Children Health: ನಿಮ್ಮ ಮಗು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೇ? ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು; ಎಚ್ಚರ!

ಅಸಮರ್ಪಕ ನಿದ್ರೆಯು ಜ್ಞಾಪಕಶಕ್ತಿ, ಸಮಸ್ಯೆ ಪರಿಹಾರ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯೊಂದಿಗೆ ಅರಿವಿನ ತೊಂದರೆಗಳಿಗೆ ಸಂಬಂಧಿಸಿದೆ. ದಿ ಲ್ಯಾನ್ಸೆಟ್ ಚೈಲ್ಡ್ ಆಂಡ್ ಅಡೋಲೆಸೆಂಟ್ ಹೆಲ್ತ್ ಜರ್ನಲ್ ನಲ್ಲಿ ಈ ಸಂಶೋಧನೆಗಳನ್ನು ಪ್ರಕಟಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ಮಕ್ಕಳು (Children) ಚೆನ್ನಾಗಿಯೇ ನಿದ್ರಿಸುತ್ತವೆ, ಅದರಲ್ಲೂ ಶಾಲೆಗೆ ಇನ್ನೂ ಹೋಗದೆ ಇರುವಂತಹ ಮಕ್ಕಳು ಎಂದರೆ ಎರಡು ವರ್ಷಗಳಿಗಿಂತಲೂ ಕಡಿಮೆ ಇರುವಂತಹ ಮಕ್ಕಳು ರಾತ್ರಿ ಮಲಗುವುದಲ್ಲದೆ (Sleep), ಮಧ್ಯಾಹ್ನ ಸಹ ಚೆನ್ನಾಗಿಯೇ ಮಲಗುತ್ತವೆ. ಇನ್ನೂ ಶಾಲೆಗೆ ಹೋಗುವ ಮಕ್ಕಳಾದರೆ, ಓದಿ, ಬರೆದು ಮತ್ತು ಆಟವಾಡಿ ಸುಸ್ತಾಗಿ ಮನೆಗೆ ಬಂದು ಸಂಜೆ ಆಟವಾಡಿ ಮತ್ತೆ ಶಾಲೆಯಲ್ಲಿ (School) ನೀಡಿರುವಂತಹ ಪಾಠವನ್ನು ಓದಿ, ಬರೆದು ಮುಗಿಸಿ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡುತ್ತಾರೆ.ಆದರೆ ಇತ್ತೀಚೆಗೆ ಈ ಮಕ್ಕಳು ಮೊಬೈಲ್ ಫೋನ್ ನಲ್ಲಿ (Mobile Phone) ಹಾಡುಗಳನ್ನು, ಕಾರ್ಟೂನ್ ಗಳನ್ನು ನೋಡುತ್ತಾ ಕುಳಿತುಕೊಳ್ಳುವುದರಿಂದ ಸ್ವಲ್ಪ ನಿದ್ರೆಗೆ ತೊಂದರೆ ಮಾಡಿಕೊಳ್ಳುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮಕ್ಕಳು ಎಷ್ಟು ಘಂಟೆಗಳ ಕಾಲ ನಿದ್ರೆ ಮಾಡಬೇಕು ಮತ್ತು ಹಾಗೆ ನಿದ್ರೆ ಮಾಡದೆ ಇದ್ದರೆ ಏನಾಗುತ್ತದೆ ಅಂತ ಹೊಸ ಅಧ್ಯಯನವೊಂದು ತೆರೆದಿಟ್ಟಿದೆ ನೋಡಿ.

ಅಧ್ಯಯನ ಏನು ಹೇಳಿದೆ?
ಹೌದು.. ಒಂದು ಹೊಸ ಅಧ್ಯಯನದ ಪ್ರಕಾರ, ಪ್ರತಿ ರಾತ್ರಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವ ಮಕ್ಕಳು ಒಂಬತ್ತು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ, ಅದು ಅವರ ಜ್ಞಾಪಕಶಕ್ತಿ, ಬುದ್ಧಿವಂತಿಕೆ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೆಲವು ಮೆದುಳಿನ ಭಾಗದಲ್ಲಿ ಗಮನಾರ್ಹವಾದ ವ್ಯತ್ಯಾಸಗಳನ್ನು ಸಹ ಹೊಂದುತ್ತಾರೆ. ಅಂತಹ ವ್ಯತ್ಯಾಸಗಳು ನಿದ್ರಾಹೀನತೆಯಿರುವವರಲ್ಲಿ ಖಿನ್ನತೆ, ಆತಂಕ ಮತ್ತು ಹಠಾತ್ ವರ್ತನೆಗಳಂತಹ ಹೆಚ್ಚಿನ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ. ಅಸಮರ್ಪಕ ನಿದ್ರೆಯು ಜ್ಞಾಪಕಶಕ್ತಿ, ಸಮಸ್ಯೆ ಪರಿಹಾರ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯೊಂದಿಗೆ ಅರಿವಿನ ತೊಂದರೆಗಳಿಗೆ ಸಂಬಂಧಿಸಿದೆ. ದಿ ಲ್ಯಾನ್ಸೆಟ್ ಚೈಲ್ಡ್ ಆಂಡ್ ಅಡೋಲೆಸೆಂಟ್ ಹೆಲ್ತ್ ಜರ್ನಲ್ ನಲ್ಲಿ ಈ ಸಂಶೋಧನೆಗಳನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: Lung Cancer: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!

ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ (ಯುಎಂಎಸ್ಓಎಂ) ಸಂಶೋಧಕರು 9 ರಿಂದ 10 ವರ್ಷದೊಳಗಿನ 8,300 ಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷಿಸಿದ್ದಾರೆ. ಅವರ ಎಂಆರ್‌ಐ ವರದಿಗಳನ್ನು, ವೈದ್ಯಕೀಯ ದಾಖಲೆಗಳು ಮತ್ತು ಅವರು ತಮ್ಮ 11 ರಿಂದ 12 ವರ್ಷ ವಯಸ್ಸಿನಲ್ಲಿ ಹೇಗೆ ಇರುತ್ತಾರೆ ಎನ್ನುವುದನ್ನು ಆಧರಿಸಿ ಮತ್ತು ಈ ಸಮೀಕ್ಷೆಗಳನ್ನು ಪರಿಶೀಲಿಸಿ ಅಧ್ಯಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿದ್ದೆ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
"ಅಧ್ಯಯನದ ಆರಂಭದಲ್ಲಿ, ರಾತ್ರಿಗೆ ಒಂಬತ್ತು ಗಂಟೆಗಳಿಗಿಂತ ಕಡಿಮೆ ನಿದ್ರೆಯನ್ನು ಹೊಂದಿರುವ ಮಕ್ಕಳು ಆರೋಗ್ಯಕರ ನಿದ್ರೆಯ ಅಭ್ಯಾಸಗಳನ್ನು ಹೊಂದಿರುವವರಿಗೆ ಹೋಲಿಸಿದರೆ ಗಮನ, ಸ್ಮರಣೆ ಮತ್ತು ಪ್ರತಿಬಂಧ ನಿಯಂತ್ರಣಕ್ಕೆ ಜವಾಬ್ದಾರರಾಗಿರುವ ಮೆದುಳಿನ ಕೆಲವು ಪ್ರದೇಶಗಳಲ್ಲಿ ಕಡಿಮೆ ಬೂದು ದ್ರವ್ಯ ಅಥವಾ ಕಡಿಮೆ ಪರಿಮಾಣವನ್ನು ಹೊಂದಿರುವುದನ್ನು ನಾವು ಕಂಡುಕೊಂಡಿದ್ದೇವೆ" ಎಂದು ಯುಎಂಎಸ್ಒಎಂನ ಡಯಾಗ್ನೋಸ್ಟಿಕ್ ರೇಡಿಯಾಲಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ನ ಪ್ರೊಫೆಸರ್ ಝೆ ವಾಂಗ್ ಅವರು ಹೇಳಿದರು.

ಇದನ್ನೂ ಓದಿ: Types of Headache: ತಲೆನೋವಿನ ವಿಧಗಳೆಷ್ಟು? ಮೈಗ್ರೇನ್​ಗೆ ಇದೇ ಕಾರಣವಂತೆ ನೋಡಿ

"ಈ ಅಭಿಪ್ರಾಯಗಳು ಎರಡು ವರ್ಷಗಳ ನಂತರವೂ ಹಾಗೆಯೇ ಮುಂದುವರೆದರೆ, ಇದು ಸಾಕಷ್ಟು ನಿದ್ರೆಯನ್ನು ಪಡೆಯದವರಿಗೆ ದೀರ್ಘಕಾಲೀನ ಹಾನಿಯನ್ನು ಉಂಟು ಮಾಡುತ್ತದೆ" ಎಂದು ವಾಂಗ್ ಹೇಳಿದರು. ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ಪ್ರಕಾರ, 6 ರಿಂದ 12 ವರ್ಷ ವಯಸ್ಸಿನ ಮಕ್ಕಳು ಉತ್ತಮ ಆರೋಗ್ಯವನ್ನು ಉತ್ತೇಜಿಸಲು ನಿಯಮಿತವಾಗಿ ರಾತ್ರಿ ಹೊತ್ತಿನಲ್ಲಿ 9 ರಿಂದ 12 ಗಂಟೆಗಳ ಕಾಲ ನಿದ್ರಿಸುತ್ತಾರೆ. ಇಲ್ಲಿಯವರೆಗೆ, ಹದಿಹರೆಯದವರಿಗೆ ಮುಂಚಿನ ನರಸಂವೇದನೆಯ ಬೆಳವಣಿಗೆಯ ಮೇಲೆ ಅಸಮರ್ಪಕ ನಿದ್ರೆಯ ದೀರ್ಘಕಾಲೀನ ಪರಿಣಾಮವನ್ನು ಯಾವುದೇ ಅಧ್ಯಯನಗಳು ಪರಿಶೀಲಿಸಿಲ್ಲ.

ಸಂಶೋಧಕರು ನೀಡಿದ ಸಲಹೆಗಳೇನು?
ಸಾಕಷ್ಟು ನಿದ್ರೆ ಮಾಡುವುದು ಮಕ್ಕಳಿಗೆ ಒಂದು ಆದ್ಯತೆಯನ್ನಾಗಿ ಮಾಡುವುದು, ನಿಯಮಿತ ನಿದ್ರೆಯ ದಿನಚರಿಯನ್ನು ಪಾಲಿಸುವಂತೆ ಅವರನ್ನು ನೋಡಿಕೊಳ್ಳುವುದು, ಹಗಲು ಹೊತ್ತಿನಲ್ಲಿ ಮಕ್ಕಳಿಗೆ ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವುದು, ಟಿವಿ ನೋಡುವುದನ್ನು ಮತ್ತು ಮೊಬೈಲ್ ನೋಡುವುದನ್ನು ಸೀಮಿತಗೊಳಿಸುವುದು ಮತ್ತು ಮಲಗುವ ಒಂದು ಗಂಟೆ ಮೊದಲು ಟಿವಿ ಮತ್ತು ಮೊಬೈಲ್ ಫೋನ್ ಗಳಿಂದ ಅವರನ್ನು ದೂರವಿಡುವುದರ ಮೂಲಕ ಪೋಷಕರು ತಮ್ಮ ಮಕ್ಕಳಲ್ಲಿ ಉತ್ತಮ ನಿದ್ರೆಯ ಅಭ್ಯಾಸಗಳನ್ನು ಉತ್ತೇಜಿಸಬೇಕೆಂದು ಸಂಶೋಧಕರು ಸಲಹೆ ನೀಡಿದರು.
Published by:Ashwini Prabhu
First published: