ಇಂದಿನ ದಿನಗಳಲ್ಲಿ ಕಾಯಿಲೆಗಳು (Diseases) ಬೇಗ ಅಂಟಿಕೊಳ್ಳುತ್ತವೆ. ಕಾಯಿಲೆಗಳಿಂದಾಗಿ ಜನರು (People) ಜೀವನದ ಉತ್ಸಾಹ ಕಳೆಗುಂದುತ್ತದೆ. ಆರೋಗ್ಯವೇ ಭಾಗ್ಯ. ಹಾಗಾಗಿ ನಾವು ತಿನ್ನುವ ಮತ್ತು ಚಟುವಟಿಕೆಯ ಬಗ್ಗೆ ವಿಶೇಷವಾದ ಕಾಳಜಿ (Care) ವಹಿಸುವುದು ತುಂಬಾ ಮುಖ್ಯ. ಶೀತ ದಿನಗಳಲ್ಲಿ (Cold Days) ಆರೋಗ್ಯದ (Health) ಕಾಳಜಿ ತುಸು ಹೆಚ್ಚೇ ತೆಗೆದುಕೊಳ್ಳಬೇಕಾಗುತ್ತದೆ. ಶೀತದಲ್ಲಿ ಬರುವ ಕೆಲವು ಸಮಸ್ಯೆಗಳ ನಿವಾರಣೆಗೆ ಬೆಲ್ಲ ಸಹಕಾರಿ ಆಗಿದೆ. ಬೆಲ್ಲದ (Jaggery) ಸೇವನೆ ಹಲವು ಆರೋಗ್ಯ ಪ್ರಯೋಜನ ತಂದು ಕೊಡುತ್ತದೆ. ಬೆಲ್ಲವು ನೈಸರ್ಗಿಕ ಸಿಹಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಲ್ಲವು ವಿವಿಧ ಬಣ್ಣ ಮತ್ತು ಆಕಾರಗಳಲ್ಲಿ ದೊರೆಯುತ್ತದೆ.
ಬೆಲ್ಲದ ಆರೋಗ್ಯ ಪ್ರಯೋಜನಗಳು
ಬೆಲ್ಲವು ಹಲವು ಬಣ್ಣ ಮತ್ತು ರುಚಿ ಹೊಂದಿದೆ. ಬೆಲ್ಲವು ಪ್ರಕೃತಿಯಲ್ಲಿ ಬೆಚ್ಚಗಿರುತ್ತದೆ. ಚಳಿಗಾಲದಲ್ಲಿ ಬೆಲ್ಲದ ಸೇವನೆ ಹಲವು ಅನಾರೋಗ್ಯ ಸಮಸ್ಯೆಯಿಂದ ಕಾಪಾಡುತ್ತದೆ.
ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಹೆಚ್ಚಾಗಿ ಚಹಾ, ಬೆಲ್ಲದ ಸಿಹಿ ತಿಂಡಿ, ಖೀರ್ ಅಥವಾ ಚಪಾತಿ, ದೋಸೆ ಜೊತೆ ಸವಿಯಲಾಗುತ್ತದೆ.
ಬೆಲ್ಲವು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು, ರಂಜಕ ಮತ್ತು ತಾಮ್ರ ಸೇರಿ ವಿಟಮಿನ್ ಮತ್ತು ಖನಿಜಗಳಿಂದ ಕೂಡಿದೆ. ಹಾಗಾಗಿ ನಗರಗಳಲ್ಲಿ ಹಾಗೂ ವಾಯು ಮಾಲಿನ್ಯ, ಕಲುಷಿತ ವಾತಾವರಣದಲ್ಲಿ ವಾಸ ಮಾಡುವವರು ಬೆಲ್ಲ ಸೇವನೆ ಮಾಡುವುದು ಮುಖ್ಯ.
ಆಹಾರದಲ್ಲಿ ಬೆಲ್ಲ ಸೇರಿಸಿ. ಆಯುರ್ವೇದದ ಪ್ರಕಾರ ಬಿಸಿ ನೀರು ಮತ್ತು ಬೆಲ್ಲ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾದ ಪ್ರತಿವಿಷವಾಗಿದೆ. ಇದು ನೈಸರ್ಗಿಕ ಜೀರ್ಣಕಾರಿ ಕಿಣ್ವಗಳನ್ನು ವರ್ಧಿಸುತ್ತದೆ. ಜೀರ್ಣಕ್ರಿಯೆ ವೇಗವಾಗಿಸುತ್ತದೆ. ಕಿಡ್ನಿ ಸಂಬಂಧಿ ಕಾಯಿಲೆ ತಡೆಗೆ ಸಹಕಾರಿ.
ಯೋಗ ತರಬೇತುದಾರ ಅವ್ನಿ ತಲ್ಸಾನಿಯಾ ಹೇಳಿರುವ ಪ್ರಕಾರ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರು ತಾವು ಸೇವನೆ ಮಾಡುವುದಾಗಿ ಹೇಳಿದ್ದಾರೆ. ಇದು ಚಹಾ ಮತ್ತು ನಿಂಬೆ ಪಾನಕಕ್ಕೆ ಆರೋಗ್ಯಕರ ಪರ್ಯಾಯವಾಗಿದೆ ಅಂತಾರೆ.
ಬೆಲ್ಲದ ನೀರು ತಯಾರಿಸುವ ವಿಧಾನ
ಬೆಲ್ಲ, ಚಿಯಾ ಬೀಜ, ನಿಂಬೆಹಣ್ಣು, ಪುದೀನ ಎಲೆ ತೆಗೆದುಕೊಳ್ಳಿ. ನೀರಿಗೆ ಬೆಲ್ಲ ಹಾಕಿ ಕರಗುವ ತನಕ ಕುದಿಸಿ. ನಂತರ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ನಿಂಬೆಹಣ್ಣು ಹಿಂಡಿ. ಮತ್ತೆ ಅರ್ಧ ಘಂಟೆ ತಣ್ಣಗಾಗಲು ಬಿಡಿ. ನಂತರ ಚಿಯಾ ಬೀಜ, ಪುದೀನ ಎಲೆ ಸೇರಿಸಿ. ಚೆನ್ನಾಗಿ ಕಲಕಿ ಕುಡಿಯಿರಿ.
ಬೆಲ್ಲದ ನೀರು ಶೀತ ರೋಗ ಲಕ್ಷಣ ನಿವಾರಿಸುತ್ತದೆ
ಬೆಲ್ಲವು ಅದರ ಪೋಷಕಾಂಶ ಭರಿತ ಪ್ರಯೋಜನ ಹೊಂದಿದೆ. ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ನಿವಾರಿಸುತ್ತದೆ. ಇದು ಹಲವಾರು ಫೀನಾಲಿಕ್ ಸಂಯುಕ್ತಗಳಿಂದ ಕೂಡಿದೆ. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ದೇಹ ವಿಶ್ರಾಂತಿ ಪಡೆಯಲು ಸಹಕಾರಿ. ಆರೋಗ್ಯ ಕಾಪಾಡುತ್ತದೆ.
ದೇಹ ನಿರ್ವಿಷ ಮಾಡುತ್ತದೆ
ಬೆಲ್ಲದ ನೀರು ದೇಹದಿಂದ ವಿಷ ತೆಗೆದು ಹಾಕುತ್ತದೆ. ಬೆಲ್ಲದಲ್ಲಿ ಉತ್ತಮ ಪ್ರಮಾಣದ ಫೈಬರ್ ಇದೆ. ಇದು ಜೀರ್ಣಾಂಗ ವ್ಯವಸ್ಥೆ ಸ್ವಚ್ಛವಾಗಲು ಸಹಕಾರಿ. ಇದು ಉಸಿರಾಟದ ವ್ಯವಸ್ಥೆ, ಶ್ವಾಸಕೋಶ, ಅನ್ನನಾಳ, ಹೊಟ್ಟೆ ಮತ್ತು ಕರುಳನ್ನು ಸ್ವಚ್ಛಗೊಳಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬೆಲ್ಲದ ನೀರು ಸೋಂಕುಗಳ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಬೆಲ್ಲವು ಮೆಗ್ನೀಸಿಯಮ್, ವಿಟಮಿನ್ ಬಿ 1, ಬಿ 6 ಮತ್ತು ಸಿ ಯ ಉತ್ತಮ ಮೂಲ. ಬೆಲ್ಲವು ಉತ್ಕರ್ಷಣ ನಿರೋಧಕ, ಖನಿಜ ಹೊಂದಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಇದನ್ನೂ ಓದಿ: ದೇಹದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಲಘುವಾಗಿ ಪರಿಗಣಿಸಬೇಡಿ!
ತೂಕ ನಷ್ಟಕ್ಕೆ ಸಹಕಾರಿ
ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಬೆಲ್ಲದ ನೀರು ತುಂಬಾ ಪ್ರಯೋಜನಕಾರಿ. ಪೊಟ್ಯಾಸಿಯಮ್ ದೇಹದಲ್ಲಿನ ಎಲೆಕ್ಟ್ರೋಲೈಟ್ ಮತ್ತು ಖನಿಜ ಮಟ್ಟ ಸಮತೋಲನಗೊಳಿಸುತ್ತದೆ. ಚಯಾಪಚಯ ಹೆಚ್ಚಿಸುತ್ತದೆ. ಕೊಬ್ಬನ್ನು ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ