ಥೈರಾಯ್ಡ್ ಸಮಸ್ಯೆಗೆ ಮನೆಯಲ್ಲಿಯೇ ಇದೆ ಮದ್ದು..!

ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ.

Jackfruit

Jackfruit

 • Share this:
  ಥೈರಾಯ್ಡ್...ಈ ಒಂದು ಹೆಸರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೇಳಿರುತ್ತೀರಿ. ಆದರೆ ಅದೇನೆಂಬುದು ಅನೇಕರಿಗೆ ತಿಳಿದಿಲ್ಲ ಎಂಬುದೇ ವಾಸ್ತವ. ಥೈರಾಯ್ಡ್ ಗಂಟಲಿನಲ್ಲಿ ಕಂಡುಬರುವ ಒಂದು ರೀತಿಯ ಗ್ರಂಥಿಯಾಗಿದೆ. ಚಿಟ್ಟೆಯ ಆಕಾರದಲ್ಲಿರುವ ಇದು ಶ್ವಾಸನಾಳವನ್ನು ಅಪ್ಪಿ ಹಿಡಿದಂತೆ ಕಾಣಿಸುತ್ತದೆ.

  ಈ ಗ್ರಂಥಿಯು ದೇಹದ ಚಯಾಪಚಯವನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಸಮಸ್ಯೆಯಿರುವ ಜನರಲ್ಲಿ ಈ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ಕಾರಣದಿಂದಾಗಿ ಥೈರಾಯ್ಡ್ ಹಾರ್ಮೋನ್ ಕಡಿಮೆಯಾಗುತ್ತದೆ ಅಥವಾ ಹೆಚ್ಚಾಗುತ್ತದೆ. ಆಧುನಿಕ ಜೀವನ ಶೈಲಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಸಮಸ್ಯೆಗಳಲ್ಲಿ ಇದು ಕೂಡ ಒಂದು ಆಗಿದ್ದು, ಆದರೆ ಇದರ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ. ಮುಖ್ಯವಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವ ಚಿಕಿತ್ಸೆ ಬಗ್ಗೆ ತಿಳಿದಿಲ್ಲ. ಥೈರಾಯ್ಡ್ ಸಮಸ್ಯೆಯನ್ನು ಹೋಗಲಾಡಿಸಲು ಮನೆಮದ್ದನ್ನೇ ಅವಲಂಭಿಸಬಹುದು. ಅಂತಹ ಕೆಲ ಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.

  ಹಲಸಿನ ಹಣ್ಣು ಪ್ರಯೋಜನಕಾರಿ:
  ಹೆಚ್ಚಿನವರು ಹಲಸಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಈ ದಿನಗಳಲ್ಲಿ ಮಾರುಕಟ್ಟೆಯಲ್ಲೂ ಜಾಕ್‌ಫ್ರೂಟ್ ಲಭ್ಯವಿದೆ. ಆದರೆ ಹಲಸಿನ ಹಣ್ಣಿನಲ್ಲೂ ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜಾಕ್‌ಫ್ರೂಟ್‌ನಲ್ಲಿ ಕಂಡುಬರುವ ಕಾಪರ್ ಅಂಶವು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಥೈರಾಯ್ಡ್‌ಗೆ ಸಹಾಯ ಮಾಡುತ್ತದೆ. ಇದಲ್ಲದೆ, ಇದು ಹಾರ್ಮೋನುಗಳನ್ನು ಸೃಷ್ಟಿಸಲು ಮತ್ತು ಹೀರಿಕೊಳ್ಳಲು ಸಹ ಕೆಲಸ ಮಾಡುತ್ತದೆ. ಹೀಗಾಗಿ ಥೈರಾಯ್ಡ್ ಸಮಸ್ಯೆ ಇರುವವರು ಹಲಸಿನ ಹಣ್ಣು ಸೇವಿಸುವುದು ಉತ್ತಮ.

  ಶುಂಠಿ ಪ್ರಯೋಜನಕಾರಿ:
  ಎನ್‌ಡಿಟಿವಿ ವೈದ್ಯರ ಪ್ರಕಾರ, ಥೈರಾಯ್ಡ್ ಸಮಸ್ಯೆಗಳಲ್ಲಿ ಶುಂಠಿಯು ತುಂಬಾ ಪ್ರಯೋಜನಕಾರಿಯಾಗಿದೆ. ಶುಂಠಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಹೇರಳವಾಗಿ ಇರುತ್ತವೆ. ಇದು ಥೈರಾಯ್ಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಶುಂಠಿಯಲ್ಲಿ ಉರಿಯೂತದ ಅಂಶಗಳು ಇದ್ದು ಅದು ಥೈರಾಯ್ಡ್ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಸಮಸ್ಯೆಯನ್ನು ಬಿಗಡಾಯಿಸದಂತೆ ನಿಯಂತ್ರಣದಲ್ಲಿರಿಸುತ್ತವೆ.

  ಅಯೋಡಿನ್ ಹೊಂದಿರುವ ಆಹಾರಗಳು:
  ನಿಮ್ಮ ಆಹಾರದಲ್ಲಿ ಅಯೋಡಿನ್ ಅನ್ನು ಸೇರಿಸುವ ಮೂಲಕ ಥೈರಾಯ್ಡ್ ಕಾರ್ಯವು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಸಮುದ್ರ ಆಹಾರಗಳು, ಎಲೆಕೋಸು, ಕ್ಯಾರೆಟ್ ಮುಂತಾದವುಗಳನ್ನು ತಿನ್ನಲು ಮರೆಯದಿರಿ.

  ಸೋರೆಕಾಯಿ ರಸ:
  ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಸೋರೆಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ ಬಳಿಕ ಅರ್ಧ ಗಂಟೆಯವರೆಗೆ ಏನನ್ನೂ ತಿನ್ನದಿರಿ, ಹಾಗೆಯೇ ಮತ್ತು ಕುಡಿಯಬೇಡಿ ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ಥೈರಾಯ್ಡ್​ ಸಮಸ್ಯೆಯನ್ನು ಹೋಗಲಾಡಿಸಬಹುದು.
  First published: