SSC Recruitment 2019: ಡಿಗ್ರಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಕೆಲಸ; 10 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ

SSC Recruitment 2019: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಆನ್​ಲೈ ನ್​ ಮೂಲಕ ಅರ್ಜಿ ಸಲ್ಲಿಸಬೇಕು. ಎಸ್​ಎಸ್​​​ಸಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಹಾಕಬೇಕು. ಆದರೆ ಆಫ್​ಲೈನ್​ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ​

Latha CG | news18-kannada
Updated:November 13, 2019, 4:43 PM IST
SSC Recruitment 2019: ಡಿಗ್ರಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಕೆಲಸ; 10 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC Recruitment 2019: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಆನ್​ಲೈ ನ್​ ಮೂಲಕ ಅರ್ಜಿ ಸಲ್ಲಿಸಬೇಕು. ಎಸ್​ಎಸ್​​​ಸಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಹಾಕಬೇಕು. ಆದರೆ ಆಫ್​ಲೈನ್​ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ​
  • Share this:
ಸಿಬ್ಬಂದಿ ನೇಮಕ ಆಯೋಗ (ಸ್ಟಾಫ್​ ಸೆಲೆಕ್ಷನ್​ ಕಮಿಷನ್) ಖಾಲಿ ಇರುವ ವಿವಿಧ ಹುದ್ದೆಗಳಿಗೆ​ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಸುಮಾರು 10 ಸಾವಿರ ಹುದ್ದೆಗಳು ಖಾಲಿಯಿದ್ದು, ಪದವಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಿಬ್ಬಂದಿ ನೇಮಕ ಆಯೋಗ ನೇಮಕಾತಿಗೆ ಅರ್ಜಿ ಸಲ್ಲಿಸುವ ಮುನ್ನ, ಕೆಲವೊಂದು ಅಗತ್ಯ ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯ.


  • ಎಸ್​ಎಸ್​ಸಿ ಹುದ್ದೆಗಳು ದೆಹಲಿ ಸರ್ಕಾರಿ ಹುದ್ದೆಗಳಾಗಿರುತ್ತವೆ.

  • ಒಟ್ಟು 10 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

  • ಕನಿಷ್ಠ ಶೈಕ್ಷಣಿಕ ಅರ್ಹತೆ ಪದವಿ ಪಡೆದಿರಬೇಕು.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 25

ಖಾಲಿ ಇರುವ ಹುದ್ದೆಗಳು

  • ಅಸಿಸ್ಟೆಂಟ್​ ಆಡಿಟ್​ ಆಫೀಸರ್ ಇನ್​ ಇಂಡಿಯಾ ಆಡಿಟ್​ & ಅಕೌಂಟ್

  • ಅಸಿಸ್ಟೆಂಟ್​ ಅಕೌಂಟ್​​ ಆಫೀಸರ್ ಇನ್​ ಇಂಡಿಯಾ ಆಡಿಟ್​ & ಅಕೌಂಟ್

  • ಅಸಿಸ್ಟೆಂಟ್​ ಸೆಕ್ಷನ್​ ಆಫೀಸರ್​ ಇನ್​​ ಸೆಂಟ್ರಲ್​ ಸೆಕ್ರೇಟೇರಿಸ್ಟ್​

  • ಅಸಿಸ್ಟೆಂಟ್​ ಸೆಕ್ಷನ್​ ಆಫೀಸರ್​ -ಗುಪ್ತಚರ ಇಲಾಖೆ

  • ಅಸಿಸ್ಟೆಂಟ್​ ಸೆಕ್ಷನ್​ ಆಫೀಸರ್​ -ರೈಲ್ವೆ ಸಚಿವಾಲಯ


(ಖಾಲಿ ಇರುವ ಹೆಚ್ಚಿನ ಹುದ್ದೆಗಳ ಮಾಹಿತಿ ಪಡೆಯಲು https://ssc.nic.in ಗೆ ಭೇಟಿ ನೀಡಿ)

ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಿಂದ ಪದವಿ ಪಡೆದಿರಬೇಕು. 1-1-2020ರೊಳಗೆ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಜೂನಿಯರ್​ ಸ್ಟಾಟಿಸ್ಟಿಕಲ್​ ಆಫೀಸರ್​
ಮಾನ್ಯತೆ ಪಡೆದ ಯಾವುದೇ ಯೂನಿವರ್ಸಿಟಿ ಅಥವಾ ಶಿಕ್ಷಣ ಸಂಸ್ಥೆಯಿಂದ ಗಣಿತ ವಿಷಯದಲ್ಲಿ ಶೇ.60ರಷ್ಟು ಅಂಕ ಪಡೆದಿರಬೇಕು. ಪದವಿ ಮಟ್ಟದಲ್ಲಿ ಯಾವುದೇ ವಿಷಯದಲ್ಲಿ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿರಬೇಕು.

ಸ್ಟಾಟಿಸ್ಟಿಕಲ್​​ ಇನ್ವೆಸ್ಟಿಗೇಟರ್ ಗ್ರೇಡ್​-2

ಮಾನ್ಯತೆ ಪಡೆದ ಯಾವುದೇ ವಿವಿಯಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಇನ್ನು ವಯೋಮಿತಿ ವಿನಾಯಿತಿಯಲ್ಲಿ ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕ 100 ರೂ. ಇರುತ್ತದೆ. ಅರ್ಹ ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಆನ್​ಲೈ ನ್​ ಮೂಲಕ ಅರ್ಜಿ ಸಲ್ಲಿಸಬೇಕು. ಎಸ್​ಎಸ್​​​ಸಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಹಾಕಬೇಕು. ಆದರೆ ಆಫ್​ಲೈನ್​ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ​

ಹೆಚ್ಚಿನ ಮಾಹಿತಿ
ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಿಬ್ಬಂದಿ ನೇಮಕ ಆಯೋಗ(ಎಸ್‌ಎಸ್‌ಸಿ)ದ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಬಹುದು.
First published: November 13, 2019, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading