ಕಾರ್ಯಕ್ರಮದಲ್ಲಿ ತಿಳಿಸಿದರು.
3 ಲೀಟರ್ ನೀರು: ನೀರು ಯಾವುದೇ ಅಲಂಕಾರಿಕ ವಸ್ತು ಅಲ್ಲ. ಆದರೆ 3 ಲೀಟರ್ ನೀರು ಚರ್ಮವನ್ನು ಕಾಂತಿಯುತವಾಗಿ ಮತ್ತು ದೋಷ ರಹಿತವಾಗಿರಿಸುತ್ತದೆ. ನೀರು ನಿಮ್ಮ ದೇಹದಲ್ಲಿನ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ ಎಂದು ಬೇಬೊ ತಿಳಿಸಿದರು.
ಯೋಗ: ಕೇವಲ ಕರೀನಾ ಮಾತ್ರವಲ್ಲ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ದೇಹವನ್ನು ಕಾಪಾಡಿಕೊಳ್ಳು ಯೋಗವನ್ನು ಮಾಡುತ್ತಾರೆ . ಯೋಗ ಅಥವಾ ವ್ಯಾಯಾಮ ಮಾಡುವ ಮೂಲಕ, ನೀವು ನಿಮ್ಮ ದೇಹದ ವಿಷವನ್ನು ಬೆವರು ಮೂಲಕ ಹೊರ ಹಾಕಬಹುದು ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತೀರಿ, ಅದು ಅಂತಿಮವಾಗಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು.
ನೀವು ಈ ಕುರಿತು ಇನ್ನಷ್ಟು ತಿಳಿಯಲು ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಅನುಸರಿಸಿ. ಕರೀನಾ ಹಿಂದಿನ ಪೋಸ್ಟ್ಗಳು ಮತ್ತು ಸಂದರ್ಶನಗಳಲ್ಲಿ ತಾನು ಯೋಗಾಭ್ಯಾಸ ಮತ್ತು ಸರಿಯಾದ ಆಹಾರ ಕ್ರಮದಲ್ಲಿ ನಂಬಿಕೆ ಹೊಂದಿರುವುದಾಗಿ ಎಂದು ಹೇಳಿದ್ದಾರೆ. ಬೇಬೊ ಅವರ ಚರ್ಮದ ಆರೈಕೆ ದಿನಚರಿಯು ಕಾರ್ಯ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ನೀವು ಕೂಡ ಬೇಬೊರಂತೆಯೇ ಸುಂದರ ತ್ವಚೆಯನ್ನು ಪಡೆಯಲು ಬಯಸಿದರೆ ಮೇಲೆ ನೀಡಿರುವ ಸಲಹೆಗಳನ್ನು ಅನುಸರಿಸಿ. ಈ ಕುರಿತು ಇನ್ನಷ್ಟು ತಿಳಿಯಲು ಅವರ "ಪ್ರೆಗ್ನೆನ್ಸಿ ಬೈಬಲ್" ಪುಸ್ತಕವನ್ನು ಓದಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ