ಭಾರತದ ಖ್ಯಾತ ಲೇಖಕಿ ಇಸ್ಮತ್ ಚುಗ್ತಾಯಿಗೆ ಗೂಗಲ್ ಡೂಡಲ್ ಗೌರವ

news18
Updated:August 21, 2018, 3:56 PM IST
ಭಾರತದ ಖ್ಯಾತ ಲೇಖಕಿ ಇಸ್ಮತ್ ಚುಗ್ತಾಯಿಗೆ ಗೂಗಲ್ ಡೂಡಲ್ ಗೌರವ
news18
Updated: August 21, 2018, 3:56 PM IST
-ನ್ಯೂಸ್ 18 ಕನ್ನಡ

ಭಾರತದ ಖ್ಯಾತ ಉರ್ದು ಲೇಖಕಿ ಇಸ್ಮತ್ ಚುಗ್ತಾಯಿ ಅವರಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. 1940 ರಲ್ಲಿ  ತಮ್ಮ ಬರವಣಿಗಳ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಇಸ್ಮತ್ ಅವರು ಶ್ರಮಿಸಿದ್ದರು. ಸ್ತ್ರೀವಾದವನ್ನು ಪ್ರತಿವಾದಿಸಿದ್ದ ಇವರು ಅವರು ಸೃಜನಶೀಲ ಬರಹಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು.

ಭಾರತ ಮತ್ತು ಪಾಕಿಸ್ತಾನವು ಇಬ್ಭಾಗವಾದಾಗ ನಡೆದ ಘಟನೆಗಳನ್ನು ಕಂಡಿದ್ದ ಇಸ್ಮತ್ ತಮ್ಮ ಕಾದಂಬರಿಗಳಲ್ಲಿ ಅಂತಹ ಪಾತ್ರಗಳನ್ನು ಮರು ಸೃಷ್ಟಿಸಿದ್ದರು. ಇವರು ಬರೆದ ಲಿಹಾಫ್ ಕಾದಂಬರಿ ವಿರುದ್ಧ ಲಾಹೋರ್ ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಾಗಿತ್ತು. ಸಲಿಂಗಕಾಮದ ಕುರಿತಾಗಿದ್ದ ಈ ಕಾದಂಬರಿ ವಿರುದ್ಧ ಕೇಸ್ ನಂತರ ಕೋರ್ಟ್ ತಳ್ಳಿ ಹಾಕಿತ್ತು. ಉತ್ತರ ಪ್ರದೇಶದ ಬದಾಂಯು ಪ್ರದೇಶದಲ್ಲಿ 1915ರ ಆಗಸ್ಟ್​ 21ರಂದು ಜನಿಸಿದ್ದರು. ಸಾಹಿತ್ಯ ಲೋಕಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು 1991 ಅಕ್ಟೋಬರ್ 25ರಂದು ನಿಧನ ಹೊಂದಿದ್ದರು.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...