job alert 2019: ಪಿಯುಸಿ ಪಾಸಾದವರಿಗೆ ಅಮೆಜಾನ್​ ಕಂಪೆನಿಯಲ್ಲಿ ಉದ್ಯೋಗಾವಕಾಶ

job alert 2019: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಭವ (ಎಕ್ಸ್​ಪೀರಿಯನ್ಸ್​) ಬೇಕಾಗಿಲ್ಲ. ಫ್ರೆಶರ್‌ಗಳೂ ಕೂಡ ಅರ್ಜಿ ಸಲ್ಲಿಸಬಹುದು.

news18-kannada
Updated:December 18, 2019, 11:04 AM IST
job alert 2019: ಪಿಯುಸಿ ಪಾಸಾದವರಿಗೆ ಅಮೆಜಾನ್​ ಕಂಪೆನಿಯಲ್ಲಿ ಉದ್ಯೋಗಾವಕಾಶ
Jobs
  • Share this:
ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಅಮೆಜಾನ್ ಇಂಡಿಯಾ ಕಂಪೆನಿಯಲ್ಲಿದೆ ಉದ್ಯೋಗಾವಕಾಶ. ಅಮೆಜಾನ್ ಕಂಪೆನಿ ದೇಶೀಯ ಮತ್ತು ಅಂತರರಾಷ್ಟ್ರೀಯ ಕಾಲ್ ಸೆಂಟರ್​ಗಳಿಗಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. 12 ನೇ ತರಗತಿ ಅಥವಾ ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಮೆಜಾನ್‌ನ ಅಧಿಕೃತ ವೆಬ್‌ಸೈಟ್ www.amazon.jobs ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಫ್ರೆಶರ್‌ಗಳು ಅರ್ಜಿ ಸಲ್ಲಿಸಬಹುದು:

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಭವ (ಎಕ್ಸ್​ಪೀರಿಯನ್ಸ್​) ಬೇಕಾಗಿಲ್ಲ. ಫ್ರೆಶರ್‌ಗಳೂ ಕೂಡ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ನೇರ (ವಾಕ್-ಇನ್) ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದ ದಿನಾಂಕದಂತಹ ಇತರೆ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ವೇತನ:
ಈ ಹುದ್ದೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22 ಸಾವಿರ ರೂಪಾಯಿಗಳವರೆಗೆ ಸಂಬಳ ನೀಡಲಾಗುತ್ತದೆ.ಒಂದು ದಿನ ರಜೆ:
ಆಯ್ಕೆಯಾದ ಅಭ್ಯರ್ಥಿಗಳು ವಾರದಲ್ಲಿ 6 ದಿನಗಳು ಕೆಲಸ ಮಾಡಬೇಕಾಗುತ್ತದೆ. ಹಾಗೆಯೇ ಒಂದು ದಿನ ನಿಗದಿತ ರಜೆ ಸಿಗಲಿದೆ.

ಹೆಚ್ಚಿನ ಮಾಹಿತಿ: ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು www.amazon.jobs  ನಿಂದ ಪಡೆದುಕೊಳ್ಳಬಹುದು.

(ವಿ.ಸೂ: ಕೆಲವೊಂದು ಆ್ಯಪ್​ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

Published by: zahir
First published: December 18, 2019, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading