ಭಾರತೀಯ ನೌಕಾಪಡೆ ನೇಮಕಾತಿ 2019: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

Indian Navy Recruitment 2019: ನಾವಿಕ ಹುದ್ದೆಗಾಗಿ ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳು ಎಸ್​​ಎಸ್​ಎಲ್​ಸಿ ಅಥವಾ ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಪಡೆದಿರಬೇಕಾಗಿರುತ್ತದೆ.

news18-kannada
Updated:November 5, 2019, 5:44 PM IST
ಭಾರತೀಯ ನೌಕಾಪಡೆ ನೇಮಕಾತಿ 2019: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
ಭಾರತೀಯ ನೌಕಾಪಡೆ
  • Share this:
ಭಾರತೀಯ ನೌಕಾಪಡೆಯಲ್ಲಿ ನಾವಿಕ ಎಎ (ನೇವಿ ಆರ್ಟಿಫೈರ್ ಅಪ್ರೆಂಟಿಸ್) ಮತ್ತು ಎಸ್ಎಸ್​​ಆರ್​ (ಹಿರಿಯ ಮಾಧ್ಯಮಿಕ ನೇಮಕಾತಿ) ಹುದ್ದೆಯನ್ನು ಭರ್ತಿ ಮಾಡಲು ಆಸಕ್ತ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸುಮಾರು 2700 ಹುದ್ದೆಗಳು ಖಾಲಿಯಿದ್ದು, ಅರ್ಹ ಆಭ್ಯರ್ಥಿಗಳು ಆನ್​​​ಲೈನ್​ ಮೂಲಕ ನವೆಂಬರ್​ 18, 2019ರೊಳಗೆ ಅರ್ಜಿ ಸಲ್ಲಿಸಬೇಕಿದೆ.

ವಿದ್ಯಾರ್ಹತೆ:

ನಾವಿಕ ಹುದ್ದೆಗಾಗಿ ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳು ಎಸ್​​ಎಸ್​ಎಲ್​ಸಿ ಅಥವಾ ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಪಡೆದಿರಬೇಕಾಗಿರುತ್ತದೆ. ಮಾನ್ಯತೆ ಪಡೆದ ಸಂಸ್ಥೆಯಿಂದ ಹೊರಬಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ:

ಆಗಸ್ಟ್​1,2000 ರಿಂದ ಜುಲೈ 31,2003ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:

ಕಂಪ್ಯೂಟರ್​ ಆಧಾರಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.ವೇತನದ ವಿವರ:

ನಾವಿಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,700 ರಿಂದ 69,100 ರೂ. ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳು 215 ರೂ. ಆನ್​ಲೈನ್​ ಮೂಲಕ ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಶುಲ್ಕ ವಿನಾಯಿತಿ ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?:

ಭಾರತೀಯ ನೌಕಾಪಡೆಯ ಅಧಿಕೃತ ವೆಬ್​ಸೈಟ್​ಗೆ https://www.joinindiannavy.gov.in/ ಭೇಟಿ ನೀಡಿ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಇದನ್ನೂ ಓದಿ:Mi CC9 Pro: ಬಿಡುಗಡೆಯಾಯ್ತು 108 ಮೆಗಾಫಿಕ್ಸೆಲ್ ಕ್ಯಾಮೆರಾವಿರುವ ಶಿಯೋಮಿ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​

ಇದನ್ನೂ ಓದಿ: Mi CC9 Pro: ಬಿಡುಗಡೆಯಾಯ್ತು 108 ಮೆಗಾಫಿಕ್ಸೆಲ್ ಕ್ಯಾಮೆರಾವಿರುವ ಶಿಯೋಮಿ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​

ಇದನ್ನೂ ಓದಿ: ಎಚ್ಚರ! ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ಈ ಆ್ಯಪ್​ ಇದೆಯಾ? ಕೂಡಲೇ ಡಿಲೀಟ್​ ಮಾಡಿ

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ