ತಲೈವಿ ಸಿನಿಮಾಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ Kangana Ranaut: ಇಲ್ಲಿದೆ Weight Loss ಜರ್ನಿ

ನಟಿ ಕಂಗನಾ ರನೌತ್ ಅವರು ತಲೈವಿ ಸಿನಿಮಾಗಾಗಿ 6 ತಿಂಗಳಿನಲ್ಲಿ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ 6 ತಿಂಗಳ ಒಳಗೆ ಆ ತೂಕವನ್ನು ಇಳಿಸಿಕೊಂಡಿದ್ದರಂತೆ. ಈಗ ಈ ನಟಿ ತಮ್ಮ Weight Loss ಜರ್ನಿ ಕುರಿತಾಗಿ ಒಂದು ಪೋಸ್ಟ್​ ಮಾಡಿದ್ದು, ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್​ ನಟಿ ಕಂಗನಾ ರನೌತ್​

ಬಾಲಿವುಡ್​ ನಟಿ ಕಂಗನಾ ರನೌತ್​

  • Share this:
ಬಾಲಿವುಡ್​ ಕ್ವೀನ್​ ಕಂಗನಾ ರನೌತ್ ತಲೈವಿ ಸಿನಿಮಾದಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಗಣೇಶ ಹಬ್ಬದ ಅಂಗವಾಗಿ ತಲೈವಿ ಸಿನಿಮಾ ಎಲ್ಲೆಡೆ ತೆರೆ ಕಂಡಿತು. ಕಂಗನಾ ರನೌತ್ ಅವರು ತಲೈವಿ ಸಿನಿಮಾದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಕಂಗನಾ ರನೌತ್​ ಅವರು ಜಯಲಲಿತಾ ಅವರ ಪಾತ್ರದಲ್ಲಿ ರೊಕಾಯ ಪ್ರವೇಶ ಮಾಡಿದಂತೆ ನಟಿಸಿದ್ದು, ವಿಮರ್ಶಕರು ಹಾಗೂ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ಈ ಗ ತಲೈವಿ ಸಿನಿಮಾ ತಂಡ ತವೈಲಿ ಭಾಗ 2ಕ್ಕಾಗಿ ಪ್ಲಾನ್​ ಮಾಡುತ್ತಿದೆ. ಹೌದು, ಜಯಲಲಿತಾ ಅವರ ಜೀವನವನ್ನು ಒಂದು ಸಿನಿಮಾದಲ್ಲಿ ತೋರಿಸಲಾಗುವುದಿಲ್ಲ. ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರದ ಜರ್ನಿಯನ್ನು ಎರಡನೇ ಭಾಗದಲ್ಲಿ ತೋರಿಸುವ ಪ್ರಯತ್ನದಲ್ಲಿದ್ದಾರಂತೆ ಚಿತ್ರತಂಡ. 

ಇನ್ನು ಇತ್ತೀಚೆಗಷ್ಟೆ ನೆಟ್​ಫ್ಲಿಕ್ಸ್​ನಲ್ಲಿ ತಲೈವಿ ಸಿನಿಮಾ ರಿಲೀಸ್ ಆಗಿದೆ. ಹೀಗಿರುವಾಗಲೇ  ನಟಿ ಕಂಗನಾ ರನೌತ್ ಅವರು ತಲೈವಿ ಸಿನಿಮಾಗಾಗಿ 6 ತಿಂಗಳಿನಲ್ಲಿ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ 6 ತಿಂಗಳ ಒಳಗೆ ಆ ತೂಕವನ್ನು ಇಳಿಸಿಕೊಂಡಿದ್ದ ಕುರಿತಾಗಿ ಒಂದು ಪೋಸ್ಟ್​ ಮಾಡಿದ್ದಾರೆ. ತಮ್ಮ Weight Loss ಜರ್ನಿ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಂಗನಾ ಮಾಡಿರುವ ಇನ್​ಸ್ಟಾಗ್ರಾಂ ಪೋಸ್ಟ್​ ಲಿಂಕ್​.....
ಹೌದು, ಕಂಗನಾ ರನೌತ್, ನಟಿ ಹಾಗೂ ರಾಜಕಾರಣಿಯಾಗಿದ್ದ ಜಯಲಲಿತಾ ಅವರ ಪಾತ್ರಕ್ಕಾಗಿ 6 ತಿಂಗಳಿನಲ್ಲಿ 20 ಕೆಜಿ. ತೂಕ ಹೆಚ್ಚಿಸಿಕೊಂಡು ಮತ್ತೆ 6 ತಿಂಗಳ ಒಳಗೆ ಹೆಚ್ಚಿಸಿಕೊಂಡಿದ್ದ ತೂಕವನ್ನು ಇಳಿಸಿಕೊಂಡಿದ್ದರಂತೆ. ಇದರಿಂದಾಗಿ ಅವರ ದೇಹದ ಮೇಲೆ ಆದ ಪರಿಣಾಮಗಳ ಬಗ್ಗೆಯೂ ಕಂಗನಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಖತ್​ ಸ್ಟೈಲ್​ನಲ್ಲಿ ಕತ್ತೆಕಿರುಬಗಳ ಜೊತೆ ಏಕಾಂಗಿ ಹೋರಾಟ: ಕೋರ್ಟ್​ನಿಂದ ಬಂದ ನಂತರ Kangana ಹೇಳಿದ ಡೈಲಾಗ್ ಇದು​..!

ಮೂವತ್ತರ ಗಡಿ ದಾಟಿರುವ ಕಂಗನಾ ರನೌತ್ ಅವರಿಗೆ ಈ ವಯಸ್ಸಿನಲ್ಲಿ ಸಿನಿಮಾದ ಪಾತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡು ಇಳಿಸಿಕೊಳ್ಳುವುದು ದೊಡ್ಡ ಸಾವಾಲಾಗಿತ್ತಂತೆ. ಅವರ ದೇಹದ ಮೇಲೆ ಶಾಶ್ವತವಾದ ಸ್ಟ್ರೆಚ್ ಮಾರ್ಕ್ಸ್​ ಆಗಿದೆಯಂತೆ. ಆದರೆ ಕೆಲ ಅನ್ನೋದು ಜೀವನದಿಂದ ಏನನ್ನಾದರೂ ಕೇಳುತ್ತದೆ. ಕಲೆಗಾಗಿ ಏನು ಬೇಕಾದರೂ ಮಾಡಬೇಕಾಗುತ್ತದೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಧಾಕಡ್​ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡ ನಂತರ ಕಂಗನಾ ರನೌತ್​ ಅವರ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ತೇಜಸ್. ಈ ಚಿತ್ರದ​ ಚಿತ್ರೀಕರಣ ಇನ್ನೇನು ಆರಂಭವಾಗಲಿದೆ. ಈ ಕುರಿತಾಗಿ ಕಂಗನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Javed Akhtar ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ Kangana Ranaut

ಇತ್ತೀಚೆಗಷ್ಟೆ ಕಂಗನಾ ಅವರು ಚಿತ್ರಸಾಹಿತಿ ಜಾವೇದ್ ಅಖ್ತರ್​ ಅವರು ಹೂಡಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೆಂದು ಕೋರ್ಟ್​ ಮುಂದೆ ಹಾಜರಾಗಿದ್ದರು. ನಂತರ ತಮಗೆ ಈ ನ್ಯಾಯಾಲಯದ ಮೇಲೆ ನಂಬಿಕೆ ಹೋಗಿದೆ. ಹೀಗಾಗಿಯೇ ಈ ಪ್ರಕರಣವನ್ನು ಬೇರೆ ಕೋರ್ಟ್​ಗೆ ವರ್ಗಾವಣೇ ಮಾಡಿಕೊಡುವಂತೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಸಖತ್ ಸ್ಟೈಲಿಶ್​ ಲುಕ್​ನಲ್ಲಿ ಕೋರ್ಟ್​ ಮೆಟ್ಟಿಲೇರಿ ಬಂದ ನಂತರ ಕಂಗನಾ, ತಮ್ಮ ಕೆಲವು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಜೊತಗೆ ಒಂದಿಷ್ಟು ಸಾಲುಗಳನ್ನು ಬರೆದುಕೊಂಡಿದ್ದರು.

ನಿಮ್ಮನ್ನು ಯಾರಿಗೆ ಬೆಳೆಸಲು ಸಾಧ್ಯವಿಲ್ಲವೋ, ಅವರಿಗೆ ನಿಮ್ಮನ್ನು ನಾಶ ಮಾಡಲೂ ಸಾಧ್ಯವಿಲ್ಲ. ಜಾವೇದ್ ಅಖ್ತರ್ ಅವರು ಶಿವಸೇನೆಯ ಒತ್ತಡಕ್ಕೆ ಮಣಿದು ತನ್ನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದೂ ಕಂಗನಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
Published by:Anitha E
First published: