ಬ್ಲ್ಯಾಕ್ ಅಂಡ್ ಬ್ಯೂಟಿಫುಲ್​ ಲುಕ್​​ನಲ್ಲಿ ನಟಿ ಕಾಜೋಲ್ ಮಿಂಚಿಂಗ್

news18
Updated:July 2, 2018, 6:23 PM IST
ಬ್ಲ್ಯಾಕ್ ಅಂಡ್ ಬ್ಯೂಟಿಫುಲ್​ ಲುಕ್​​ನಲ್ಲಿ ನಟಿ ಕಾಜೋಲ್ ಮಿಂಚಿಂಗ್
news18
Updated: July 2, 2018, 6:23 PM IST
-ನ್ಯೂಸ್ 18 ಕನ್ನಡ

ಇತ್ತೀಚೆಗಷ್ಟೇ ಮುಂಬೈನ ಫಿನಿಕ್ಸ್ ಮಾಲ್​ಗೆ ಭೇಟಿಕೊಟ್ಟ ಬಾಲಿವುಡ್​ ನಟಿ ಕಾಜೋಲ್ ಅವರ​ ವಿಡಿಯೋ ಒಂದು ವೈರಲ್ ಆಗಿತ್ತು. ಮಾಲ್​ನಲ್ಲಿ ಕೃಷ್ಣ ಸುಂದರಿ ಕಾಜೋಲ್ ಸುತ್ತಲೂ ಜನಜಂಗಳಿ, ಅಭಿಮಾನಿಗಳು ಕಿಕ್ಕಿರಿದಿದ್ದರು. ಜನದಟ್ಟಣೆ ಹೆಚ್ಚಾಗುತ್ತಿದಂತೆ ಮಾಲ್​ನಿಂದ ದಿಢೀರಣೆ ಹೊರಟ ಕಾಜೋಲ್ ಹೈ ಹೀಲ್ಸ್​ ಚಪ್ಪಲಿ ಧರಿಸಿರುವುದು ಮೆರೆತಿದ್ದರು. ಅಲ್ಲದೆ ವೇಗವಾಗಿ ನಡೆಯಲು ಪ್ರಯತ್ನಿಸಿದ ದಿಲ್ವಾಲೆ ನಟಿ ಎಡವಿ ಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದ್ದರಿಂದ ಬಾಲಿವುಡ್ ನಟಿ ಅಪಹಾಸ್ಯಕ್ಕೀಡಾಗಿದ್ದರು.

ಕೆಲ ದಿನಗಳ ಹಿಂದೆ ಆಯ'ತಪ್ಪಿ'ನಿಂದ ಸುದ್ದಿಯಾಗಿದ್ದ ನಟಿ ಕಾಜೋಲ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿದ್ದು ಮಾತ್ರ ತಮ್ಮ ಸ್ಟೈಲಿಸ್ಟ್ ಲುಕ್​ನಿಂದ ಎಂಬುದು ವಿಶೇಷ. 'ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ' ಅಥವಾ 'ಕಭಿ ಖುಷಿ ಕಭಿ ಗಮ್' ಚಿತ್ರಗಳಲ್ಲಿ ಸೀರೆಯಲ್ಲಿ ಅಭಿಮಾನಿಗಳಿಗೆ ಮೋಡಿ ಮಾಡಿದ್ದ ಕಾಜೋಲ್​ ಅವರ ಇತ್ತೀಚಿಗೆ ಧರಿಸಿದ ಉಡುಗೆಗಳ ಫೋಟೋಗಳು ವೈರಲ್ ಆಗುತ್ತಿದೆ. ಸಿಂಪಲ್ ಅ್ಯಂಡ್ ಬ್ಯೂಟಿಫುಲ್ ಲುಕ್​ನಲ್ಲಿ ಕಾಣಿಸಿಕೊಳ್ಳುವ ಕಾಜೋಲ್ ಈ ಬಾರಿ ಕೂಡ ಬ್ಲ್ಯಾಕ್ ಲುಕ್​ನಿಂದ ವಸ್ತ್ರ ಪ್ರಿಯರ ಮನಗೆದ್ದಿದ್ದಾರೆ.
A post shared by Kajol Devgan (@kajol) on


Loading...'ಇಕನಾಮಿಕ್ ಟೈಮ್ಸ್​ ಆವಾರ್ಡ್'​ ಕಾರ್ಯಕ್ರಮಕ್ಕೆ ನಟಿ ಕಾಜೋಲ್ ಕಪ್ಪು ಬಣ್ಣದ ಗೌನ್ ಧರಿಸಿ ಆಗಮಿಸಿದ್ದರು. ಖ್ಯಾತ ವಸ್ತ್ರ ವಿನ್ಯಾಸಕ ಗೌರವ್ ಗುಪ್ತಾ ಡಿಸೈನ್ ಮಾಡಿದ್ದ ಈ ಉಡುಗೆಯಲ್ಲಿ ಕಾಜೋಲ್  ಕಪ್ಪು ಮುತ್ತಿನಂತೆ ಮಿಂಚುತ್ತಿದ್ದರು. ಈ ಡ್ರೆಸ್​ಗೆ ಮ್ಯಾಚಿಂಗ್ ಆಗುವಂತೆ ಕೂದಲನ್ನು ಸರಳವಾಗಿರಿಸಿದ್ದ ಕಾಜೋಲ್ ಅವರ ಕಣ್ಣುಗಳು ಕಾಜಲ್​ನಿಂದ ಕಂಗೊಳಿಸುತಿತ್ತು. ಅಷ್ಟೇ ಅಲ್ಲದೆ ಈ ಬಾರಿ ಕೂಡ ಹೈ ಹೀಲ್ಸ್ ಚಪ್ಪಲಿ ಧರಿಸಿ ಬಂದಿದ್ದು ವಿಶೇಷವಾಗಿತ್ತು.A post shared by Kajol Devgan (@kajol) on

ಗೌನ್​ನಲ್ಲಿ ಸುಂದರಿಯಾಗಿ ಕಾಣಿಸುವ ಕಾಜೋಲ್ ಮಾದಕತೆ ಮೆರೆಯುವುದು ಮಾತ್ರ ಸೀರೆ ಲುಕ್​ನಲ್ಲಿ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಇದೇ ಕಾರಣಕ್ಕೆ ಕಾಜೋಲ್​ ಅಭಿನಯಿಸುವ ಹೆಚ್ಚಿನ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡುವುದು ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ. ಅದರಲ್ಲೂ ಕಾಜೋಲ್​ ಅಭಿಯಿಸುವ ಚಿತ್ರಗೀತೆಗಳಿಗಾಗಿ ವಿಶೇಷ ಸೀರೆಯನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸುತ್ತಾರೆ ಎಂಬ ಮಾತೊಂದು ಬಿಟೌನ್​ನಲ್ಲಿದೆ. ​A post shared by Kajol Devgan (@kajol) on

ಇದಕ್ಕೆ ಉತ್ತಮ ಉದಾಹರಣೆ ಸುರಜ್ ಹುವಾ ಮಧಮ್...ಗೀತೆ. 'ಕಭಿ ಖುಷಿ ಕಭಿ ಗಮ್' ಚಿತ್ರದ ಈ ಸಾಂಗ್​ನಲ್ಲಿ ಕಾಜೋಲ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ ಸೀರೆಯಲ್ಲಿ ಮಾದಕ ಮೈಮಾಟದಿಂದ ಅಭಿಮಾನಿಗಳ ನಿದ್ದೆಗೆಡಿಸಿದ್ದರು.

ಬಾಲಿವುಡ್ ಎಂಬ ಬಣ್ಣದಲೋಕದಲ್ಲಿ ನಟಿ ಕಾಜೋಲ್ ಧರಿಸುವ ಉಡುಪಿನ ವಿನ್ಯಾಸಗಳು ಎಲ್ಲಾ ವರ್ಗದ ಫ್ಯಾಷನ್ ಪ್ರಿಯರ ಮನಗೆಲ್ಲುತ್ತದೆ. ಇದು ಕೂಡ ಅವರು ವಸ್ತ್ರದ ಡಿಸೈನಿಂಗ್ ಮೇಲೆ ಇರಿಸುವ ಕಾಳಜಿಯನ್ನು ತೋರಿಸುತ್ತದೆ.

ಅಂದಹಾಗೆ ನೀವು ಕಾಜೋಲ್ ಮತ್ತು ಶಾರೂಖ್ ಖಾನ್ ಜೋಡಿಯನ್ನು ತೆರೆ ಮೇಲೆ ಮಿಸ್ ಮಾಡಿಕೊಳ್ಳುತ್ತಿದ್ದರೆ ಒಂದು ಶುಭ ಸುದ್ದಿಯಿದೆ. ಶಾರೂಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಝಿರೋ' ಚಿತ್ರದದಲ್ಲಿ ಕಾಜೋಲ್ ಕೂಡ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಆ ಪಾತ್ರದಲ್ಲೂ ಕಾಜೋಲ್ ಸೀರೆಯಲ್ಲಿ ಕಾಣಿಸಲಿ ಎಂಬುದು ಮಾತ್ರ ಅಭಿಮಾನಿಗಳ ಅಂಬೋಣ.A post shared by Kajol Devgan (@kajol) on
First published:July 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...