ಜಪಾನ್ ಎಂದರೆ ಸಾಕು ಬಹುತೇಕರಿಗೆ ಮೊದಲು ನೆನಪಿಗೆ ಬರುವುದು ಅಲ್ಲಿನ ತಂಪಾದ ವಾತಾವರಣ ಮತ್ತು ಆ ಚೆರ್ರಿ ಹೂವುಗಳು ತುಂಬಿದ ಗಿಡ ಮರಗಳು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಜಪಾನ್ (Japan) ನಲ್ಲಿ ಚೆರ್ರಿ ಹೂವುಗಳನ್ನು ನೋಡುವುದೇ ಒಂದು ಚೆಂದ ಅಂತ ಹೇಳಬಹುದು. ಈ ಹೂವುಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಾರ್ಚ್ (March) ಅಂತ್ಯದಿಂದ ಏಪ್ರಿಲ್ (April) ಆರಂಭದವರೆಗೆ ಬೆಳೆಯುತ್ತವೆಯಂತೆ ಚೆರ್ರಿ ಹೂವುಗಳು ಸಾಮಾನ್ಯವಾಗಿ ಈ ಚೆರ್ರಿ ಹೂವುಗಳು ಮಾರ್ಚ್ ತಿಂಗಳ ಅಂತ್ಯದಿಂದ ಏಪ್ರಿಲ್ ತಿಂಗಳ ಆರಂಭದವರೆಗೆ ನೋಡಲು ಸಿಗುತ್ತವೆ ಎಂದರೆ ಈ ಹೂವುಗಳು ವಸಂತ ಋತುಮಾನದ ಆಗಮನವನ್ನು ಸೂಚಿಸುತ್ತದೆ ಅಂತ ಹೇಳಬಹುದು. ಟೋಕಿಯೊ, ಕ್ಯೋಟೋ ಮತ್ತು ಒಸಾಕಾದಂತಹ ಜನಪ್ರಿಯ ಪ್ರೇಕ್ಷಣೀಯ ತಾಣಗಳಲ್ಲಿ ಈ ಹೂವುಗಳನ್ನು ಆ ಸಮಯದಲ್ಲಿ ನೋಡಲು ಉತ್ತಮ ಸಮಯವಾಗಿರುತ್ತದೆ.
ಟೋಕಿಯೊದ ದಕ್ಷಿಣದ ಪ್ರದೇಶಗಳಲ್ಲಿ, ಜನವರಿಯಲ್ಲಿ ಅರಳಲು ಪ್ರಾರಂಭಿಸುವ ಚೆರ್ರಿ ಹೂವುಗಳಿವೆ. ಇಜು ಪೆನಿನ್ಸುಲಾ ಕರಾವಳಿಯುದ್ದಕ್ಕೂ ಟೋಕಿಯೊದಿಂದ ದಕ್ಷಿಣಕ್ಕೆ ಸುಮಾರು 3 ಗಂಟೆಗಳ ದೂರದಲ್ಲಿರುವ ಕವಾಜು ಪಟ್ಟಣವು ಒಂದು. ಕವಾಜು ವಿಶಿಷ್ಟವಾದ ಚೆರ್ರಿ ಗಿಡ ಮರಗಳಿಗೆ ಹೆಸರುವಾಸಿಯಾಗಿದೆ, ಇದನ್ನು ಕವಾಜು-ಜಕುರಾ ಎಂದು ಸಹ ಕರೆಯಲಾಗುತ್ತದೆ, ಇದು ಸಾಮಾನ್ಯ ಹೂವುಗಳಿಗಿಂತ ಒಂದು ತಿಂಗಳು ಮುಂಚಿತವಾಗಿ ಅರಳುತ್ತವೆ.
ಉತ್ತರ ಜಪಾನಿನಲ್ಲಿ ಚೆರ್ರಿ ಹೂವುಗಳ ಋತುಮಾನ ಸ್ವಲ್ಪ ತಡವಾಗಿ ಬರುತ್ತಂತೆ
ಉತ್ತರ ಜಪಾನಿನ ತಂಪಾದ ಪ್ರದೇಶಗಳಲ್ಲಿ, ಚೆರ್ರಿ ಹೂವು ಋತುಮಾನವು ಸಾಮಾನ್ಯವಾಗಿ ದೇಶದ ಉಳಿದ ಭಾಗಗಳಿಗಿಂತ ತಡವಾಗಿ ಸಂಭವಿಸುತ್ತದೆ. ಉದಾಹರಣೆಗೆ, ಸೆಂಡೈ (ಈಶಾನ್ಯ ಜಪಾನ್) ನಲ್ಲಿರುವ ಸಕುರಾ ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ತೆರೆಯಲ್ಪಡುತ್ತದೆ. ಈಗ ನೀವು ಈ ಹೂವುಗಳನ್ನು ನೋಡಲು ಜಪಾನ್ ಗೆ ಹೋಗಬೇಕೆಂದಿಲ್ಲ, ಭಾರತದಲ್ಲಿರುವ ಕೆಲವು ಸ್ಥಳಗಳಲ್ಲಿಯೂ ಸಹ ಜಪಾನ್ ನಲ್ಲಿ ಬೆಳೆಯುವ ರೀತಿಯಲ್ಲಿಯೇ ಗುಲಾಬಿ ಚೆರ್ರಿ ಹೂವುಗಳು ಬಿಡುವುದನ್ನು ನಾವು ನೋಡಬಹುದು.
1. ಶಿಮ್ಲಾದಲ್ಲಿ ಸಹ ಚೆರ್ರಿ ಹೂವುಗಳನ್ನು ನೋಡಬಹುದು
ಶಿಮ್ಲಾವು ಅನೇಕ ರೀತಿಯ ಚಿಕ್ಕ ಪುಟ್ಟ ಹಳ್ಳಿಗಳು ಮತ್ತು ಪಟ್ಟಣಗಳಿಂದ ಕೂಡಿದ್ದು, ಅವುಗಳಲ್ಲಿ ಮಶೋಬ್ರಾ ಮತ್ತು ನರ್ಕಂದಾ ಎಂಬ ಎರಡು ಸ್ಥಳಗಳಲ್ಲಿ ಈ ರೀತಿಯ ಗುಲಾಬಿ ಬಣ್ಣದ ಚೆರ್ರಿ ಹೂವುಗಳು ಅರಳುತ್ತವೆ.
ಇದನ್ನೂ ಓದಿ: ಕಿಸ್ ಕೊಟ್ಟ 5 ನಿಮಿಷಕ್ಕೇ ಕೈ ಕೊಟ್ಟ ಹುಡುಗಿ, ನೋವಿನಲ್ಲಿ ಮತ್ತೊಬ್ಬರನ್ನು ತಬ್ಬಿಕೊಂಡ ಡಾಕ್ಟರ್ ಬ್ರೋ!
2. ಕಾಂಚನಜುಂಗಾ ನ್ಯಾಷನಲ್ ಪಾರ್ಕ್
ಸಿಕ್ಕಿಂ ನಲ್ಲಿರುವಂತಹ ಕಾಂಚನಜುಂಗಾ ನ್ಯಾಷನಲ್ ಪಾರ್ಕ್ ನಲ್ಲಿ ಇರುವ ಗಿಡಮರಗಳಿಗೆ ಈ ಚೆರ್ರಿ ಹೂವುಗಳು ಬಿಡುತ್ತವೆ. ಸಾಮಾನ್ಯವಾಗಿ ನವೆಂಬರ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಈ ಚೆರ್ರಿ ಹೂವುಗಳು ಅಲ್ಲಿಗೆ ಬರುವ ಪ್ರವಾಸಿಗರಿಗೆ ನೋಡಲು ಸಿಗುತ್ತವೆ.
3. ಶಿಲ್ಲಾಂಗ್
ಶಿಲ್ಲಾಂಗ್ ಭಾರತದ ಚೆರ್ರಿ ಹೂವುಗಳ ಹಬ್ ಅಂತಾನೆ ಹೇಳಬಹುದು. ಇಲ್ಲಿ ನೂರಾರು ಚೆರ್ರಿ ಹೂವುಗಳು ಬಿಡುವ ಮರಗಳಿವೆ. ನವೆಂಬರ್ ನಲ್ಲಿ ‘ಚೆರ್ರಿ ಬ್ಲಾಸೆಂ’ ಎಂಬ ಉತ್ಸವವನ್ನು ಸಹ ಈ ಸ್ಥಳದಲ್ಲಿ ಆಚರಿಸುತ್ತಾರೆ.
4. ಕೋಹಿಮಾ
ಶಿಲ್ಲಾಂಗ್ ಅಷ್ಟೇ ಅಲ್ಲದೆ, ನಾಗಲ್ಯಾಂಡ್ ನ ಕೋಹಿಮಾ ಮತ್ತು ಜುಕೋವು ಕಣಿವೆಗಳಲ್ಲಿಯೂ ಸಹ ಈ ರೀತಿಯ ಗುಲಾಬಿ ಬಣ್ಣದ ಚೆರ್ರಿ ಹೂವುಗಳನ್ನು ನೀವು ನೋಡಬಹುದು.
5. ಗುಲ್ಮಾರ್ಗ್
ಚಳಿಗಾಲದ ಹಿಮವು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಕರಗಿ ನೀರಾಗಿ ಗುಲ್ಮಾರ್ಗ್ ಕಣಿವೆಯೂ ಬಿಳಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಅಂತ ಹೇಳಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ಸಾವಿರಾರು ಚೆರ್ರಿ ಹೂವುಗಳು ಬಿಡುವ ಗಿಡಮರಗಳು ಅಲ್ಲಿ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ