• Home
  • »
  • News
  • »
  • lifestyle
  • »
  • Gulbarga Fort: ಗುಲ್ಬರ್ಗಾ ಕೋಟೆಯಲ್ಲಿದೆ ವಿಭಿನ್ನ ಮಸೀದಿ! ವಾರಂಗಲ್‌ ರಾಜರಿಂದ ಬಹಮನಿ ಸುಲ್ತಾನರ ಇತಿಹಾಸ ಕಲ್ಲು ಕಲ್ಲಿನಲ್ಲಿದೆ!

Gulbarga Fort: ಗುಲ್ಬರ್ಗಾ ಕೋಟೆಯಲ್ಲಿದೆ ವಿಭಿನ್ನ ಮಸೀದಿ! ವಾರಂಗಲ್‌ ರಾಜರಿಂದ ಬಹಮನಿ ಸುಲ್ತಾನರ ಇತಿಹಾಸ ಕಲ್ಲು ಕಲ್ಲಿನಲ್ಲಿದೆ!

ಸಾಂದರ್ಭಿಕ ಕೋಟೆ

ಸಾಂದರ್ಭಿಕ ಕೋಟೆ

Gulbarga Fort History: ಈ ಕೋಟೆಯಲ್ಲಿ 14 ಮತ್ತು 16 ನೇ ಶತಮಾನದ ನಡುವೆ ಕಲಬುರಗಿಯಲ್ಲಿ ಬಹಮನಿ ಸುಲ್ತಾನರು ಸುದೀರ್ಘ ಆಡಳಿತವನ್ನು ನಡೆಸಿದ್ದರು. ಅಲ್ಲದೇ, ಈ ಕಲಬುರಗಿ ಕೋಟೆಯು ರಾಷ್ಟ್ರಕೂಟರು, ಚಾಲುಕ್ಯರು, ಕಲ್ಯಾಣಿಯ ಕಲಚೂರಿಗಳು, ದೇವಗಿರಿಯ ಯಾದವರು, ವಿಜಯನಗರ ಸಾಮ್ರಾಜ್ಯ, ಹೊಯ್ಸಳ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು.  

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಕಲಬುರಗಿ (Kalaburagi) ಎಂದರೆ ಜನರಿಗೆ ಹೆಚ್ಚಾಗಿ ನೆನಪಾಗುವುದು ಬಿರು ಬಿಸಿಲು. ಸಾಮಾನ್ಯವಾಗಿ ಅಲ್ಲಿ ಕರ್ನಾಟಕ (Karnataka) ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಬಿಸಿಲು (Sun) ಜಾಸ್ತಿ ಎನ್ನಬಹುದು. ಆದರೂ ಸಹ, ಜನ ಬೇಸಿಗೆಯಲ್ಲಿಯೇ (Summer)  ಇಲ್ಲಿಗೆ ಅನೇಕ ಜನರು ಟ್ರಿಪ್​ಗೆ ಹೋಗುತ್ತಾರೆ. ಇನ್ನೂ ಕೆಲವರು ಮಳೆಗಾಲದ, ಚಳಿಗಾಲದಲ್ಲಿ ಸಹ ಟ್ರಿಪ್ ಹೋಗುತ್ತಾರೆ. ಕಲಬುರಗಿಗೆ ಹೋದಾಗ ನಾವು ನೋಡಲು ಹಲವಾರು ಸ್ಥಳಗಳಿವೆ. ಆದರೂ ಸಹ ಒಂದು ಸ್ಥಳವನ್ನು ನಾವು ಮಿಸ್ ಮಾಡಲೇ ಬಾರದು ಎಂದು ಹೇಳಲಾಗುತ್ತದೆ. ಆದು, ಕಲಬುರಗಿ ಕೋಟೆ. ಹೌದು, ಇತಿಹಾಸದ (History) ಕಥೆ ಹೇಳುವ ಈ ಕೋಟೆಯ ಕಥೆ ಇಲ್ಲಿದೆ.  


ಕಲಬುರಗಿ ಕೋಟೆಯನ್ನು ಮೂಲತಃ ವಾರಂಗಲ್ ರಾಜ ಗುಲ್ಚಂದ್ ನಿರ್ಮಿಸಿದ ಎನ್ನಲಾಗುತ್ತದೆ. ನಂತರ ಅದನ್ನು ಅಲಾ-ಉದ್-ದಿನ್ ಬಹಮನ್ ‌ಷಾ ಮತ್ತೆ ನವೀಕರಿಸಿದ ಎನ್ನುವ ಮಾಹಿತಿ ಇದೆ. ಕಲಬುರಗಿ ಕೋಟೆಯು 20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಅದರ ಹೊರಗಿನ ಗೋಡೆಗಳು 3 ಕಿ.ಮೀ. ಉದ್ದವಿದೆ.


ಈ ಕೋಟೆಯನ್ನು ವಿಜಯನಗರದ ಆಳ್ವಿಕೆಯಲ್ಲಿ ನಾಶ ಮಾಡಲಾಗಿತ್ತು ಎಂದು ಸಹ ಹೆಳಲಾಗುತ್ತದೆ. ಈ ಸಮಯದಲ್ಲಿ ಕೋಟೆಯ ಬಹುಭಾಗ ನಾಶವಾಗಿತ್ತಂತೆ. ಅಲ್ಲದೇ, ಆದಿಲ್ ಶಾಹಿಗಳು ವಿಜಯನಗರ ಸಾಮ್ರಾಟರನ್ನು ಯುದ್ಧದಲ್ಲಿ ಸೋಲಿಸಿ ಹಣ ಸಂಗ್ರಹಿಸಿ ಕೋಟೆಯನ್ನು ಮರು ನಿರ್ಮಾಣ ಮಾಡಿದನಂತೆ.


ಈ ಕೋಟೆಯಲ್ಲಿ 14 ಮತ್ತು 16 ನೇ ಶತಮಾನದ ನಡುವೆ ಕಲಬುರಗಿಯಲ್ಲಿ ಬಹಮನಿ ಸುಲ್ತಾನರು ಸುದೀರ್ಘ ಆಡಳಿತವನ್ನು ನಡೆಸಿದ್ದರು. ಅಲ್ಲದೇ, ಈ ಕಲಬುರಗಿ ಕೋಟೆಯು ರಾಷ್ಟ್ರಕೂಟರು, ಚಾಲುಕ್ಯರು, ಕಲ್ಯಾಣಿಯ ಕಲಚೂರಿಗಳು, ದೇವಗಿರಿಯ ಯಾದವರು, ವಿಜಯನಗರ ಸಾಮ್ರಾಜ್ಯ, ಹೊಯ್ಸಳ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು.


ಕೋಟೆ ನಿರ್ಮಾಣವಾದ ಸಮಯದಲ್ಲಿ ಇದರ ಒಳಗೆ ಮಸೀದಿ ಇರಲಿಲ್ಲ. ಕೋಟೆಯ ಒಳಗೆ, 1367 ನಂತರ,ಜಾಮಾ ಮಸೀದಿ ನಿರ್ಮಾಣ ಮಾಡಲಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಈ ಕೋಟೆಯ ವಾಸ್ತುಶಿಲ್ಪ ಪರ್ಷಿಯನ್ ಶೈಲಿಯಲ್ಲಿ ಇದ್ದು, ಸುಂದರ ಗುಮ್ಮಟಗಳು ಮತ್ತು ಕಮಾನಿಗಳು ಇಲ್ಲಿ ಮುಖ್ಯ ಆರ್ಕಷಣೆ ಎನ್ನಬಹುದು.   ಈ ಕೋಟೆಯ ಒಳಗೆ ಇರುವ ಮಸೀದಿ ಭಾರತದ ಇತರ ಮಸೀದಿಗಳಿಗಿಂತ ಭಿನ್ನವಾಗಿದೆ.


ಇದು 1327 ಮತ್ತು 1424 ನಡುವೆ ಗುಲ್ಬರ್ಗಾ ಕೋಟೆಯು ಬಹಮನಿ ಸಾಮ್ರಾಜ್ಯ ಸಾಮ್ರಾಜ್ಯಗಳ ಆಳ್ವಿಕೆಯ ನೆನಪಿಗಾಗಿ ನಿರ್ಮಾಣ ಮಾಡಲಾಗಿದೆ. ಈ ಮಸೀದಿಯು ದಕ್ಷಿಣ ಭಾರತದಲ್ಲಿ ನಿರ್ಮಿಸಲಾದ ಮೊದಲ ಮಸೀದಿಗಳಲ್ಲಿ ಒಂದು. ಈ ಮಸೀದಿಯ ವಾಸ್ತುಶಿಲ್ಪ ಮೊರೀಶ್​ ಶೈಲಿಯದ್ದಾಗಿದ್ದು, ಬಹಳ ವಿಭಿನ್ನವಾಗಿದೆ.


ಇದನ್ನೂ ಓದಿ: 48 ಆದರೂ ಪಡ್ಡೆ ಹುಡುಗರ ಕನಸಲ್ಲಿ ಬರ್ತಾಳೆ ಚೈಯಾ ಚೈಯಾ ಬೆಡಗಿ! ಮಲೈಕಾ ಅರೋರಾ ತರ ಯಂಗ್ ಕಾಣೋಕೆ ಇಲ್ಲಿದೆ ಟಿಪ್ಸ್


ಇನ್ನು ಗುಲ್ಬರ್ಗವನ್ನು ಸರ್ಕಾರ ಕಲಬುರಗಿ ಎಂದು ಹೆಸರು ಬದಲಾಯಿಸಿದ್ದರೂ ಸಹ , ಜನ ಈ ಕೋಟೆಯನ್ನು ಗುಲ್ಬರ್ಗಾ ಕೋಟೆ ಎಂದೇ ಕರೆಯುತ್ತಾರೆ.


ಈ ಕೋಟೆಯಲ್ಲಿ ಏನೆಲ್ಲಾ ನೋಡಬಹುದು?


ವಾಚ್ ಟವರ್‌ಗಳು


ವಿಶ್ವದ ಅತಿ ಉದ್ದದ ಫಿರಂಗಿ,


ಪಂಚಲೋಹಗಳಿಂದ ಮಾಡಿದ ಬಾರಾ ಗಾಜಿ ಟೋಫ್ ಸೇರಿದಂತೆ 26 ಫಿರಂಗಿಗಳು


ಜಾಮಿಯಾ ಮಸೀದಿ- ಭಾರತದ ವಿನೂತನ ಮತ್ತು ಅತಿದೊಡ್ಡ ಮಸೀದಿ.




ಖಾಜಾ ಬಂಡೆ ನವಾಜ್ ಸಮಾಧಿ


ಇದನ್ನೂ ಓದಿ: ಬೆಂಗಳೂರಲ್ಲೇ ಕುಳಿತು ಕೇರಳ ಫುಡ್ ತಿನ್ಬೇಕಾ? ಹಾಗಿದ್ರೆ ಈ ರೆಸ್ಟೊರೆಂಟ್​ಗಳಿಗೆ ಹೋಗಿ


ಈ ಕೋಟೆಗೆ ಹೋಗುವುದು ಹೇಗೆ?


ಕಲಬುರಗಿ ಕೋಟೆ ಬೆಂಗಳೂರಿನಿಂದ 575 ಕಿ.ಮೀ ದೂರದಲ್ಲಿದ್ದು, ಕಲಬುರಗಿ ವಿಮಾನ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿದೆ, ವಾರದಲ್ಲಿ 3 ಬಾರಿ ಬೆಂಗಳೂರಿನಿಂದ ವಿಮಾನ ಲಭ್ಯವಿದ್ದು, ಕಲಬುರಗಿಯಿಂದ 110 ಕಿ.ಮೀ ದೂರದಲ್ಲಿ ಮತ್ತೊಂದು ಬೀದರ್ ವಿಮಾನ ನಿಲ್ದಾಣ ಸಹ ಇದೆ. ಅಲ್ಲದೇ, ನಿಮಗೆ ಕಲಬುರಗಿಗೆ ರೈಲು ಹಾಗೂ ಬಸ್​ಗಳ ಸಂಪರ್ಕ ಬೆಂಗಳೂರಿನಿಂದ ಬಹಳಷ್ಟಿದ್ದು, ನಗರದಿಂದ ನಿಮಗೆ ಆಟೋ ಹಾಗೂ ಕ್ಯಾಬ್​ಗಳು ಸಿಗುತ್ತದೆ.

Published by:Sandhya M
First published: