ಟೋಕಿಯೊ ಒಲಿಂಪಿಕ್ಸ್ : ಬಾಡಿಗೆ ಮನೆ ನಿಯಮವನ್ನು ಸಡಿಲಿಸಲಿರುವ ಜಪಾನ್

news18
Updated:May 8, 2018, 6:51 PM IST
ಟೋಕಿಯೊ ಒಲಿಂಪಿಕ್ಸ್ : ಬಾಡಿಗೆ ಮನೆ ನಿಯಮವನ್ನು ಸಡಿಲಿಸಲಿರುವ ಜಪಾನ್
news18
Updated: May 8, 2018, 6:51 PM IST
ನ್ಯೂಸ್ 18 ಕನ್ನಡ

ಜಪಾನ್​ನಲ್ಲಿ ನಡೆಯಲಿರುವ 2020ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ದೇಶದ ಬಾಡಿಗೆ ಮನೆಗಳ ಮೇಲಿನ ನಿಯಮಗಳನ್ನು ಸಡಿಸಲಿಸಲು ಜಪಾನ್ ಸರ್ಕಾರ ನಿರ್ಧರಿಸಿದೆ. ಮುಂದಿನ ತಿಂಗಳು ಈ ಹೊಸ ಕಾನೂನು ಜಾರಿಗೆ ಬರಲಿದ್ದು, ಇದರ ಬಳಿಕ ದೇಶದ ಖಾಸಗಿ ವಸತಿ ನಿಯಮದಲ್ಲಿ ಮತ್ತು 'Airbnb' ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ ಆಗಲಿದೆ ಎಂದು ದಿ ಜಪಾನ್ ಟೈಮ್ಸ್ ವರದಿ ಮಾಡಿದೆ.

ಈ ನಿಯಮದ ಪ್ರಕಾರ ತಮ್ಮ ಮನೆಗಳ ಕೊಠಡಿಗಳನ್ನು ಬಾಡಿಗೆ ನೀಡಬೇಕಿದ್ದರೆ ಪರವಾನಗಿ ಪಡೆಯಬೇಕು. ಮುಖ್ಯವಾಗಿ ಕೊಠಡಿಗಳು ಕನಿಷ್ಠ ಗಾತ್ರವನ್ನು ಹೊಂದಿರಬೇಕು, ಅಲ್ಲದೆ ಮಾಲೀಕರು ಅಥವಾ ಮ್ಯಾನೇಜರ್ ಅತಿಥಿಗಳೊಂದಿಗೆ ಇರಬೇಕಾಗುತ್ತದೆ ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.

2017ರಲ್ಲಿ ದಾಖಲೆಯ 28.7 ದಶಲಕ್ಷ ಪ್ರವಾಸಿಗರು ಜಪಾನ್ ದೇಶಕ್ಕೆ ಭೇಟಿ ನೀಡಿದ್ದಾರೆ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದ್ದು, ಇದರಲ್ಲಿ ಹೆಚ್ಚಿನವರು ಚೀನಾ ದೇಶದ ಪ್ರವಾಸಿಗಳಾಗಿದ್ದಾರೆ.

2020ರಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ವೇಳೆ 40 ದಶಲಕ್ಷ ಪ್ರವಾಸಿಗರು ಭೇಟಿ ಕೊಡುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಪ್ರವಾಸಿಗರ ಅತಿಥಿ ಗೃಹದ ಸಮಸ್ಯೆ ಎದುರಾಗಲಿದ್ದು, ಇದರ ಮುನ್ನೆಚ್ಚರಿಕೆಯ ಕ್ರಮವಾಗಿ ಜಪಾನ್ ಸರ್ಕಾರ ಬಾಡಿಗೆ ಮನೆಗಳ ಮೇಲಿನ ನಿಯಮ ಸಡಿಸಲು ಮುಂದಾಗಿದೆ.
First published:May 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...