Sexual Wellness | ಲೈಂಗಿಕ ಆಸಕ್ತಿ ಮೊದಲಿನಂತೆ ಚಿಮ್ಮಲು ಏನಾದರೂ ಮ್ಯಾಜಿಕ್ ಇದೆಯೇ?

ಲೈಂಗಿಕ ಆಸಕ್ತಿ ಮತ್ತೆ ಬರಲು ಏನಾದರೂ ಮ್ಯಾಜಿಕ್ ಇದೆಯೇ ನನಗೆ ತಿಳಿದಿಲ್ಲ. ನಾವಿಬ್ಬರು ಮುಖಾಮುಖಿಯಾದಾಗ ಬೇಗ ಆಯಾಸವಾಗುತ್ತಿದೆ. ಯಾಂತ್ರಿಕತೆ ಎನಿಸುತ್ತಿದೆ. ಸುಖದ ಮಟ್ಟವೂ ಕಡಿಮೆಯಾಗಿದೆ. ನನ್ನ ಗಂಡ ನನಗಿಂತ ಎಂಟು ವರ್ಷ ದೊಡ್ಡವರು, ಈ ವಯಸ್ಸಿನ ಅಂತರವೂ ಕಾರಣ ಇರಬಹುದೇ? ಅಥವಾ ನನ್ನ ಸೌಂದರ್ಯ ಮೊದಲಿನ ತರ ಇಲ್ಲ ಎನ್ನುವುದೂ ಕಾರಣವೇ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಪ್ರಶ್ನೆ: ನಾನು ಮದುವೆಯಾಗಿ ಏಳು ವರ್ಷಗಳಾಗಿವೆ, ಇದಕ್ಕೂ ಮೊದಲು ನಾನು ಮತ್ತು ನನ್ನ ಗಂಡ 14 ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ಇತ್ತೀಚೆಗೆ ಒಂದು ಅನುಮಾನ ಕಾಡುತ್ತಿದ್ದು ನಾವಿಬ್ಬರು ಮೊದಲಿನಂತೆ ಸೇರಲು ಆಗುತ್ತಿಲ್ಲ ಎನ್ನುವ ಭಯ. ವರ್ಷದಿಂದ ವರ್ಷಕ್ಕೆ ಸೇರುವ ಆಸಕ್ತಿ ಕುಗ್ಗುತ್ತಿದೆ ಎನ್ನುವ ಭಯ ನನಗೆ ಮುಖ್ಯವಾಗಿ ಕಾಡುತ್ತಿದೆ. ಲೈಂಗಿಕತೆಯ ಬಗ್ಗೆಯೇ ಆಸಕ್ತಿ ಹೋಗಿದೆಯಾ? ಸೋಮಾರಿಗಳಾಗಿದ್ದೇವೆಯಾ? ಸಂಸಾರ ಚೆನ್ನಾಗಿ ನಡೆಯಬೇಕೆಂದರೆ ಲೈಂಗಿಕ ಜೀವನವೂ ಚೆನ್ನಾಗಿರಬೇಕು ಎಂಬುದು ಪ್ರಮುಖ ಅಂಶ. ಈ ಲೈಂಗಿಕ ಆಸಕ್ತಿ ಮತ್ತೆ ಬರಲು ಏನಾದರೂ ಮ್ಯಾಜಿಕ್ ಇದೆಯೇ ನನಗೆ ತಿಳಿದಿಲ್ಲ. ನಾವಿಬ್ಬರು ಮುಖಾಮುಖಿಯಾದಾಗ ಬೇಗ ಆಯಾಸವಾಗುತ್ತಿದೆ. ಯಾಂತ್ರಿಕತೆ ಎನಿಸುತ್ತಿದೆ. ಸುಖದ ಮಟ್ಟವೂ ಕಡಿಮೆಯಾಗಿದೆ. ನನ್ನ ಗಂಡ ನನಗಿಂತ ಎಂಟು ವರ್ಷ ದೊಡ್ಡವರು, ಈ ವಯಸ್ಸಿನ ಅಂತರವೂ ಕಾರಣ ಇರಬಹುದೇ? ಅಥವಾ ನನ್ನ ಸೌಂದರ್ಯ ಮೊದಲಿನ ತರ ಇಲ್ಲ ಎನ್ನುವುದೂ ಕಾರಣವೇ?

ಉತ್ತರ: ಪ್ರಿಯ ಗೆಳತಿ, ಜೀವನದಲ್ಲಿ ಲೈಂಗಿಕತೆಯೇ ಎಲ್ಲವೂ ಅಲ್ಲ. ನಿಮ್ಮ ಲೈಂಗಿಕ ಜೀವನ ತೊಂದರೆಯಲ್ಲಿದೆ ಎನ್ನುವ ಕಾರಣಕ್ಕೆ ವಿವಾಹ ವ್ಯವಸ್ಥೆಯೇ ಅನಾರೋಗ್ಯಕರ ಎಂದು ಏಕೆ ಭಾವಿಸುವಿರಿ. ಗಮನಿಸಿ ಮದುವೆಯಾಗಿ ತುಂಬಾ ವರ್ಷಗಳಾದ ನಂತರ ಗಂಡ- ಹೆಂಡತಿ ಸೇರುವಾಗ ಈ ಬೇಸರ, ಜಿಗುಪ್ಸೆ, "ಇದೆಲ್ಲ ಈಗಲೂ ಬೇಕಾ" ಎನ್ನುವ ಭಾವನೆ ಸರ್ವೇ ಸಾಮಾನ್ಯ. ಆದರೆ ಈ ಬೇಸರ, ನಿರಾಸಕ್ತಿ, ಸೋಮಾರಿತನ ಮಲಗುವ ಕೋಣೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಅಸಮಾಧಾನ, ತಾತ್ಸಾರ ಭಾವನೆಗಳು ನಿಮ್ಮ ಸಂಸಾರಕ್ಕೆ ಪೆಟ್ಟು ಕೊಡಬಾರದು, ಈ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು, ದಿನ ಕಳೆದಂತೆ ಇದು ನಿಮ್ಮಿಬ್ಬರ ಸಂಬಂಧಕ್ಕೆ ಕೊಳ್ಳಿ ಇಡಬಹುದು.

ಮತ್ತೆ ಕೂಡುವಿಕೆಗೆ ಮ್ಯಾಜಿಕ್ ಏನಾದರೂ ನಡೆಯಬಹುದಾ ಎಂದು ಕೇಳಿದ್ದೀರಾ. ಆ ಮ್ಯಾಜಿಕ್ ನಿಮ್ಮ ಕೈಯಲ್ಲೇ ಇದೆ. ಮತ್ತೆ ಏನಾದರೂ ಮಾಡಬೇಕು ಎನ್ನುವ ನಿಮ್ಮ ಉತ್ಸಾಹ ಪ್ರಶಂಸನೀಯ. ಈ ಜೀವನೋತ್ಸಾಹ ನಿಜಕ್ಕೂ ಮೆಚ್ಚುವಂತಹದ್ದು. ಮದುವೆಯಾಗಿ ಏಳು ವರ್ಷಗಳ ನಂತರ ಆಸಕ್ತಿ ಕಡಿಮೆ ಆಗಿರುವುದು ಸರ್ವೇ ಸಾಮಾನ್ಯ. ನಿಮ್ಮ ದೈನಂದಿನ ದಿನಚರಿ, ಒತ್ತಡದ ಬದುಕು ಮತ್ತು ಜೀವನದ ಜವಾಬ್ದಾರಿಗಳಿಂದ ನಿಮ್ಮಿಬ್ಬರ ಆಸಕ್ತಿ ದಣಿದಿರಬಹುದು, ಲೈಂಗಿಕತೆಯ ಉತ್ಸಾಹಕ್ಕೂ ಮತ್ತು ಭಾವಪರವಶತೆಗೆ ಇಲ್ಲಿ ಅವಕಾಶವಿಲ್ಲ.

ಲೈಂಗಿಕತೆಯು ವಿಶ್ರಾಂತಿ ನೀಡುವ ಚಟುವಟಿಕೆಯಲ್ಲ. ಉತ್ತಮ ಲೈಂಗಿಕತೆ ಜೀವನೋತ್ಸಾಹ ಹೆಚ್ಚಿಸುತ್ತದೆ. ಒತ್ತಡ ನಿಮ್ಮಿಬ್ಬರ ಶತ್ರು ಆಗಿರಬಹುದು ಎಂಬುದು ನನ್ನ ಊಹೆ. ದಿನನಿತ್ಯದ ಒತ್ತಡಗಳ ಪಟ್ಟಿ ಮಾಡಿಕೊಂಡು ಒಂದೊಂದನ್ನೆ ಕಡಿಮೆ ಮಾಡಿಕೊಳ್ಳುತ್ತಾ ಬನ್ನಿ. ಪರಸ್ಪರ ಮಾತುಕತೆ ನಡೆಸಿ, ಒಟ್ಟಿಗೆ ಚಲನಚಿತ್ರಗಳನ್ನು ನೋಡಿ, ಚಿಕ್ಕ ಪುಟ್ಟ ವಿಷಯಗಳಲ್ಲೂ ಖುಷಿ ಅನುಭವಿಸುವುದನ್ನು ಕಲಿಯಿರಿ.

ಇದನ್ನು ಓದಿ: Sexual Wellness | ಮಗುವಿಗೆ ಹಾಲುಣಿಸುವ ಹೆಂಡತಿಗೆ ಸೆಕ್ಸ್ ಸಮಯದಲ್ಲಿ ಸ್ತನ ಅದುಮಿದರೆ ಅಡ್ಡ ಪರಿಣಾಮ ಬೀರಲಿದೆಯೇ?

ನೀವು ಮತ್ತೆ ಕೂಡುವ ಮೊದಲು ಭಾವನಾತ್ಮಕವಾಗಿ ಸ್ಪರ್ಶಿಸಿಕೊಳ್ಳಿ, ವಿಭಿನ್ನ ವಿಧಾನಗಳನ್ನು ಪ್ರಯತ್ನಿಸಿ. ಒಬ್ಬರನ್ನೊಬ್ಬರು ಮೋಹಿಸಿ, ಎಷ್ಟೇ ಉತ್ಕಟತೆ ಹೆಚ್ಚಾದರೂ ಲೈಂಗಿಕ ಕ್ರಿಯೆ ನಡೆಸಬೇಡಿ. ಕೂಡುವಿಕೆಯ ಹಸಿವು ಹೆಚ್ಚಿಸಿಕೊಳ್ಳ, ಒಬ್ಬರನ್ನೊಬ್ಬರು ಕೀಟಲೆ ಮಾಡಿಕೊಳ್ಳಿ, ನೀವು ಒಳ ಉಡುಪಿನಲ್ಲಿ ಇರುವ ಚಿತ್ರಗಳನ್ನು ಅವನಿಗೆ ಕಳುಹಿಸಿ, ನೀವು ಪ್ರಯತ್ನಿಸಲು ಬಯಸಬಹುದಾದಂತಹ ಹೊಸ ವಿಷಯಗಳ ಕುರಿತು ಮಾತನಾಡಿ, ನೀವಿಬ್ಬರು ಹೆಚ್ಚು ಸುಖ ಅನುಭವಿಸಿದ ಸಂದರ್ಭವನ್ನು ನೆನಪಿಸಿ ಅಥವಾ ನೀವು ಕೊನೆಯ ಬಾರಿ ಸೇರಿದ ಉತ್ತಮ ಸಂದರ್ಭದ ಬಗ್ಗೆ ಮಾತನಾಡಿ. ಇದೇ ನಿಮ್ಮ ಕೈಯಲ್ಲಿರುವ ಅದ್ಬುತವಾದ ಮ್ಯಾಜಿಕ್ ತಂತ್ರ.

ಇಂದಿನಿಂದಲೇ ನಿಮ್ಮ ಹುಡುಗನನ್ನು ಸಜ್ಜುಗೊಳಿಸಿ!!, ಮ್ಯಾಜಿಕ್ ಮಾಡಲು ಮುಂದಾಗಿ
Published by:HR Ramesh
First published: