• Home
  • »
  • News
  • »
  • lifestyle
  • »
  • knee Pain: ಹಿಂದಕ್ಕೆ ಓಡುವುದು ಮೊಣಕಾಲು ನೋವನ್ನು ಕಡಿಮೆ ಮಾಡುತ್ತದೆಯೇ? ತಜ್ಞರು ಹೇಳುವುದೇನು ಕೇಳಿ

knee Pain: ಹಿಂದಕ್ಕೆ ಓಡುವುದು ಮೊಣಕಾಲು ನೋವನ್ನು ಕಡಿಮೆ ಮಾಡುತ್ತದೆಯೇ? ತಜ್ಞರು ಹೇಳುವುದೇನು ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊಣಕಾಲಿನ ನೋವನ್ನು ಸಾಮಾನ್ಯವಾಗಿ ಜನರು ಅನುಭವಿಸುತ್ತಾ ಇರುತ್ತಾರೆ. ಹಾಗಾದ್ರೆ ಇದಕ್ಕೆ ಸಲ್ಯೋಷನ್​ ಇಲ್ವಾ ಅಂಥ ಕೇಳಿದ್ರೆ, ಖಂಡಿತವಾಗಿಯೂ ಇದೆ.

  • Share this:

ನಾವು ಬೆಳಿಗ್ಗೆ ಹೊತ್ತು ಈ ಪಾರ್ಕ್ ( Park) ಗಳಲ್ಲಿ ನೇರವಾಗಿ ಮುಂದಕ್ಕೆ ಓಡಿಕೊಂಡು ಮತ್ತು ನಡೆದುಕೊಂಡು ಹೋಗುವವರನ್ನು ನೋಡಿರುತ್ತೇವೆ. ಆದರೆ ಈ ಹಿಂದಕ್ಕೆ ಓಡುವವರು (Running) ಮತ್ತು ನಡೆದುಕೊಂಡು ಹೋಗುವವರನ್ನು ನೋಡಿರುವುದು ತುಂಬಾನೇ ಅಪರೂಪ ಅಂತಾನೆ ಹೇಳಬಹುದು. ಅನೇಕ ಜನರಿಗೆ ಈ ಹಿಂದಕ್ಕೆ ಓಡಿಕೊಂಡು ಮತ್ತು ನಡೆದುಕೊಂಡು ಹೋಗುವ ಜನರನ್ನು ನೋಡಿ ಕೆಲವು ಪ್ರಶ್ನೆಗಳು ತಲೆಯಲ್ಲಿ ಸುಳಿದಾಡಲು ಶುರುವಾಗಿರುತ್ತದೆ. ಅದೇನು ಎಂದರೆ ಹೀಗೆ ಹಿಂದಕ್ಕೆ ಓಡಿಕೊಂಡು ಮತ್ತು ನಡೆದುಕೊಂಡು ಹೋಗುವುದು ಆರೋಗ್ಯಕ್ಕೆ ಒಳ್ಳೆಯದೇ ಅಂತ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಇದು ಒಂದು ಸರಳ ಕ್ರಿಯೆಯಂತೆ ಕಾಣುತ್ತದೆ, ಆದರೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.


ರಿವರ್ಸ್ ವಾಕಿಂಗ್ ಮತ್ತು ರನ್ನಿಂಗ್ ಬಗ್ಗೆ ಅಧ್ಯಯನ ಏನ್ ಹೇಳುತ್ತೆ?


ವಾಸ್ತವವಾಗಿ, ಇಂಟರ್ನ್ಯಾಷನಲ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ನಲ್ಲಿ ಪ್ರಕಟವಾದ ಒಂದು ಅಧ್ಯಯನವು ರಿವರ್ಸ್ ವಾಕಿಂಗ್ ಮತ್ತು ರನ್ನಿಂಗ್ ಉತ್ತಮ ಕಾರ್ಡಿಯೋ ವ್ಯಾಯಾಮ ಎಂದು ಉಲ್ಲೇಖಿಸಿದೆ. ಈ ಸರಳ ಮಾರ್ಪಾಡಿನ ಫಲಿತಾಂಶಗಳು ತೂಕ ಇಳಿಸುವ ಗುರಿಗಳು ಮತ್ತು ದೇಹದ ಸಂಯೋಜನೆಯಲ್ಲಿ ಸುಧಾರಣೆಯನ್ನು ತೋರಿಸಿವೆ.


2005 ರ ಅಧ್ಯಯನದ ಕೆಲವು ಸಂಗತಿಗಳನ್ನು ತೆಗೆದುಕೊಂಡು, ಪೌಷ್ಟಿಕ ತಜ್ಞೆ ಜೂಹಿ ಕಪೂರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಿಂದಕ್ಕೆ ನಡೆಯುವುದು ಕಾಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಮೊದಲು ಬಳಸದ ಸ್ನಾಯುಗಳನ್ನು ಬಳಸುತ್ತದೆ ಎಂದು ಹಂಚಿಕೊಂಡಿದ್ದಾರೆ.


ಬಿಎಂಸಿ ಮಸ್ಕ್ಯುಲೋಸ್ಕೆಲಿಟಲ್ ಡಿಸಾರ್ಡರ್ಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವನ್ನು ಉಲ್ಲೇಖಿಸಿದ ತಜ್ಞರು, ಮೊಣಕಾಲು ನೋವು ಅಥವಾ ಗಾಯವನ್ನು ಹೊಂದಿರುವ ಜನರು ಮಂಡಿಯ ಮೇಲೆ ಅದರ ಪರಿಣಾಮ ತುಂಬಾ ಕಡಿಮೆ ಇರುವುದರಿಂದ ರಿವರ್ಸ್ ವಾಕಿಂಗ್ ಮಾಡಬಹುದು ಎಂದು ಉಲ್ಲೇಖಿಸಿದ್ದಾರೆ.


ಮತ್ತೊಂದು ಅಧ್ಯಯನ ಈ ರಿವರ್ಸ್ ವಾಕಿಂಗ್ ಬಗ್ಗೆ ಹೇಳುವುದೇನು?


ವಾಸ್ತವವಾಗಿ, ಜರ್ನಲ್ ಆಫ್ ಬಯೋಮೆಕ್ಯಾನಿಕ್ಸ್ ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಹಿಮ್ಮುಖ ನಡಿಗೆ ಅಥವಾ ಹಿಮ್ಮುಖ ಓಡುವಿಕೆಯು ಮುಂಭಾಗದ ಮೊಣಕಾಲು ನೋವನ್ನು ಕಡಿಮೆ ಮಾಡುತ್ತದೆ ಎಂದು ಕಂಡು ಹಿಡಿದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.


ರಿವರ್ಸ್ ವಾಕಿಂಗ್ ಮತ್ತು ರನ್ನಿಂಗ್ ನಿಂದಾಗುವ ಆರೋಗ್ಯ ಪ್ರಯೋಜನಗಳು:


  • ಕ್ಯಾಲೋರಿ ಬರ್ನ್ ಆಗುತ್ತದೆ

  • ಮೊಣಕಾಲು ಬಲಗೊಳ್ಳುತ್ತದೆ

  • ಕಾಲಿನ ಸ್ನಾಯುಗಳನ್ನು ಬಲಪಡಿಸುವುದು

  • ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

  • ಕಾರ್ಡಿಯೋ ರಕ್ಷಣೆ


ಮನಸ್ಸು-ದೇಹದ ಸಂಪರ್ಕವನ್ನು ಉತ್ತಮಗೊಳಿಸುತ್ತಂತೆ ರಿವರ್ಸ್ ವಾಕಿಂಗ್ ಮತ್ತು ರನ್ನಿಂಗ್


ರಿವರ್ಸ್ ವಾಕಿಂಗ್ ಹೇಗೆ ಮನಸ್ಸು-ದೇಹದ ಸಂಪರ್ಕವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ ಬಾಡಿ ಸೈನ್ಸ್ ಅಕಾಡೆಮಿಯ ಸಹ-ಸಂಸ್ಥಾಪಕ ವರುಣ್ ರಟ್ಟನ್ ಅವರು "ನಾವು ಹುಟ್ಟಿದಾಗಿನಿಂದಲೂ ಮುಂದೆ ನಡೆಯುವ ಅಭ್ಯಾಸವಿರುವುದರಿಂದ ಅದರಲ್ಲಿ ಯಾವುದೇ ತೊಂದರೆಯಿರುವುದಿಲ್ಲ" ಎಂದು ಹೇಳಿದರು.


ಇದನ್ನೂ ಓದಿ: ನಮ್ಮ ಪರಿಸರದಲ್ಲಿರುವ ಈ ಸಸ್ಯಗಳು ತುಂಬಾ ಡೇಂಜರಸ್!


"ಹಿಮ್ಮುಖವಾಗಿ ನಡೆಯಲು ತುಂಬಾನೇ ಏಕಾಗ್ರತೆಯ ಅಗತ್ಯವಿದೆ. ಮುಂದಕ್ಕೆ ಹೋಗುವಾಗ ನಿಧಾನಗೊಳಿಸುವ ಅಥವಾ ಕ್ಷೀಣಿಸುವ ಸ್ನಾಯುಗಳಿಗೆ ತರಬೇತಿ ನೀಡಲು ಹಿಂದಕ್ಕೆ ಓಡುವುದು ಮತ್ತು ನಡೆಯುವುದು ಎರಡೂ ಅತ್ಯುತ್ತಮ ಮಾರ್ಗಗಳಾಗಿವೆ.


ಮುಂದಕ್ಕೆ ನಡೆಯುವುದಕ್ಕಿಂತ ಕೆಳಕಾಲುಗಳಲ್ಲಿನ ಸ್ನಾಯುಗಳನ್ನು ಉತ್ತೇಜಿಸುವಲ್ಲಿ ಹಿಮ್ಮುಖ ನಡಿಗೆ ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನಗಳು ಸೂಚಿಸುತ್ತವೆ" ಎಂದು ಅವರು ಹೇಳುತ್ತಾರೆ.


ಮೊಣಕಾಲು ಎಕ್ಸ್ಟೆನ್ಸರ್ ಸ್ನಾಯುವನ್ನು ಬಲಪಡಿಸುವುದರ ಜೊತೆಗೆ, ಹಿಂದಕ್ಕೆ ನಡೆದುಕೊಂಡು ಹೋಗುವುದು ಕ್ರಿಯಾತ್ಮಕ ಸಮತೋಲನವನ್ನು ಸುಧಾರಿಸುತ್ತದೆ ಮತ್ತು ಇದು ಮುಂದೆ ನಡೆಯುವಾಗ ನಮ್ಮ ವೇಗವನ್ನು ಸುಧಾರಿಸಲು ಸಹ ಕೊಡುಗೆ ನೀಡುತ್ತದೆ ಎಂದು ರಟ್ಟನ್ ಹೇಳುತ್ತಾರೆ.


ಹಿಮ್ಮುಖ ನಡಿಗೆಯನ್ನು ಹೆಚ್ಚು ಕಠಿಣವಾಗಿ ಹೇಗೆ ಮಾಡುವುದು?


ಟ್ರೆಡ್‌ಮಿಲ್ ನಲ್ಲಿ ಅದರ ಅವಧಿ, ಇಳಿಜಾರು, ಅಥವಾ ಯಂತ್ರದ ಶಕ್ತಿಯನ್ನು ಆಫ್ ಮಾಡುವ ಮೂಲಕ ಹಿಮ್ಮುಖ ನಡಿಗೆಯನ್ನು ಹೆಚ್ಚು ಸವಾಲಾಗಿ ಮಾಡಿಕೊಳ್ಳಬಹುದು ಎಂದು ರಟ್ಟನ್ ಹೇಳುತ್ತಾರೆ.


"ಕಣ್ಣುಗಳನ್ನು ಮುಚ್ಚಿಕೊಂಡು ಹಿಮ್ಮುಖವಾಗಿ ನಡೆಯುವಾಗ ಪ್ರೊಪ್ರಿಯೊಸೆಪ್ಷನ್ ಅನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಟ್ರೆಡ್‌ಮಿಲ್ ಅಥವಾ ನೆಲದ ಮೇಲೆ ಹೀಗೆ ಹಿಮ್ಮುಖವಾಗಿ ನಡೆಯುವುದನ್ನು ಬೋಧಕರ ಉಪಸ್ಥಿತಿಯಲ್ಲಿ ಸುರಕ್ಷಿತವಾಗಿ ಮಾಡಬಹುದು" ಎಂದು ಅವರು ಉಲ್ಲೇಖಿಸುತ್ತಾರೆ.


ಇದನ್ನು ಅಭ್ಯಾಸ ಮಾಡುವುದು ಹೇಗೆ?


ಪ್ರತಿದಿನ 15 ನಿಮಿಷಗಳ ಕಾಲ (ದಿನದ ಯಾವುದೇ ಸಮಯದಲ್ಲಿ) ಹಿಮ್ಮುಖವಾಗಿ ನಡೆಯುವುದನ್ನು ಅಭ್ಯಾಸ ಮಾಡಬೇಕು ಎಂದು ಕಪೂರ್ ಉಲ್ಲೇಖಿಸಿದ್ದಾರೆ. "ಸಮತೋಲನವನ್ನು ಸುಧಾರಿಸಲು, ಒಟ್ಟಾರೆ ಕಾಲಿನ ಬಲವನ್ನು ಹೆಚ್ಚಿಸಲು ಮತ್ತು ಪ್ರೊಪ್ರಿಯೊಸೆಪ್ಷನ್ ಅನ್ನು ಹೆಚ್ಚಿಸಲು ವಾರಕ್ಕೆ ಎರಡು ಬಾರಿ 10 ರಿಂದ 15 ನಿಮಿಷಗಳ ಕಾಲ ಈ ಚಲನೆಗಳನ್ನು ಮಾಡುವುದು ಒಳ್ಳೆಯದು" ಎಂದು ರಟ್ಟನ್ ವಿವರಿಸುತ್ತಾರೆ.


ಒಬ್ಬರು ಐದು ನಿಮಿಷಗಳ ಹಿಂದಕ್ಕೆ ನಡೆಯುವುದರಿಂದ ಪ್ರಾರಂಭಿಸಬಹುದು ಮತ್ತು ಇದನ್ನು ಸುರಕ್ಷಿತ ಮತ್ತು ತಿಳಿದಿರುವ ವಾತಾವರಣದಲ್ಲಿ ಅಭ್ಯಾಸ ಮಾಡಬೇಕು" ಎಂದು ಅವರು ಹೇಳಿದ್ದಾರೆ.




ಇದನ್ನು ಮಾಡುವ ಮುಂಚೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು..


ಗರ್ಭಿಣಿಯರು, ವೃದ್ಧರು, ಪಾರ್ಶ್ವವಾಯು ರೋಗಿಗಳು ಅಥವಾ ಕಳಪೆ ಸಮತೋಲನ ಮತ್ತು ಸಮನ್ವಯವನ್ನು ಹೊಂದಿರುವವರು ಇದನ್ನು ಅಭ್ಯಾಸ ಮಾಡುವ ಮೊದಲು ತಮ್ಮ ವೈದ್ಯರ ಅನುಮೋದನೆಯನ್ನು ಪಡೆಯಬೇಕು ಎಂದು ರಟ್ಟನ್ ಸಲಹೆ ನೀಡುತ್ತಾರೆ.

First published: