37ರ ಹರೆಯದಲ್ಲೂ ನಟಿ ಕರೀನಾಳ 'ಝೀರೊ ಸೈಜ್' ಎಂಬ ಫಿಟ್​ನೆಸ್​ ಮಂತ್ರ

news18
Updated:July 11, 2018, 6:45 PM IST
37ರ ಹರೆಯದಲ್ಲೂ ನಟಿ ಕರೀನಾಳ 'ಝೀರೊ ಸೈಜ್' ಎಂಬ ಫಿಟ್​ನೆಸ್​ ಮಂತ್ರ
news18
Updated: July 11, 2018, 6:45 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ನ ಬೇಡಿಕೆ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಆರಂಭದಲ್ಲಿ ತೋಪೆದ್ದ ಸಿನಿಮಾಗಳಿಂದ ಗುರುತಿಸಿಕೊಂಡಿದ್ದ ಕರೀನಾ ಬಳಿಕ ಬಾಲಿವುಡ್​ ಹಿಟ್​ ಚಿತ್ರಗಳ ನಾಯಕಿಯಾಗಿ ಮೆರೆದರು. 'ತಷನ್' ಚಿತ್ರದಲ್ಲಿ ತನ್ನ ಮೈಮಾಟದಿಂದ ಹೊಸ ಸಂಚಲನ ಸೃಷ್ಟಿಸಿದ್ದ ಕರೀನಾ ಕಪೂರ್, ಬಾಲಿವುಡ್​ನಲ್ಲಿ ಝೀರೊ ಸೈಜ್ ಎಂಬ ದೇಹಸಿರಿಯ ಟ್ರೆಂಡ್ ಹುಟ್ಟು ಹಾಕಿದ್ದರು.

ಕಠಿಣ ವರ್ಕೌಟ್​ ಮೂಲಕ ಬಳಕುವ ಬಳ್ಳಿಯಾಗಿ ಮಿಂಚುತ್ತಿದ್ದ ಕರೀನಾ ಇದ್ದಕ್ಕಿದ್ದಂತೆ ಸೈಫ್ ಅಲಿ ಖಾನ್ ಅವರ ಜೊತೆ ಹಸೆಮಣೆಯೇರಿ ಅಚ್ಚರಿ ಮೂಡಿಸಿದರು. ಕೆರಿಯರ್​​ನ ಉತ್ತುಂಗದಲ್ಲಿರುವಾಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರಿಂದ ಬೇಬೊ(ಕರೀನಾ) ಸಿನಿಮಾ ವೃತ್ತಿ ಮುಗಿಯಿತು ಎಂದೇ ಭಾವಿಸಲಾಗಿತ್ತು. ಅಲ್ಲದೆ ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಕರೀನಾ ಅವರ ಝೀರೊ ಸೈಜ್​ ಫಿಟ್​ನೆಸ್ ಮಾಯವಾಗುತ್ತೆ ಎಂದು ಬಿ-ಟೌನಲ್ಲಿ ಸುದ್ದಿಗಳಾಗಿತ್ತು.

ಆದರೆ ಎಲ್ಲಾ ಊಹಪೋಹಗಳನ್ನು ಬದಿಗೊತ್ತಿ ಬಾಲಿವುಡ್ ಬೇಬೊ 'ವೀರೆ ದಿ ವೆಡ್ಡಿಂಗ್' ಮೂಲಕ ಸಿನಿರಂಗಕ್ಕೆ ಕಂಬ್ಯಾಕ್​ ಮಾಡಿದ್ದರು. ಕೇವಲ ನಟಿಯಾಗಿ ಅಭಿನಯಿಸಿದ್ದರೆ ಓಕೆ ಎನ್ನಬಹುದಿತ್ತೇನೋ, ಆದರೆ ಕರೀನಾ ರೀ-ಎಂಟ್ರಿ ಮತ್ತದೇ ಝೀರೊ ಸೈಜ್ ದೇಹಸಿರಿಯೊಂದಿಗೆ ಆಗಿತ್ತು. ಅಷ್ಟೇ ಅಲ್ಲದೆ ಮಿಸ್ ಇಂಡಿಯಾ 2018 ಸೌಂದರ್ಯ ಸ್ಫರ್ಧೆಯಲ್ಲಿ ರ‍್ಯಾಂಪ್ ವಾಕ್ ಮಾಡುವ ಮೂಲಕ ತಮ್ಮ ಫಿಟ್​ನೆಸ್ ಮತ್ತು ಸೌಂದರ್ಯದಿಂದ ಎಲ್ಲರನ್ನು ಅಚ್ಚರಿಗೊಳಿಸಿದ್ದರು.




Loading...

A post shared by Namrata Purohit (@namratapurohit) on





2016ರ ಡಿಸೆಂಬರ್​ನಲ್ಲಿ ತೈಮೂರ್​ಗೆ ಜನ್ಮ ನೀಡಿದ 45 ದಿನಗಳ ಬಳಿಕ ವರ್ಕೌಟ್​ ಪ್ರಾರಂಭಿಸಿದ ಕರೀನಾ ತನ್ನ ಹಿಂದಿನ ಸೌಂದರ್ಯವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು. ಅಲ್ಲದೆ ಇದೀಗ ಬಾಲಿವುಡ್​ನಲ್ಲಿ ಹಿಂದಿನಗಿಂತ ಉತ್ತಮ ಫಿಟ್​ನೆಸ್​ ಮಂತ್ರ ಅಳವಡಿಸಿಕೊಂಡಿರುವ ಕರೀನಾ ಬಾಲಿವುಡ್​ನ ಯುವ ನಟಿಯರಿಗೆ ಪ್ರಬಲ ಸ್ಫರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


ಇತ್ತೀಚೆಗೆ ಫಿಟ್​ನೆಸ್​ ಟ್ರೈನರ್ ನಮ್ರತಾ ಪುರೋಹಿತ್, ವರ್ಕೌಟ್​ ಮಾಡುವಲ್ಲಿ ಕರೀನಾ ಕಪೂರ್​ಗಿರುವ ಉತ್ಸಾಹವನ್ನು ತಿಳಿಸಲು ಫೋಟೋ ಒಂದನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ದೇಹಸಿರಿಗೆ ಕಠಿಣ ಕಸರತ್ತು ನಡೆಸುತ್ತಿರುವ ಈ ಫೋಟೋ ಸದ್ಯ ವೈರಲ್ ಆಗಿದೆ. ಅಲ್ಲದೆ ಟ್ರೈನರ್ ನಮ್ರತಾ ಪುರೋಹಿತ್ ಕರೀನಾಳ ಝೀರೊ ಸೈಜ್ ಫಿಗರ್ ಹಿಂದಿರುವ ಕಠಿಣ ಪರಿಶ್ರಮವನ್ನು ಫೋಟೋ ಮೂಲಕ ​ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಪ್ರತಿನಿತ್ಯದ ವ್ಯಾಯಾಮದ ಮೂಲಕ 37ರ ಹರೆಯದಲ್ಲೂ ಯಂಗ್ ಅ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುವ ಕರೀನಾ ಸದ್ಯ ಪತಿ ಸೈಫ್ ಜೊತೆ ಲಂಡನ್​ನಲ್ಲಿ ರಜೆಯ ಮೂಡ್​ನಲ್ಲಿದ್ದಾರೆ. ವಿವಾಹದ ಬಳಿಕ ಬಿಟೌನ್​ನಲ್ಲಿ ಸೆಕೆಂಡ್ ಇನಿಂಗ್ಸ್​ ಪ್ರಾರಂಭಿಸಿರುವ ಕರೀನಾ ಈಗ ಹೊಸ ಮೂವಿಗೆ ಸಹಿ ಕೂಡ ಹಾಕಿದ್ದಾರೆ. ಈ ಚಿತ್ರವನ್ನು 'ಲಗಾನ್' ಖ್ಯಾತಿಯ ಅಶುತೋಶ್ ಗೋವಾರಿಕರ್ ನಿರ್ದೇಶಿಸಲಿದ್ದಾರೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ