ಕೃಷ್ಣ ಜನ್ಮಾಷ್ಟಮಿ: ಇಲ್ಲಿದೆ ದೇಶದ ಪ್ರಮುಖ ಶ್ರೀ ಕೃಷ್ಣ ದೇವಾಲಯಗಳ ಪಟ್ಟಿ

news18
Updated:September 1, 2018, 2:15 PM IST
ಕೃಷ್ಣ ಜನ್ಮಾಷ್ಟಮಿ: ಇಲ್ಲಿದೆ ದೇಶದ ಪ್ರಮುಖ ಶ್ರೀ ಕೃಷ್ಣ ದೇವಾಲಯಗಳ ಪಟ್ಟಿ
news18
Updated: September 1, 2018, 2:15 PM IST
-ನ್ಯೂಸ್ 18 ಕನ್ನಡ

ದೇಶಾದ್ಯಂತ ಬಲು ವಿಜೃಂಭನೆಯಿಂದ ಆಚರಿಸುವ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು. ಈ ದಿನದಂದು ಭಗವಾನ್ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಬ್ಬದ ಮತ್ತೊಂದು ವಿಶೇಷತೆ ಅಂದರೆ ಪುಟ್ಟ ಪುಟಾಣಿಗಳು ಬಾಲ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಳ್ಳುವುದು. ಬೆಣ್ಣೆ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣನ ಅವತಾರಗಳಿಗೆ ಮನಸೋಲದವರಿಲ್ಲ ಎನ್ನಬಹುದು. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲಾಗುತ್ತದೆ. ಮೊಸರು ಕುಡಿಕೆ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಕೃಷ್ಣ ಜನ್ಮಾಷ್ಟಮಿ ದಿನದಂದು ಏರ್ಪಡಿಸಲಾಗುತ್ತದೆ. ಈ ಹಬ್ಬದ ದಿನದಂದು ದೇಶದ ಪ್ರಮುಖ ಶ್ರೀಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಂತಹ ಪ್ರಮುಖ ದೇವಾಲಯಗಳ ಪಟ್ಟಿ ಇಲ್ಲಿವೆ.

ಬಂಕೆ ಬಿಹಾರಿ ದೇವಾಲಯ, ಉತ್ತರ ಪ್ರದೇಶ:
A post shared by Harekrishna (@radheramana) on


Loading...ಉತ್ತರ ಪ್ರದೇಶ ರಾಜ್ಯದ ವೃಂದಾವನ್​ನಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಭಗವಾನ್ ಕೃಷ್ಣನ ಕಪ್ಪು ವಿಗ್ರಹವಿದ್ದು, ಇದು ಅಪರೂಪದ ಕೃಷ್ಣನ ಮೂರ್ತಿ ಎನ್ನಲಾಗಿದೆ. ಈ ದೇವಾಲಯವನ್ನು ಸ್ಥಾಪಿಸಿರುವುದು ಸ್ವಾಮಿ ಹರಿದಾಸ್ (ನವರತ್ನ ತಾನ್ಸೆನ್ ಗುರು) ಗುರುಗಳು. ಇವರೊಮ್ಮೆ ಕೃಷ್ಣನ ಭಜನೆಯಲ್ಲಿ ತೊಡಗಿಕೊಂಡಿದ್ದಾಗ ರಾಧಾ-ಕೃಷ್ಣರು ಇಲ್ಲಿ ಪ್ರತ್ಯಕ್ಷಗೊಂಡಿದ್ದರು ಎಂದು ನಂಬಲಾಗುತ್ತಿದೆ. ಇಲ್ಲಿ ಜನ್ಮಾಷ್ಟಮಿ ದಿನದಂದು ವಿಶೇಷ ಪೂಜೆ ಮತ್ತು ಕೀರ್ತನೆಗಳನ್ನು ಏರ್ಪಡಿಸಲಾಗುತ್ತದೆ.

ಶ್ರೀ ಜಗನ್ನಾಥ ದೇವಸ್ಥಾನ, ಒಡಿಶಾಒಡಿಶಾದ ಪುರಿಯಲ್ಲಿರುವ ಈ ದೇವಾಲಯವು ಚಾರ್​ ಧಾಮ್ ತೀರ್ಥಯಾತ್ರೆಯ ಪ್ರಮುಖ ಸ್ಥಳವಾಗಿದೆ. ಇಲ್ಲಿ ಪ್ರತಿನಿತ್ಯ ಹರೇಕೃಷ್ಣ ಮಂತ್ರಗಳನ್ನು ಪಠಣ ಮಾಡುವ ಮೂಲಕ ಪ್ರೀತಿ ಮತ್ತು ಮಾನವೀಯತೆಯ ಸಂದೇಶವನ್ನು ನೀಡಲಾಗುತ್ತದೆ. ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಈ ಮಹತ್ವದ ಕಾರ್ಯವು ಕಳೆದ 24 ವರ್ಷಗಳಿಂದ ನಡೆಯುತ್ತಾ ಬರುತ್ತಿರುವುದು ವಿಶೇಷ.

ಇಸ್ಕಾನ್ ಕೃಷ್ಣ ಬಲರಾಮ ಮಂದಿರ, ಉತ್ತರ ಪ್ರದೇಶಉತ್ತರ ಪ್ರದೇಶದ ವೃಂದಾವನದಲ್ಲಿರುವ ಮತ್ತೊಂದು ಪ್ರಮುಖ ಮಂದಿರವೆಂದರೆ ಇಸ್ಕಾನ್ ಕೃಷ್ಣ ಬಲರಾಮ ದೇವಸ್ಥಾನ. ಇದು ವಿಶ್ವದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದ್ದು, ವೃಂದಾವನಕ್ಕೆ ಭೇಟಿ ನೀಡುವ ಭಕ್ತರು ಈ ಕೃಷ್ಣನ ಮದಿರಕ್ಕೆ ಭೇಟಿ ನೀಡದೆ ಮರಳುವುದಿಲ್ಲ. ಈ ದೇವಾಲಯದ ಪ್ರವೇಶದ್ವಾರದಲ್ಲಿ ಇಸ್ಕಾನ್ ದೇವಾಲಯದ ಸಂಸ್ಥಾಪಕರಾದ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸ್ವಾಮಿಜಿಗಳ ಸಮಾಧಿಯಿದೆ. ಇಲ್ಲಿ ಕೃಷ್ಣ ಜನ್ಮಾಷ್ಟಮಿ ದಿವಸದಂದು ವಿಶೇಷ ಪೂಜೆ ಜರಗುತ್ತದೆ.

ದ್ವಾರಕಾದಿಶ್ ದೇವಾಲಯ, ಗುಜರಾತ್ಈ ದೇವಾಲಯವು ಗುಜರಾತ್ ರಾಜ್ಯದ ದ್ವಾರಕಾದಲ್ಲಿದೆ. ಪುರಾತತ್ವ ಸಂಶೋಧಕರ ಪ್ರಕಾರ ಈ ದೇವಾಲಯವು 2200-2000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ದ್ವಾರಕಾದಿಶ್ ದೇವಾಲಯವನ್ನು ಭಗವಾನ್ ಶ್ರೀಕೃಷ್ಣನ ಮೊಮ್ಮಗ ವಜ್ರನಾಭ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ.

ಖತುಶ್ಯಾಮ್ ಜಿ, ರಾಜಸ್ತಾನರಾಜಸ್ತಾನದ ಸಿಕರ್​ನಲ್ಲಿ ಖತುಶ್ಯಾಮ್ ಜಿ ದೇವಾಲಯವನ್ನು ಭೀಮಾ ಮತ್ತು ಹಿದಿಂಬಾ ಅವರ ಮೊಮ್ಮಗ ಬಾರ್​ಬರಿಕ್ ಅವರಿಗೆ ಸಮರ್ಪಿಸಲಾಗಿದೆ. ಮಹಾಭಾರತ ಯುದ್ಧನ ನಂತರ ಶ್ರೀ ಕೃಷ್ಣನು ಬಾರ್​ಬರಿಕ್ ರುಂಡವನ್ನು ರುಪಾವತಿ ನದಿಯಲ್ಲಿ ವಿಸರ್ಜಿಸಿದ್ದರು. ಇದೇ ವೇಳೆ ಭಗವಾನ್ ಕೃಷ್ಣ, ಬಾರ್​ಬರಿಕ್ ಕಲಿಯುಗದಲ್ಲಿ ಶ್ಯಾಮ್​ ಹೆಸರಿನಲ್ಲಿ ಪುನರ್ಜನ್ಮ ಪಡೆಯಲಿದ್ದಾರೆ ಎಂದು ಸೂಚಿಸಿದ್ದರು. ಹೀಗಾಗಿ ಇದೇ ಪ್ರದೇಶದಲ್ಲಿ ಖತು ಶ್ಯಾಮ್ ಜಿ ದೇವಾಲಯ ನಿರ್ಮಿಸಲಾಗಿದ್ದು, ಇದು ಹಿಂದೂಗಳ ಅತ್ಯಂತ ಪೂಜ್ಯ ದೇವಸ್ಥಾನಗಳಲ್ಲಿ ಒಂದಾಗಿದೆ.

ರಾಜಗೋಪಾಲಸ್ವಾಮಿ ದೇವಸ್ಥಾನ, ತಮಿಳುನಾಡುA post shared by K!SHORE (@me_kishoren) on

ದಕ್ಷಿಣದ ದ್ವಾರಕಾ ಎಂದು ಪ್ರಸಿದ್ದಿ ಪಡೆದಿರುವ ಈ ದೇವಾಲಯ ಇರುವುದು ತಮಿಳುನಾಡಿನ ಮನ್ನಾರ್​ಗುಡಿಯಲ್ಲಿ. 23 ಎಕರೆ ವಿಸ್ತಾರ ಜಾಗದಲ್ಲಿ ಸುಂದರ ದೇವಾಲಯನ್ನು ನಿರ್ಮಿಸಲಾಗಿದೆ. ಇಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಶ್ರೀ ಕೃಷ್ಣ ಮಠ, ಕರ್ನಾಟಕA post shared by Ashwini Bhat (@abasketfullofash) on

ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಉಡುಪಿಯ ಶ್ರೀ ಕೃಷ್ಣ ಮಠ ಕೂಡ ಒಂದು. 13 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ಮಠದ ಅಧೀನದಲ್ಲಿ ಅಷ್ಟ ಮಠಗಳು ಕಾರ್ಯ ನಿರ್ವಹಿಸುತ್ತದೆ. ಶ್ರೀ ಮಧ್ವಾಚಾರ್ಯರು ಇಲ್ಲಿರುವ ಕೃಷ್ಣನ ಪ್ರತಿಮೆಯನ್ನು ಸ್ಥಾಪಿಸಿದ್ದರು. ಕೃಷ್ಣ ಜನ್ಮಾಷ್ಠಮಿ ದಿನದಂದು ಇಲ್ಲಿ ವಿಶೇಷ ಪೂಜೆ ಮತ್ತು ಕಾರ್ಯಗಳನ್ನು ಏರ್ಪಡಿಸಲಾಗುತ್ತದೆ.

ಶ್ರೀ ಶ್ರೀ ರಾಧಾ ಮಧನ್ ಮೋಹನ್ ಮಂದಿರ, ವೃಂದಾವನ್A post shared by Poonam Kanyal (@kanyalpoonam) on

ವೃಂದಾವನ್​ನಲ್ಲಿ ನಿರ್ಮಿಸಲಾದ ಮೊದಲ ಕೃಷ್ಣ ಮಂದಿರ ಎಂದು ಶ್ರೀ ಶ್ರೀ ರಾಧಾ ಮಧನ್ ಮೋಹನ್ ಮಂದಿರವನ್ನು ಪರಿಗಣಿಸಲಾಗುತ್ತದೆ. ದ್ವದಾಸದಿತ್ಯ ತಿಲ ಎಂಬ 50 ಅಡಿ ಬೆಟ್ಟದ ಮೇಲೆ ಈ ಮಂದಿರವನ್ನು ನಿರ್ಮಿಸಲಾಗಿದೆ. ಈ ದೇವಾಲಯದಿಂದ ಯಮುನಾ ನದಿಯನ್ನು ಕಣ್ತುಂಬಿಕೊಳ್ಳಬಹುದು.

ಬಾಲಕೃಷ್ಣ ದೇವಸ್ಥಾನ, ಕರ್ನಾಟಕA post shared by Poonam Kanyal (@kanyalpoonam) on

ಹಂಪಿಯಲ್ಲಿರುವ ಈ ದೇವಸ್ಥಾನವು ಯುನೆಸ್ಕೋನ ವಿಶ್ವ ಪರಂಪರೆಯ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ದೇವಾಲಯದ ಸುಂದರ ಕಲಾಕೃತಿಗಳ ಕೆತ್ತನೆ ಆರ್ಕಷಣೆಯ ಕೇಂದ್ರವಾಗಿದೆ. ಹಂಪಿ ಬಾಲಕೃಷ್ಣ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತದೆ.

ಶ್ರೀ ನಾಥ್​ಜಿ ದೇವಾಲಯ, ರಾಜಸ್ಥಾನರಾಜಸ್ತಾನದ ನಾಥ್​ದ್ವಾರದಲ್ಲಿರುವ ಶ್ರೀ ನಾಥ್​ಜಿ ದೇವಾಲಯದಲ್ಲಿ ಏಳು ವರ್ಷದ ಬಾಲ ಕೃಷ್ಣನ ವಿಗ್ರಹವಿದೆ. ಗೋರ್ವಧನ್ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ದೇಶದ ಪ್ರಮುಖ ಕೃಷ್ಣ ಮಂದಿರಗಳಲ್ಲಿ ಒಂದಾಗಿದ್ದು, ಇಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ವಿಶೇಷ ಪೂಜೆ ಜರುಗುತ್ತದೆ.

ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನ, ಕೇರಳA post shared by Bipi Bipichan (@bipibipichan) on

ಕೇರಳದಲ್ಲಿರುವ ದೇವಾಲಯಗಳಲ್ಲಿ ಗುರುವಾಯೂರ್ ಶ್ರೀ ಕೃಷ್ಣ ಮಂದಿರ ಪ್ರಮುಖವಾದದ್ದು. ಇಲ್ಲಿ ಭಗವಾನ್ ಶ್ರೀಕೃಷ್ಣ ಅವತಾರ ರೂಪದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಇಲ್ಲಿ ಬಾಲ ಕೃಷ್ಣನ ವಿಗ್ರಹವನ್ನು ಪ್ರತಿಸ್ಠಾಪಿಸಲಾಗಿದೆ. ಈ ದೇವಾಲಯದ ಅಧೀನದಲ್ಲಿ 56 ಆನೆಗಳನ್ನು ಸಾಕಲಾಗುತ್ತಿದ್ದು, ವಿಶೇಷ ಪೂಜೆ ಮತ್ತು ಉತ್ಸವ ಕಾರ್ಯಕ್ರಮದಲ್ಲಿ ಇವುಗಳನ್ನು ಮೆರವಣಿಗೆಗೆ ಬಳಸಲಾಗುತ್ತದೆ. ಇಲ್ಲಿ ಕೃಷ್ಣ ಜನ್ಮಾಷ್ಟಮಿ ದಿನ ಪೂಜೆ ಪೂಜೆ ಮತ್ತು ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...