Jackfruit Seeds: ಬಾದಾಮಿಗಿಂತ ದುಬಾರಿಯಂತೆ ಈ ಹಲಸಿನ ಬೀಜ, ಇದರ ಪ್ರಯೋಜನಗಳನ್ನೊಮ್ಮೆ ತಿಳ್ಕೊಳ್ಳಿ

ಆನ್ಲೈನ್ ನಲ್ಲೂ ಕೂಡ ಹಲಸಿನ ಬೀಜ ಮಾರುಕಟ್ಟೆಯನ್ನು ಪಡೆದುಕೊಂಡಿದೆ. ಹಲಸಿನ ಬೀಜಕ್ಕೆ ಇಲ್ಲಿ ಪ್ರತಿ ಕಿಲೋಗ್ರಾಂಗೆ 450 ರಿಂದ 800 ರೂ. ಇದ್ದರೆ, ಹಲಸಿನ ಪುಡಿಗೆ ಸರಾಸರಿ ಪ್ರತಿ ಕೆಜಿಗೆ 600 ರಿಂದ 800 ರೂಪಾಯಿ ಇದೆ. ಬಾದಾಮಿಗಿಂತ ಪ್ರಸ್ತುತ ಹಲಸಿನ ಬೀಜ ಹೆಚ್ಚು ದುಬಾರಿಯಾಗಿದೆ ಎಂದೇ ಹೇಳಬಹುದು.

ಹಲಸಿನ ಬೀಜ

ಹಲಸಿನ ಬೀಜ

  • Share this:
ಬೇಸಿಗೆಯ ಹಣ್ಣಿನ ಋತುವಿನಲ್ಲಿ ನಮಗೆ ಅನೇಕ ರೀತಿಯ ಹಣ್ಣು-ಹಂಪಲುಗಳು ಸಿಗುತ್ತವೆ. ನಮ್ಮ ದೇಹಕ್ಕೆ ಬೇಕಾದ ಪ್ರತಿಯೊಂದು ಪೋಷಕಾಂಶವನ್ನು (Nutrient) ಮಾವು, ಹಲಸು, ನೇರಳೆ, ಕಲ್ಲಂಗಡಿ ಹೀಗೆ ಅನೇಕ ಹಣ್ಣುಗಳು (Fruits) ಪೂರೈಸುತ್ತವೆ. ಸೀಸನ್ ಗೆ ಅನುಗುಣವಾಗಿ ಸಿಗುವ ಈ ಹಣ್ಣುಗಳ ಸೇವನೆ ಹತ್ತಾರು ಪ್ರಯೋಜನಗಳನ್ನು ನೀಡುತ್ತವೆ. ಕೆಲವೊಂದು ಹಣ್ಣುಗಳ ವಿಶೇಷತೆ ಏನೆಂದರೆ ಹಣ್ಣಿನ ಜೊತೆ ಅವುಗಳ ಸಿಪ್ಪೆ, ಬೀಜಗಳು (Seeds) ಸಹ ಪ್ರಯೋಜನಕ್ಕೆ ಬರುತ್ತವೆ. ಅವುಗಳಲ್ಲಿ ಈ ಹಲಸಿನ ಹಣ್ಣಿನ ಬೀಜ (Jackfruit Seed) ಪ್ರಮುಖವಾಗಿದೆ. ಕೆಲವು ರಾಜ್ಯಗಳಲ್ಲಿ ಆಯಾಯ ಸೀಸನ್ ಗಳಲ್ಲಿ ವಿಶೇಷವಾದ ಹಣ್ಣುಗಳು ಲಭಿಸುತ್ತವೆ. ಹಾಗೆಯೇ ಕೇರಳದಲ್ಲಿ ಹಲಸಿನ ಹಣ್ಣು ತುಂಬಾನೇ ಜನಪ್ರಿಯವಾಗಿದೆ. ಇದನ್ನು ರಾಜ್ಯದ ಅಧಿಕೃತ ಹಣ್ಣು ಎಂದರೂ ತಪ್ಪಾಗಲಾರದು.

ಹಲಸಿನ ಉಪ್ಪಿನಕಾಯಿ, ಹಲಸಿನ ತೋಳೆ ಸೇರಿ ಎಲ್ಲವಕ್ಕೂ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅದರಂತೆ ಹಲಸಿನ ಬೀಜಗಳಿಗೂ ಸಹ ಅಷ್ಟೇ ಡಿಮ್ಯಾಂಡ್ ಇದೆಯಂತೆ. ಅಲ್ಲದೇ ಆನ್ಲೈನ್ ನಲ್ಲೂ ಕೂಡ ಹಲಸಿನ ಬೀಜ ಮಾರುಕಟ್ಟೆಯನ್ನು ಪಡೆದುಕೊಂಡಿದೆ. ಹಲಸಿನ ಬೀಜಕ್ಕೆ ಇಲ್ಲಿ ಪ್ರತಿ ಕಿಲೋಗ್ರಾಂಗೆ 450 ರಿಂದ 800 ರೂ. ಇದ್ದರೆ, ಹಲಸಿನ ಪುಡಿಗೆ ಸರಾಸರಿ ಪ್ರತಿ ಕೆಜಿಗೆ 600 ರಿಂದ 800 ರೂಪಾಯಿ ಇದೆ. ಬಾದಾಮಿಗಿಂತ ಪ್ರಸ್ತುತ ಹಲಸಿನ ಬೀಜ ಹೆಚ್ಚು ದುಬಾರಿಯಾಗಿದೆ ಎಂದೇ ಹೇಳಬಹುದು.

ಇಷ್ಟೆಲ್ಲಾ ಬೇಡಿಕೆ ಏಕೆ ಎನ್ನುವ ಪ್ರಶ್ನೆಗೆ ಉತ್ತರ ಹಲಸಿನ ಬೀಜದಲ್ಲಿರುವ ಪೋಷಕಾಂಷಗಳು. ಬಾದಾಮಿ, ಪಿಸ್ತಾ, ಗೋಡಂಬಿ, ವಾಲ್ ನಟ್ ಒಳಗೊಂಡ ಡ್ರೈಪ್ರೂರ್ಟ್ಸ್ ನಂತೆಯೇ ಹಲಸಿನ ಬೀಜವು ಸಹ ಪೋಷಕಾಂಶದಲ್ಲಿ ಸಮೃದ್ಧವಾಗಿದೆ. ಹಲಸಿನ ಬೀಜವು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಉಗ್ರಾಣವಾಗಿದೆ ಎನ್ನುತ್ತಾರೆ ಆಹಾರ ತಜ್ಞರು.

ಹಲಸಿನ ಹಣ್ಣಿನ ಬೀಜದಲ್ಲಿರುವ ಪೋಷಕಾಂಶಗಳು (28-ಗ್ರಾಂ ಹಲಸಿನ ಬೀಜದಲ್ಲಿ)

  • ಕ್ಯಾಲೋರಿಗಳು: 53

  • ಕಾರ್ಬೋಹೈಡ್ರೇಟ್ಗಳು: 11 ಗ್ರಾಂ

  • ಪ್ರೋಟೀನ್: 2 ಗ್ರಾಂ

  • ಕೊಬ್ಬು: 0 ಗ್ರಾಂ

  • ಫೈಬರ್: 0.5 ಗ್ರಾಂ

  • ರೈಬೋಫ್ಲಾವಿನ್: 8%

  • ಥಯಾಮಿನ್: 7%

  • ಮೆಗ್ನೀಸಿಯಮ್: 5%

  • ರಂಜಕ: 4%


ಇದನ್ನೂ ಓದಿ:  Orange Peel Benefits: ಕಿತ್ತಳೆ ಸಿಪ್ಪೆ ಎಸೆಯುವ ಮುನ್ನ ಈ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ

ಹಲಸಿನ ಹಣ್ಣಿನ ಬೀಜದ ಪ್ರಯೋಜನ

  • ಥಯಾಮಿನ್ ಮತ್ತು ರೈಬೋಫ್ಲಾವಿನ್ ಹಲಸಿನ ಬೀಜದಲ್ಲಿ ಹೇರಳವಾಗಿದ್ದು, ಬಿ ಜೀವಸತ್ವಗಳನ್ನು ಪೂರೈಸುತ್ತದೆ

  • ಈ ಬೀಜಗಳು ಬೇಗನೆ ಜೀರ್ಣವಾಗುವುದಿಲ್ಲ ಹೀಗಾಗಿ ನಮ್ಮ ಹಸಿವನ್ನು ದೀರ್ಘಕಾಲದವರೆಗೆ ಇವು ನೀಗಿಸುತ್ತದೆ. ಹಸಿವು ನೀಗುವುದರಿಂದ ಹೆಚ್ಚುವರಿ ಆಹಾರಕ್ಕೆ ತಡೆ ಬೀಳುತ್ತದೆ. ಈ ವೇಳೆ ನಮ್ಮ ತೂಕ ಕೂಡ ಸುಧಾರಿಸುತ್ತದೆ.

  • ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಹ ನಿಯಂತ್ರಿಸಲು ಹಲಸಿನ ಬೀಜಗಳು ಸಹಾಯ ಮಾಡುತ್ತವೆ ಎನ್ನುತ್ತವೆ ಅಧ್ಯಯನಗಳು.

  • ಹಲಸಿನ ಬೀಜಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆಗಳನ್ನು ಸಹ ಇದು ನಿವಾರಿಸುತ್ತದೆ. ಚೀನಿಯರ ಆರೋಗ್ಯ ಪದ್ಧತಿಗಳಲ್ಲಿ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕವಾಗಿ ಹಲಸಿನ ಬೀಜಗಳನ್ನು ಬಳಸಲಾಗುತ್ತದೆ.

  • ವಿಟಮಿನ್ ಬಿ ಹೊಂದಿರುವ ಅಪರೂಪದ ಹಣ್ಣುಗಳಲ್ಲಿ ಹಲಸು ಒಂದಾಗಿದೆ. ಅದರಲ್ಲಿ ವಿಟಮಿನ್ ಬಿ 6 (ಪಿರಿಡಾಕ್ಸಿನ್) ನ ಶ್ರೀಮಂತ ಮೂಲವಾಗಿದೆ ಹಲಸು.

  • ನಿಯಾಸಿನ್, ರೈಬೋಫ್ಲಾವಿನ್ ಮತ್ತು ಫೋಲಿಕ್ ಆಮ್ಲ ಸೇರಿದಂತೆ ಖನಿಜಗಳನ್ನು ಸಹ ಹೊಂದಿದೆ

  • ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಕಬ್ಬಿಣವು ಸಹ ಯಥೇಚ್ಛವಾಗಿದೆ.

  • ಹಲಸಿನ ಹಣ್ಣಿನ ಬೀಜದಲ್ಲಿ ಸ್ವಲ್ಪ ಮಟ್ಟಿಗೆ ವಿಟಮಿನ್ ಸಿ ಸಹ ಇದ್ದು, ಇದು ಮಾನವ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ ರೋಗನಿರೋಧಕ ಶಕ್ತಿ ಮತ್ತು ವಿಟಮಿನ್ ಎ ಪೂರಕಗಳನ್ನು ಒದಗಿಸುತ್ತದೆ.


ಇದನ್ನೂ ಓದಿ:  Patrode Special: ನಿಮಗಿದು ಗೊತ್ತೇ? ಮಂಗಳೂರು ಸ್ಪೆಷಲ್ ಪತ್ರೊಡೆ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಗೆ ಉತ್ತಮ ಆಹಾರ!

ಇನ್ನೂ ಹಲಸಿನ ಹಣ್ಣಿನ ಬೀಜವನ್ನು ನಾವು ಬೇಯಿಸಿಕೊಂಡು, ಸುಟ್ಟುಕೊಂಡು ತಿನ್ನಬಹುದು. ಇದನ್ನು ಕೆಲವು ಕಡೆ ಸಾಂಬಾರ್ ಸಹ ಮಾಡುತ್ತಾರೆ. ಡಯಟ್ ಮಾಡುವವರು ನಿಮ್ಮ ಸಲಾಡ್ ಗಳಿಗೆ ಸಹ ಸೇರಿಸಿಕೊಳ್ಳಬಹುದು.
Published by:Ashwini Prabhu
First published: