ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

news18
Updated:March 12, 2018, 1:49 PM IST
ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ
Woman on the scale
news18
Updated: March 12, 2018, 1:49 PM IST
ನ್ಯೂಸ್ 18 ಕನ್ನಡ

ದಪ್ಪಗಿರುವವರಿಗೆ ತೆಳ್ಳಗಾಗಬೇಕು ಎಂಬ ಆಸೆ ಇದ್ದೆ ಇರುತ್ತದೆ. ಈ ಆಸೆಯನ್ನೇ ಖಾಸಗಿ ಕಂಪೆನಿಗಳು ಹಣ ಮಾಡಿಕೊಳ್ಳುವ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿಯೇ ತೂಕ ಇಳಿಸಿಕೊಳ್ಳುವ ನಾನಾ ಬಗೆಯ ಔಷಧಿಗಳು ನಿತ್ಯ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುತ್ತವೆ.  ಈ ವಸ್ತುಗಳನ್ನು ಖರೀಸಿದಿ ಬಳಸುವ ಎಷ್ಟೋ ಮಂದಿ ಯಾವುದೇ ಫಲ ಸಿಗದೆ ಮೋಸಗುತ್ತಿದ್ದಾರೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ಬಣ್ಣಬಣ್ಣದ ಪ್ಯಾಕಿಂಗ್​ ಇರುವ ವಸ್ತುಗಳನ್ನು ಬಿಟ್ಟು, ಮನೆಯಲ್ಲೇ ಸಿಗುವ ತಿಂಡಿ-ತಿನಿಸು ಹಾಗೂ ಆರೋಗ್ಯಕರ ಡಯಟ್​ನಿಂದ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯಗಳು...

ಯಾವುದೇ ಕಾರಣಕ್ಕೂ ಬೆಳಗಿನ ಉಪಹಾರ ಬಿಡಬೇಡಿ: ನೀವು ತೂಕ ಇಳಿಸಿಕೊಳ್ಳಬೇಕಾದರೆ ಮೊದಲಿಗೆ ಬೆಳಗಿನ ಉಪಹಾರ ಸೇವಿಸಲೇ ಬೇಕು. ಇಲ್ಲವಾದಲ್ಲಿ ದಿನವಿಡಿ ಬೇರೆ ಆಹಾರವನ್ನು ಸೇವಿಸಬೇಕಾಗುತ್ತದೆ. ಇದರಿಂದ ಗ್ಯಾಸ್ಟಿಕ್ ಸಮಸ್ಯೆ ಬರಬಹುದು. ಇದು ನಿಮ್ಮ ತೂಕ ಹೆಚ್ಚಾಗುವಂತೆ ಮಾಡುತ್ತದೆ. ಅಧ್ಯಯನದ ಪ್ರಕಾರ ಬೆಳಗಿನ ಉಪಹಾರ ತ್ಯಜಿಸಿದ್ದಲ್ಲಿ ಬೊಜ್ಜು ಬೆಳೆಯುವ ಸಾಧ್ಯತೆ ಹೆಚ್ಚೆಂದು ತಿಳಿದುಬಂದಿದೆ.

ಬೆಳಗಿನ ಜಾವ ಬೆಚ್ಚಗಿನ ನೀರು ಕುಡಿಯಿರಿ:  ಬೆಳಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದು ನಿಮ್ಮ ಜೀರ್ಣಕ್ರೀಯೆಗೆ ನೆರವಾಗುತ್ತದೆ. ಇದರ ಜತೆ ನಿಂಬೆರಸ ಸೇರಿಸಿ ಕುಡಿದರೆ ಇತ್ತಷ್ಟು ಉತ್ತಮ.

ಊಟದ ಮೇಲೆ ಗಮನವಿರಲಿ: ಊಟ ಮಾಡುವ ಸಂದರ್ಭ ಪ್ರೋಟಿನ್ ಯುಕ್ತ ಆಹಾರ ಪದಾರ್ಥವನ್ನು ಬಳಸಿ. ಇದು ನಿಮ್ಮ ಕೊಬ್ಬಿನ ಸಮಸ್ಯೆಗೆ ರಾಮಬಾಣ.

ಹಣ್ಣುಗಳ ಸೇವನೆ: ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದ್ದಕ್ಕಿಂತ ಬೆಳಿಗ್ಗೆ ತಿಂಡಿ ತಿಂದು ಒಂದು ಗಂಟೆ ನಂತರ ಅಥವಾ ಮಧ್ಯಾಹ್ನ ಊಟಕ್ಕೆ ಒಂದು ಗಂಟೆ ಮುಂಚಿತವಾಗಿ ಸೇವಿಸುವುದು ಯೋಗ್ಯ. ರಾತ್ರಿವೇಳೆ ಊಟದ ಬದಲು ಓಟ್ಸ್​ ಅಥವಾ ತರಕಾರಿಗಳ ಜ್ಯೂಸ್ ಮಾಡಿ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.
Loading...

ಎಣ್ಣೆ ಪದಾರ್ಥಗಳಿಂದ ದೂರವಿರಿ: ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ. ಮೊಟ್ಟೆ, ಮಾಂಸ, ಎಣ್ಣೆ ಪದಾರ್ಥದಿಂದ ದೂರವಿರಿ. ಇವೆಲ್ಲ ದೇಹದ ತೂಕವನ್ನು ಜಾಸ್ತಿ ಮಾಡುತ್ತವೆ.

ಆರಾಮದಾರಕ ನಿದ್ರೆ:  ಪ್ರತಿನಿತ್ಯ 7 ರಿಂದ 8 ಗಂಟೆ ನಿದ್ದೆ ನಿಮ್ಮ ದೇಹಕ್ಕೆ ಅಗತ್ಯ. ನಿದ್ದೆ ಮಾಡುವುರಿಂದ ನಿಮ್ಮ ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯಾಗಿ ಬೊಜ್ಜು ಕರಗಿಸಲು ಸಹಾಯಕವಾಗುತ್ತಿದೆ.

 
First published:March 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ