Home Clean: ಮನೆ ಕಸ ನೋಡಿ ಕಿರಿಕಿರಿಯಾಗ್ತಿದೆಯಾ? ಸುಲಭವಾಗಿ ಮನೆ ಕ್ಲೀನ್ ಮಾಡೋ ಸೂಪರ್ ಐಡಿಯಾ ಇಲ್ಲಿದೆ

ಮನೆ ಕ್ಲೀನ್​ ಅಂದ್ರೆ ಹೆಣ್ಣು ಮಕ್ಕಳಿಗೆ ದೊಡ್ಡ ತಲೆನೋವು. ಕೆಲವು ಸರಳ ಟಿಪ್ಸ್​ ಫಾಲೋ ಮಾಡಿ ಮನೆ ಕೆಲಸ Easy ಆಗುತ್ತೆ. ಮನೆ ಸಂಪೂರ್ಣವಾಗಿ ಸ್ವಚ್ಛವಿದ್ದಾಗಲೇ ಮನೆಯಲ್ಲಿರುವ ಮಂದಿ ಆರೋಗ್ಯವಂತರಾಗಿರಲು ಸಾಧ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆ (Home) ಚಿಕ್ಕದಿರಲಿ ದೊಡ್ಡದಿರಲಿ ಸ್ವಚ್ಛವಾಗಿಡೋದು ಮುಖ್ಯ. ಮನೆಯಲ್ಲಿ ಎಲ್ಲೆಂದರಲ್ಲಿ ವಸ್ತುಗಳು ಬಿದ್ದಿದ್ದರೆ ನೋಡುಗರಿಗೂ ಕಿರಿಕಿ ಅನ್ಸುತ್ತೆ. ಕೆಲಸಕ್ಕೆ ಹೋಗುವವರು ಸಮಯದ ಅಭಾವದಿಂದ ಮನೆ ಕ್ಲೀನ್ (Clean)​ ಮಾಡದೆ ಹಾಗೇ ಹೊರಟು ಬಿಡ್ತಾರೆ. ಇನ್ನಷ್ಟು ಮಂದಿ ಮನೆಯಲ್ಲೇ ಇದ್ರೂ  ಧೂಳು, ಕಸ ಕಣ್ಮುಂದೆ ಇದ್ರೂ ಅದನ್ನು ಕ್ಲೀನ್​ ಮಾಡೋ ಗೋಜಿಗೆ ಹೋಗಲ್ಲ. ಇದು ಮನೆಯಲ್ಲಿರೋ ಮಕ್ಕಳಿಗೆ ಹೆಚ್ಚು ಅಪಾಯಕಾರಿ (Dangerous). ಮನೆ ಕ್ಲೀನ್​ ಇಲ್ಲದಿದ್ರೆ ರೋಗರುಜಿನಗಳು ಮಕ್ಕಳನ್ನು ಕಾಡಲು ಶುರು ಮಾಡುತ್ತೆ. ಮನೆ ಸಂಪೂರ್ಣವಾಗಿ ಸ್ವಚ್ಛವಿದ್ದಾಗಲೇ ಮನೆಯಲ್ಲಿರುವ ಮಂದಿ ಆರೋಗ್ಯವಂತರಾಗಿ ಇರಲು ಸಾಧ್ಯ. ಅದರಲ್ಲೂ ಮನೆಯೊಂದರಲ್ಲಿ ಅಡುಗೆ ಕೋಣೆಯ ಸ್ವಚ್ಛತೆ ಬಹಳ ಮುಖ್ಯ. ಆದರೆ ಕಿಚನ್ (Kitchen) ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರ ಕಷ್ಟದ ಕೆಲಸ.

ಅಡುಗೆ ಮನೆ ಕ್ಲೀನ್​ ಮಾಡಲು ಟಿಪ್ಸ್

ಅಡುಗೆ ಮನೆ ಕ್ಲೀನಿಂಗ್ ಅಂದ್ರೆ ಹೆಣ್ಣು ಮಕ್ಕಳಿಗೆ ದೊಡ್ಡ ತಲೆನೋವು. ತರಕಾರಿ ತ್ಯಾಜ್ಯ, ಅಳಿದುಳಿದ ಆಹಾರ, ತಿಂಡಿಯ ಪ್ಯಾಕೆಟ್‌ಗಳು ಹೀಗೆ ಎಲ್ಲಾ ರೀತಿಯ ವೇಸ್ಟ್ ಅಡುಗೆ ಕೋಣೆಯಲ್ಲಿರುತ್ತದೆ. ಅಡುಗೆ ಕೋಣೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳೋಣ ಎಂದು ಅದೆಷ್ಟು ಬಾರಿ ಅಂದುಕೊಂಡರೂ ತ್ಯಾಜ್ಯ ಮತ್ತೆ ಮತ್ತೆ ರಾಶಿ ಬೀಳುತ್ತವೆ. ಆದರೆ ಈ ಸಿಂಪಲ್ ಕಿಚನ್ ಟ್ರಿಕ್ಸ್‌ನ್ನು ಉಪಯೋಗಿಸುವ ಮೂಲಕ ನೀವು ನಿಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.

ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಕೆ ಮಾಡುವಂತಹ ಕಿಚನ್ ಸಿಂಕ್ ನನ್ನು ಸರಿಯಾಗಿ ತೊಳೆದುಕೊಳ್ಳಬೇಕು.  ಕೀಟಾಣುಗಳು ಹಾಗೂ ಬ್ಯಾಕ್ಟೀರಿಯಾಗಳು ನೆಲೆ ನಿಲ್ಲುವುದು ಕಡಿಮೆ ಆಗುವುದು. ಪ್ರತಿನಿತ್ಯವೂ ಸಿಂಕ್ ನ್ನು ಶುಚಿ ಮಾಡಲು ಮರೆಯಬೇಡಿ.

ಇದನ್ನೂ ಓದಿ: Cleaning Tips: ಈ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛ ಮಾಡದಿದ್ದರೆ ಆರೋಗ್ಯಕ್ಕೆ ಹಾನಿಕಾರಕ

ಅಡುಗೆ ಮಾಡುವ ಗ್ಯಾಸ್ ಸ್ಟವ್ ನನ್ನು ಪ್ರತಿನಿತ್ಯವೂ ಶುಚಿ ಮಾಡಿದರೆ ಒಳ್ಳೆಯದು. ಅಡುಗೆ ಮಾಡುವ ಸಂದರ್ಭದಲ್ಲಿ ಅದನ್ನು ತಿರುಗಿಸುವಾಗ ಆಹಾರದ ಕಣಗಳು ಗ್ಯಾಸ್ ಮೇಲೆ ಬೀಳುವುದು. ಇದರಿಂದ ಕೊಳಕಾಗಬಹುದು. ಇದಕ್ಕಾಗಿ  ವಿನೇಗರ್ ಹಾಗೂ ಅಡುಗೆ ಸೋಡಾದ ಮಿಶ್ರಣವನ್ನು ಬಳಸಬಹುದು. ಸ್ಟವ್ ನ್ನು ಪ್ರತಿನಿತ್ಯವೂ ಶುಚಿ ಮಾಡಿ

ಮುಂಜಾನೆಯ ಮೊದಲ ಕೆಲಸ

ಮುಂಜಾನೆ ಎದ್ದ ಕೂಡಲೇ ಮಾಡುವ ಮೊದಲ ಕೆಲಸವೆಂದರೆ ಮಲಗುವ ಕೊಠಡಿಯಲ್ಲಿ ಹಾಸಿಗೆಯನ್ನು ಸರಿಪಡಿಸಿ. ಇದರಿಂದ ಇಡೀ ಕೊಠಡಿಯಲ್ಲಿ ಒಂದು ರೀತಿಯ ಶಿಸ್ತು, ಶಾಂತಿ ತುಂಬಿಕೊಳ್ಳುತ್ತದೆ. ಇದಕ್ಕಾಗಿ ನಿಮಗೆ ಹಿಡಿಯುವ ಸಮಯ ಅರ್ಧ ನಿಮಿಷದಿಂದ ಒಂದು ನಿಮಿಷ. ಒಂದು ದಿನ ಈ ಕೆಲಸಕ್ಕೆ ಕೈ ಹಾಕಿ. ಮರುದಿನ ನೀವು ಎಷ್ಟೇ ಅವಸರದಲ್ಲಿ ಇದ್ದರೂ ಹಾಸಿಗೆಯನ್ನು ಸರಿಪಡಿಸಿದ ಮೇಲೇ ಮುಂದಿನ ಕೆಲಸ ಮಾಡ್ತೀರಾ.

ಸ್ನಾನದ ಕೊಠಡಿ ಪಳಪಳ

ಸ್ನಾನದ ಕೊಠಡಿಯಲ್ಲೂ ಅಷ್ಟೆ, ಸ್ನಾನದ ನಂತರ ಅಲ್ಲಿರುವ ಸೋಪ್‌, ಫೇಸ್‌ವಾಶ್, ಬ್ರಷ್‌ ಮೊದಲಾದವುಗಳನ್ನು ಅದಕ್ಕಾಗಿ ಇಟ್ಟಿರುವ ಜಾಗದಲ್ಲೇ ಇಡಿ. ಕೊಳೆ ಬಟ್ಟೆಗಳನ್ನು ಲಾಂಡ್ರಿ ಬ್ಯಾಗ್‌ನಲ್ಲಿ ಹಾಕಿ, ವಾರದ ಕೊನೆಗೆ ವಾಷಿಂಗ್‌ ಮಷೀನ್‌ನಲ್ಲಿ ತೊಳೆಯಬಹುದು. ಟವೆಲ್‌ ಅನ್ನು ರಾಡ್‌ ಮೇಲೆ ಹರಡಿ. ನೀರು ಹೊರಹೋಗುವ ಜಾಗದಲ್ಲಿ ಕೂದಲು ಕಟ್ಟಿಕೊಂಡರೆ ತೆಗೆದು ಹಾಕಿ. ಸಿಂಕ್‌ ಮೇಲೆ ಬೇರೆ ಯಾವುದೇ ವಸ್ತು ಇರದಂತೆ ನೋಡಿಕೊಳ್ಳಿ. ಗೋಡೆಯ ಮೇಲೆ ಸೋಪ್‌ ನೀರು ಬಿದ್ದರೆ ತಕ್ಷಣ ತೊಳೆದುಬಿಡಿ. ಇದಕ್ಕಾಗಿ ನಿಮಗೆ ಬೇಕಾದ ಸಮಯ 1–2 ನಿಮಿಷ ಅಷ್ಟೆ.

ಮನೆಯ ವಸ್ತುಗಳನ್ನು ಚೆಲ್ಲಾಡಬೇಡಿ

ಮನೆಯಲ್ಲಿ ಮಕ್ಕಳಿದ್ದರೆ ಅವರ ಆಟಿಕೆಗಳನ್ನು ಒಂದು ಕಡೆ ತುಂಬಿಡಿ.. ಬಟ್ಟೆಯನ್ನು ಕುರ್ಚಿ, ಮೇಜು, ನೆಲದ ಮೇಲೆ ಹರಡುವುದಕ್ಕಿಂತ ತೊಳೆದ ಉಡುಪುಗಳನ್ನು ಮಡಚಿ ಕಪಾಟಿನಲ್ಲಿ ಜೋಡಿಸಿ. ಕೊಳೆ ಬಟ್ಟೆಯನ್ನೂ ಅಷ್ಟೆ, ಲಾಂಡ್ರಿಬ್ಯಾಗ್‌ ತುಂಬಿ ತುಳುಕುವವರೆಗೆ ಕಾಯದೆ ಎಷ್ಟು ಸಾಧ್ಯವೋ ಅಷ್ಟು ಬಟ್ಟೆಗಳನ್ನು ತೊಳೆದು ಹಾಕಿ.

ಇದನ್ನೂ ಓದಿ: Cleaning Tips: ಬಾತ್​ ರೂಂ ಸ್ವಚ್ಛವಾಗಿರಬೇಕು ಅಂದ್ರೆ ಹೀಗೆ ಮಾಡಿ

ಮೇಜು, ಡೈನಿಂಗ್‌ ಟೇಬಲ್‌ ಅಥವಾ ಕಿಟಕಿ ಪಕ್ಕದ ಜಾಗದಲ್ಲಿ ಪೇಪರ್‌, ಇತರ ದಾಖಲೆ ಪತ್ರಗಳನ್ನು ಗುಡ್ಡೆ ಹಾಕಿಕೊಳ್ಳದೇ ಜೋಡಿಸಲು ಒಂದು 10 ನಿಮಿಷ ಮೀಸಲಿಡಿ. ಈ ಕೆಲಸವನ್ನು ವಾರದ ಕೊನೆಗೂ ಇಟ್ಟುಕೊಳ್ಳಬಹುದು. ಎಲ್ಲವನ್ನೂ ಜೋಡಿಸಿ ಫೈಲ್‌ನಲ್ಲಿ ಇಟ್ಟುಕೊಂಡಾಗ ಬೇಕಾದಾಗ ತೆರೆದು ನೋಡಬಹುದು.
Published by:Pavana HS
First published: