ಅಜ್ಜಿಯ ಸೂತ್ರಗಳೇ ಈ 'ಕಾಮಸೂತ್ರ'ಕ್ಕೆ ಜೀವಾಳ​..!

news18
Updated:August 11, 2018, 4:42 PM IST
ಅಜ್ಜಿಯ ಸೂತ್ರಗಳೇ ಈ 'ಕಾಮಸೂತ್ರ'ಕ್ಕೆ ಜೀವಾಳ​..!
news18
Updated: August 11, 2018, 4:42 PM IST
ನ್ಯೂಸ್​ 18 ಕನ್ನಡ 

'ಕಾಮಸೂತ್ರ' ಎಂದೊಡಣೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ದೇಶ ಎಷ್ಟೇ ಮುಂದುವರೆದರೂ ಈ ಪದವನ್ನು ಮಾತ್ರ ಬಹುತೇಕ ಮಂದಿ ಸಾರ್ವಜನಿಕವಾಗಿ ಬಳಸುವುದೇ ಇಲ್ಲ.  ಆದರೆ ಇಲ್ಲೊಬ್ಬರು ನಟಿ ಕಾಮಸೂತ್ರ ಎನ್ನುವ ರೆಸ್ಟೊರೆಂಟ್​ ಅನ್ನು ನಡೆಸುತ್ತಿದ್ದಾರೆ. ಆದರೆ ಇದರ ವಿಶೇಷತೆ ಏನು? ಎಲ್ಲಿದೆ? ಯಾರು ಆ ನಟಿ ಎಂದೆಲ್ಲ ತಿಳಿಯೋಕೆ ಈ ವರದಿ ಓದಿ.

ಬಾಲಿವುಡ್​ ನಟಿ ಜಾಕ್ಲೀನ್ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೀಳಕಾಯ ಸುಂದರಿ ಜಾಕ್ಲೀನ್​ಗೆ ಅಡುಗೆ ಮಾಡುವುದು ಒಂದು ರೀತಿಯ ಥೆರಪಿ ಇದ್ದಂತೆಯಂತೆ. ಅದಕ್ಕೆ ಅವರು ಸಮಯ ಸಿಕ್ಕಾಗಲೆಲ್ಲ ಮನೆಯಲ್ಲಿ ಅಡುಗೆ ಮಾಡುತ್ತಾರೆ. ಈ ಅಡುಗೆ ಮೇಲಿನ ಪ್ರೀತಿ ಇಷ್ಟಕ್ಕೆ ಕೊನೆಗೊಂಡಿಲ್ಲ. ಇದರ ಮುಂದುವರೆದ ಭಾಗವೇ ರೆಸ್ಟೊರೆಂಟ್​. ಅದು ಸಹ ತುಂಬಾ ವಿಶೇಷತೆಯಿಂದ ಕೂಡಿದೆ.

ಬಹು ಜನಾಂಗಕ್ಕೆ ಸೇರಿದ ಕುಟುಂಬದಿಂದ ಬಂದಿರುವ ನಟಿ ಜಾಕ್ಲೀನ್​ ಶ್ರೀಲಂಕಾದಲ್ಲಿ ಒಂದು ರೆಸ್ಟೋರೆಂಟ್​ ನಡೆಸುತ್ತಿದ್ದು, ಅದರ ಹೆಸರು ಕಾಮಸೂತ್ರ ಎಂದು ಇಟ್ಟಿದ್ದಾರಂತೆ. ಅದರ ವಿಶೇಷತೆ ಎಂದರೆ ಅಲ್ಲಿ ಅವರ ಅಜ್ಜಿ ಮಾಡುತ್ತಿದ್ದ ಅಡುಗೆಯ ರೆಸಿಪಿಯನ್ನೇ ಬಳಸಿ ಸಾಕಷ್ಟು ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ.

ಮಾಸ್​ ಕಮ್ಯುನಿಕೇಷನ್ ಮುಗಿಸಿದ ನಂತರ ಜಾಕ್ಲೀನ್​ ಕೆಲ ಸಮಯ ಶ್ರೀಲಂಕಾದಲ್ಲಿ ಟಿವಿ ವರದಿಗಾರ್ತಿಯಾಗಿ ಕೆಲಸ ಮಾಡಿದ್ದರು. ನಂತರ ಮಾಡೆಲಿಂಗ್​ ರಂಗದತ್ತ ಹೆಜ್ಜೆ ಹಾಕಿದ ಅವರು, 2006ರಲ್ಲಿ ಮಿಸ್​ ಶ್ರೀಲಂಕಾ ಯೂನಿವರ್ಸ್​ ಕಿರೀಟವನ್ನು ತನ್ನದಾಗಿಸಿಕೊಂಡು ಸಿನಿಮಾ ಕ್ಷೇತ್ರದತ್ತ ಹೊರಳಿದರು.

ಬಾಲಿವುಡ್​ಗೆ ಎಂಟ್ರಿ ಪಡೆಯುತ್ತಲೇ ಜಾಕ್ಲೀನ್​ ಹೆಸರು ಸಾಜಿದ್​ ಖಾನ್​ ಜತೆ ತಳುಕು ಹಾಕಿಕೊಂಡಿತ್ತು. ಆದರೆ ಈಗ ಅವರಿಬ್ಬರ ನಡೆಯೂ ಬ್ರೇಕ್​ಅಪ್​ ಆಗಿದೆ. ಸದ್ಯ ಜಾಕ್ಲೀನ್​ ಸಿನಿಮಾ ಹಾಗೂ ಹೋಟೆಲ್​ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಭವಿಷ್ಯದಲ್ಲಿ ಸಾವಯವ ಆಹಾರ ಹಾಗೂ ಫಿಟ್​ನೆಸ್​ ಕುರಿತಂತೆ ಸಾಕ್ಷ್ಯಚಿತ್ರ ಮಾಡುವ ಆಸೆಯಿದೆಯಂತೆ ಜಾಕ್ಲೀನ್​ ಅವರಿಗೆ. ಶ್ರೀಲಂಕಾಗೆ ಹೋದರೆ, ಈ ರೆಸ್ಟೊರೆಂಟ್​ಗೆ ​ ಭೇಟಿ ನೀಡಿ.
Loading...

 
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ