Gym: ಜಿಮ್‌ಗೆ ಸೇರುವ ಮುನ್ನ ಈ ಒಂದು ಕೆಲಸವನ್ನು ಮೊದಲು ಮಾಡಿ; ವೈದ್ಯರು ಕೂಡ ಹೇಳುವುದು ಇದನ್ನೇ!

ಈಗಂತೂ ಈ ಜಿಮ್‌ಗಳಲ್ಲಿ ಅಥವಾ ಮನೆಯಲ್ಲಿ ವ್ಯಾಯಾಮ ಮಾಡುತ್ತಿರುವಾಗ ಹೃದಯ ವೈಫಲ್ಯವಾಗಿ ಮತ್ತು ಹೃದಯಾಘಾತವಾಗಿ ಜನರು ಸಾವನ್ನಪ್ಪುತ್ತಿರುವುದನ್ನು ಎಷ್ಟೋ ಸುದ್ದಿಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಸ್ವಲ್ಪ ಜನರನ್ನು ಆತಂಕಕ್ಕೆ ತಳ್ಳಿವೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಕೆಲವೊಂದು ಜಿಮ್‌ಗಳು ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಈಗಂತೂ ಈ ಜಿಮ್‌ಗಳಲ್ಲಿ (Gym) ಅಥವಾ ಮನೆಯಲ್ಲಿ ವ್ಯಾಯಾಮ (Exercise) ಮಾಡುತ್ತಿರುವಾಗ ಹೃದಯ ವೈಫಲ್ಯವಾಗಿ ಮತ್ತು ಹೃದಯಾಘಾತವಾಗಿ (Heart attack) ಜನರು ಸಾವನ್ನಪ್ಪುತ್ತಿರುವುದನ್ನು ಎಷ್ಟೋ ಸುದ್ದಿಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಸ್ವಲ್ಪ ಜನರನ್ನು ಆತಂಕಕ್ಕೆ ತಳ್ಳಿವೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಕೆಲವೊಂದು ಜಿಮ್‌ಗಳು ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ. ಜಿಮ್‌ಗೆ ಹೊಸದಾಗಿ ಬಂದು ಸೇರಿಕೊಳ್ಳುವ ಜನರಿಗೆ ಹೃದಯ ಸಂಬಂಧಿ ಕಾಯಿಲೆ (Cardiovascular disease) ಅಥವಾ ಹೃದಯ ಸಮಸ್ಯೆಗಳೇನಾದರೂ ಇವೆಯೇ ಅಂತ ತಿಳಿದುಕೊಳ್ಳಲು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಲು ಹಾಗೆಯೇ ಫಿಟ್‌ನೆಸ್ ಸರ್ಟಿಫಿಕೇಟ್ ಅನ್ನು (Fitness Certificate) ನೀಡಲು ಪ್ರೋತ್ಸಾಹಿಸುತ್ತಿವೆ.


ಜಿಮ್‌ಗೆ ಸೇರುವ ಮುನ್ನ ಹೃದಯ ಸಂಬಂಧಿ ಸಮಸ್ಯೆಗಳನ್ನು ಪರೀಕ್ಷಿಸಬೇಕು 
ಬೆಂಗಳೂರು ಮೂಲದ ಹೃದ್ರೋಗ ತಜ್ಞರೊಬ್ಬರು ಜಿಮ್‌ಗಳ ಈ ನಡೆಯನ್ನು ಶ್ಲಾಘಿಸಿದ್ದು ಜಿಮ್‌ಗೆ ಸೇರುವ ತಮ್ಮ ಗ್ರಾಹಕರು ತಮಗಿರುವ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆಹಚ್ಚಲು ಕ್ಲಿನಿಕಲ್ ತಪಾಸಣೆಗೆ ಒಳಗಾಗುವಂತೆ ಪ್ರೋತ್ಸಾಹಿಸುತ್ತಿರುವುದು ಧನಾತ್ಮಕ ಸಂಗತಿಯಾಗಿದೆ ಎಂದು ಹೇಳಿದ್ದಾರೆ.


ಡಾ. ದೀಪಕ್ ಕೃಷ್ಣಮೂರ್ತಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದು ಜಿಮ್‌ಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ ಇತ್ತೀಚಿನ ಸಾವುಗಳು
ಜಿಮ್‌ನಲ್ಲಿರುವ ಟ್ರೆಡ್‌ಮಿಲ್‌ಗಳಲ್ಲಿ ನಿಯಮಿತವಾಗಿ ವರ್ಕ್ಔಟ್ ಮಾಡುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಹೆಚ್ಚಿದ ಆತಂಕಕಾರಿ ಬೆಳವಣಿಗೆಗಳಿಂದ ಜಿಮ್‌ಗಳು ತಮ್ಮ ಗ್ರಾಹಕರ ಆರೋಗ್ಯ ತಪಾಸಣೆಯ ನೇತೃತ್ವವನ್ನು ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅವರಿಂದ ಹಿಡಿದು ಗಾಯಕ ಕೆಕೆ ಹೀಗೆ ಕೆಲವು ಸೆಲೆಬ್ರಿಟಿಗಳು ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


ಇದನ್ನೂ ಓದಿ: Health Care: ಚಿಕ್ಕಯಸ್ಸಿನಲ್ಲಿ ಗಾಂಜಾ ಸೇವಿಸಿದ್ರೆ ಹೃದಯಾಘಾತ ಗ್ಯಾರೆಂಟಿ!

ಇಷ್ಟೇ ಅಲ್ಲದೆ ಇತ್ತೀಚೆಗೆ ಹಾಸ್ಯನಟ ರಾಜು ಶ್ರೀವಾಸ್ತವ ಕೂಡ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವುದೂ ನಮಗೆಲ್ಲಾ ತಿಳಿದೇ ಇದೆ. ಒಟ್ಟಿನಲ್ಲಿ ಇದು ಸಾರ್ವಜನಿಕರನ್ನು ಹೆಚ್ಚು ಆತಂಕಕ್ಕೀಡು ಮಾಡಿದೆ, ಅತಿಯಾದ ವ್ಯಾಯಾಮ ಮಾಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಹಲವಾರು ಚರ್ಚೆಗಳನ್ನು ಸಹ ಹುಟ್ಟುಹಾಕಿದೆ.


ಜಿಮ್‌ಗಳು ಕೈಗೊಂಡಿರುವ ನಡೆಯನ್ನು ಶ್ಲಾಘಿಸಿದ ವೈದ್ಯರು
ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಇಂಟರ್ವೆನ್ಶನಲ್ ಹೃದ್ರೋಗ ತಜ್ಞ ಡಾ.ಕೃಷ್ಣಮೂರ್ತಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಜಿಮ್‌ಗಳು ಕೈಗೊಂಡಿರುವ ನಡೆಯನ್ನು ಶ್ಲಾಘಿಸಿದ್ದಾರೆ.


"ಕೆಲವು ಜಿಮ್ ಗಳು ಕ್ಲಿನಿಕಲ್ ಮೌಲ್ಯಮಾಪನವನ್ನು ಮಾಡುವಂತೆ ತಿಳಿಸುತ್ತಿರುವುದು ಮತ್ತು ಜಿಮ್‌ಗೆ ನೋಂದಾವಣೆಗೊಳ್ಳುವ ಮೊದಲು ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸುತ್ತಿರುವುದು ಒಳ್ಳೆಯ ನಡೆಯಾಗಿದೆ. ಅಕಾಲಿಕ ಪರಿಧಮನಿಯ ಕಾಯಿಲೆಯನ್ನು ಕುಟುಂಬದಲ್ಲಿ ಹೊಂದಿರುವ 28 ವರ್ಷದ ವ್ಯಕ್ತಿಯಲ್ಲಿ ಅಧಿಕ ಬಿಪಿ ಇರುವುದು ಪತ್ತೆಯಾಗಿದೆ. ಇವರು 12-15 ಕೆಜಿ ಯಷ್ಟು ಅಧಿಕ ತೂಕವನ್ನು ಹೊಂದಿದ್ದರು. ಈತ ವೈದ್ಯಕೀಯ ತಪಾಸಣೆಯನ್ನು ನಡೆಸಿದ ಕಾರಣ ಈ ವಿಚಾರ ಬೆಳಕಿಗೆ ಬಂದಿತು ಎಂಬುದಾಗಿ ವೈದ್ಯರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ:  ಸುಮ್ಮಸುಮ್ಮನೆ ಗಾಬರಿ ಆಗೋ ಸಮಸ್ಯೆ ‘ಪ್ಯಾನಿಕ್ ಅಟ್ಯಾಕ್’, ಆಲಿಯಾ ಭಟ್ ಸಹೋದರಿಗೂ ಇದೆ ಈ ಖಾಯಿಲೆ

"ವ್ಯಾಯಾಮ ಮಾಡುವಾಗ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಒಳಗಾಗುವ ಹೆಚ್ಚಿನ ಜನರು ಮೊದಲೇ ತಮ್ಮಲ್ಲಿರುವ ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ತಿಳಿದುಕೊಂಡಿರುವುದು ಉತ್ತಮ. ಆದ್ದರಿಂದ ಜಿಮ್‌ಗೆ ಸೇರುವ ಮೊದಲು ತಮ್ಮನ್ನು ವೈದ್ಯರ ಬಳಿ ಪರಿಶೀಲಿಸಿಕೊಳ್ಳುವಂತೆ ಹೇಳುವುದು ನಿರ್ಣಾಯಕವಾಗಿದೆ. ಅಲ್ಲದೆ ಅವರಿಗೆ ಎಷ್ಟು ತೀವ್ರವಾದ ತರಬೇತಿ ನೀಡಬೇಕು ಎಂಬುದನ್ನು ಕೂಡ ಜಿಮ್‌ನಲ್ಲಿರುವ ತರಬೇತಿದಾರರು ಈ ಮೂಲಕ ನಿರ್ಧಾರ ಮಾಡಬಹುದು" ಎಂಬುದು ವೈದ್ಯರ ಮಾತಾಗಿದೆ.

Published by:Ashwini Prabhu
First published: