Jealousy: ಈ ರಾಶಿಯವರಿಗೆ ಹೊಟ್ಟೆ ಕಿಚ್ಚು ಜಾಸ್ತಿ! ಅದ್ರಲ್ಲೂ ಸಂಗಾತಿಯ ಮಹಿಳಾ ಫ್ರೆಂಡ್ಸ್ ಕಂಡ್ರೆ ಅಸೂಯೆ ಪಡೋದು ಸಹಜವಂತೆ

ಎಲ್ಲಾ ಸಂದರ್ಭದಲ್ಲಿಯೂ ನಿಮ್ಮ ಸಂಗಾತಿಯನ್ನು ಸಂದೇಹದ ದೃಷ್ಟಿಯಿಂದಲೇ ನೋಡುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ? ನಿಮ್ಮ ಸಂಗಾತಿಯ ಬಗ್ಗೆ ಮತ್ತು ಅವರಿಗಿರುವ ಮಹಿಳಾ ಸ್ನೇಹಿತೆಯರ ಬಗ್ಗೆ ನೀವು ನಿರಂತರವಾಗಿ ಸಂದೇಹದಿಂದಲೇ ನೋಡುತ್ತಿದ್ದರೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ಸಂಬಂಧದಲ್ಲಿ ಜಗಳಗಳಾಗಿ ತೊಂದರೆಯುಂಟಾಗಬಹುದು. ತಮ್ಮ ಸಂಗಾತಿಯ ಮಹಿಳಾ ಸ್ನೇಹಿತರ ಬಗ್ಗೆ ನಿರಂತರವಾಗಿ ಅಸೂಯೆ ಪಡುವ ರಾಶಿಚಕ್ರ ಚಿಹ್ನೆಗಳನ್ನು ಒಮ್ಮೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಯಾವುದೇ ಸಂಬಂಧವು ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದೇ ಇದೆ ಅಲ್ಲವೇ? ಪ್ರತಿಯೊಬ್ಬ ವ್ಯಕ್ತಿಯು (Person) ತನ್ನದೇ ಆದ ನ್ಯೂನತೆಗಳು ಮತ್ತು ಅಪರಿಪೂರ್ಣತೆಗಳನ್ನು ಹೊಂದಿರುತ್ತಾರೆ. ಇದೆಲ್ಲಾ ಗೊತ್ತಿದ್ದರೂ ನಾವು ಮದುವೆಯಾದ (Marriage) ನಂತರ ನಮ್ಮ ಕೈಹಿಡಿದು ಬರುವ ಸಂಗಾತಿಯಿಂದ ತುಂಬಾನೇ ನಿರೀಕ್ಷೆಗಳನ್ನು ಬೆಳೆಸಿಕೊಳ್ಳುತ್ತೇವೆ. ನಂತರ ಆ ನಿರೀಕ್ಷೆಗಳು ಹುಸಿಯಾದಾಗ ಸಂಬಂಧದಲ್ಲಿ ಆ ಪ್ರೀತಿ ಉಳಿಯುವುದಿಲ್ಲ. ವಾಸ್ತವವಾಗಿ ಕೆಲವು ಜನ ಹೆಂಡತಿಯರಿಗೆ ತನ್ನ ಗಂಡನಾದವನು (Husband) ಯಾರ ಜೊತೆಯಲ್ಲಿ ಕಚೇರಿಯಲ್ಲಿ ತುಂಬಾನೇ ಸಲುಗೆಯಿಂದ ಇರುತ್ತಾರೆ ಮತ್ತು ಅವರ ಮಹಿಳಾ ಸ್ನೇಹಿತರು (Friends) ಯಾರು ಅಂತೆಲ್ಲಾ ವಿವರಗಳನ್ನು ತಿಳಿದುಕೊಳ್ಳಲು ತುಂಬಾನೇ ಪ್ರಯತ್ನಿಸುತ್ತಾ ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಎಲ್ಲಾ ಸಂಬಂಧಗಳಲ್ಲಿಯೂ ಈ ಅಸೂಯೆ, ಅನುಮಾನ ಎಂಬುದು ಇದ್ದೇ ಇರುತ್ತದೆ, ಆದರೆ ಇದು ಸ್ವಲ್ಪ ಮಟ್ಟಿಗೆ ಇದ್ದರೆ ಅದು ಆರೋಗ್ಯಕರ ಅಸೂಯೆ ಎಂದು ಹೇಳಬಹುದು ಮತ್ತು ಅದು ಯಾವುದೇ ರೀತಿಯ ಸಂಬಂಧಗಳಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಎಲ್ಲಾ ಸಂದರ್ಭದಲ್ಲಿಯೂ ನಿಮ್ಮ ಸಂಗಾತಿಯನ್ನು ಸಂದೇಹದ ದೃಷ್ಟಿಯಿಂದಲೇ ನೋಡುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ? ನಿಮ್ಮ ಸಂಗಾತಿಯ ಬಗ್ಗೆ ಮತ್ತು ಅವರಿಗಿರುವ ಮಹಿಳಾ ಸ್ನೇಹಿತೆಯರ ಬಗ್ಗೆ ನೀವು ನಿರಂತರವಾಗಿ ಸಂದೇಹದಿಂದಲೇ ನೋಡುತ್ತಿದ್ದರೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ಸಂಬಂಧದಲ್ಲಿ ಜಗಳಗಳಾಗಿ ತೊಂದರೆಯುಂಟಾಗಬಹುದು. ತಮ್ಮ ಸಂಗಾತಿಯ ಮಹಿಳಾ ಸ್ನೇಹಿತರ ಬಗ್ಗೆ ನಿರಂತರವಾಗಿ ಅಸೂಯೆ ಪಡುವ ರಾಶಿಚಕ್ರ ಚಿಹ್ನೆಗಳನ್ನು ಒಮ್ಮೆ ನೋಡಿ.

ಕರ್ಕಾಟಕ ರಾಶಿ
ಒಬ್ಬ ವ್ಯಕ್ತಿಯು ತನ್ನ ಸಂಗಾತಿಯ ಮಹಿಳಾ ಸ್ನೇಹಿತರನ್ನು ನೋಡಿ ಅಸೂಯೆ ಪಡುವಂತೆ ಒತ್ತಾಯಿಸುವ ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದು ಆಳವಾಗಿ ಬೇರೂರಿರುವ ಅಭದ್ರತೆ ಅಂತ ಹೇಳಬಹುದು. ಈ ಅಭದ್ರತೆ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಇವು ತಮ್ಮ ಸಂಗಾತಿಗಳಿಗೆ ಅವರು ಸಾಕಷ್ಟು ಒಳ್ಳೆಯವರಾಗಿದ್ದಾರೆಯೇ ಎಂದು ಅವರು ಆಶ್ಚರ್ಯ ಪಡುವಂತೆ ಮಾಡುತ್ತವೆ.

ಇದನ್ನೂ ಓದಿ:  Zodiac Sign: ಸಹೋದ್ಯೋಗಿಯ ಬೆಂಬಲಕ್ಕೆ ಸದಾ ನಿಲ್ಲುವ ರಾಶಿಯ ಜನರು ಇವರು; ಕೆಲಸದ ಸ್ಥಳದಲ್ಲಿರಬೇಕು ಇಂಥವರು

ಕರ್ಕಾಟಕ ರಾಶಿಯವರಿಗೆ ಇದು ನಿಖರವಾಗಿ ಸಂಭವಿಸುತ್ತದೆ, ಮುಖ್ಯವಾಗಿ ಅವರ ಮನಸ್ಥಿತಿ ಮತ್ತು ವಿಶ್ವಾಸದ ಸಮಸ್ಯೆಗಳಿಂದಾಗಿ ಅಂತ ಹೇಳಬಹುದು. ಕೆಲವು ಮಹಿಳಾ ಸ್ನೇಹಿತರನ್ನು ಬಿಡಿ ಅಂತ ತಮ್ಮ ಸಂಗಾತಿಯನ್ನು ಸ್ಪಷ್ಟವಾಗಿ ಕೇಳಲು ಅವರಿಗೆ ಆಗದಿದ್ದಾಗ, ತಮ್ಮ ಸಂಗಾತಿಯ ಫೋನ್ ಅನ್ನು ಪರಿಶೀಲಿಸುವುದರಿಂದ ಹಿಡಿದು, ಅವರು ಎಲ್ಲವನ್ನೂ ಮಾಡಬಹುದು.

ವೃಶ್ಚಿಕ ರಾಶಿ
ಈ ವ್ಯಕ್ತಿಯು ಒಬ್ಬ ವ್ಯಕ್ತಿಯಾಗಿ ಸಾಕಷ್ಟು ಸುರಕ್ಷಿತವಾಗಿದ್ದರೂ, ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯನ್ನು ಸಾಮಾನ್ಯವಾಗಿ ಒಬ್ಬಂಟಿಗರಾಗಿಯೇ ಇರಿಸುವಂತೆ ಬಯಸುತ್ತಾರೆ, ಏಕೆಂದರೆ ಈ ಮೂಲಕ ಅವರು ತಮ್ಮ ಸಂಗಾತಿಯ ಬಾಳಿನಲ್ಲಿ ತಾವೇ ಪ್ರಮುಖ ಎಂಬುದನ್ನು ತೋರಿಸಿಕೊಳ್ಳುವ ಆಸೆ ಹೊಂದಿರುತ್ತಾರೆ. ಇದು ಆರೋಗ್ಯಕರವಲ್ಲದಿದ್ದರೂ, ಹೆಚ್ಚಾಗಿ ವೃಶ್ಚಿಕ ರಾಶಿಯವರು ಇದೇ ರೀತಿ ಕಾರ್ಯ ನಿರ್ವಹಿಸುತ್ತಾರೆ.

ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯು ಇತರ ಸಹೋದ್ಯೋಗಿಗಳಿಗೆ ಹತ್ತಿರವಾಗುತ್ತಿರುವುದನ್ನು ನೋಡಿದಾಗ ಅವರ ಅಸೂಯೆಯು ನಿಧಾನವಾಗಿ ಹೊರ ಬರುತ್ತದೆ. ಅವರು ತಮ್ಮ ಸಂಬಂಧದ ಹೊರಗೆ ಇತರರ ಸ್ನೇಹವನ್ನು ಹೊಂದಿರುವ ತಮ್ಮ ಸಂಗಾತಿಯನ್ನು ಸದಾ ಕಾಲ ನಿಂದಿಸುತ್ತಲೇ ಇರುತ್ತಾರೆ ಅಂತ ಹೇಳಬಹುದು.

ಮೀನ ರಾಶಿ
ಮೀನ ರಾಶಿಯವರು ಫ್ಲರ್ಟ್ ಮಾಡುವವರಾಗಿದ್ದು, ಅವರು ಆಗಾಗ್ಗೆ ಫ್ಲರ್ಟ್ ಮಾಡುವ ಸ್ನೇಹದಲ್ಲಿ ತೊಡಗುತ್ತಾರೆ. ಆದ್ದರಿಂದ ಈ ರಾಶಿಯವರು ತಮ್ಮ ಸಂಗಾತಿಯು ಕೆಲವು ಆಕರ್ಷಕ ಮಹಿಳಾ ಸಹೋದ್ಯೋಗಿಗಳನ್ನು ಅಥವಾ ಸ್ನೇಹಿತರನ್ನು ಹೊಂದಿದ್ದಾರೆಂದು ಅವರು ನೋಡಿದಾಗ, ಅವರು ತಕ್ಷಣವೇ ಕೋಪಗೊಳ್ಳುತ್ತಾರೆ. ಅವರು ತಮ್ಮ ಸಂಗಾತಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಅವರ ಹೆಚ್ಚಿನ ಗಮನವನ್ನು ತಮ್ಮ ಕಡೆಗೆ ಇರಿಸಿಕೊಳ್ಳಲು ಬಯಸುತ್ತಾರೆ.

ಇದನ್ನೂ ಓದಿ:  Vastu Tips: ನಿಮ್ಮ ಮನೆ ಸದಾ ಸಂತೋಷದಿಂದ ಕೂಡಿರಬೇಕೇ? ಹಾಗಿದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ

ಇದೆಲ್ಲಾ ಕಾರಣದಿಂದಾಗಿ ಈ ರಾಶಿಯವರು ಮದುವೆಯಾದ ನಂತರ ತಮ್ಮ ಸ್ನೇಹಿತರೊಂದಿಗೆ ಸ್ನೇಹವನ್ನು ಉಳಿಸಿಕೊಂಡು ಹೋಗಲು ಮತ್ತು ಹೊಸಬರ ಸ್ನೇಹವನ್ನು ಬೆಳೆಸಲು ಅವರು ಅಷ್ಟೊಂದು ಆಸಕ್ತಿಯನ್ನು ತೋರಿಸುವುದಿಲ್ಲ.
Published by:Ashwini Prabhu
First published: