• Home
  • »
  • News
  • »
  • lifestyle
  • »
  • Kannada Tindi Kendra: ಮಾಸ್ತಿ ಪುಳಿಯೊಗರೆ, ಡಿವಿಜಿ ತಟ್ಟೆ ಇಡ್ಲಿ - ಇದು ಕನ್ನಡದ ಕಂಪು ಸೂಸುವ ಬೆಂಗಳೂರಿನ ತಿಂಡಿ ಕೇಂದ್ರ!

Kannada Tindi Kendra: ಮಾಸ್ತಿ ಪುಳಿಯೊಗರೆ, ಡಿವಿಜಿ ತಟ್ಟೆ ಇಡ್ಲಿ - ಇದು ಕನ್ನಡದ ಕಂಪು ಸೂಸುವ ಬೆಂಗಳೂರಿನ ತಿಂಡಿ ಕೇಂದ್ರ!

ಕನ್ನಡ ತಿಂಡಿ ಕೇಂದ್ರ

ಕನ್ನಡ ತಿಂಡಿ ಕೇಂದ್ರ

Kannada Tindi Kendra Near Me: ಬೆಂಗಳೂರಿನಲ್ಲಿ (Bengaluru) ಕನ್ನಡ ರೆಸ್ಟೊರೆಂಟ್​ ಒಂದಿದೆ. ಅಲ್ಲಿನ ಮೆನು ನೋಡಲು ಬಹಳ ವಿಶೇಷ ಮಾತ್ರವಲ್ಲದೇ ರುಚಿಕರ ಕೂಡ. ಹಾಗೆಯೇ, ಈ ರೆಸ್ಟೊರೆಂಟ್​ (Restaurant) ಮಾಲೀಕರ ಸಾಮಾಜಿಕ ಸೇವೆ, ಕನ್ನಡ ಪ್ರೇಮ ನಿಜಕ್ಕೂ ಮಾದರಿ ಎಂದರೆ ತಪ್ಪಲ್ಲ.

ಮುಂದೆ ಓದಿ ...
  • Share this:

ಕಸ್ತೂರಿ ಕನ್ನಡದ (Kasturi Kannada) ಕಂಪಿನ ಬಗ್ಗೆ ನಾವು ಬರೆಯುತ್ತಾ ಹೋದರೆ ನಮಗೆ ಪದಗಳೇ ಸಾಲದು ಎಂದರೆ ತಪ್ಪಾಗಲ್ಲ. ಕನ್ನಡ ಮಾತೃ ಭಾಷೆ ಮಾತ್ರವಲ್ಲ ಹೃದಯದ ಭಾಷೆ (Heart Language) ಕೂಡ ಹೌದು.  ಅದೆಷ್ಟೋ ಭಾಷೆಗಳ ನಡುವೆ ನಮ್ಮ ಕನ್ನಡ ವಿಭಿನ್ನವಾಗಿ ಎದ್ದು ನಿಲ್ಲುತ್ತದೆ ಎನ್ನಬಹುದು. ವ್ಯಾವಹಾರಿಕವಾಗಿ ನಾವು ಬೇರೆ ಭಾಷೆ ಮಾತನಾಡುವ ಸಂದರ್ಭವಿದ್ದರೂ ಸಹ ಕನ್ನಡ ನಮ್ಮ ನಾಲಿಗೆಯಲ್ಲಿ ಶಾಶ್ವತ. ಆದರೆ, ನಮ್ಮ ಬೆಂಗಳೂರಿನಲ್ಲಿ (Bengaluru) ಕನ್ನಡ ರೆಸ್ಟೊರೆಂಟ್​ ಒಂದಿದೆ. ಅಲ್ಲಿನ ಮೆನು ನೋಡಲು ಬಹಳ ವಿಶೇಷ ಮಾತ್ರವಲ್ಲದೇ ರುಚಿಕರ ಕೂಡ. ಹಾಗೆಯೇ, ಈ ರೆಸ್ಟೊರೆಂಟ್​ (Restaurant) ಮಾಲೀಕರ ಸಾಮಾಜಿಕ ಸೇವೆ, ಕನ್ನಡ ಪ್ರೇಮ ನಿಜಕ್ಕೂ ಮಾದರಿ ಎಂದರೆ ತಪ್ಪಲ್ಲ. ಈ ರೆಸ್ಟೊರೆಂಟ್​ ಆರಂಭವಾಗಿದ್ದು ಹೇಗೆ? ಇದರ ವಿಶೇಷತೆ ಏನು ಎಂಬುದು ಇಲ್ಲಿದೆ.


35 ವರ್ಷಗಳಿಂದ ಕನ್ನಡ ಸೇವೆಯಲ್ಲಿದೆ ಈ ಸ್ಥಳ


ಸತತ ಮೂವತ್ತೈದು ವರ್ಷಗಳಿಂದ ನಡೆಯುತ್ತಿರುವ ಈ ರೆಸ್ಟೊರೆಂಟ್​ ಹೆಸರು ಕನ್ನಡ ತಿಂಡಿ ಎಂದು. ಈ ಸ್ಥಳದ ವಿಶೇಷತೆ ಎಂದರೆ ಊಟದ ಮೆನು. ಆದರೆ ನಿಮಗೆ ಗೊತ್ತಾ ಈ ಸ್ಥಳಕ್ಕೆ ಹೆಸರು ಕೊಟ್ಟಿದ್ದು ಜನರೇ ಎಂದರೆ ತಪ್ಪಲ್ಲ. ಸುಮಾರು ವರ್ಷಗಳ ಕಾಲ ಇದಕ್ಕೆ ಹೆಸರನ್ನು ಇಟ್ಟಿರಲಿಲ್ಲವಂತೆ, ಆದರೆ ಎಲ್ಲರೂ ಕನ್ನಡ ತಿಂಡಿ ಎಂದು ಕರೆದು ಫೇಮಸ್​, ಮಾಡಿದ ಕಾರಣ ಇದಕ್ಕೆ ಕನ್ನಡ ತಿಂಡಿ ಕೇಂದ್ರ ಎಂದು ನಾಲ್ಕು ವರ್ಷದ ಹಿಂದೆ ಹೆಸರಿಡಲಾಗಿದೆ. ಇಲ್ಲಿ ನೀವು ತಿನ್ನುವ ಪ್ರತಿ ಊಟದಲ್ಲಿ ಕನ್ನಡದ ಕಂಪು ಸಿಗುತ್ತದೆ. ಇಲ್ಲಿನ ಮೆನುವಿನಲ್ಲಿ ತಿಂಡಿಯ ಹೆಸರು ಕೇಳುವುದು ಒಂದು ಸುಂದರ ಅನುಭವ ಎನ್ನಬಹುದು.
ಇನ್ನು ಈ ಕನ್ನಡ ತಿಂಡಿ ಕೇಂದ್ರ ಕೇವಲ ಕನ್ನಡ ರಾಜ್ಯೋತ್ಸವದ ದಿನದ ಮಾತ್ರ ಕನ್ನಡ ಪ್ರೀತಿ ತೋರಿಸುವುದಿಲ್ಲ, ವರ್ಷದ 365 ದಿನಗಳ ಕಾಲ ಇಲ್ಲಿ ಕನ್ನಡ ಪ್ರೀತಿ ಪಸರಿಸುತ್ತದೆ. ಆದರೆ, ಕನ್ನಡ ರಾಜ್ಯೋತ್ಸವದ ದಿನ ಬಹಳ ಸುಂದರವಾಗಿ ಸಿಂಗಾರಗೊಂಡಿರುತ್ತದೆ. ಈ ವಿಶೇಷ ದಿನದಂದು ಈ ಸ್ಥಳವನ್ನು ನೋಡುವುದೇ ಒಂದು ಸುಂದರ ಅನುಭವ ಎಂದರೆ ತಪ್ಪಲ್ಲ. ಅಷ್ಟೇ ಅಲ್ಲದೇ, ಈ ದಿನ ಕನ್ನಡದ ಸಾಧಕರಿಗೆ ಇಲ್ಲಿ ಸನ್ಮಾನ ಸಹ ಮಾಡಲಾಗುತ್ತದೆ. ಇದರ ಇನ್ನೊಂದು ವಿಶೇಷತೆ ಗೊತ್ತಾ? ಇಲ್ಲಿಗೆ ಕನ್ನಡದ ಹೆಸರಾಂತ ಸಾಹಿತಿಗಳು ಬರುವುದು ಒಂದೆಡೆ ಆದರೆ, ಇನ್ನೊಂದೆಡೆ ಇಲ್ಲಿ ಬಂದು ತಿಂಡಿ ತಿಂದು, ಸಮಯ ಕಳೆಯುವವರಿಗೆ ಪ್ರೀತಿಯಿಂದ ಒಂದು ಸುಂದರ ಪುಸ್ತಕವನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತದೆ.


ಈ ಸ್ಥಳದ ಮಾಲೀಕರ ಹೆಸರು ರಾಮಚಂದ್ರ ಅವರಿಗೆ ಸರಿ ಸುಮಾರು 60ರ ಆಸುಪಾಸಿರಬಹುದು. ಕನ್ನಡ ಟೀ ಶರ್ಟ್​ ಧರಿಸಿ, ಕನ್ನಡಾಂಬೆಯ ಸೇವೆಯಲ್ಲಿ ನಿರತರಾಗಿರುವ ಇವರು, ಕೇವಲ ಕನ್ನಡದ ಬಗ್ಗೆ ಮಾತ್ರವಲ್ಲದೇ ಅಂಗಾಂಗ ದಾನದ ಬಗ್ಗೆ ಸಹ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: ರುಚಿಕರವಾದ ಸುಶಿ ಹುಡುಕುತ್ತಿದ್ರೆ ಬೆಂಗಳೂರಿನ ಈ ರೆಸ್ಟೊರೆಂಟ್​ಗಳಿಗೆ ಹೋಗಿ
 ಈ ಕನ್ನಡ ತಿಂಡಿ ಕೇಂದ್ರದ ವಿಭಿನ್ನ ತಿಂಡಿಗಳ ಹೆಸರು ಇಲ್ಲಿದೆ


ನಡೆದಾಡುವ ಕನ್ನಡದ ನಿಘಂಟು ಶ್ರೀ ಜಿ ವೆಂಕಟಸುಬ್ಬಯ್ಯ ಟೊಮ್ಯಾಟೋ ಬಾತ್


ಕನ್ನಡದ ಆಸ್ತಿ ಶ್ರೀ ಮಾಸ್ತಿ ವೆಂಕಟೇಶ್​ ಅಯ್ಯಂಗಾರ್ ಪುಳಿಯೋಗರೆ


ಕನ್ನಡದ ವರಕವಿ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ನಿಂಬೆಹಣ್ಣಿನ ಚಿತ್ರಾನ್ನ


ಶ್ರೀ.ವಿ. ಸೀತಾರಾಮಯ್ಯ ಮೊಸರನ್ನ


ಕಡಲ ತೀರದ ಭಾರ್ಗವ ಶ್ರೀ ಶಿವರಾಮ ಕಾರಂತ ತರಕಾರಿ ಸಾಗು


ಮಂಕು ತಿಮ್ಮನಕಗ್ಗ – ಕಗ್ಗದ ಸಿರಿ- ಸಾಹಿತ್ಯ ಭೀಷ್ಮ ಶ್ರೀ ಡಿ.ವಿ.ಗುಂಡಪ್ಪ ತಟ್ಟೆ ಇಡ್ಲಿ


ಕನ್ನಡದ ಪ್ರೇಮಕವಿ ಶ್ರೀ.ಕೆ.ಎಸ್​. ನರಸಂಹಸ್ವಾಮಿ ಕಾಯಿಚಟ್ನಿ


ಹೊಸಕನ್ನಡ ಭಾಗವತ ಕವಿ ಶ್ರೀ.ಪು.ತಿ. ನರಸಿಂಹಚಾರ್ ಚಕ್ಕುಲಿ


ಶ್ರೀ ವಿ.ಕೃ.ಗೋಕಾಕ್​ ನಿಪ್ಪಟ್ಟು


ನವ್ಯ ಸಾಹಿತ್ಯದ ಪ್ರವರ್ತಕ ಶ್ರೀ ಎಂ.ಗೋಪಾಲಕೃಷ್ಣ ಅಡಿಗ ಕೋಡುಬಳೆ


ನಾದಬ್ರಹ್ಮ ಹಂಸಲೇಖ ಜಿಲೇಬಿ


ಭಾರತರತ್ನ ಸರ್​.ಎಂ. ವಿಶ್ವೇಶ್ವರಯ್ಯ ಜೀವದ ರಕ್ತನಾಡಿ ನೀರು
ಈ ಮೆನುವಿನಲ್ಲಿ ಒಬ್ಬೊಬ್ಬರ ಹೆಸರು ಸಹ ಕರ್ನಾಟಕದ ಪ್ರತಿಯೊಬ್ಬರು ನೆನಪಿನಲ್ಲಿಡಬೇಕಾದದ್ದೆ. ಈ ಮೆನು ಮೂಲಕ ಜನರಿಗೆ ಮಹಾನ್ ಸಾಹಿತಿಗಳ ಕಿರುಪರಿಚಯ ಕೊಡುತ್ತಿರುವುದು ಶ್ಲಾಘನೀಯ ಸಹ.


ಇದನ್ನೂ ಓದಿ: ಮಕ್ಕಳಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ, ಭವಿಷ್ಯದ ಖಿನ್ನತೆಯ ಸೂಚನೆ ಇದು


ವಿಳಾಸ: 2 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, ಚಾಮರಾಜಪೇಟೆ, ಬೆಂಗಳೂರು, ಕರ್ನಾಟಕ 560018


ಮೊಬೈಲ್ ನಂಬರ್: 093429 21229

Published by:Sandhya M
First published: