ವಿಶ್ವದ ಪವರ್​ಫುಲ್ ಪಾಸ್​ಪೋರ್ಟ್ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

zahir | news18
Updated:July 12, 2018, 6:42 PM IST
ವಿಶ್ವದ ಪವರ್​ಫುಲ್ ಪಾಸ್​ಪೋರ್ಟ್ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
zahir | news18
Updated: July 12, 2018, 6:42 PM IST
-ನ್ಯೂಸ್ 18 ಕನ್ನಡ

ವಿಶ್ವದ ಅತ್ಯಂತ ಪವರ್​ಫುಲ್ ಪಾಸ್​ಪೋರ್ಟ್​ ಹೊಂದಿರುವ ರಾಷ್ಟ್ರಗಳೆಂಬ ಹೆಗ್ಗಳಿಕೆ ಸಿಂಗಾಪೂರ್ ಮತ್ತು ಜಪಾನ್ ಪಾಲಾಗಿದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಜರ್ಮನಿ ಈ ಬಾರಿ​ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಹೆನ್ಲೆ ಪಾಸ್​ಪೋರ್ಟ್​ ಇಂಡೆಕ್ಸ್​ ನೀಡಿರುವ ಈ ರ್‍ಯಾಂಕಿಂಗ್ ಪಟ್ಟಿಯಲ್ಲಿ ಏಷ್ಯಾದ ಎರಡು ರಾಷ್ಟ್ರಗಳು ಅಗ್ರಸ್ಥಾನಗಳಿಸಿರುವುದು ವಿಶೇಷ.

ಫ್ರೀ ವೀಸಾ ಮೂಲಕ ಅತಿ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡುವ ಅವಕಾಶ ಪಡೆದಿರುವ ದೇಶಗಳ ಪಾಸ್​ಪೋರ್ಟ್​ ಅನ್ನು ಪವರ್​ಫುಲ್ ಪಾಸ್​ಪೋರ್ಟ್​ ಎನ್ನಲಾಗುತ್ತದೆ. 189 ರಾಷ್ಟ್ರಗಳಿಗೆ ವೀಸಾ ಮುಕ್ತ ಭೇಟಿಗೆ ಅವಕಾಶ ಪಡೆದಿರುವ ಜಪಾನ್ ಮತ್ತು ಸಿಂಗಾಪೂರ್ ಈ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನ ಅಲಂಕರಿಸಿದೆ.

ಅಂತರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (IATA)ಯ ಅಂಕಿ ಅಂಶಗಳನ್ನು ಆಧರಿಸಿ ಪವರ್​​ಫುಲ್ ಪಾಸ್​ಪೋರ್ಟ್​ ರ್‍ಯಾಂಕ್​ ನೀಡಲಾಗುತ್ತದೆ.

ಯುರೋಪ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಅನುಸರಿಸುತ್ತಿರುವ ವಲಸೆ ನೀತಿಯಿಂದಾಗಿ ಕಳೆದೊಂದು ವರ್ಷದಲ್ಲಿ ಐರೋಪ್ಯ ದೇಶಗಳು ಈ ಪಟ್ಟಿಯಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ಬ್ರಸ್ಸೆಲ್ಸ್​ ವಿಶ್ವವಿದ್ಯಾಲಯದ ಪ್ರಧ್ಯಾಪಕ ಫ್ಲೋರಿಯನ್ ಟ್ರೇನರ್ ತಿಳಿಸಿದ್ದಾರೆ.

ಬ್ರೆಕ್ಸಿಟ್ ಮತದಾನದ ಮೂಲಕ ಯುರೋಪ್​ ಒಕ್ಕೂಟದಿಂದ ಹೊರಬಿದ್ದ ಬ್ರಿಟನ್ ಸರ್ಕಾರ ಯುರೋಪ್ ಮತ್ತು ಇತರೆ ರಾಷ್ಟ್ರಗಳ ನಾಗರಿಕರಿಗೆ ಪ್ರತ್ಯೇಕ ವಲಸೆ ನೀತಿ ರೂಪಿಸಲು ಪ್ರಯತ್ನಿಸುವುದು ಕೂಡ ಪಟ್ಟಿಯಲ್ಲಿ ಹಿಂದೆ ಉಳಿಯಲು ಕಾರಣ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಜಾಗತಿಕ ವಲಸೆ ನೀತಿ ಸಹ ಯುಎಸ್​ಎ ಪಾಸ್​ಪೋರ್ಟ್​ ಶ್ರೇಯಾಂಕದಲ್ಲಿ ಕುಸಿತಕ್ಕೆ ಕಾರಣವಾಗಿದೆ.

ಫಿಫಾ ಪುಟ್​ಬಾಲ್​ ವಿಶ್ವಕಪ್​ ಆತಿಥ್ಯವಹಿಸಿರುವ ರಷ್ಯಾ ಈ ಪಟ್ಟಿಯಲ್ಲಿ 46 ನೇ ಸ್ಥಾನವನ್ನು ಪಡೆದುಕೊಂಡಿದ್ದು, ಹಾಗೆಯೇ ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಕಳೆದ ವರ್ಷ 78  ಸ್ಥಾನ ಪಡೆದಿದ್ದ ಭಾರತ 76ನೇ ರ್‍ಯಾಂಕ್​ನಲ್ಲಿದೆ.
Loading...

ಪವರ್​ಫುಲ್ ಪಾಸ್​ಪೋರ್ಟ್​ ಹೊಂದಿರುವ ರಾಷ್ಟ್ರಗಳ ಪಟ್ಟಿ :

1. ಜಪಾನ್, ಸಿಂಗಾಪುರ್
2. ಜರ್ಮನಿ
3. ಡೆನ್ಮಾರ್ಕ್, ಫಿನ್​ಲ್ಯಾಂಡ್, ಫ್ರಾನ್ಸ್, ಇಟಲಿ, ಸ್ವೀಡನ್, ಸ್ಪೇನ್, ದಕ್ಷಿಣ ಕೊರಿಯಾ
4. ನಾರ್ವೆ, ಯುನೈಟೆಡ್ ಕಿಂಗ್​​ಡಮ್​, ಆಸ್ಟ್ರಿಯಾ, ಲಕ್ಸೆಂಬರ್ಗ್, ನೆದರ್ಲೆಂಡ್ಸ್, ಪೋರ್ಚುಗಲ್, ಯುಎಸ್ಎ
5. ಬೆಲ್ಜಿಯಂ, ಸ್ವಿಜರ್ಲ್ಯಾಂಡ್, ಐರ್ಲೆಂಡ್, ಕೆನಡಾ
6. ಆಸ್ಟ್ರೇಲಿಯಾ, ಗ್ರೀಸ್
7. ನ್ಯೂಜಿಲ್ಯಾಂಡ್, ಜೆಕ್ ರಿಪಬ್ಲಿಕ್, ಮಾಲ್ಟಾ
8. ಐಸ್​ಲ್ಯಾಂಡ್​
9. ಹಂಗೇರಿ, ಸ್ಲೊವೇನಿಯಾ, ಮಲೇಷಿಯಾ
10. ಸ್ಲೋವಾಕಿಯಾ, ಲಾಟ್ವಿಯಾ, ಲಿಥುವೇನಿಯಾ
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...