ಇವತ್ತಿನ ದಿನದ ವಿಶೇಷ ಗೊತ್ತಾದರೆ, ನಿಮ್ಮ ಬಾಯಲ್ಲಿ ನೀರೂರುವುದು ಗ್ಯಾರಂಟಿ!

news18
Updated:July 7, 2018, 1:41 PM IST
ಇವತ್ತಿನ ದಿನದ ವಿಶೇಷ ಗೊತ್ತಾದರೆ, ನಿಮ್ಮ ಬಾಯಲ್ಲಿ ನೀರೂರುವುದು ಗ್ಯಾರಂಟಿ!
news18
Updated: July 7, 2018, 1:41 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು (ಜು.7): ಮೆಕ್ಸಿಕೋ ಜನರಿಗೆ ಪರಿಚಯವಾಗಿದ್ದ ಈ ಸ್ಥಳೀಯ ಸಿಹಿ ತಿನಿಸುವ ಜನಪ್ರಿಯವಾಗಿದ್ದು 1550ರ ಜು.7ರಂದು. ಸಣ್ಣ ಮಕ್ಕಳಿಂದ ಹಿಡಿದು ಹಿರಿತಲೆಗಳವರೆಗೆ ಬಾಯಲ್ಲಿ ನೀರುರಿಸುತ್ತಿರುವ  ತಿಂಡಿಯೇ ಚಾಕೊಲೇಟ್.

ಮೆಕ್ಸಿಕೋ ಪ್ರದೇಶದ ಮಧ್ಯ ಭಾಗ ಸೇರಿದಂತೆ ದಕ್ಷಿಣ ಅಮೇರಿಕದಲ್ಲಿದ್ದ ಈ ಚಾಕೊಲೇಟ್​ನ್ನು ಅನ್ವೇಷಣಾಕಾರರು ಜಗತ್ತಿಗೆ ಪರಿಚಯಿಸಿದರು. ಆ ನಂತರ ಚಾಕೊಲೇಟ್​ ಜ್ಯೂಸ್​ನಿಂದ ಹಿಡಿದು ಸಿಹಿ ತಿನಿಸಿನವರೆಗೂ ಎಲ್ಲ ಕಡೆಯಲ್ಲಿಯೂ ಅಗ್ರಮಾನ್ಯ ಸ್ಥಾನಪಡೆಯಿತು.ಚಾಕೊಲೇಟ್​ ಕೇವಲ ಸಿಹಿ ತಿನಿಸಿಗೆ ಮಾತ್ರ ವಲ್ಲದೇ ಆರೋಗ್ಯಕ್ಕೂ ಹಿತಕರ. ಹೃದಯ ಸಂಬಂಧಿ ಕಾಯಿಲೆ ಯಿಂದ ದೇಹಕ್ಕೆ ಆರೋಗ್ಯ ಸುಧಾರಕ ಅಂಶ ಚಾಕೋಲೆಟ್​ನಲ್ಲಿದೆ ಎಂದು ಪತ್ತೆಯಾದ ಮೇಲಂತೂ ಚಾಕೋಲೆಟ್ ಜನರಿಗೆ​ ಮತ್ತಷ್ಟು ಹಾಟ್​ ಫೆವರೆಟ್​ ಆಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿಯಂತು ಈಗ ಚಾಕೊಲೇಟ್​ ಮಾರುಕಟ್ಟೆ ದೊಡ್ಡದಾಗಿದೆ. ಉಡುಗೊರೆಯಿಂದ ಊಟದ ನಂತರದ ತಿನಿಸಿನ ಡೆಸಾರ್ಟ್​ ಆಗಿ ಚಾಕೊಲೇಟ್​ ಜನರ ಸೆಳೆಯುತ್ತಿದೆ.


Loading...

ಸಿಹಿ ತಿನಿಸು ಮಾತ್ರವಲ್ಲ ಇದು ಒಲವಿನ ಉಡುಗೊರೆ ಕೂಡ

ಚಾಕೊಲೇಟ್​ ಎಂದರೆ ಸಿಹಿ ತಿನಿಸು ಮಾತ್ರವಾಗಿ ಇಂದು ಉಳಿದಿಲ್ಲ. ಪ್ರೀತಿಯ ಉಡುಗೊರೆಯಾಗಿ ಇದೆ. ಕೇವಲ ಪ್ರೇಮ ನಿವೇದನೆ ದಿನಕ್ಕೆ ಮಾತ್ರವಲ್ಲದೇ, ಹುಟ್ಟುಹಬ್ಬ, ಮದುವೆ, ಇತರೆ ಶುಭಕಾರ್ಯದಲ್ಲಿಯೂ ಕೂಡ ಉಡುಗೊರೆಯಾಗಿ ನೀಡುತ್ತಾರೆ.

ವ್ಯಾಪಾರದ ವೇದಿಕೆಯಾದ ಚಾಕೊಲೇಟ್​

ಚಾಕೊಲೇಟ್​ ಬೇಡಿಕೆ ಹೆಚ್ಚಿದಂತೆ ಅದನ್ನು ಮಾರಾಟ ಮಾಡಲು ಅನೇಕ ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡಿದೆ. ಬಿಗ್​ ಬ್ಯಾಸ್​ಕೇಟ್​, ಗೊಡಿವಾ ಸೇರಿದಂತೆ ಅನೇಕ ವೆಬ್​ತಾಣಗಳು ಚಾಕೊಲೇಟ್​ ಮಾರಾಟಕ್ಕೆ ಎಂದು ಹುಟ್ಟಿಕೊಂಡಿದ್ದು, ಉತ್ತಮ ವ್ಯಾಪಾರವನ್ನು ಹೊಂದಿದೆ.ಸಾಮಾಜಿಕ ಜಾಲತಾಣದಲ್ಲಿ ಚಾಕಲೇಟ್​ ತಯಾರಿಗೆ ಹೆಚ್ಚಿದ ಬೇಡಿಕೆ

ಅನೇಕ ಜನರು ಚಾಕೋಲೆಟ್​ ಮಾಡುವ ಪ್ರಕ್ರಿಯೆ ತಿಳಿಯಲು ಕಾತುರಾಗಿರುತ್ತಾರೆ. ಚಾಕೊಲೇಟ್​ ಹೇಗೆ ಉತ್ಪತ್ತಿಯಾಗುತ್ತದೆ ಎಂಬುದರಿಂದ ಹಿಡಿದು ಚಾಕೊಲೇಟ್​ ತಿನಿಸುಗಳನ್ನು ಹೇಗೆಲ್ಲಾ ತಯಾರಿಸುತ್ತಾರೆ ಎಂಬ ಬಗ್ಗೆ ಜನರು ಕಾತುರರಾಗಿತ್ತಾರೆ. ಇದಕ್ಕೆಂದೇ ಅನೇಕ ಚಾಕೊಲೇಟ್​ ತಯಾರಿಸುವ ವಿಧಾನವನ್ನು ಕಲಿಸಿಕೊಡುವ ಅನೇಕ ವೆಬ್​ಸೈಟ್​ಗಳಿದೆ,
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...