ಮನೀಶ್ ಮಲ್ಹೋತ್ರಾ ವಿನ್ಯಾಸದಲ್ಲಿ ಮಿಂಚಿದ ಬಾಲಿವುಡ್​ನ ಯುವ ತಾರೆಯರು

news18
Updated:August 3, 2018, 5:52 PM IST
ಮನೀಶ್ ಮಲ್ಹೋತ್ರಾ ವಿನ್ಯಾಸದಲ್ಲಿ ಮಿಂಚಿದ ಬಾಲಿವುಡ್​ನ ಯುವ ತಾರೆಯರು
news18
Updated: August 3, 2018, 5:52 PM IST
-ನ್ಯೂಸ್ 18 ಕನ್ನಡ

ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಗೆ-ತೊಡುಗೆಗಳಲ್ಲಿ ಮಿಂಚುವ ಬಾಲಿವುಡ್​ ತಾರೆಯರೇ ಹೆಚ್ಚು. ಹಾಗೆಯೇ ಇತ್ತೀಚೆಗೆ ಮನೀಶ್ ಅವರು ಯುವ ತಾರೆಗಳನ್ನು ಜೊತೆಗೂಡಿಸಿ ಫ್ಯಾಷನ್ ಶೋ ಅನ್ನು ಆಯೋಜಿಸಿದ್ದರು. ಬ್ರೈಡಲ್ ಕೌಚರ್ ಕಲೆಕ್ಷನ್ 2018 ಎಂಬ ವಧುವಿಗಾಗಿ ವಿನ್ಯಾಸಗೊಳಿಸಲಾದ ಫ್ಯಾಷನ್ ಧರಿಸುಗಳ ಕಲೆಕ್ಷನ್​ಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು. ಈ ಶೋನಲ್ಲಿ  ಜಾಹ್ನವಿ ಕಪೂರ್, ಖುಷಿ ಕಪೂರ್, ಸಾರಾ ಅಲಿ ಖಾನ್, ಮೌನಿ ರಾಯ್ ಸೇರಿದಂತೆ ಹಲವು ನಟಿಯರು ರ‍್ಯಾಂಪ್ ವಾಕ್ ಮಾಡಿದರು. ಆದರೆ ಈ ಶೋಗೆ ಮತ್ತಷ್ಟು ಕಳೆ ತಂದಿದ್ದು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್. ಬಿಟೌನ್​ನ ಈ ಜೋಡಿಗಳು ರ‍್ಯಾಂಪ್ ವೇಳೆ ಹೆಜ್ಜೆ ಹಾಕುವ ಮೂಲಕ ಫ್ಯಾಷನ್ ಪ್ರಿಯರ ಮನಗೆದ್ದರು.

ಜಾಹ್ನವಿ ಕಪೂರ್

ಮನೀಶ್ ವಿನ್ಯಾಸಗೊಳಿಸಿದ ಅದ್ಭುತ ಉಡುಗೆಯಲ್ಲಿ ಯುವ ನಟಿ ಜಾಹ್ನವಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ವೆಲ್ವೆಟ್ ಸ್ಕರ್ಟ್​ ರೀತಿಯ ಲೆಹೆಂಗಾದಲ್ಲಿ ಜಾಹ್ನವಿ ಕಪೂರ್ ಹೆಜ್ಜೆ ಹಾಕಿದರು. ಹೂವಿನ ಅಲಂಕಾರದಿಂದ ಕಸೂತಿ ಮಾಡಿದ ಈ ವಸ್ತ್ರದ ಸ್ಕರ್ಟ್​ಅನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು ಮನೀಶ್ ಮಲ್ಹೋತ್ರಾ ಅವರ ಡೈಸನಿಂಗ್​ಗೆ ಹಿಡಿದ ಕನ್ನಡಿಯಂತಿತ್ತು. 'ದಢಕ್' ಚಿತ್ರದಲ್ಲಿ ಸಾಧಾರಣ ಹುಡುಗಿ ಪಾತ್ರದಲ್ಲಿ ಕಾಣಿಸಿದ್ದ ಜಾನ್ವಿ ಮಿಂಚಿದ್ದು ಮಾತ್ರ ಮನೀಶ್ ಮಲ್ಹೋತ್ರಾ ಅವರ ಶೋನಲ್ಲಿ ಎಂದರೆ ತಪ್ಪಾಗಲಾರದು.

ಸಾರಾ ಅಲಿ ಖಾನ್ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಕೂಡ ಈ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಿಭಿನ್ನವಾಗಿ ವಿನ್ಯಾಸಗೊಳಿಸಿದ ಬ್ಲೌಸ್ ಮತ್ತು ಲೆಹಂಗಾ ಉಡುಪಿನಲ್ಲಿ ಸಾರಾ ಅಲಿ ಖಾನ್ ಕಾಣಿಸಿದ್ದರು.ಕೂದಳನ್ನು ಹರಿಬಿಟ್ಟು, ಕಡಿಮೆ ಮೇಕಪ್​ನಲ್ಲಿ ಹೆಜ್ಜೆ ಹಾಕಿದ ಸಾರಾ ಅವರ ಉಡುಪು ನೋಡುಗರ ಮೆಚ್ಚುಗೆ ಪಡೆಯಿತು.ಸುಶಾಂತ್ ಸಿಂಗ್ ರಜಪೂತ್ ನಾಯಕನಾಗಿ ನಟಿಸಿರುವ 'ಕೇದರನಾಥ' ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್​ಗೆ ಪಾದಾರ್ಪಣೆಗೈಯುತ್ತಿರುವ ಸಾರಾ ಅಲಿ ಖಾನ್ ಈ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಖುಷಿ ಕಪೂರ್ದಿವಂಗತ ನಟಿ ಶ್ರೀದೇವಿ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಸಹ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ಬ್ರೈಡಲ್ ಕೌಚರ್ ಕಲೆಕ್ಷನ್ ಶೋನಲ್ಲಿ ಹೆಜ್ಜೆ ಹಾಕಿದರು. ಬಾಲಿವುಡ್ ಬಣ್ಣದ ಲೋಕದಿಂದ ದೂರ ಉಳಿದಿರುವ ಖುಷಿ ಕಪೂರ್ ಇದೇ ಮೊದಲ ಬಾರಿ ಫ್ಯಾಷನ್ ಲೋಕದಲ್ಲಿ ಕಾಣಿಸಿಕೊಂಡರು.ಖುಷಿಯ ಎತ್ತರಕ್ಕನುಗುಣವಾಗಿ ವಿನ್ಯಾಸಗೊಳಿಸಿದ ಉಡುಗೆಯಲ್ಲಿ ಎವರ್​ಗ್ರೀನ್​ ನಟಿಯ ಮಗಳು ಯಾವುದೇ ಸೆಲೆಬ್ರಿಟಿ ಕಮ್ಮಿಯಿಲ್ಲದಂತೆ ಮಿಂಚುತ್ತಿದ್ದರು. ಬೂದು ಬಣ್ಣದ ವಸ್ತ್ರಕ್ಕೆ ಹೊಳಪಿನ ಕಸೂತಿಯೊಂದಿಗೆ ವಿನ್ಯಾಸಗೊಳಿಸಲಾದ ಈ ಉಡುಪಿನಲ್ಲಿ ಖುಷಿ ಖುಷಿಯಾಗಿ ಪೋಸ್ ನೀಡಿದ್ದರು. ಸದ್ಯ ಅಕ್ಕ ಜಾಹ್ನವಿಯಂತೆ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಬೇಕೆಂದು ಬಯಸಿರುವ ಖುಷಿ ಕಪೂರ್ ಈ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನಬಹುದು.
First published:August 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ