• Home
  • »
  • News
  • »
  • lifestyle
  • »
  • Kajal Aggarwal: ಹೆರಿಗೆ ನಂತರ ದೇಹದಲ್ಲಾದ ಬದಲಾವಣೆ ಹೇಗೆ ಸ್ವೀಕರಿಸಬೇಕು? ಕಾಜಲ್ ಅಗರ್‌ವಾಲ್ ನೀಡಿದ್ದಾರೆ ಸಲಹೆ

Kajal Aggarwal: ಹೆರಿಗೆ ನಂತರ ದೇಹದಲ್ಲಾದ ಬದಲಾವಣೆ ಹೇಗೆ ಸ್ವೀಕರಿಸಬೇಕು? ಕಾಜಲ್ ಅಗರ್‌ವಾಲ್ ನೀಡಿದ್ದಾರೆ ಸಲಹೆ

ಕಾಜಲ್ ಅಗರ್‌ವಾಲ್

ಕಾಜಲ್ ಅಗರ್‌ವಾಲ್

ಹೆರಿಗೆಯ ನಂತರ ತಾಯಿ ತನ್ನ ದೇಹ ಹಾಗೂ ಆರೋಗ್ಯದ ಕಡೆಗೆ ಕಡಿಮೆ ಗಮನ ನೀಡುತ್ತಾಳೆ. ಇದಕ್ಕೆ ಕಾರಣ ತನ್ನ ಮಗುವಿನ ಸಂಪೂರ್ಣ ಕಾಳಜಿಯತ್ತ ಆಕೆಯ ಗಮನವಿರುತ್ತದೆ. ನಿಮ್ಮನ್ನು ನಿಮ್ಮಂತೆಯೇ ಸ್ವೀಕರಿಸಿ ಎಂದು ಕಾಜಲ್ ಕಿವಿಮಾಡು ನೀಡಿದ್ದಾರೆ.

  • Share this:

ಸೂಪರ್ ಸ್ಟಾರ್ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ತಾಯ್ತನದ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಏಪ್ರಿಲ್‌ನಲ್ಲಿ ತಮ್ಮ ಪುತ್ರ ನೀಲ್ ಅನ್ನು ಬರಮಾಡಿಕೊಂಡ ಕಾಜಲ್ ಮಾತೃತ್ವ ಹಾಗೂ ಕೆಲಸ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ (Advertisement) ಕಾಣಿಸಿಕೊಂಡು ಮಗುವಿನ ಲಾಲನೆ ಪಾಲನೆಗಳಲ್ಲೂ ತಮ್ಮ ಇರುವಿಕೆಯನ್ನು ಖಾತ್ರಿಪಡಿಸಿಕೊಂಡು ಕಾಜಲ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ನಟಿ ತಮ್ಮ ಮುಂಬರುವ ಚಿತ್ರದ ಭಾಗವಾಗಿ ಕುದುರೆ ಸವಾರಿಯನ್ನು (Horse Riding) ಕಲಿಯುತ್ತಿರುವ ದೃಶ್ಯ ತುಣುಗಳನ್ನು ಹಂಚಿಕೊಂಡಿದ್ದು, ಇಂಡಿಯನ್ 2 ಚಿತ್ರದ ಶೂಟಿಂಗ್‌ಗೆ ಮರಳಿರುವುದನ್ನು ಖಚಿತಪಡಿಸಿದ್ದಾರೆ ಕಮಲ್ ಹಾಸನ್ ನೇತೃತ್ವದಲ್ಲಿ ಮೂಡಿಬರುತ್ತಿರುವ ಇಂಡಿಯನ್ 2 ಗಾಗಿ (Indian 2) ಕಾಜಲ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ.


ಮೊದಲಿನಿಂದ ಆರಂಭ ಎಂಬ ಅನಿಸಿಕೆ
ಹೆಚ್ಚಿನ ಉತ್ಸಾಹ ಮತ್ತು ಉತ್ಸುಕತೆಯಿಂದಲೇ ನಾಲ್ಕು ತಿಂಗಳ ನಂತರ ಸಿನಿಮಾ ರಂಗಕ್ಕೆ ಮರಳುತ್ತಿದ್ದೇನೆ. ಹೆರಿಗೆಯ ನಂತರ ತಾಯಿ ತನ್ನ ದೇಹ ಹಾಗೂ ಆರೋಗ್ಯದ ಕಡೆಗೆ ಕಡಿಮೆ ಗಮನ ನೀಡುತ್ತಾಳೆ ಇದಕ್ಕೆ ಕಾರಣ ತನ್ನ ಮಗುವಿನ ಸಂಪೂರ್ಣ ಕಾಳಜಿಯತ್ತ ಆಕೆಯ ಗಮನವಿರುತ್ತದೆ. ನಿಮ್ಮನ್ನು ನಿಮ್ಮಂತೆಯೇ ಸ್ವೀಕರಿಸಿ ಎಂದು ಕಾಜಲ್ ಕಿವಿಮಾಡು ನೀಡಿದ್ದಾರೆ.


ಪ್ರಸವ ಪೂರ್ವ ನೆನಪುಗಳನ್ನು ಮೆಲುಕು ಹಾಕಿದ ನಟಿ
ನನ್ನ ದೇಹ ಈ ಹಿಂದೆ ಇದ್ದಂತಿಲ್ಲ ಮಗುವಾಗುವುದಕ್ಕೆ ಮುಂಚೆ ದೇಹವನ್ನು ಚೆನ್ನಾಗಿ ಕಸರತ್ತುಗೊಳಿಸುತ್ತಿದ್ದೆ ಹಾಗೂ ಜಿಮ್‌ನಲ್ಲಿ ಚೆನ್ನಾಗಿ ಬೆವರು ಹರಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ.


ಗರ್ಭಾವಸ್ಥೆಯಲ್ಲೂ ಕಾಜಲ್ ವ್ಯಾಯಾಮದ ಕಡೆಗೆ ಹೆಚ್ಚಿನ ಗಮನ ನೀಡಿದ್ದರು. ವ್ಯಾಯಾಮ ಮಾಡುತ್ತಿರುವ ವಿಡಿಯೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ನಟಿ ಹಂಚಿಕೊಂಡಿದ್ದರು.


ಮಗುವಾದ ನಂತರ ದೇಹದಲ್ಲಾದ ಬದಲಾವಣೆಗಳು
ಮಗುವಾದ ನಂತರ ನನ್ನ ಹಿಂದಿನ ಚೇತರಿಕೆಯನ್ನು ಪಡೆದುಕೊಳ್ಳುವುದು ಕೊಂಚ ಪ್ರಯಾಸವಾಗಿದೆ. ಕುದುರೆ ಸವಾರಿಯೇ ಅತಿದೊಡ್ಡ ಕೆಲಸ ಎಂಬ ಭಾವನೆ ಬಂದಿದೆ ಈ ಹಿಂದೆ ಮಾರ್ಷಿಯಲ್ ಆರ್ಟ್ಸ್‌ ಅನ್ನು ಸರಳವಾಗಿ ಮೈಗೂಡಿಸಿಕೊಂಡಿದ್ದೆ ಆದರೀಗ ದೇಹ ಪಟ್ಟುಗಳನ್ನು ಸುಲಭವಾಗಿ ಕಲಿತುಕೊಳ್ಳುತ್ತಿಲ್ಲ ಎಂದು ಕಾಜಲ್ ಹೇಳುತ್ತಾರೆ.


ಇದನ್ನೂ ಓದಿ: Kantara-Kichcha Sudeep: ಕಾಂತಾರ ಸಿನಿಮಾ ನೋಡಿ ಪತ್ರ ಬರೆದ ಕಿಚ್ಚ ಸುದೀಪ್!ಹೊಸದಾಗಿ ತಾಯಿಯಾಗುವವರು ಭಾವನಾತ್ಮಕವಾಗಿ ಸಂಪರ್ಕಗೊಂಡಿರುತ್ತಾರೆ ಹಾಗೂ ಅವರು ಹೆಚ್ಚಿನ ಒತ್ತಡ, ನಿದ್ರಾಹೀನತೆ, ಖಿನ್ನತೆಯಿಂದಲೂ ಬಳಲುತ್ತಿರುತ್ತಾರೆ ಹಾಗೂ ದೈಹಿಕವಾಗಿ ದೇಹದಲ್ಲಾದ ಬದಲಾವಣೆಗಳೊಂದಿಗೆ ಹೊಂದಿಕೊಳ್ಳಲು ಅವರು ಶ್ರಮಿಸುತ್ತಿರುತ್ತಾರೆ ಎಂದು ಅಧ್ಯಯನಗಳು ಹೇಳಿರುವುದನ್ನು ನಟಿ ಉಲ್ಲೇಖಿಸಿದ್ದಾರೆ.


ನಿಮ್ಮ ಆಯ್ಕೆಗಳ ಕುರಿತು ಪಶ್ಚಾತ್ತಾಪ ಪಡದಿರಿ
ಹೊಸದಾಗಿ ತಾಯಿಯಾಗುತ್ತಿರುವವರ ಹಾಗೂ ತಾಯಂದಿರಿಗೆ ಕಿವಿಮಾತು ಹೇಳಿರುವ ಕಾಜಲ್ ತಮ್ಮನ್ನು ತಾವು ಬೆಂಬಲಿಸುತ್ತಾರೆ. ನಮ್ಮ ದೇಹವು ಬದಲಾಗಬಹುದು, ಬದಲಾಗಬಹುದು, ಬದಲಾಗುತ್ತದೆ ಆದರೆ ಬದಲಾಗದೇ ಇರಬೇಕಾದ್ದು ನಮ್ಮ ಸ್ಫೂರ್ತಿ, ಸಾಧಿಸುವ ಛಲ ಹಾಗೂ ಏಕಾಗ್ರತೆ ಎಂದು ನಟಿ ತಿಳಿಸಿದ್ದಾರೆ. ನಮ್ಮನ್ನು ನಾವು ಹೆಚ್ಚು ಹೆಚ್ಚು ತೆರೆದುಕೊಳ್ಳಬೇಕು ಹಾಗೂ ನಾವು ಜೀವಿಸುವ ಪ್ರತೀ ದಿನವು ನಮಗೆ ದೊರಕಿರುವ ಒಂದು ಅವಕಾಶವಾಗಿದೆ ಅದನ್ನು ನಾವು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.


ನಾವು ಆದ್ಯತೆ ನೀಡಬೇಕಾಗಿರುವುದು ನಾವು ಏನು ಆರಿಸಿಕೊಂಡಿರುವೆವೋ ಅದರ ಮೇಲೆ ಅದರ ಬದಲಿಗೆ ಆಯ್ಕೆಗಳ ಬಗ್ಗೆ ಪಶ್ಚಾತ್ತಾಪ ಬೇಡ ಎಂದು ತಿಳಿಸಿದ್ದಾರೆ.


ಇಂಡಿಯನ್ 2 ಸಿನಿಮಾದ ಕುರಿತು
ಇಂಡಿಯನ್ 2 ನಾನು ಚಿತ್ರ ತಂಡವನ್ನು ಸೇರಿಕೊಳ್ಳುತ್ತಿದ್ದು ಕವಾಯತು ನಡೆಸಲು ಆರಂಭಿಸಿರುವೆ. ಹೊಸ ಕೌಶಲ್ಯಗಳನ್ನು ಕಲಿತುಕೊಂಡು ಅದನ್ನು ಹವ್ಯಾಸವನ್ನಾಗಿಸಲಿರುವೆ. ನಾನು ಮನೆ ಎಂದೇ ಕರೆಯುವ ಈ ಇಂಡಸ್ಟ್ರಿಯ ಭಾಗವಾಗಿರುವುದಕ್ಕೆ ನಾನು ಅದೃಷ್ಟಶಾಲಿ! ನನ್ನನ್ನು ನಾನು ಅಪ್‌ಗ್ರೇಡ್ ಮಾಡಿಕೊಳ್ಳುವ ನಿರಂತರ ಕಲಿಕೆಯನ್ನು ಒದಗಿಸಿರುವ ಅವಕಾಶಗಳಿಗೆ ನಾನು ಚಿರಋಣಿ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ:  Koffee with Karan 7: ಕತ್ರಿನಾ-ವಿಕ್ಕಿ ಮದುವೆಗೆ ಆಹ್ವಾನಿಸದಿರುವುದಕ್ಕೆ ಕರಣ್​ಗೆ ತುಂಬಾ ಮುಜುಗರವಾಗಿತ್ತಂತೆ!

ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಇಂಡಿಯನ್ 2 ಚಿತ್ರದ ಚಿತ್ರೀಕರಣ ಮರಳಿ ಟ್ರ್ಯಾಕ್‌ನಲ್ಲಿದೆ. 2020 ರಲ್ಲಿ ಸೆಟ್‌ನಲ್ಲಿ ಕ್ರೇನ್ ಕುಸಿದು ಮೂವರು ಸಾವನ್ನಪ್ಪಿದರು ಹಾಗೂ 10 ಮಂದಿ ಗಾಯಗೊಂಡರು ಇನ್ನು ಕೋವಿಡ್ ಸಾಂಕ್ರಾಮಿಕವು ಚಿತ್ರದ ಶೂಟಿಂಗ್ ಅನ್ನು ಇನ್ನಷ್ಟು ಹಿಂದಕ್ಕೆ ತಳ್ಳಿತು. ಶಂಕರ್ ಷಣ್ಮುಖಂ ನಿರ್ದೇಶನದ ಇಂಡಿಯನ್ 2 1996 ರ ಸೂಪರ್ ಹಿಟ್ ಚಿತ್ರ 'ಇಂಡಿಯನ್' ನ ಮುಂದುವರಿದ ಭಾಗವಾಗಿದೆ. ಚಿತ್ರದಲ್ಲಿ ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್, ಬಾಬಿ ಸಿಂಹ ಮತ್ತು ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Published by:Ashwini Prabhu
First published: