Chicken Recipe: ಹುಳಿ ಹುಳಿಯಾಗಿ ಖಾರವಾಗಿ ತಯಾರಿಸಿ ಬಾಯಲ್ಲಿ ನೀರೂರಿಸುವ ಗ್ರೀನ್ ಚಿಕನ್ ಫ್ರೈ

ದೋಸೆ, ನೀರ್ ದೋಸೆ, ರೊಟ್ಟಿ, ಚಪಾತಿ ಜೊತೆ ಗ್ರೀನ್ ಚಿಕನ್ ಫ್ರೈ ಸವಿಯಲು ಒಳ್ಳೆಯ ಕಾಂಬಿನೇಷನ್ ಅಥವಾ ಬಿಸಿ ಬಿಸಿಯಾದ ಅನ್ನದ ಜೊತೆ ಗ್ರೀನ್ ಚಿಕನ್ ಫ್ರೈ ಟ್ರೈ ಮಾಡಬಹುದು.

ಚಿಕನ್ ರೆಸಿಪಿ

ಚಿಕನ್ ರೆಸಿಪಿ

  • Share this:
ಸಂಡೇ ಬಂದ್ರೆ ಬಹುತೇಕರ ಮನೆಗಳಲ್ಲಿ ನಾನ್ ವೆಜ್ (Non Veg) ಇರಲೇಬೇಕು. ಇಲ್ಲವಾದ್ರೆ ಬಹುತೇಕರಿಗೆ ಏನೋ ಮಿಸ್ ಮಾಡಿಕೊಂಡಂತೆ ಆಗುತ್ತೆ. ಆದರೆ ನಾನ್ ವೆಜ್ ನಲ್ಲಿ ಏನು ತಿನ್ನಬೇಕು ಅನ್ನೋ ಗೊಂದಲ ಎಲ್ಲರಲ್ಲಿಯೂ ಇರುತ್ತದೆ. ಹೋಟೆಲ್ ಗಳಿಗೆ (Hotel) ಹೋದ್ರೆ ಅಲ್ಲಿಯ ರುಚಿ ಕೆಲವರಿಗೆ ಇಷ್ಟವಾಗಲ್ಲ. ಇನ್ನು ಮನೆಯಲ್ಲಿ ವೆರೈಟಿ ವೆರೈಟಿ ಚಿಕನ್ ರೆಸಿಪಿ (Chicken Recipe) ಎಲ್ಲ ಮಾಡಲು ಆಗಲ್ಲ ಅಂತ ಹೇಳುತ್ತಿರುತ್ತಾರೆ. ಚಿಕನ್ ಕರ್ರಿ (Chicken Curry) ಮಾಡಿ ನಾನ್ ವೆಜ್ ಊಟ ಮುಗಿಸುತ್ತಾರೆ. ಆದ್ರೆ  ಇಂದು ನಾವು ಹೇಳುವ ರೆಸಿಪಿಯನ್ನ ಮನೆಯಲ್ಲಿಯೇ ಮಾಡಬಹುದು. ಇದು ಚಿಕನ್ ಕರ್ರಿ ಮಾಡೋದಕ್ಕಿಂತ ಸುಲಭ. ಈ ರೆಸಿಪಿ ಹುಳಿ ಹುಳಿಯಾಗಿ ಮತ್ತು ಖಾರವಾಗಿ ಇರೋದರಿಂದ ಬಹುತೇಕ ಎಲ್ಲರಿಗೂ ಈ ಗ್ರೀನ್ ಚಿಕನ್ ಫ್ರೈ ಇಷ್ಟವಾಗುತ್ತದೆ.

ಇಂದು ನಾವು ನಿಮಗೆ ಗ್ರೀನ್ ಚಿಕನ್ ಫ್ರೈ ಮಾಡೋದು ಹೇಗೆ ಎಂಬುದರ ರೆಸಿಪಿ ಹೇಳುತ್ತಿದ್ದೇವೆ. ಇದಕ್ಕೆ ಹೆಚ್ಚಿನ ಮಸಾಲೆ ಪದಾರ್ಥಗಳು ಬೇಕಾಗುವುದಿಲ್ಲ. ಈ ರೆಸಿಪಿ ತುಂಬಾನೇ ಸರಳ ಮತ್ತು ರುಚಿಕರ.

ಬೇಕಾಗುವ ಸಾಮಾಗ್ರಿಗಳು

ಚಿಕನ್ – 250 ಗ್ರಾಂ

ಹಸಿ ಮೆಣಸಿನಕಾಯಿ- 7 ರಿಂದ 8

ನಿಂಬೆ ರಸ- 2 ರಿಂದ 3 ಟೀ ಸ್ಪೂನ್

ಜೀರಿಗೆ- ಒಂದೂವರೆ ಟೀ ಸ್ಪೂನ್

ಪೆಪ್ಪರ್ ಪೌಡರ್- 1/2 ಟೀ ಸ್ಪೂನ್

ಕರೀಬೇವು- 4 ರಿಂದ 5 ಎಲೆ

ಕೋತಂಬರಿ ಸೊಪ್ಪು- ಸ್ವಲ್ಪ

ಅರಿಶಿಣ- 2 ಚಿಟಿಕೆ

ಎಣ್ಣೆ- 3 ಟೀ ಸ್ಪೂನ್

ಬೆಳ್ಳುಳ್ಳಿ- 4 ರಿಂದ 5

ಚಿಕನ್ ಮಸಾಲಾ- 1/2 ಟೀ ಸ್ಪೂನ್

ಉಪ್ಪು- ರುಚಿಗೆ ತಕ್ಕಷ್ಟು

ಇದನ್ನೂ ಓದಿ: Chilly Chicken: ಹಳ್ಳಿ ಶೈಲಿಯ ರುಚಿಯಾದ ಹೆಚ್ಚು ಮಸಾಲೆ ಬಳಸದೇ ಚಿಲ್ಲಿ ಚಿಕನ್ ಮಾಡುವ ವಿಧಾನ

ಗ್ರೀನ್ ಚಿಕನ್ ಫ್ರೈ ಮಾಡುವ ವಿಧಾನ

*ಮೊದಲಿಗೆ ಮಾರುಕಟ್ಟೆಯಿಂದ ತಂದಿರುವ ಚಿಕನ್ ನನ್ನು ಬಿಸಿನೀರಿನಲ್ಲಿ ಎರಡರಿಂದ ಮೂರು ಬಾರಿ ತೊಳೆದುಕೊಳ್ಳಿ. ಇದರಿಂದ ಮಾಂಸದ ಮೇಲಿನ ರಕ್ತ, ಪುಕ್ಕ ಇತ್ಯಾದಿ ಎಲ್ಲವೂ ಶುಚಿಗೊಳ್ಳುತ್ತದೆ.

*ತದನಂತರ ಚಿಕನ್ ಚಿಕ್ಕ ಚಿಕ್ಕ ಪೀಸ್ ಗಳಾಗಿ ಕತ್ತರಿಸಿ ಎತ್ತಿಟ್ಟುಕೊಳ್ಳಿ.

*ಹಸಿ ಮೆಣಸಿನಕಾಯಿ ಒಂದರಲ್ಲಿ ಎರಡು ತುಂಡುಗಳಾಗಿ ಕತ್ತಿರಿಸಬೇಕು. ಹಸಿ ಮೆಣಸಿನಕಾಯಿ ಮಧ್ಯ ಭಾಗದಲ್ಲಿಯೂ ಕತ್ತರಿಸಿರಬೇಕು. ಇದರಿಂದ ಖಾರದ ಅಂಶ ಹೆಚ್ಚಾಗುತ್ತದೆ.

*ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ. (ಬೇಕಿದ್ದಲ್ಲಿ ಅಂಗಡಿಗಳಲ್ಲಿ ಸಿಗುವ ಬೆಳ್ಳುಳ್ಳಿ ಪೇಸ್ಟ್ (1 ಟೀ ಸ್ಪೂನ್) ಬಳಸಬಹುದು)

*ಈಗ ಒಂದು ಪಾತ್ರೆಯನ್ನು ಒಲೆ ಮೇಲಿಟ್ಟುಕೊಂಡು ಎಣ್ಣೆ ಹಾಕಿಕೊಳ್ಳಿ. ಚಿಕನ್ ಅಡುಗೆ ಮುಗಿಯುವರೆಗೂ ಫ್ಲೇಮ್ ಮಧ್ಯಮ ಉರಿಯಲ್ಲಿರಬೇಕು.

*ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ. ನಂತರ ಕರೀಬೇವು ಹಾಕಿ. ಇದಾದ ಮೇಲೆ ಹಸಿಮೆಣಸಿನಕಾಯಿ ಚೆನ್ನಾಗಿ ಬಾಡಿಸಿಕೊಳ್ಳಿ.

* ಮೆಣಸಿನಕಾಯಿ ಫ್ರೈ ಆಗುತ್ತಿದ್ದಂತೆ ಚಿಕನ್ ಹಾಕಿ ಎರಡು ಬಾರಿ ತಿರುವಿ ಮುಚ್ಚಳ ಮುಚ್ಚಿ ಮೂರು ನಿಮಿಷ ಬಿಡಿ.

*ಮೂರು ನಿಮಿಷದ ಬಳಿಕ ಮುಚ್ಚಳ ತೆಗೆದು ಬೆಳ್ಳುಳ್ಳಿ, ಅರಿಶಿನ, ಪೆಪ್ಪರ್ ಪೌಡರ್, ಉಪ್ಪು ಹಾಗೂ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ. ಈಗ ಮತ್ತೆ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಲು ಬಿಡಿ.

*ಇದಾದ ಬಳಿಕ ಚಿಕನ್ ಗೆ ನಿಂಬೆ ರಸ ಮತ್ತು ಕೋತಂಬರಿ ಸೊಪ್ಪು ಹಾಕಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿದ್ರೆ ಗ್ರೀನ್ ಚಿಕನ್ ಫ್ರೈ ರೆಡಿ.

ಇದನ್ನೂ ಓದಿ:  Chicken Recipe: ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ‘ಘೀ ಚಿಕನ್ ಕರಿ’ ಹೇಗೆ ಮಾಡುವುದು ಗೊತ್ತಾ? ಈ ಟೇಸ್ಟಿ ರೆಸಿಪಿ ನಿಮಗಾಗಿ

ದೋಸೆ, ನೀರ್ ದೋಸೆ, ರೊಟ್ಟಿ, ಚಪಾತಿ ಜೊತೆ ಗ್ರೀನ್ ಚಿಕನ್ ಫ್ರೈ ಸವಿಯಲು ಒಳ್ಳೆಯ ಕಾಂಬಿನೇಷನ್ ಅಥವಾ ಬಿಸಿ ಬಿಸಿಯಾದ ಅನ್ನದ ಜೊತೆ ಗ್ರೀನ್ ಚಿಕನ್ ಫ್ರೈ ಟ್ರೈ ಮಾಡಬಹುದು.
Published by:Mahmadrafik K
First published: