• Home
  • »
  • News
  • »
  • lifestyle
  • »
  • Issey Miyake Died: ಖಾದಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಜಪಾನಿ ಫ್ಯಾಷನ್ ಡಿಸೈನರ್ ನಿಧನ

Issey Miyake Died: ಖಾದಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಜಪಾನಿ ಫ್ಯಾಷನ್ ಡಿಸೈನರ್ ನಿಧನ

ಇಸ್ಸೆ ಮಿಯಾಕೆ

ಇಸ್ಸೆ ಮಿಯಾಕೆ

Japanese Fashion Designer Issey Miyake: ಅಲ್ಲದೇ, ಅವರ ಈ ಕೆಲಸಗಳು ಪ್ರಪಂಚದಾದ್ಯಂತ ಫ್ಯಾಷನ್‌ನ ಮೇಲೆ ಪ್ರಭಾವ ಬೀರಿವೆ.  ತನ್ನ ವೃತ್ತಿಜೀವನದುದ್ದಕ್ಕೂ ಮಿಯಾಕೆ ಸಂಪೂರ್ಣ ವಿಭಿನ್ನ ಫ್ಯಾಷನ್ ಸೆನ್ಸ್​ ಮೂಲಕ ಹೆಸರು ಪಡೆದಿದ್ದಾರೆ.

  • Share this:

ಅರ್ಧ ಶತಮಾನಕ್ಕೂ (Half Century) ಹೆಚ್ಚು ಕಾಲ ಫ್ಯಾಷನ್ ಜಗತ್ತನ್ನ ಆಳಿದ್ದ ಜಪಾನಿನ ಫ್ಯಾಷನ್ ಡಿಸೈನರ್ (Japanese Fashion Designer ) ಇಸ್ಸೆ ಮಿಯಾಕೆ (Issey Miyake) ನಿಧನರಾಗಿದ್ದಾರೆ. 84 ನೇ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ (Cancer)  ನಿಧನರಾದರ ಜಪಾನಿನ ಫ್ಯಾಷನ್ ಡಿಸೈನರ್ ಇಸ್ಸೆ ಮಿಯಾಕೆ ಅವರ ವೃತ್ತಿಜೀವನದುದ್ದಕ್ಕೂ ಫ್ಯಾಶನ್ (Fashion) ಎನ್ನುವ ಪದಕ್ಕೆ ವಿಭಿನ್ನ ಅರ್ಥ ನೀಡಿದ್ದರು. ಹಾಗೆಯೆ ಅವರ ಅದ್ಬುತ ಕೆಲಸಗಳು ಬಟ್ಟೆಯ ಮೂಲಕ ಪ್ರಪಂಚಕ್ಕೆ ಹೊಸ ಆಯಾಮ ಕೊಟ್ಟಿತ್ತು.


ಪ್ರತಿಷ್ಠಿತ ಫ್ಯಾಷನ್​ ಹೌಸ್​ನಲ್ಲಿ ತರಬೇತಿ ಪಡೆದಿದ್ದ ಮಿಯಾಕೆ


1938 ರಲ್ಲಿ ಹಿರೋಷಿಮಾದಲ್ಲಿ ಜನಿಸಿದ ಮಿಯಾಕೆ ಟೋಕಿಯೊದಲ್ಲಿ ಗ್ರಾಫಿಕ್ ಡಿಸೈನ್​ ಅಧ್ಯಯನ ಮಾಡಿದ್ದು,  ಜಪಾನೀಸ್-ಅಮೇರಿಕನ್ ಶಿಲ್ಪಿ ಇಸಾಮು ನೊಗುಚಿ ಮತ್ತು ಇರ್ವಿಂಗ್ ಪೆನ್ನ ಅವರ ಬ್ಲಾಕ್​ ಆ್ಯಂಡ್​ ವೈಟ್​ ಫೋಟೋಗ್ರಾಫಿಯಿಂದ ಬಹಳ ಪ್ರಭಾವಿತರಾಗಿದ್ದರು. ವಿಶ್ವಯುದ್ಧದ ನಿರ್ಬಂಧಗಳು ಮುಗಿದು ಜಪಾನಿನ ಪ್ರಜೆಗಳು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಸಿಕ್ಕಿದ ತಕ್ಷಣ ಅವರು 1964ರಲ್ಲಿ ಪ್ಯಾರಿಸ್​ಗೆ ಹಾರಿದ್ದರು.  ಅಲ್ಲಿ ಅವರು,  ಪ್ರಖ್ಯಾತ ಹಾಟ್ ಕೌಚರ್ ಫ್ಯಾಶನ್ ಹೌಸ್ ನ  ಗೈ ಲಾರೋಚೆ ಮತ್ತು ಹಬರ್ಟ್ ಡಿ ಗಿವೆಂಚಿ ಅವರಿಂದ ತರಬೇತಿ ಪಡೆದಿದ್ದಾರೆ. ಅಂತಹ ಫ್ಯಾಶನ್ ಹೌಸ್​ಗಳು ಬಹಳ ದುಬಾರಿ ಬಟ್ಟೆಗಳನ್ನು ತಯಾರಿಸುತ್ತವೆ, ಆದರೆ ಮಿಯಾಕೆ ಅದನ್ನು ಮೀರಿ, ಜನಸಾಮಾನ್ಯರಿಗೆ ದೊರಕುವ ರೀತಿ ತಯಾರಿಸಬೇಕು ಎನ್ನುವ ಆಸೆ ಹೊಂದಿದ್ದರು.


 1968 ರ ಪ್ಯಾರಿಸ್ ವಿದ್ಯಾರ್ಥಿ ದಂಗೆಯ ಸಮಯದಲ್ಲಿ ಅಲ್ಲಿಯೇ ಇದ್ದ  ಮಿಯಾಕೆ ಸಮಾಜದ ಎಲ್ಲಾ ನಿಯಮಗಳನ್ನು ಅಲುಗಾಡಿಸುವ ಯುವ ಶಕ್ತಿಯನ್ನು ನೋಡಿ ಬೆರಗಾಗಿದ್ದರು. 1966 ರ ಕೊನೆಯಲ್ಲಿ ಯೆವ್ಸ್ ಸೇಂಟ್ ಲಾರೆಂಟ್ ಸೈಂಟ್ ಲಾರೆಂಟ್ ರೈವ್ ಗೌಚೆಯನ್ನು ರಚಿಸಿದಾಗ ಕೌಟೂರಿಯರ್‌ನಿಂದ ಸಿದ್ಧ ಉಡುಪುಗಳ ಪರಿಕಲ್ಪನೆಯನ್ನು ಪ್ರಾರಂಭ ಮಾಡಲಾಗಿತ್ತು. ಆ ಸಮಯದಲ್ಲಿ ಫ್ಯಾಷನ್ ವ್ಯವಸ್ಥೆಯು ಬದಲಾಗಿದ್ದು ಮಾತ್ರವಲ್ಲದೇ ಮಿಯಾಕೆ ಎದುರಿಗೆ ಸವಾಲುಗಳು ಬಹಳಷ್ಟಿದ್ದವು.  
ಇದನ್ನೂ ಓದಿ: ಪುರುಷರ ಬಳಿ ಈ ಶೂಗಳು ಇರಲೇಬೇಕಂತೆ, ಆಗ್ಲೇ ಒಂದ್ ಲುಕ್ ಅಂತಾರೆ ಸ್ಟೈಲಿಸ್ಟ್​ಗಳು


ಜಪಾನ್​ ಫ್ಯಾಷನ್​ ಕ್ರಾಂತಿ


ಕೆಂಜೊ ಅವರ "ಜಂಗಲ್ ಜಾಪ್" ಬಟ್ಟೆಗಳು ಅಲೆಗಳನ್ನು ಸೃಷ್ಟಿಸಿದ ಸ್ವಲ್ಪ ಸಮಯದ ನಂತರ ಮಿಯಾಕೆ ಮತ್ತೆ ಪ್ಯಾರಿಸ್ಗೆ ಬಂದು ಹೊಸ ರೀತಿಯ ಫ್ಯಾಷನ್ ಹುಟ್ಟುಹಾಕಿದರು. ಗಾಢವಾದ ಬಣ್ಣ ಮತ್ತು ವಿಬಿನ್ನ ಮಾದರಿಯ ಜಪಾನಿನ ಕಲಾತ್ಮಕ ಸಂಪ್ರದಾಯಗಳನ್ನು ಆಧರಿಸಿ ತಯಾರಿಸಿದ ಬಟ್ಟೆಗಳು ಟ್ರೆಂಡ್ ಆಗಲು ಆರಂಭವಾಯಿತು. ಜಪಾನ್​ನಲ್ಲಿ ಫ್ಯಾಷನ್ ಕ್ರಾಂತಿ ಪ್ರಾರಂಭ ಮಾಡಿದ್ದರು.  ಮಿಯಾಕೆ ತನ್ನ ಮೊದಲ ಪ್ರದರ್ಶನವನ್ನು ನ್ಯೂಯಾರ್ಕ್‌ನಲ್ಲಿ 1971 ರಲ್ಲಿ ಮತ್ತು 1973 ರಲ್ಲಿ ಪ್ಯಾರಿಸ್‌ನಲ್ಲಿ ನಡೆಸಿದರು. ಅವರು ತಂತ್ರಜ್ಞಾನವನ್ನು ಸಂಪ್ರದಾಯದೊಂದಿಗೆ ಮಿಶ್ರಣ ಮಾಡಿ ಜಪಾನೀಸ್ ಸಾಂಪ್ರದಾಯಿಕತೆಯನ್ನು ಬಳಸಿ ವಿಭಿನ್ನ ರೀತಿಯ ಬಟ್ಟೆಯನ್ನು ತಯಾರಿಸಿದ್ದರು.


ಅಲ್ಲದೇ, ಅವರ ಈ ಕೆಲಸಗಳು ಪ್ರಪಂಚದಾದ್ಯಂತ ಫ್ಯಾಷನ್‌ನ ಮೇಲೆ ಪ್ರಭಾವ ಬೀರಿವೆ.  ತನ್ನ ವೃತ್ತಿಜೀವನದುದ್ದಕ್ಕೂ ಮಿಯಾಕೆ ಸಂಪೂರ್ಣ ವಿಭಿನ್ನ ಫ್ಯಾಷನ್ ಸೆನ್ಸ್​ ಮೂಲಕ ಹೆಸರು ಪಡೆದಿದ್ದಾರೆ. ಜವಳಿ ನಿರ್ದೇಶಕ ಮಕಿಕೊ ಮಿನಗಾವಾ ಮತ್ತು ಜಪಾನೀಸ್ ಟೆಕ್ಸ್​ಟೈಲ್ಸ್​ಗಳ ಜೊತೆ ಕೆಲಸ ಮಾಡಿದ ಇವರು ಪ್ರಸಿದ್ಧ ಪ್ಲೀಟ್ಸ್ ಸಂಗ್ರಹಗಳನ್ನು ರಚಿಸಿ ವಿಭಿನ್ನತೆಗೆ ಮುನ್ನುಡಿ ಬರೆದಿದ್ದಾರೆ.
ಇದನ್ನೂ ಓದಿ: ವಿಶ್ವ ಸಿಂಹ ದಿನ ಆಚರಣೆ ಮಾಡೋದು ಇದೇ ಕಾರಣಕ್ಕೆ, ಕಾಡಿನ ರಾಜನ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ


 1989 ರ ಅವರ ರಿದಮ್ ಪ್ಲೀಟ್ಸ್ ಸಂಗ್ರಹವು ಫ್ರೆಂಚ್ ಕಲಾವಿದ ಹೆನ್ರಿ ರೂಸೋ ಅವರಿಂದ ಸ್ಫೂರ್ತಿ ಪಡೆದಿದ್ದಾಗಿದೆ. ಅವರ ಪೇಯ್ಟಿಂಗ್​ಗಳಿಂದ ಮಿಯಾಕೆ ಬಣ್ಣದ ಪ್ಯಾಲೆಟ್ ಮತ್ತು ಮಹಿಳೆಯರ ಸುತ್ತಲಿನ ವಿಚಿತ್ರ ಶಿಲ್ಪದ ಶೆಲ್​ಗಳನ್ನು ಗಮನಿಸಿ, ಅದನ್ನು ಬಳಸಿ ಬಟ್ಟೆಯನ್ನು ತಯಾರಿಸಿದ್ದಾರೆ. ಅವರ ಬಹು ಮುಖ್ಯವಾದ ಕಲೆಕ್ಷನ್​ ಪ್ಲೀಟ್ಸ್ ಪ್ಲೀಸ್ 1993 ರಲ್ಲಿ ಬಿಡುಗಡೆಯಾಗಿತ್ತು. ಫ್ಯಾಷನ್ ಲೋಕ ವಿಭಿನ್ನತೆಯನ್ನು ಹುಟ್ಟು ಹಾಕಿದ ಮಿಯಾಕೆ ನಿಧನ ಫ್ಯಾಷನ್ ಲೋಕಕ್ಕೆ ತುಂಬಲಾರದ ನಷ್ಟ.


2019 ರಲ್ಲಿ, ಮಿಯಾಕೆ ನ್ಯೂಯಾರ್ಕ್‌ನ ಟ್ರಿಬೆಕಾ ಅಂಗಡಿಯಲ್ಲಿ "ಖಾದಿ: ಭಾರತೀಯ ಕರಕುಶಲತೆ" ಎಂಬ ಶೀರ್ಷಿಕೆಯಡಿಯಲ್ಲಿ ಖಾದಿ ಪ್ರದರ್ಶನವನ್ನು ನಡೆಸಿದ್ದರು. ಜವಳಿ ಪುನರುಜ್ಜೀವನಕಾರ ಮಾರ್ತಾಂಡ್ ಸಿಂಗ್ ಅವರೊಂದಿಗಿನ ಸಂವಾದದ ನಂತರ ಭಾರತದ ಜೊತೆ ಅವರ ಸಂಬಂಧ ಗಾಢವಾಗಿತ್ತು. ವಾಸ್ತವವಾಗಿ, ಈ ಹಿಂದೆ ಮಿಯಾಕೆ ಡಿಸೈನ್ ಸ್ಟುಡಿಯೊದ ಟೆಕ್ಸ್​ಟೈಲ್​ ನಿರ್ದೇಶಕರಾಗಿದ್ದ ಮಕಿಕೊ ಮಿನಗಾವಾ ಅವರು ಮಾರ್ತಾಂಡ್ ಸಿಂಗ್ ಮತ್ತು ಆಶಾ ಸಾರಾಭಾಯಿ ಅವರೊಂದಿಗೆ ಆಶಾ ಪ್ರಾಜೆಕ್ಟ್​ ಮಾಡಿದ್ದರು.

Published by:Sandhya M
First published: