• Home
  • »
  • News
  • »
  • lifestyle
  • »
  • Child Care: ಮಕ್ಕಳಲ್ಲಿ ಹೆಚ್ಚಾಗ್ತಿದೆ ಆರೋಗ್ಯ ಸಮಸ್ಯೆಗಳು, ಹೀಗೆ ಮುಂಜಾಗ್ರತೆ ಕ್ರಮ ಅನುಸರಿಸಿ ಅಂತಿದ್ದಾರೆ ವೈದ್ಯರು

Child Care: ಮಕ್ಕಳಲ್ಲಿ ಹೆಚ್ಚಾಗ್ತಿದೆ ಆರೋಗ್ಯ ಸಮಸ್ಯೆಗಳು, ಹೀಗೆ ಮುಂಜಾಗ್ರತೆ ಕ್ರಮ ಅನುಸರಿಸಿ ಅಂತಿದ್ದಾರೆ ವೈದ್ಯರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How To Take Care of Child: ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ - ಪೀಡಿಯಾಟ್ರಿಕ್ಸ್ & ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಡಾ. ಚೇತನ್ ಗಿಣಿಗೇರಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸಹ ತಿಳಿಸಿದ್ದಾರೆ.  

ಮುಂದೆ ಓದಿ ...
  • Share this:

ಕೋವಿಡ್ -19 ನಿರ್ಬಂಧಗಳು (Corona Rules) ಸಡಿಲಿಸುವುದರಿಂದ, ಜನರು ಮತ್ತೊಮ್ಮೆ ತಮ್ಮ ಸಾಮಾನ್ಯ ಜೀವನವನ್ನು (Normal Life) ಪುನರಾರಂಭಿಸಿದ್ದಾರೆ. ಸಾಂಕ್ರಾಮಿಕ ರೋಗ ಸುಮಾರು 2 ವರ್ಷಗಳ ಕಾಲ ಬಹಳಷ್ಟು ಸಮಸ್ಯೆಗೆ (Problem)  ಕಾರಣವಾಗಿದೆ. ಅದಕ್ಕೆ ಸರಿಯಾದ ಔಷಧಿ ಹಾಗೂ ಲಸಿಕೆ(Vaccination)  ಇಲ್ಲದ ಕಾರಣದಿಂದ ಹಿರಿಯ ನಾಗರಿಕರ ಜೊತೆಗೆ ಮಕ್ಕಳು ಈ ರೋಗಕ್ಕೆ ಬಲಿಯಾಗಿದ್ದಾರೆ. ಈ ಕೊರೊನಾ ಪ್ರತಿಯೊಬ್ಬರ ಜೀವನವನ್ನೇ ಬದಲಾಯಿಸಿತ್ತು ಎಂದರೆ ತಪ್ಪಲ್ಲ. ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ಗಳು ಆರಂಭವಾಗಿದ್ದವು. ಈಗ ಆನ್‌ಲೈನ್ ತರಗತಿಗಳು ಮುಗಿದಿರುವುದರಿಂದ ಮಕ್ಕಳು (Children)  ಶಾಲೆಗಳಿಗೆ ವಾಪಸ್​ ಆಗಿದ್ದಾರೆ. ಆದರೆ ಈಗ ಮತ್ತೆ ಅವರಲ್ಲಿ ವೈರಲ್ ಸೋಂಕುಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ, ಅನೇಕ ಮಕ್ಕಳು ಸಾಮಾನ್ಯಕ್ಕಿಂತ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ - ಪೀಡಿಯಾಟ್ರಿಕ್ಸ್ & ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಡಾ. ಚೇತನ್ ಗಿಣಿಗೇರಿ ಮಾಹಿತಿ ನೀಡಿದ್ದು, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸಹ ತಿಳಿಸಿದ್ದಾರೆ.  


ಶಾಲೆ ಪುನರಾರಂಭವಾಗಿರುವ ಕಾರಣ ಪುಟಾಣಿಗಳ ಜೀವನ ಸಹಜ ಸ್ಥಿತಿಗೆ ತಲುಪಿದ್ದರೂ, ಎರಡು ವರ್ಷಗಳ ಅಂತರದಿಂದ ಮಕ್ಕಳ ರೋಗನಿರೋಧಕ ಶಕ್ತಿ ಬಹಳ ಕಡಿಮೆಯಾಗಿದೆ ಎಂದರೆ ತಪ್ಪಲ್ಲ. ಹೆಚ್ಚು ಕಾಲ ಜಾಗ್ರತೆಯಿಂದ ಇದ್ದ ಕಾರಣ ಮಾತ್ರವಲ್ಲದೇ, ಮನೆಯಲ್ಲಿ ಹೆಚ್ಚು ಸಮಯ ಇದ್ದ ಕಾರಣದಿಂದ, ಅನೇಕ ಮಕ್ಕಳು ದೀರ್ಘಕಾಲದವರೆಗೆ ಸೋಂಕಿಗೆ ಒಳಗಾಗಿರಲಿಲ್ಲ. ಆದರೆ ಅದು ಈಗ ಅವರ ಮೇಲೆ ಪರಿಣಾಮ ಬೀರುತ್ತಿದ್ದು, ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ.


ಮೊದಲೇ ಇರುವ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು,ಮಕ್ಕಳಲ್ಲಿ ಕೆಮ್ಮು, ಅಲರ್ಜಿಗಳು, ವೈರಲ್ ಸೋಂಕುಗಳು, ನೀರಿನಿಂದ ಹರಡುವ ರೋಗಗಳು, ಉಸಿರಾಟದ ಸೋಂಕುಗಳು ಮತ್ತು ಜಠರಗರುಳಿನ ಸೋಂಕುಗಳು ಸಹ ಹೆಚ್ಚುತ್ತಿರುವ ಬಗ್ಗೆ ಹಲವಾರು ಪ್ರಕರಣಗಳು ವರದಿಯಾಗಿದೆ ಎನ್ನುತ್ತಾರೆ ತಜ್ಞರು. ಇದು ಪೋಷಕರು ತಮ್ಮ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವನ್ನು ಇದು ಎತ್ತಿ ತೋರಿಸಿದೆ ಎಂದರೆ ತಪ್ಪಾಗಲಾರದು.


ಪೋಷಕರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿದೆ


ಜಡಜೀವನಶೈಲಿಯನ್ನು ತಪ್ಪಿಸಿ


ಇತ್ತೀಚಿನ ಅಧ್ಯಯನದ ಪ್ರಕಾರ, ಸಾಂಕ್ರಾಮಿಕ ರೋಗದ ಸಮಯದಲ್ಲಿ, ಶಾಲೆಗೆ ಹೋಗುವ ಮಕ್ಕಳ ದೈಹಿಕ ಚಟುವಟಿಕೆಯು ದಿನಕ್ಕೆ 70% ಅಥವಾ 15 ನಿಮಿಷಗಳಿಗಿಂತ ಕಡಿಮೆಯಾಗಿದೆ, ಇದರಿಂದಾಗಿ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ತೀವ್ರವಾಗಿ ಹೆಚ್ಚಿವೆ. ಜಡ ಜೀವನಶೈಲಿ ಮಕ್ಕಳು ಮತ್ತು ವಯಸ್ಕರಿಗೆ ಅಪಾಯಕಾರಿ ಏಕೆಂದರೆ ಇದು ಬೊಜ್ಜು ಹೆಚ್ಚಿಸುವುದಲ್ಲದೆ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತದೆ.


ಪೋಷಕರು ಮಕ್ಕಳ ಪರದೆಯ ಸಮಯವನ್ನು ಅಂದರೆ ಫೋನ್ ಹಾಗೂ ಟಿವಿ ಬಳಕೆಯನ್ನು ಮಿತಿಗೊಳಿಸುವುದು ಉತ್ತಮ. ಹಾಗೆಯೇ,  ಅವರು ಪ್ರತಿದಿನ ಕನಿಷ್ಠ 60 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಮಾಡುವುದನ್ನ ಕಡ್ಡಾಯಗೊಳಿಸಿ. ಜಡ ಜೀವನಶೈಲಿಯು ಮಗುವಿನ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಅವರ ದೈಹಿಕ ಬೆಳವಣಿಗೆಯನ್ನು ತಡೆಯುತ್ತದೆ. ಆದ್ದರಿಂದ, ಆಟದ ಸಮಯ ಮತ್ತು ಅಧ್ಯಯನದ ನಡುವಿನ ಸಮತೋಲನವನ್ನು ಕಾಪಾಡುವುದು ಈಗ ಪೋಷಕರಿಗೆ ಅತ್ಯಂತ ಮುಖ್ಯವಾಗಿದೆ.
ನಿದ್ರೆಯ ಸಮಯ ಸರಿಯಾಗಿರಬೇಕು


ಎರಡು ವರ್ಷಗಳಿಂದ ಮಕ್ಕಳು ನಿದ್ರೆಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ, ಇದು ಅವರ ದುರ್ಬಲ ರೋಗನಿರೋಧಕ ಶಕ್ತಿಯ ಹಿಂದಿನ ಮುಖ್ಯವಾದ ಕಾರಣವಾಗಿದೆ. ಸಾಂಕ್ರಾಮಿಕ ರೋಗವು ಮಕ್ಕಳ ಮೊಬೈಲ್ ಹಾಗೂ ಟಿವಿ ಬಳಕೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಅವರ ದೈನಂದಿನ ದಿನಚರಿ ಮೇಲೆ ಸಹ ಪರಿಣಾಮ ಬೀರಿದೆ. ಪೋಷಕರು ತಮ್ಮ ಮಗುವಿನ ನಿದ್ರೆಯ ಬಗ್ಗೆ ಸಹ ಗಮನಕೊಡಬೇಕು. ಅದು ಅವರ ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ.


ಅಲ್ಲದೇ, ಇದು ಯಾವುದೇ ಅಲರ್ಜಿ ಸಮಸ್ಯೆಗಳನ್ನು ತಪ್ಪಿಸಲು ಮಕ್ಕಳಿಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ: ಗಂಟಲು ನೋವಿನ ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿದೆ ಔಷಧ


ಸಮತೋಲಿತ ಆಹಾರ ಮತ್ತು ಸ್ವಚ್ಛತೆಯೆ ಅಭ್ಯಾಸಗಳನ್ನು ಅಳವಡಿಸಿ   


ಡಾ. ಚೇತನ್ ಗಿಣಿಗೇರಿ, ಮಕ್ಕಳು ಅನಾರೋಗ್ಯಕರ ಆಹಾರಗಳಾದ ಪಿಜ್ಜಾ, ಬರ್ಗರ್ ಮತ್ತು ಕೋಲಾಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಅವರಲ್ಲಿ ತೂಕ ಹೆಚ್ಚಾಳಕ್ಕೆ ಕಾರಣವಾಗುತ್ತದೆ ಮತ್ತು ಉರಿಯೂತದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಸಂರಕ್ಷಕಗಳು ಮತ್ತು ಸಕ್ಕರೆಯೊಂದಿಗೆ ಆಹಾರದ ನಿಯಮಿತ ಬಳಕೆಯು ತಮ್ಮ ಮಗುವಿನ ಪ್ರತಿರಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಆದ್ದರಿಂದ, ಪೋಷಕರು ತಮ್ಮ ಮಕ್ಕಳ ಆಹಾರದಲ್ಲಿ ಪ್ರತಿದಿನ ಕನಿಷ್ಠ 5 ತರಕಾರಿಗಳನ್ನು ಸೇರಿಸುವ ಅಭ್ಯಾಸವನ್ನು ಮಾಡಿಕೊಂಡರೆ, ಅದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ.


ಇದರ ಜೊತೆಗೆ ಮನೆಯಲ್ಲಿ ನಿಮ್ಮ ಮಗುವಿಗೆ ಆರೋಗ್ಯಕರ ಸ್ವಚ್ಛತೆಯ ಅಭ್ಯಾಸಗಳನ್ನು ಕಲಿಸುವುದು ಉತ್ತಮ. ಇದನ್ನು ಅವರು ಶಾಲೆಯಲ್ಲಿ ಅನುಸರಿಸಲು ಸಹ ಹೇಳಿ. ನಿಮ್ಮ ಮಗುವಿಗೆ ಸರಿಯಾದ ಕೈ ಸ್ವಚ್ಛತೆಯ ಅಭ್ಯಾಸಗಳನ್ನು ಕಲಿಸುವುದು ಕೊಳಕು ಮತ್ತು ಧೂಳು ಮತ್ತು ಇತರ ಜಠರಗರುಳಿನ ಸೋಂಕುಗಳಿಂದ ಅವರನ್ನು ತಡೆಯುತ್ತದೆ.


ಸರಾಸರಿಯಾಗಿ ಶಾಲೆಗೆ ಹೋಗುವ ಮಕ್ಕಳು ವರ್ಷಕ್ಕೆ ಐದರಿಂದ ಆರು  ಬಾರಿ ಶೀತ, ಜ್ವರದ ಸಮಸ್ಯೆಯನ್ನು ಹೊಂದಿರಬಹುದು. ಆದ್ದರಿಂದ, ಪೋಷಕರು ಈ ರೀತಿಯ ಯಾವುದೇ ರೋಗಲಕ್ಷಣಗಳನ್ನು ಗಮನಿಸಿದರೆ ಭಯಪಡುವುದನ್ನು ನಿಲ್ಲಿಸಬೇಕು ಎಂಬುದು ಬಹಳ ಮುಖ್ಯವಾಗಿದೆ. ಆದರೆ, ಹವಾಮಾನದ ಕಾರಣದಿಂದ ಈ ಸಮಸ್ಯೆ ಉಂಟಾಗಿ ಅದು ಹೆಚ್ಚಾಗಿದ್ದರೆ, ನೀರಿನಿಂದ ಹರಡುವ ರೋಗಗಳು, ಟೈಫಾಯಿಡ್ ಮತ್ತು ಹೆಪಟೈಟಿಸ್‌ನಿಂದ ಯಾವುದೇ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೋಷಕರು ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


ಇದನ್ನೂ ಓದಿ: ಅಡುಗೆ ಸೋಡಾವನ್ನು ಹೀಗೆ ಬಳಸಿ, ಮನೆಯ ಸಮಸ್ಯೆಗಳು ನಿಮಿಷದಲ್ಲಿ ಮಾಯವಾಗುತ್ತೆ


ಕೊನೆಯದಾಗಿ, ನಿಮ್ಮ ಮಗುವಿನ ವ್ಯಾಕ್ಸಿನೇಷನ್ ವಿಚಾರವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು. ನೀವು ಯಾವುದನ್ನಾದರೂ ತಪ್ಪಿಸಿಕೊಂಡರೆ, ತಕ್ಷಣವೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಹಾಕಿಸಿ.

Published by:Sandhya M
First published: