Weight Loss: ತೂಕ ಇಳಿಸುವ ಪ್ರಯಾಣಕ್ಕೆ ಕೇವಲ ವಸ್ತುಗಳು ಅಲ್ಲ, ನಿಮ್ಮ ಸ್ವಯಂಪ್ರೇರಣೆ ಹೆಚ್ಚಿಸುವ ಅಂಶಗಳೂ ಮುಖ್ಯ!

ಜೀವನದಲ್ಲಿ ಏನೇ ಮಾಡುವುದು ಇದ್ದರೂ ಸಹ ಅದಕ್ಕೆ ಪ್ರೇರಣೆ ಹೊಂದಬೇಕಾಗುತ್ತದೆ. ಯಾಕೆಂದರೆ ಇದು ನಿಮ್ಮ ಗುರಿ ಸಾಧಿಸಲು ಸುಲಭ ಮಾಡುತ್ತದೆ. ಕೆಲವೊಮ್ಮೆ ಸೋಮಾರಿತನ ಅಥವಾ ಕೆಲವು ಸಮಸ್ಯೆಗಳ ಕಾರಣ ವ್ಯಕ್ತಿಯು ತಮ್ಮ ಗುರಿ ಮುಟ್ಟಲು ಸಾಧ್ಯಯವಾಗದೇ ಹಿಂದೆ ಸರಿಯುತ್ತಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಾವು ಯಾವುದೇ ಕೆಲಸಕ್ಕೆ (Work) ಕೈ ಹಾಕಿದ್ರೂ ಸಹ ಅದರಲ್ಲಿ ಸ್ವಯಂ ಹಾಗೂ ದೃಢ ನಿರ್ಧಾರ (Firm Decision) ಮಾಡಬೇಕು. ಅಂದಾಗ ಮಾತ್ರ ಅಂದುಕೊಂಡ ಕೆಲಸ ಮಾಡಲು ಸಾಧ್ಯ ಆಗೋದು. ಅದು ಮುಖ್ಯವಾಗಿ ನಾವು ವೇಟ್ ಲಾಸ್ (Weight Loss) ವಿಷಯಕ್ಕೆ ಬಂದಾಗ ದೀರ್ಘಕಾಲ ಡಯಟ್ (Diet) ಹಾಗೂ ವರ್ಕೌಟ್ ಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕಾಗುತ್ತದೆ. ಆಗ ನಮ್ಮ ದೃಢನಿರ್ಧಾರ ಹಾಗೂ ದೀರ್ಘಕಾಲದ ತಾಳ್ಮೆ ಮತ್ತು ಪರಿಶ್ರಮವೂ ಬೇಕಾಗುತ್ತದೆ. ವೇಟ್ ಲಾಸ್ ಮಾಡೋಕೆ ಅಂತ ಮನೆಯಲ್ಲಿ ಸಾಕಷ್ಟು ವಸ್ತುಗಳನ್ನ ತಂದಿಟ್ಟುಕೊಳ್ತೀವಿ. ಶೂ, ಜಿಮ್ ಸೂಟ್, ಯೋಗಾ ಮ್ಯಾಟ್ ಹೀಗೆ ಎಲ್ಲವನ್ನೂ ತಂದ್ರೂ ಅವೆಲ್ಲಾ ಕೆಲವೊಮ್ಮೆ ಮೂಲೆಗುಂಪಾಗುತ್ತವೆ.

  ತೂಕ ನಷ್ಟ ಜರ್ನಿಗೆ ಬೇಕು ಸ್ವಯಂ ಪ್ರೇರಣೆ

  ಜೀವನದಲ್ಲಿ ಏನೇ ಮಾಡುವುದು ಇದ್ದರೂ ಸಹ ಅದಕ್ಕೆ ಪ್ರೇರಣೆ ಹೊಂದಬೇಕಾಗುತ್ತದೆ. ಯಾಕೆಂದರೆ ಇದು ನಿಮ್ಮ ಗುರಿ ಸಾಧಿಸಲು ಸುಲಭ ಮಾಡುತ್ತದೆ. ಕೆಲವೊಮ್ಮೆ ಸೋಮಾರಿತನ ಅಥವಾ ಕೆಲವು ಸಮಸ್ಯೆಗಳ ಕಾರಣ ವ್ಯಕ್ತಿಯು ತಮ್ಮ ಗುರಿ ಮುಟ್ಟಲು ಸಾಧ್ಯಯವಾಗದೇ ಹಿಂದೆ ಸರಿಯುತ್ತಾನೆ. ಹಾಗೆಯೇ, ತೂಕ ಇಳಿಸುವ ಪ್ರಯಾಣದಲ್ಲಿ ಪ್ರೇರಣೆ ಹೊಂದುವುದು ತುಂಬಾ ಮುಖ್ಯ.

  ಈ ಪ್ರೇರಣೆ ನಿಮ್ಮ ಸಣ್ಣ ಆಸೆ ಅಥವಾ ದೊಡ್ಡ ಗುರಿಗೆ ಸಂಬಂಧ ಪಟ್ಟಿರಬಹುದು. ನಿಮ್ಮ ಆಯ್ಕೆಯ ಉಡುಗೆಗೆ ಹೊಂದಿಕೊಳ್ಳಲು ಅಥವಾ ಕೆಲವು ತಿಂಗಳುಗಳಲ್ಲಿ ಉತ್ತಮ ಭಕ್ಷ್ಯ ತಿನ್ನಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ನಮ್ಮ ಪ್ರೇರಣೆ ದುರ್ಬಲವಾದಾಗ ನಾವು ಅಂದುಕೊಂಡ ಕೆಲಸ ಅರ್ಧಕ್ಕೆ ನಿಲ್ಲುತ್ತದೆ.

  ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

  ತೂಕ ಇಳಿಸುವ ಪ್ರಯಾಣಕ್ಕೆ ಸಹಾಯ ಮಾಡುವ ಸ್ವಯಂಪ್ರೇರಣೆಯ ಐದು ಮಾರ್ಗಗಳು

  ತೂಕ ಇಳಿಸುವ ಪ್ರಯಾಣ ಮಧ್ಯದಲ್ಲಿ ಬಿಡಬೇಕಾದ ಸ್ಥಿತಿ ಬರುತ್ತದೆ. ನೀವು ಸಹ ಅದೇ ಸಮಸ್ಯೆ ಎದುರಿಸುತ್ತಿದ್ದರೆ ಚಿಂತಿಸಬೇಡಿ. ಏಕೆಂದರೆ ಇಂದು ನಾವು ನಿಮಗೆ ಯಾವುದೇ ಕಾರಣಕ್ಕೂ ನಿಮ್ಮ ಪ್ರೇರಣೆಯಿಂದ ಹಿಂದೆ ಸರಿಯದಂತಹ ಕೆಲವು ಸಲಹೆಗಳ ಬಗ್ಗೆ ಇಲ್ಲಿ ನಾವು ಇಂದು ನೋಡೋಣ.

  ಇದು ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಸ್ವಯಂ ಪ್ರೇರಣೆ ಹಾಗೂ ದೃಢ ನಿರ್ಧಾರಕ್ಕೆ ಕಠಿಣವಾಗಿ ನಿಲ್ಲುವಂತೆ ಮಾಡುವುದರ ಜೊತೆಗೆ ನಿಮ್ಮ ಗುರಿ ತಲುಪಲು ಸಹಾಯ ಮಾಡುತ್ತದೆ. ಹಾಗಾದ್ರೆ ಸ್ವಯಂ ಪ್ರೇರಿತರಾಗಿ ಉಳಿಯಲು ಯಾವ ಐದು ಪ್ರಾಯೋಗಿಕ ಮಾರ್ಗಗಳನ್ನು ಫಾಲೋ ಮಾಡಬೇಕು ನೋಡೋಣ.

  ನಿಮ್ಮ ಉದ್ದೇಶ ಬಲವಾಗಿರಲಿ

  ನಿಮ್ಮ ತೂಕ ನಷ್ಟ ಪ್ರಯಾಣಕ್ಕೆ ನೀವು ಬಲವಾದ ಪ್ರೇರಣೆ ಹೊಂದಬೇಕು. ಇದರ ಮೂಲಕ ನೀವು ನಿಮ್ಮ ತೂಕ ಇಳಿಸುವ ಗುರಿಯಿಂದ ದೂರವಿದ್ದಾಗ ನಿಮ್ಮ ಗುರಿಯು ನಿಮ್ಮ ಪ್ರಯಾಣದಲ್ಲಿ ನಿಮ್ಮನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಗುರಿ ಸಾಧಿಸಲು ನೀವು ತೂಕ ಕಳೆದುಕೊಂಡರೆ ನಿಮ್ಮ ವೈದ್ಯರ ಸಲಹೆಯ ಮೇರೆಗೆ ತೂಕ ಕಳೆದುಕೊಳ್ಳುವವರಿಗಿಂತ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು.

  ಪರಿಪೂರ್ಣತೆ ಬೇಕೆಂಬ ನಿರೀಕ್ಷೆ ಬೇಡ

  ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ನೀವು ಸಂಪೂರ್ಣ ಪರಿಪೂರ್ಣತೆ ನಿರೀಕ್ಷಿಸಿದರೆ ಮತ್ತೆ ನಿಮ್ಮ ನಿರೀಕ್ಷೆ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ನೀವು ನಿಮ್ಮ ಗುರಿಯತ್ತ ಗಮನ ಕೇಂದ್ರೀಕರಿಸುವುದು ಮುಖ್ಯ. ಇದು ನಿಮಗೆ ಸಹಾಯ ಮಾಡುತ್ತದೆ.

  ಗುರಿ ಸಾಧನೆಯತ್ತ ಚಿತ್ತವಿರಲಿ

  ನಿಮ್ಮ ಗುರಿ ಸಾಧಿಸಲು ನೀವು ನಿರಂತರವಾಗಿ ಶ್ರಮಿಸಬೇಕು. ತೂಕ ಇಳಿಸುವ ಗುರಿ ಹೊಂದಲು ಇದು ಸಾಕಾಗಲ್ಲ. ಅದಕ್ಕಾಗಿ ಶ್ರಮಿಸಬೇಕು. ಪಬ್ಮೆಡ್ ಸೆಂಟ್ರಲ್ ಪ್ರಕಾರ, ಫಲಿತಾಂಶದ ಮೇಲೆ ಮಾತ್ರ ಕೇಂದ್ರೀಕರಿಸುವುದು ನಿಮ್ಮ ಪ್ರೇರಣೆ ನಿಧಾನಗೊಳಿಸುತ್ತದೆ. ಇದು ಗುರಿಯು ತುಂಬಾ ದೂರ ಅನುಭವಿಸಬಹುದು. ಮತ್ತು ನೀವು ಕೆಟ್ಟದ್ದನ್ನು ಅನುಭವಿಸುತ್ತೀರಿ.

  ಜೀವನಶೈಲಿ ಅನುಗುಣವಾಗಿ ಯೋಜನೆ ಆರಿಸಿ

  ತೂಕ ನಷ್ಟದ ಪ್ರಯಾಣದಲ್ಲಿ ಉಳಿಯಲು ನೀವು ದೀರ್ಘಕಾಲ ಉಳಿಯಬಹುದಾದ ತೂಕ ನಷ್ಟದ ವಿಧಾನ ಆಯ್ಕೆ ಮಾಡುವುದು ಮುಖ್ಯ. ಯಾಕೆಂದರೆ ನಿಮ್ಮ ದಿನಚರಿಗೆ ಹೊಂದಿಕೆಯಾಗದ ವಿಧಾನ ಆರಿಸಿದರೆ, ಅದು ಡಯಟ್ ಪ್ಲಾನ್ ನ್ನು ಮಧ್ಯದಲ್ಲಿ ಬಿಡುವ ಸಾಧ್ಯತೆ ಹೆಚ್ಚಿಸುತ್ತದೆ.

  ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಜನರು ತೂಕ ಹೆಚ್ಚಿಸುವ ಸಾಧ್ಯತೆ ಕಡಿಮೆ. ಏಕೆಂದರೆ ಅಂತಹ ಜನರು ಹೆಚ್ಚಾಗಿ ಅವರು ಬಯಸುವುದಕ್ಕಿಂತ ವಿಭಿನ್ನ ಆಹಾರಕ್ರಮ ಅನುಸರಿಸಲು ಪ್ರಯತ್ನಿಸುತ್ತಾರೆ.

  ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

  ಸಣ್ಣ ಯಶಸ್ಸು ಸಿಕ್ಕಾಗಲೂ ಖುಷಿ ಪಡಿ

  ನಿಮ್ಮ ತೂಕ ನಷ್ಟ ಪ್ರಯಾಣದ ಚಿಕ್ಕ ಯಶಸ್ಸು ಸಂಭ್ರಮಿಸಿ. ಯಾಕೆಂದರೆ ಇದು ನಿಮಗೆ ಉತ್ತಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಯಶಸ್ಸು ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸೂಚಿಸುತ್ತದೆ.
  Published by:renukadariyannavar
  First published: