Tips for Dandruff: ಮಳೆಗಾಲದಲ್ಲಿ ಹೆಚ್ಚಾಗುವ ತಲೆಹೊಟ್ಟು ಸಮಸ್ಯೆ ನಿವಾರಣೆಗೆ 2 ವಸ್ತುಗಳು ಸಾಕು

ಆಪಲ್ ಸೈಡರ್ ವಿನೆಗರ್ ಸೌಮ್ಯವಾದ ಕ್ಲೆನ್ಸರ್ ಅನ್ನು ತಯಾರಿಸುವುದಲ್ಲದೆ ಅತ್ಯುತ್ತಮವಾಗಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.  ಹಾಗೆಯೇ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದ್ದು ಇದು ನೇರವಾಗಿ ನೆತ್ತಿಯ ಮೇಲಿನ ತಲೆಹೊಟ್ಟಿಗೆ ಪರಿಹಾರ ನೀಡುತ್ತದೆ.

ತಲೆಹೊಟ್ಟು

ತಲೆಹೊಟ್ಟು

 • Share this:
  ಮಳೆಗಾಲ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕೆಲವರಲ್ಲಿ ಈ ಮಳೆಗಾಲ ಉತ್ಸಾಹವನ್ನು ತಂದರೆ ಕೆಲವರಿಗೆ ಇದು ಕಿರಿಕಿರಿ. ಮಳೆಗಾಲ ನೀಡುವ ಆಹ್ಲಾದಕರ ವಾತಾವರಣ ಮತ್ತು ತಂಪಾದ ದಿನಗಳಿಗಾಗಿ  ಮಳೆಗಾಲವನ್ನು ಎದುರು ನೋಡುತ್ತೇವೆ.  ಆದರೆ  ಕೂದಲ ರಕ್ಷಣೆಯ ವಿಚಾರಕ್ಕೆ ಬಂದರೆ ಸ್ವಲ್ಪ ತಲೆನೋವು ಶುರುವಾಗುತ್ತೆ. ಮಳೆಗಾಲದ ಸಮಯದಲ್ಲಿ  ಕೂದಲಿನ ರಕ್ಷಣೆ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ಮಾನ್ಸೂನ್ ಸಮಯದಲ್ಲಿ  ಹಲವು ಕೂದಲಿನ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಸಾಮಾನ್ಯ ಅಂದರೆ ತಲೆಹೊಟ್ಟು. ಮಳೆ ಬಂದ ಕ್ಷಣವೇ ಕೆಲವರಲ್ಲಿ ತಲೆಹೊಟ್ಟು ಸಮಸ್ಯೆ ಆರಂಭವಾಗುತ್ತದೆ  ಎಂದು ಅನೇಕ ಜನರು ಆರೋಪ ಮಾಡುತ್ತಾರೆ. ಇನ್ನು ತಲೆಹೊಟ್ಟು ಸಮಸ್ಯೆ ಹೆಣ್ಣು ಮಕ್ಕಳಿಗೆ ಸಾಮಾನ್ಯ.

  ನೀವು ಎಂದಾದರೂ ತಲೆಹೊಟ್ಟಿನ ಸಮಸ್ಯೆ ಅನುಭವಿಸಿದ್ದರೆ, ಅದಕ್ಕೆ ಪರಿಹಾರ ಮಾಡುವುದು  ತುಂಬಾ ಕಷ್ಟ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಆದರೆ, ಕಿರಿಕಿರಿಯುಂಟು ಮಾಡುವ ತಲೆಹೊಟ್ಟು ಸಮಸ್ಯೆಗೆ ಪರಿಹಾರವು ಸಾಮಾನ್ಯವಾಗಿ ನಮ್ಮ ಅಡುಗೆಮನೆಯ ಡಬ್ಬಿಗಳಲ್ಲೇ ಅಡಗಿರುತ್ತದೆ. ಅಡಿಗೆ ಸೋಡಾ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿದರೆ ನಿಮ್ಮ ನೆತ್ತಿಯ ತಲೆಹೊಟ್ಟು ಬೇಗನೆ ಶಮನವಾಗುತ್ತದೆ. ಇದು ತಲೆಹೊಟ್ಟಿನ ಸಮಸ್ಯೆಗೆ ವರವಾಗಿದೆ ಎಂದರೆ ತಪ್ಪಲ್ಲ.

  ಕೂದಲಿನ  ಮೇಲೆ ಅಡಿಗೆ ಸೋಡಾದ  ಪ್ರಯೋಜನಗಳು

  ಅಡಿಗೆ ಸೋಡಾವನ್ನು ಯಾವಾಗಲೂ ಶಕ್ತಿಯುತ ಕ್ಲೆನ್ಸರ್ ಎಂದು ಕರೆಯಲಾಗುತ್ತದೆ. ಇದು ಪ್ರಕೃತಿಯಲ್ಲಿ ಕ್ಷಾರೀಯವಾಗಿದ್ದು ಸಣ್ಣ ಅಪಘರ್ಷಕ ಕಣಗಳನ್ನು ಹೊಂದಿದೆ. ಈ ಗುಣಗಳು ಇದು ನೆತ್ತಿಯಿಂದ ಕೊಳೆಯನ್ನು ಮತ್ತು ಸತ್ತ ಚರ್ಮದ ಕೋಶಗಳನ್ನು ಪರಿಣಾಮಕಾರಿಯಾಗಿ ತೆಗೆದು ಹಾಕುವಲ್ಲಿ  ಯಶಸ್ವಿಯಾಗುತ್ತವೆ.ಜೊತೆಗೆ ಕೂದಲನ್ನು  ಅಡುಗೆ ಸೋಡಾ ಸ್ವಚ್ಛವಾಗಿರಿಸುತ್ತದೆ. ಇದರ ಜೊತೆಯಲ್ಲಿ, ಇದು ಎಣ್ಣೆಯುಕ್ತ ನೆತ್ತಿಯ ಸಮಸ್ಯೆಗೆ ಚಿಕಿತ್ಸೆ ನೀಡಲು  ಸಹ ಸಹಾಯ ಮಾಡುತ್ತದೆ. ಆದ್ದರಿಂದ, ಅಡಿಗೆ ಸೋಡಾವನ್ನು ಕ್ಲೆನ್ಸರ್ ಆಗಿ ಬಳಸುವುದರಿಂದ ತಲೆಹೊಟ್ಟು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ ಆದರೆ ಈ ಕೂದಲಿನ ಸಮಸ್ಯೆ ಹೆಚ್ಚಾಗಲು ಕಾರಣವಾಗುವ ಅಂಶಗಳನ್ನು ನಿಭಾಯಿಸಲು ಮತ್ತು ತಡೆಯಲು ಸಹಾಯ ಮಾಡುತ್ತದೆ.

  ಆ್ಯಪಲ್​​ ಸೈಡರ್ ವಿನೆಗರ್ ನ ಪ್ರಯೋಜನಗಳು

  ಆಪಲ್ ಸೈಡರ್ ವಿನೆಗರ್ ಸೌಮ್ಯವಾದ ಕ್ಲೆನ್ಸರ್ ಅನ್ನು ತಯಾರಿಸುವುದಲ್ಲದೆ ಅತ್ಯುತ್ತಮವಾಗಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.  ಹಾಗೆಯೇ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದ್ದು ಇದು ನೇರವಾಗಿ ನೆತ್ತಿಯ ಮೇಲಿನ ತಲೆಹೊಟ್ಟಿಗೆ ಪರಿಹಾರ ನೀಡುತ್ತದೆ. ಇದರ ಜೊತೆಯಲ್ಲಿ, ಇದು ಸ್ವಲ್ಪ ಆಮ್ಲೀಯ ಸ್ವಭಾವವನ್ನು ಹೊಂದಿರುವ ಕಾರಣ ನೆತ್ತಿಯ ನೈಸರ್ಗಿಕ pH ಅನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಅದಕ್ಕಿಂತ ಹೆಚ್ಚಾಗಿ, ಆಪಲ್ ಸೈಡರ್ ವಿನೆಗರ್‌ನ ಪಿಹೆಚ್ ಮಟ್ಟವು ನಿಮ್ಮ ಕೂದಲು ಉದುರುವಿಕೆ ಮತ್ತು ಫ್ರಿಜ್ ಸಮಸ್ಯೆಗಳನ್ನು ಸರಿದೂಗಿಸುತ್ತದೆ. ಅಡಿಗೆ ಸೋಡಾ ಮತ್ತು ಆಪಲ್ ಸೈಡರ್ ವಿನೆಗರ್ ನಿಂದ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೆತ್ತಯ ಮೇಲಿನ ಹೊಟ್ಟಿಗೆ ಶಾಶ್ವತ ಪರಿಹಾರ ಸಿಗುತ್ತದೆ.

  ಇದನ್ನೂ ಓದಿ: ಗೋಡಂಬಿ ಹಾಲಿನಿಂದ ಕೂದಲು, ಚರ್ಮ ಎರಡೂ ಫಳ ಫಳ..!

  ನೀವು ಮಾಡಬೇಕಾಗಿರುವುದು ಇಷ್ಟೇ

  2 ಟೀ ಸ್ಪೂನ್ ಅಡಿಗೆ ಸೋಡಾ ಮತ್ತು 3 ಟೀ ಸ್ಪೂನ್ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದಕ್ಕೆ  ಸ್ವಲ್ಪ ನೀರು ಸೇರಿ ಆ ಮಿಶ್ರಣದಲ್ಲಿ ನಿಮ್ಮ ತಲೆಯ ಕೂದಲನ್ನು ತೊಳೆಯಿರಿ.

  ಇದನ್ನು ಬಳಸುವ ವಿಧಾನ ಹೀಗಿದೆ

  ನಿಮ್ಮ ಕೂದಲಿಗೆ ಶಾಂಪೂ ಹಾಕಿ ತೊಳೆದ ನಂತರ. ಈ ಕೂದಲಿಗೆ ಮಿಶ್ರಣವನ್ನು ಹಾಕಿ ತೊಳೆಯಿರಿ.

  ನಿಮ್ಮ ನೆತ್ತಿಗೆ 5 ರಿಂದ 7 ನಿಮಿಷಗಳ ಕಾಲ ಮಸಾಜ್ ಮಾಡಿ

  ಬೆಚ್ಚಗಿನ ನೀರನ್ನು ಬಳಸಿ ಕೂದಲನ್ನು ಮತ್ತೊಮ್ಮೆ ತೊಳೆಯಿರಿ. ಈ ಕೂದಲನ್ನು ತೊಳೆದ ನಂತರ ಕಂಡೀಷನರ್  ಹಾಕುವುದು ನಿಮ್ಮ ಇಷ್ಟಕ್ಕೆ ಬಿಟ್ಟದ್ದು.
  Published by:Kavya V
  First published: