Jamun Seeds And Diabetes: ಮಧುಮೇಹಿಗಳಿಗೆ ನೇರಳೆ ಹಣ್ಣಿನ ಬೀಜಗಳಿಂದ ಆಗುವ ಪ್ರಯೋಜನಗಳು ಮತ್ತು ಸೇವಿಸುವುದು ಹೇಗೆ?

ನೇರಳೆ ಹಣ್ಣು ಶುಗರ್ ಕಾಯಿಲೆ ಹೊಂದಿದವರಿಗೆ ರಾಮಬಾಣ. ನೇರಳೆ ಹಣ್ಣಿನ ಬೀಜಗಳು ರಕ್ತದಲ್ಲಿ ಹೆಚ್ಚುತ್ತಿರುವ ರಕ್ತದ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸುತ್ತವೆ ಎಂದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇಸಿಗೆಯಲ್ಲಿ (Summer) ಹಣ್ಣುಗಳ (Fruits) ಸುಗ್ಗಿಯೇ ಇರುತ್ತದೆ. ವಿವಿಧ ಹಾಗೂ ವಿಭಿನ್ನ ಆರೋಗ್ಯ (Health) ಪ್ರಯೋಜನ ನೀಡುವ ಹಣ್ಣುಗಳು ಬೇಸಿಗೆಯಲ್ಲಿ ಸಿಗುತ್ತವೆ. ಈ ಹಣ್ಣುಗಳಲ್ಲಿ ಮಾವು, ಕಲ್ಲಂಗಡಿ, ಕರ್ಬೂಜ್, ಸೇಬು, ಪೇರಳೆ, ನೇರಳೆ (Jamun), ಪಪ್ಪಾಯಿ, ಪೈನಾಪಲ್, ದ್ರಾಕ್ಷಿ ಹೀಗೆ ವಿವಿಧ ಹಣ್ಣುಗಳು ಮಾರುಕಟ್ಟೆಗೆ (Market) ಲಗ್ಗೆ ಇಡತ್ತವೆ. ಬೇಸಿಗೆಯಲ್ಲಿ ಉಂಟಾಗುವ ತಾಪ ಹಾಗೂ ಕಾಯಿಲೆಗಳನ್ನು ಗುಣ ಪಡಿಸಲು ಈ ಹಣ್ಣುಗಳು ಅತ್ಯಂತ ಹೆಚ್ಚು ಸಹಾಯ ಮಾಡುತ್ತವೆ. ಅದರಲ್ಲೂ ಬೆರ್ರಿ ಹಣ್ಣುಗಳನ್ನು ತಿನ್ನುವ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇ ಬೇಕು. ಹಣ್ಣುಗಳ ಆರೋಗ್ಯ ಪ್ರಯೋಜನಗಳನ್ನು ಮರೆ ಮಾಚಲು ಸಾಧ್ಯವೇ ಇಲ್ಲ.

    ನೇರಳೆ ಹಣ್ಣಿನ ಬೀಜಗಳನ್ನು ತಿನ್ನುವ ಪ್ರಯೋಜನಗಳು

    ಆಯುರ್ವೇದದಲ್ಲಿ ಹಣ್ಣುಗಳನ್ನು ತಿನ್ನುವ ಪ್ರಯೋಜನಗಳ ಬಗ್ಗೆ ಚೆನ್ನಾಗಿ ಹೇಳಲಾಗಿದೆ. ಇತ್ತ ಯುನಾನಿ ಮತ್ತು ಚೈನೀಸ್ ಔಷಧಿಗಳಲ್ಲೂ ಹಣ್ಣುಗಳನ್ನು ಬಳಕೆ ಮಾಡುತ್ತಾರೆ. ಜೊತೆಗೆ ಹಣ್ಣುಗಳ ಸೇವನೆಯ ಪ್ರಯೋಜನಗಳ ಬಗ್ಗೆ ಹೇಳಿದ್ದಾರೆ. ಬೆರ್ರಿ ಹಣ್ಣುಗಳನ್ನು ತಿಂದ ನಂತರ ನಾವು ಎಸೆಯುವ ಬೀಜಗಳು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತಿರದೇ ಇರಬಹುದು.

    ಅದರಲ್ಲೂ ನೇರಳೆ ಹಣ್ಣು ಶುಗರ್ ಕಾಯಿಲೆ ಹೊಂದಿದವರಿಗೆ ರಾಮಬಾಣ. ನೇರಳೆ ಹಣ್ಣಿನ ಬೀಜಗಳು ರಕ್ತದಲ್ಲಿ ಹೆಚ್ಚುತ್ತಿರುವ ರಕ್ತದ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸುತ್ತವೆ ಎಂದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು

    ಮಧುಮೇಹಿಗಳ ರಕ್ತದ ಸಕ್ಕರೆ ವೇಗ ನಿಧಾನ ಮಾಡುತ್ತದೆ ನೇರಳೆ ಹಣ್ಣಿನ ಬೀಜಗಳು

    ನೇರಳೆ ಹಣ್ಣು ಮತ್ತು ಬೀಜಗಳಲ್ಲಿ ಜಾಂಬೋಲಿನ್ ಮತ್ತು ಜಂಬೋಸಿನ್ ಎಂಬ ಪದಾರ್ಥಗಳು ಕಂಡು ಬರುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಇದು ರಕ್ತದಿಂದ ಬಿಡುಗಡೆಯಾಗುವ ರಕ್ತದ ಸಕ್ಕರೆ ವೇಗವನ್ನು ನಿಧಾನ ಮಾಡುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸುತ್ತದೆ.

    ಮೂತ್ರ ವಿಸರ್ಜನೆ ಸಮಸ್ಯೆ ನಿವಾರಣೆಗೆ ಸಹಕಾರಿ

    ನೇರಳೆ ಹಣ್ಣಿನ ಬೀಜಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಧುಮೇಹ ಕಾಯಿಲೆ ಹೆಚ್ಚಾಗದಂತೆ ತಡೆಯುತ್ತದೆ. ಭಾರತೀಯ ಬ್ಲ್ಯಾಕ್‌ಬೆರಿ ಅಂದರೆ ನೇರಳೆ ಹಣ್ಣಿನಲ್ಲಿ ಸಂಕೋಚಕ ಮತ್ತು ಮೂತ್ರವರ್ಧಕ ವಿರೋಧಿ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದು ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಸ್ಯೆ ನಿವಾರಿಸುತ್ತದೆ.

    ಇದು ಹೈಪೊಗ್ಲಿಸಿಮಿಕ್ ಗುಣ ಲಕ್ಷಣ ಹೊಂದಿದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಈ ಎಲ್ಲಾ ವಿಶೇಷತೆ ನೇರಳೆ ಹಣ್ಣಿನ ಬೀಜಗಳಲ್ಲಿ ಕಂಡು ಬರುತ್ತವೆ.

    ನೇರಳೆ ಹಣ್ಣಿನ ಬೀಜಗಳು ಕರ್ನಲ್ಗಳನ್ನು ಹೇಗೆ ಬಳಸುವುದು?

    ನೇರಳೆ ಹಣ್ಣಿನ ಬೀಜಗಳನ್ನು ತೊಳೆದು ಸ್ವಚ್ಛವಾದ ಪಾತ್ರೆಯಲ್ಲಿ ಸಂಗ್ರಹಿಸಿ. ಈ ಬೀಜಗಳನ್ನು ಒಣಗಲು ಬಿಡಿ. ಅವು ಸೂರ್ಯನ ಬೆಳಕಿನಲ್ಲಿ ಸರಿಯಾಗಿ ಒಣಗಲು ಕನಿಷ್ಠ ಮೂರ್ನಾಲ್ಕು ದಿನಗಳು ಬೇಕಾಗುತ್ತದೆ. ಬೀಜಗಳನ್ನು ಒಣಗಿಸಿದ ನಂತರ ಅವುಗಳ ಮೇಲಿನ ಪದರ ತೆಗೆದು ಹಾಕಿ. ಅಂದರೆ ಸಿಪ್ಪೆ ತೆಗೆದು ಮತ್ತು ಹಸಿರು ಭಾಗ ಸಂಗ್ರಹಿಸಿ.

    ಬೀಜಗಳನ್ನು ಎರಡು ಭಾಗಗಳಾಗಿ ಒಡೆದು ಕೆಲವು ದಿನಗಳವರೆಗೆ ಒಣಗಲು ಬಿಡಿ. ಒಣಗಿದ ಬೀಜಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಕರ್ನಲ್‌ಗಳಿಂದ ತಯಾರಿಸಿದ ಈ ಪುಡಿಯನ್ನು ಪೆಟ್ಟಿಗೆಯಲ್ಲಿ ಇರಿಸಿ ಮತ್ತು ಅಗತ್ಯವಿದ್ದಾಗ ಬಳಸಿ.

    ಇದನ್ನೂ ಓದಿ: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?

    ಹೇಗೆ ಸೇವಿಸಬೇಕು?

    ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿ ಬೆರೆಸಿ ಸೇವಿಸಿ. ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.
    Published by:renukadariyannavar
    First published: